Author name: Tejas

ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ಮಹಾಶಿವರಾತ್ರಿ ಆಚರಣೆ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಶಿವರಾತ್ರಿ ಪ್ರಯಕ್ತ ಶಿವಪೂಜೆ ಭಜನಾ ಸತ್ಸಂಗ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 234ನೇಕೃತಿಮಾಲೆ ಕಾಯಕದಿಂದಲೇ ಕೈಲಾಸ ಬಿಡುಗಡೆ ಸಮಾರಂಭ ನಡೆಯಿತು.ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿದ್ದರು.ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಕೃತಿ ಬಿಡುಗಡೆಗೊಳಿಸಿದರು.ಹಿರಿಯ ವೈದ್ಯರಾದ ಡಾ.ಸಾಯಿಗೀತಾ,ಮಂಗಳೂರು ಎ.ಜೆ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ಅನಿಲ್ ಬಿ.ವಿ. ಹಿರಿಯರಾದ ಮುದ್ದಪ್ಪ ಗೌಡ ಕರ್ಲಪ್ಪಾಡಿ,ಅಡೂರು ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ವೇಣುಗೊಪಾಲ,ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು‌.ಶಿಕ್ಷಕಿ ಆಶ್ರಮದ […]

ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ಮಹಾಶಿವರಾತ್ರಿ ಆಚರಣೆ Read More »

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರ ಉತ್ಸವ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು (ಫೆ. 15) ಪೂರ್ವ ಸಂಪ್ರದಾಯದಂತೆ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿಮಹಾಶಿವರಾತ್ರಿ ಉತ್ಸವ ನಡೆಯುತ್ತಿದೆ.ಸಂಜೆ ಸೀಮೆಯ ಭಜನಾ ತಂಡಗಳಿಂದ ಭಜನೆ ಹಾಗೂ ಕುಣಿತ ಭಜನೆ, ರಾಶಿಪೂಜೆ (10 ರುದ್ರಾಭಿಷೇಕ) ರಂಗಪೂಜೆ ನಡೆಯಿತು.ಇದೀಗ ಉತ್ಸವ ಬಲಿ ನಡೆಯುತ್ತಿದೆ.ಫೆ. 16 ರಂದು ಗಣಪತಿ ಹೋಮ, ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಲಿರುವುದು ಮತ್ತು ತುಲಾಭಾರ ಸೇವೆ ನಡೆಯುಲಿದೆ.

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರ ಉತ್ಸವ ಬಲಿ Read More »

ಭಾರತ-ಪಾಕ್ ಟಿ20 ವಿಶ್ವಕಪ್: ಭಾರತಕ್ಕೆ ಭರ್ಜರಿ ಗೆಲುವು,ಪಾಕಿಸ್ಥಾನ ಆಲ್ ಔಟ್

2026ರ ಟಿ20 ವಿಶ್ವಕಪ್‌ನ ಗುಂಪು ಹಂತದ ಮಹತ್ವದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 20 ರನ್‌ಗಳಿಂದ ಸೋಲಿಸಿದೆ. ಕೊಲಂಬೊದ ಆ‌ರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 176 ರನ್‌ಗಳ ಗುರಿ ನೀಡಿತ್ತು. ನಂತರ ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 18ನೇ ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 61 ರನ್ ಗಳ ಅಂತರದಿಂದ ಭರ್ಜರಿ ಜಯ ಗಳಿಸಿತು.

ಭಾರತ-ಪಾಕ್ ಟಿ20 ವಿಶ್ವಕಪ್: ಭಾರತಕ್ಕೆ ಭರ್ಜರಿ ಗೆಲುವು,ಪಾಕಿಸ್ಥಾನ ಆಲ್ ಔಟ್ Read More »

ಕುಕ್ಕುಂಬಳ ಸೇತುವೆ ಮೇಲಿನಿಂದ ಹೊಳೆಗೆ ಸ್ಕೂಟಿಯೊಂದಿಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು

