ಸುಳ್ಯ: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಸಿಬ್ಬಂದಿಗಳ ವೃತ್ತಿಪರ ಕೌಶಲ್ಯ ವೃದ್ಧಿ ಹಾಗೂ ಕಾರ್ಯನಿರ್ವಹಣೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಒಂದು ದಿನದ ತರಬೇತಿ ಕಾರ್ಯಾಗಾರ ನ.27ರಂದು ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಕೆ.ಸಿ. ಸದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಮಡಪ್ಪಾಡಿ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಯ್ಯ ಗೌಡ ಪೂಂಬಾಡಿ ಉದ್ಘಾಟಿಸಿದರು. ಮಂಗಳೂರಿನ ಮಾಸ್ಟರ್ ಮೈಂಡ್ ಎಂಟರ್‌ಪ್ರೈಸಸ್‌ನ ಶ್ರೀಶಾ ಕೆ.ಎಂ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಿಬ್ಬಂದಿಗಳಿಗೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಸ್ಥಾಪಕಾಧ್ಯಕ್ಷ ಪಿ.ಸಿ. ಜಯರಾಮ್, ನಿರ್ದೇಶಕರಾದ ದಾಮೋದರ ನಾರ್ಕೋಡು, ಚಂದ್ರಶೇಖರ ಕೋಲ್ಟಾರ್, ಪ್ರೇಮಾ ಹಾಗೂ ಶೈಲೇಶ್ ಅಂಬೆಕಲ್ಲು ಉಪಸ್ಥಿತರಿದ್ದರು. ಎ.ಜಿ.ಎಂ.ಗಳಾದ ಕುಸುಮಾಧರ ಗುಡ್ಡೆ ಮತ್ತು ಮನೋಜ್ ಪಾಣತ್ತಿಲ ಭಾಗವಹಿಸಿದ್ದರು.
ಸೊಸೈಟಿಯ 25 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ತರಬೇತಿಯ ಪ್ರಯೋಜನ ಪಡೆದುಕೊಂಡರು.
ದಿನೇಶ್ ಮಡಪ್ಪಾಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಜಿ.ಎಂ. ಚಂದ್ರಶೇಖರ ಮೇರ್ಕಜೆ ವಂದಿಸಿದರು.
ವೆಂಕಟರಮಣ ಸೊಸೈಟಿ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ









































