Author name: Tejas

ಸುಳ್ಯ ನಗರ ಸಮೀಪದ ತೋಟಗಳಲ್ಲಿ ಕಾಡಾನೆಗಳಿಂದ ಕೃಷಿ ನಾಶ !

ದಿನ ಕಳೆದಂತೆ ರೈತರಿಗೆ ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚುತ್ತಿದ್ದು ಕಳೆದ ರಾತ್ರಿ( ಜೂ.8) ಸುಳ್ಯ ಗಾಂಧಿನಗರ ಕೆ.ಪಿ.ಎಸ್.ಶಾಲೆಯ. ಸುಮಾರು 350 ಮೀ.ಅಂತರ ದೂರದ ರೈತರ ತೋಟಗಳಿಗೆ ಕಾಡಾನೆಗಳು ನುಗ್ಗಿ ಕೃಷಿಗಳನ್ನು ನಾಶ ಮಾಡಿದ ಘಟನೆ ವರದಿಯಾಗಿದೆ.ಉಬರಡ್ಕ ರಸ್ತೆ ಕಡೆಯಿಂದ ಬಂದ ಕಾಡಾನೆಗಳು ಅಟಲ್ ನಗರ,ದೇಂಗೋಡಿ,ಅಳಿಕೆ ಮಜಲು‌,ಕಾಯರ್ತೋಡಿ ಬೈಲಿಗೆ ನುಗ್ಗಿ ಸುಮಾರು 15ಕ್ಕೂ ಅಧಿಕ ರೈತರ ತೋಟಗಳಲ್ಲಿ ಕ್ರಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕೆಲವೆಡೆ ಆವರಣ ಗೋಡೆಗಳನ್ನು ಆನೆಗಳು ಹುಡಿ ಮಾಡಿ ಹಾಕಿವೆ.

ಸುಳ್ಯ ನಗರ ಸಮೀಪದ ತೋಟಗಳಲ್ಲಿ ಕಾಡಾನೆಗಳಿಂದ ಕೃಷಿ ನಾಶ ! Read More »

ಕಡಬ : ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಸೀತಾರಾಮ ಗೌಡ ರಸ್ತೆ ಅಪಘಾತಕ್ಕೆ ಬಲಿ

ಜಮ್ಮುವಿನಲ್ಲಿ ದೇಶದ ಭದ್ರತಾ ಸೇವೆಯಲ್ಲಿದ್ದ ಕಡಬ ತಾಲೂಕಿನ ಯೋಧನೊಬ್ಬ ರಜೆಯಲ್ಲಿ ಊರಿಗೆ ಬಂದಿದ್ದ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿಯಾದ, ಸಿಐಎಸ್ಎಫ್ ಯೋಧ ಸೀತಾರಾಮ ಗೌಡರು ಮಂಗಳೂರಿನ ಕೆಪಿಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ ಯೋಧರಾಗಿದ್ದಾರೆ.ಮಂಗಳೂರು ನಗರದ ಟ್ರಾಫಿಕ್ ಈಸ್ಟ್ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.CISF ನಲ್ಲಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ಗೌಡರವರು ಪ್ರಸ್ತುತ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಕರ್ತವ್ಯ

ಕಡಬ : ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಸೀತಾರಾಮ ಗೌಡ ರಸ್ತೆ ಅಪಘಾತಕ್ಕೆ ಬಲಿ Read More »

ಸುಳ್ಯ : ದೇಂಗೋಡಿ ಅಳಿಕೆಮಜಲು ಭಾಗದಲ್ಲಿ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು

ಸುಳ್ಯ ನಗರ ಸನಿಹದ ರೈತರ ತೋಟಗಳಿಗೆ ಕಾಡಾನೆಗಳು ಹಿಂಡು ಇದೀಗ( ಜು.8 ರಾತ್ರಿ) ನುಗ್ಗಿ ದಾಳಿ ದಾಳಿ ಮಾಡುತ್ತಿವೆ ಎಂದು ತಿಳಿದು ಬಂದಿದೆ.ಸುಳ್ಯ ಸಮೀಪದ ದೇಂಗೋಡಿ,ಅಳಿಕೆ ಮಜಲು ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಇ.ಟಿ.ಎಫ್ ತಂಡ ಕಾಡಾನೆಗಳನ್ನು ಕಾಡಿಗೆ ಅಟ್ಟಿಸುತ್ತಿದ್ದಾರೆ ಎಂದು ಸ್ಥಳೀಯರು ಎಂದು ತಿಳಿಸಿದ್ದಾರೆ.