ಸ್ಕೂಟಿ ಸವಾರೊಬ್ಬರು ಫೆ.14ರರಂದು ರಾತ್ರಿ ಸ್ಕೂಟಿಯೊಂದಿಗೆ ನಿಯಂತ್ರಣ ತಪ್ಪಿ ಪೆರಾಜೆ ಸಮೀಪದ ಕುಕ್ಕುಂಬಳ ಸೇತುವೆಯ ಮೇಲಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾದ ಘಟನೆ ವರದಿಯಾಗಿದೆ.ಗಾಯಗೊಂಡ ವ್ಯಕ್ತಿ ಅಂಜಿಕ್ಕಾರ್ ಸುಂದರ ನಾಯ್ಕ ರವರ ಪುತ್ರ ರವಿಚಂದ್ರ ನಾಯ್ಕ ಎಂದು ತಿಳಿದು ಬಂದಿದೆ. ಅವರು ರಾತ್ರಿ ಸುಮಾರು 8 ಗಂಟೆಗೆ ಸುಳ್ಯದಿಂದ ಮನೆಕಡೆ ಹೋಗುತ್ತಿದ್ದ ವೇಳೆ ಈ ಅವಘದ ಸಂಭವಿಸಿದೆ. ಈ ಮೊದಲು ಇದೇ ಜಾಗದಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ

ಕುಕ್ಕುಂಬಳ ಸೇತುವೆ ಮೇಲಿನಿಂದ ಹೊಳೆಗೆ ಸ್ಕೂಟಿಯೊಂದಿಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು Read More »

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಶಾಖೆ ಮೂರ್ನಾಡಿನಲ್ಲಿ ಶುಭಾರಂಭ

ಸುಳ್ಯ ಮೂಲದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಶಾಖೆಯನ್ನು ಮೂರ್ನಾಡಿನಲ್ಲಿ ಪ್ರಾರಂಭಿಸಲಾಯಿತು. ಈ ಶಾಖೆಯ ಉದ್ಘಾಟನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.ಸದ್ರಿ ಬ್ಯಾಂಕಿನ 24ನೇ ಶಾಖೆ ಇದಾಗಿದ್ದು, ಮೂರ್ನಾಡು ಭಾಗದಲ್ಲಿ ಇದು ಮತ್ತಷ್ಟು ಯಶಸ್ಸು ಕಾಣಲಿ ಎಂದು ಉದ್ಘಾಟನೆ ಬಳಿಕ ಮಾನ್ಯ ಶಾಸಕರು ಶುಭ ಕೋರಿದರು. ಮುಂದುವರೆದು ಮಾತನಾಡುತ್ತಾ, ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಇದರ ನೂತನ ಶಾಖೆ ಮೂರ್ನಾಡಿನಲ್ಲಿ ಶುಭಾರಂಭ Read More »

ಪಂಜ ಸೀಮೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ಭಜನಾ ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ

ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಮಹಾಶಿವರಾತ್ರಿ ಪ್ರಯುಕ್ತ ಫೆ. 15 ರಂದು ಮುಂಜಾನೆ ಭಜನಾ ಕಾರ್ಯಕ್ರಮ ಅರಂಭಗೊಂಡಿತು.ಅಲ್ಲದೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಭಜನಾ ಸಂಕೀರ್ತನೆ ಕಾರ್ಯಕ್ರಮವನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ರವರು ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ ಉಪಸ್ಥಿತರಿದ್ದರು.ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ,ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ

ಪಂಜ ಸೀಮೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ಭಜನಾ ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ Read More »

ಪ್ರೇಮಿಗಳ ದಿನದಂದೇ ಪ್ರೇಯಸಿಯನ್ನು ಕೊಂದ ಪಾಪಿ

ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ನೋಯ್ಡಾದ ಸೆಕ್ಟರ್ 107 ರಲ್ಲಿ ಪ್ರೇಮಿಗಳಾದ ಸುಮಿತ್ ಮತ್ತು ರೇಖಾ ಅವರ ಶವ ಕಾರಿನಲ್ಲಿ ಪತ್ತೆಯಾಗಿದೆ. ಇಬ್ಬರಿಗೂ ತಲೆಗೆ ಗುಂಡೇಟು ತಗುಲಿತ್ತು. ಶುಕ್ರವಾರದಿಂದ ಕಾಣೆಯಾಗಿದ್ದ ಇವರ ಕುಟುಂಬಗಳು ದೂರು ಸಲ್ಲಿಸಿದ್ದವು. ಹುಡುಗನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದ್ದು, ಕಾರು ಒಳಗಿನಿಂದ ಲಾಕ್ ಆಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಸುಮಿತ್ ಮೊದಲು ರೇಖಾ ಅವರಿಗೆ ಗುಂಡು ಹಾರಿಸಿ, ನಂತರ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಆತ್ಮಹತ್ಯೆಯ ಪ್ರಕರಣ

