ಸುಳ್ಯದಲ್ಲಿ ಸಾಹಿತ್ಯದ ಸಿರಿ ಅನಾವರಣ: ತಾಲೂಕಿನ ಸಾಹಿತಿಗಳು, ಸಾಧಕರ ಬದುಕು-ಸಾಧನೆ ಪರಿಚಯಿಸುವ 11 ಕೃತಿಗಳ ಬಿಡುಗಡೆ

ಸುಳ್ಯ, ನ. 23: ಸಾಹಿತ್ಯದ ಮೂಲಕ ಸಾಧಕರ ಬದುಕು, ಬರಹ, ಚಿಂತನೆ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನ ಸುಳ್ಯದಲ್ಲಿ ನಡೆಯಿತು.









































































ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳ ಮತ್ತು ಸಾಧಕರ ಪರಿಚಯ ಮಾಲಿಕೆಯಲ್ಲಿ ಪ್ರಕಟಗೊಂಡ 11 ಕೃತಿಗಳ ಬಿಡುಗಡೆ ಸಮಾರಂಭ ನ. 23ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯದ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು.

ಸಾಹಿತ್ಯವೆಂಬುದು ಕೇವಲ ಅಕ್ಷರಗಳ ಅಭಿವ್ಯಕ್ತಿಯಲ್ಲ. ಅದು ವ್ಯಕ್ತಿಯ ಬದುಕಿನ ಅನುಭವ, ಚಿಂತನೆ, ಸಾಧನೆ ಹಾಗೂ ಸಮಾಜದ ಸಾಂಸ್ಕೃತಿಕ ಮೌಲ್ಯಗಳನ್ನು ದಾಖಲಿಸುವ ಮಹತ್ವದ ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಜೀವನ ಪರಿಚಯವನ್ನು ಕೃತಿಗಳ ರೂಪದಲ್ಲಿ ದಾಖಲಿಸುವ ಕಾರ್ಯ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯಾಗಿದೆ.

ಸಾಹಿತಿಗಳ ಪರಿಚಯ ಮಾಲಿಕೆಯಲ್ಲಿ ಬಿಡುಗಡೆಯಾದ ಕೃತಿಗಳು:

* ಲೇಖಕಿ ನಂದಕುಮಾರ್ ಸ್ವಾಮಿ – ಪ್ರಗತಿಶೀಲ ಬರಹಗಾರ ನಿರಂಜನ

* ಲೇಖಕ ದುರ್ಗಾಕುಮಾರ್ ನಾಯರ್ ಕೆರೆ – ಸಾಹಿತ್ಯ ಲೋಕದ ಸವ್ಯಸಾಚಿ ಟಿ.ಜಿ. ಮುಡೂರು

* ಲೇಖಕ ಕುಮಾರಸ್ವಾಮಿ ತೆಕ್ಕುಂಜ – ಸುಮನಸ್ಸಿನ ಪರಿಸರ ಕವಿ ಜಿ.ಎಸ್. ಉಬರಡ್ಕ

* ಲೇಖಕಿ ಚಂದ್ರಾವತಿ ಬಡ್ಡಡ್ಕ – ಚೊಕ್ಕಾಡಿಯ ಸಿರಿ ಪಾರಿಜಾತ ಸುಬ್ರಾಯ ಚೊಕ್ಕಾಡಿ

* ಲೇಖಕ ರಾಮಚಂದ್ರ ಪಲ್ಲತ್ತಡ್ಕ – ಪರಿಸರ ಕವಿ ಕುತ್ಯಾಳ ನಾಗಪ್ಪ ಗೌಡ (ಕಿರಣ)

* ಲೇಖಕಿ ಸ್ಮಿತಾ ಅಮೃತರಾಜ್ – ಬಹುಮುಖ ಪ್ರತಿಭೆಯ ವಿಶಿಷ್ಟ ಚಿಂತಕ ಡಾ. ಪ್ರಭಾಕರ ಶಿಶಿಲ

* ಲೇಖಕಿ ಲೀಲಾ ದಾಮೋದರ – ಜೀವನ್ಮುಖಿ ಅಮ್ಮ ಎಂ.ಜಿ. ಕಾವೇರಮ್ಮ

* ಲೇಖಕ ಯಶ್ವಿತ್ ಕಾಳಮ್ಮನೆ – ಹಳಬರ ಜೋಡಿಗೆಯ ಜಯಮ್ಮ ಚೆಟ್ಟಿಮಾಡ

ಸಾಧಕರ ಪರಿಚಯ ಮಾಲಿಕೆಯಲ್ಲಿ ಬಿಡುಗಡೆಯಾದ ಕೃತಿಗಳು:

* ಲೇಖಕಿ ಲತಾಶ್ರೀ ಸುಪ್ರೀತ್ ಮೋಂಟಡ್ಕ – ವೈದ್ಯಕೀಯ ಕ್ಷೇತ್ರದ ಮೇರು ಸಾಧಕ ಡಾ. ಕೆ.ವಿ. ಚಿದಾನಂದ

* ಲೇಖಕ ತೇಜಸ್ವಿ ಕಡಪಾಲ – ತೂಗು ಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ್

* ಲೇಖಕಿ ಚಂದ್ರಮತಿ ಕೆ. – ಸಾಹಿತ್ಯದ ಸಾರಥಿ ಶ್ರೀಮತಿ ಎಂ. ಮೀನಾಕ್ಷಿ ಗೌಡ

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಮೀನಾಕ್ಷಿ ಗೌಡ, ಹರಪ್ರಸಾದ್ ತುದಿಯಡ್ಕ, ಹಿರಿಯ ಸಾಹಿತಿಗಳಾದ ಜಯಮ್ಮ ಚೆಟ್ಟಿಮಾಡ, ಕುತ್ಯಾಳ ನಾಗಪ್ಪ ಗೌಡ, ಡಾ. ಪ್ರಭಾಕರ ಶಿಶಿಲ, ಸುಳ್ಯ ವಲಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ವಲಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ದಯಾನಂದ ಆಳ್ವ, ರಾಮಚಂದ್ರ ಪಲ್ಲತ್ತಡ್ಕ, ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಾಲ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್ ಅಜ್ಜಾವರ, ಸಾವಿತ್ರಿ ಕಣೆಮರಡ್ಕ ಯೋಗೀಶ್ ಹೊಸೊಯೊಳಿಕೆ,ಕೇಶವ ಮಾಸ್ತರ್ ಸೇರಿದಂತೆ ಸಾಹಿತಿಗಳು, ಲೇಖಕರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.
ಲತಾಶ್ರೀ ಸುಪ್ರಿತ್ ಮೋಂಟಡ್ಕ  ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top