ಸುಳ್ಯ : ದೇಂಗೋಡಿ ಅಳಿಕೆಮಜಲು ಭಾಗದಲ್ಲಿ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು Read More »

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಗೆ ನೂತನ ಖಾಝಿ ನೇಮಕಕ್ಕೆ ತೀರ್ಮಾನ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ ವಿಶೇಷ ಸಭೆಯು ಜು.7 ರಂದು ಸಮಸ್ತ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಮಂಗಳೂರು ಖಾಝಿ ಬಹು| ತ್ವಾಖಾ ಅಹಮ್ಮದ್ ಮುಸ್ಲಿಯಾರ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಯಾಸೀನ್ ಪಾರಾಯಣ ಹಾಗೂ ವಿಶೇಷ ದುವಾ ನಡೆಸಲಾಯಿತು. ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಗೆ ನೂತನ ಖಾಝಿಯಾಗಿ ಸಯ್ಯದುಲ್ ಉಲಮಾ ಬಹು| ಜಿಫ್ರಿ ಮುತ್ತುಕೋಯ ತಂಘಳ್ ರವರನ್ನು

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಗೆ ನೂತನ ಖಾಝಿ ನೇಮಕಕ್ಕೆ ತೀರ್ಮಾನ Read More »

ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು

ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳ ಸಂಪರ್ಕ ಕೊಂಡಿಯಾಗಿರುವ ರಾ.ಹೆ. 275ರ ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರವು 49.22 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಈ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ನವದೆಹಲಿಯಲ್ಲಿ ಸಚಿವಾಲಯದ ಕಾರ್ಯದರ್ಶಿಯವನ್ನು

ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು Read More »

ಉತ್ತಮ‌ ಸಮಾಜ ಸೇವೆ ಮಾಡಿದರೆ ಜನರು ನಮ್ಮನ್ನು ಮೆಚ್ಚುತ್ತಾರೆ : ರೋ.ರವೀಂದ್ರ ಭಟ್

ಸುಳ್ಯ : ಉತ್ತಮ‌ ಸಮಾಜ ಸೇವೆ ಮಾಡಿದರೆ ಜನರು ನಮ್ಮನ್ನು ಮೆಚ್ಚುತ್ತಾರೆ, ನಾವೇಲ್ಲ ಸೇರಿಕೊಂಡು ಜತೆಯಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯ ಎಂದು ರೋ.ಮೇಜರ್ ಡೋನರ್ ಪಿ.ಡಿ.ಜಿ ಎ.ಆರ್‌.ರವೀಂದ್ರ ಭಟ್ ಹೇಳಿದರು.ಜು.7ರಂದು ರೋಟರಿ ಸಮುದಾಯ ಭವನ ಸುಳ್ಯದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯ 2026-27ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.2026-27ನೇ ಸಾಲಿನ ನೂತನ ಅಧ್ಯಕ್ಷ ಪಿ.ಎಚ್.ಎಫ್ ರಾಗೇಶ್ ರಾಘವ್‌ ತಂಡಕ್ಕೆ ರೋ.ಲತಾ ಮಧುಸೂದನ ಪದಪ್ರದಾನ ಮಾಡಿದರು.ಕಾರ್ಯದರ್ಶಿಯಾಗಿ ಪುರಂದರ

ಉತ್ತಮ‌ ಸಮಾಜ ಸೇವೆ ಮಾಡಿದರೆ ಜನರು ನಮ್ಮನ್ನು ಮೆಚ್ಚುತ್ತಾರೆ : ರೋ.ರವೀಂದ್ರ ಭಟ್ Read More »

ನಾಳೆ ಶಾಲಾ ಕಾಲೇಜುಗಳಿಗೆ ರಜೆ

ದ.ಕ ಜಿಲ್ಲೆಯಲ್ಲಿ ಜು.8ರಂದು ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ,ಪ್ರಾಥಮಿಕ,ಪ್ರೌಢಶಾಲೆ ಪದವಿ ಪೂರ್ವ ಕಾಲೇಜುಗಳಿಗೆ ದ‌.ಕ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿ ಆದೇಶ ಮಾಡಿದ್ದಾರೆ‌.