ಪ್ರೇಮಿಗಳ ದಿನದಂದೇ ಪ್ರೇಯಸಿಯನ್ನು ಕೊಂದ ಪಾಪಿ Read More »

ನಾಳೆ ಪಂಜ ಸೀಮೆ ದೇವಸ್ಥಾನವಾದ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಪಂಜ ಸೀಮೆ ದೇವಸ್ಥಾನವಾದ ಸದಾಶಿವ ಪರಿವಾರ ಪಂಚಲಿಂಗೇಶ್ವರ ಪಂಜ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಫೆ.15ರಂದು ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದರು.ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8 ಗಂಟೆಯ ತನಕ ವಿವಿಧ ತಂಡಗಳಿಂದ ಭಜನಾ ಸೇವೆ ನಡೆಯಲಿದೆ.ರಾತ್ರಿ 8.00ರಿಂದ 9-45ರ ತನಕ ಶ್ರೀ ದೇವರಿಗೆ ಏಕಾದಶರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರ ಪಾರಾಯಣ ನಡೆಯಲಿದೆ. ರಾತ್ರಿ 10ಗಂಟೆಗೆ ಮಹಾಪೂಜೆ ನಡೆಯಲಿದೆ.ಮಧ್ಯಾಹ್ನ ಸರ್ವಸೇವೆ, ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ ರುದ್ರಾಭಿಷೇಕ, ರಾತ್ರಿ ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ, ರುದ್ರಾಭಿಷೇಕ ಸೇವೆಗಳು

ನಾಳೆ ಪಂಜ ಸೀಮೆ ದೇವಸ್ಥಾನವಾದ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ Read More »

ನಾಳೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಆಚರಣೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಫೆ. 15ರಂದು ಪೂರ್ವ ಸಂಪ್ರದಾಯದಂತೆ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿಮಹಾಶಿವರಾತ್ರಿ ಉತ್ಸವ ನಡೆಯಲಿದೆ ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಫೆ. 16 ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿರುವುದು.ಫೆ. 15ರಂದು ಸಂಜೆ ಸೀಮೆಯ ಭಜನಾ ತಂಡಗಳಿಂದ ಭಜನೆ ಹಾಗೂ ಕುಣಿತ ಭಜನೆ, ರಾಶಿಪೂಜೆ (10 ರುದ್ರಾಭಿಷೇಕ) ರಂಗಪೂಜೆ, ಉತ್ಸವ ಬಲಿ ಹೊರಡುವುದು ಹಾಗೂ ಫೆ. 16 ರಂದು ಗಣಪತಿ ಹೋಮ, ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಲಿರುವುದು ಮತ್ತು

ನಾಳೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಆಚರಣೆ Read More »

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ನೂತನ 24ನೇ ಮೂರ್ನಾಡು ಶಾಖೆ ನಾಳೆ ಉದ್ಘಾಟನೆ

ಸುಳ್ಯ: ಇಲ್ಲಿನ ಗೌಡರ ಯುವ ಸೇವಾ ಸಂಘದಿಂದ ಪ್ರವರ್ತಿಸಲ್ಪಡುತ್ತಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ನೂತನ 24ನೇ ಮೂರ್ನಾಡು ಶಾಖೆ ಫೆ.15 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ ತಿಳಿಸಿದ್ದಾರೆ.ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮೂರ್ನಾಡಿನಲ್ಲಿ 24ನೇ ಶಾಖೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ ಎಂದರು.ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ನೂತನ 24ನೇ ಮೂರ್ನಾಡು ಶಾಖೆ ನಾಳೆ ಉದ್ಘಾಟನೆ Read More »

error: Content is protected !!
Scroll to Top