ಸುಳ್ಯದಲ್ಲಿ ಸಾಹಿತ್ಯದ ಸಿರಿ ಅನಾವರಣ: ತಾಲೂಕಿನ ಸಾಹಿತಿಗಳು, ಸಾಧಕರ ಬದುಕು-ಸಾಧನೆ ಪರಿಚಯಿಸುವ 11 ಕೃತಿಗಳ ಬಿಡುಗಡೆ
ಸುಳ್ಯ, ನ. 23: ಸಾಹಿತ್ಯದ ಮೂಲಕ ಸಾಧಕರ ಬದುಕು, ಬರಹ, ಚಿಂತನೆ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನ ಸುಳ್ಯದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳ ಮತ್ತು ಸಾಧಕರ ಪರಿಚಯ ಮಾಲಿಕೆಯಲ್ಲಿ ಪ್ರಕಟಗೊಂಡ 11 ಕೃತಿಗಳ ಬಿಡುಗಡೆ ಸಮಾರಂಭ ನ. 23ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯದ ಅಧ್ಯಕ್ಷ


