November 27, 2026

ಪೆರಾಜೆ:ಹೃದಯಾಘಾತದಿಂದ ಯುವಕ ನಿಧನ

ಅರಂತೋಡು : ಪೆರಾಜೆ ಗ್ರಾಮದ ಬಾಳೆಕಜೆ ನಿವಾಸಿ ಕೃಷ್ಣಪ್ಪ ಅವರ ಪುತ್ರ ಕರುಣೇಶ (37) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಬೆಳಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಕರುಣೇಶ ಅವರು ಏಕಾಏಕಿ ಜೋರಾಗಿ ಬೊಬ್ಬೆ ಹೊಡೆದರೆನ್ನಲಾಗಿದೆ. ತಕ್ಷಣ ಧಾವಿಸಿದ ತಾಯಿ ಅವರನ್ನು ಹಿಡಿದುಕೊಂಡಿದ್ದು, ಬಳಿಕ ಪಕ್ಕದ ಮನೆಯಲ್ಲಿದ್ದ ಸಂಬಂಧಿಕರನ್ನು ಕರೆಸಿದ್ದಾರೆ. ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಕರುಣೇಶ ಅವರನ್ನು ತಕ್ಷಣ ಸುಳ್ಯ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.ಕರುಣೇಶ ಅವರು ಕೆಲ ಸಮಯದಿಂದ ಸುಳ್ಯದ ಆಯುರ್ವೇದ ಕಾಲೇಜಿನಲ್ಲಿ ವಾಹನ ಚಾಲಕರಾಗಿ

ಪೆರಾಜೆ:ಹೃದಯಾಘಾತದಿಂದ ಯುವಕ ನಿಧನ Read More »

ಅರಂತೋಡಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ: 300 ಮಂದಿಗೆ ಪ್ರಯೋಜನ

ಅರಂತೋಡು: ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ ಅರಂತೋಡು ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ‘ಎಸ್‌ಎಸ್‌ಎಲ್‌ಸಿ ನಂತರ ಏನು?’ ಎಂಬ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಉದ್ಘಾಟಿಸಿದರು. ಕನಕದಾಸರ ಜಯಂತಿ ಪ್ರಯುಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅರಂತೋಡು ಪಾಪ್ಯುಲರ್ ಏಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಪಿ.ಬಿ. ದಿವಾಕರ್ ರೈ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಎ.ಸಿ. ವಸಂತ್ ಸ್ವಾಗತಿಸಿ, ಉಪಾಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಪ್ರಸ್ತಾವನೆಗೈದರು. ಕಾರ್ಯದರ್ಶಿ ಎ. ಅಬ್ದುಲ್ಲ ವಂದಿಸಿದರು.

ಅರಂತೋಡಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ: 300 ಮಂದಿಗೆ ಪ್ರಯೋಜನ Read More »

ವೆಂಕಟರಮಣ ಸೊಸೈಟಿ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ

ಸುಳ್ಯ: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಸಿಬ್ಬಂದಿಗಳ ವೃತ್ತಿಪರ ಕೌಶಲ್ಯ ವೃದ್ಧಿ ಹಾಗೂ ಕಾರ್ಯನಿರ್ವಹಣೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಒಂದು ದಿನದ ತರಬೇತಿ ಕಾರ್ಯಾಗಾರ ನ.27ರಂದು ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ನಡೆಯಿತು.ಸೊಸೈಟಿಯ ಅಧ್ಯಕ್ಷ ಕೆ.ಸಿ. ಸದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಮಡಪ್ಪಾಡಿ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಯ್ಯ ಗೌಡ ಪೂಂಬಾಡಿ ಉದ್ಘಾಟಿಸಿದರು. ಮಂಗಳೂರಿನ ಮಾಸ್ಟರ್ ಮೈಂಡ್ ಎಂಟರ್‌ಪ್ರೈಸಸ್‌ನ ಶ್ರೀಶಾ ಕೆ.ಎಂ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಿಬ್ಬಂದಿಗಳಿಗೆ ವಿವಿಧ

ವೆಂಕಟರಮಣ ಸೊಸೈಟಿ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ Read More »

ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೇಸಿ ಸಪ್ತಾಹದ ಆಮಂತ್ರಣ ಪತ್ರಿಕೆಗೆ ಪೂಜೆ

ಪಂಜ: ಜೇಸಿಐ ಪಂಜ ಪಂಚಶ್ರೀಯ ವತಿಯಿಂದ ಡಿಸೆಂಬರ್ 6ರಿಂದ 10ರವರೆಗೆ ನಡೆಯಲಿರುವ ‘ಜೇಸಿ ಸಪ್ತಾಹ–2026’ರ ಆಮಂತ್ರಣ ಪತ್ರಿಕೆಗೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ ಜೆಸಿ ಜೆಎಫ್‌ಎಂ ದೇವಿಪ್ರಸಾದ್ ಚಿಕ್ಮುಳಿ ಹಾಗೂ ಕಾರ್ಯದರ್ಶಿ ಜೆಸಿ ಎಚ್‌ಜಿಎಫ್ ಪ್ರಕಾಶ್ ಅಳ್ಪೆ ಉಪಸ್ಥಿತರಿದ್ದರು.ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನಗಳ ಪ್ರಾಧಿಕಾರದ ಅಧ್ಯಕ್ಷರಾದ ಭರತ್ ಮುಂಡೋಡಿ ಹಾಗೂ

ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೇಸಿ ಸಪ್ತಾಹದ ಆಮಂತ್ರಣ ಪತ್ರಿಕೆಗೆ ಪೂಜೆ Read More »

error: Content is protected !!
Scroll to Top