ನಾಳೆ ಶಾಲಾ ಕಾಲೇಜುಗಳಿಗೆ ರಜೆ Read More »

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಮಹಾಸಭೆ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್: ಟ್ರಸ್ಟ್ ಮಹಾಸಭೆಯು ಜು. 6ರಂದು ಸುಳ್ಯದ ಸಿ.ಎ ಬ್ಯಾಂಕ್ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು . ಶ್ರೀಮತಿ ಪುಷ್ಪಾ ಮೇದಪ್ಪ ವಹಿಸಿದ್ದರು.ಕಾರ್ಯದರ್ಶಿ ಲೋಲಾಕ್ಷಿ ವರದಿ ವಾಚಿಸಿದರು..ಖಜಾಂಜಿ ಶಾರದಾ. ಡಿ.ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ಮಮತಾ ಬೊಳುಗಲ್ಲು ಸ್ವಾಗತಿಸಿದರು. ಗುತ್ತಿಗಾರು ಗ್ರಾಮ. ಸಂಚಾಲನ ಸಮಿತಿ ಸದಸ್ಯರು ವಂದೇ ಮಾತರಂ ಗೀತೆ ಹಾಡಿದರು.ಸಭೆಯಲ್ಲಿ ಆಡಳಿತ ಮಂಡಳಿ, ಅನುಷ್ಠಾನ ಸಮಿತಿ, ಗ್ರಾಮ ಸಂಚಾ ಲನ ಸಮಿತಿಗಳ ಸದಸ್ಯರುಗಳು, ಟ್ರಸ್ಟ್ ಸದಸ್ಯರುಗಳು ಉಪಸ್ಥಿತರಿದ್ದರು. .ರಾಜೇಶ್ವರಿ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಮಹಾಸಭೆ Read More »

ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ನಿಧನ

ಸುಳ್ಯ ನಿವಾಸಿ ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ(76 ವರ್ಷ) ಜೂ.7ರಂದು ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಗಿರೀಶ್‌ ಭಾರದ್ವಾಜರು ಕೆಲ ದಿನಗಳ ಹಿಂದೆ ಉತ್ತರ ಕಾಂಡದ ದೇವಸ್ಥಾನದಲ್ಲಿ ಗಳಿಗೆ ಹೋಗಿ ಬಂದಿದ್ದರು.ಬಳಿಕಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ನಿಧನರಾದರು.

ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ನಿಧನ Read More »

ಜೇಸಿಐ ಸುಳ್ಯ ಪಯಸ್ವಿನಿಗೆ ಸಿಂಧು-2026 ಲೇಡಿ ಜೇಸಿ ಸಮ್ಮೇಳನದಲ್ಲಿ ಟಾಪ್ 5 ಘಟಕದೊಂದಿಗೆ, ಹಲವು ಪುರಸ್ಕಾರ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು ಮಹಿಳಾ ಪರ ಕಾರ‍್ಯಕ್ರಮಗಳ ಆಯೋಜನೆಯಲ್ಲಿ ಸಾಧನೆ ಮೆರೆದಿದ್ದು, ಜುಲೈ 5ರಂದು ಬೈಂದೂರಿನ ಜೆ.ಎನ್.ಆರ್. ಕಲಾಮಂದಿರದಲ್ಲಿ ನಡೆದ ಜೇಸಿಐ ಭಾರತ ವಲಯ-15ರ ಲೇಡಿ ಜೇಸಿ ಸಮ್ಮೇಳನ “ಸಿಂಧು-2026”ರಲ್ಲಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದೆ. ಕಾರ‍್ಯಕ್ರಮದಲ್ಲಿ ಜೇಸಿಐ ಭಾರತ ವಲಯ-15ರ ವಲಯಾಧ್ಯಕ್ಷರಾದ ಜೆ.ಎಫ್.ಎಸ್. ಸಂತೋಷ್ ಶೆಟ್ಟಿ ಹಾಗೂ ಪ್ರಥಮ ಮಹಿಳೆ ಜೆ.ಎಫ್.ಎಂ. ಸಿಂಧು ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್

ಜೇಸಿಐ ಸುಳ್ಯ ಪಯಸ್ವಿನಿಗೆ ಸಿಂಧು-2026 ಲೇಡಿ ಜೇಸಿ ಸಮ್ಮೇಳನದಲ್ಲಿ ಟಾಪ್ 5 ಘಟಕದೊಂದಿಗೆ, ಹಲವು ಪುರಸ್ಕಾರ Read More »

error: Content is protected !!
Scroll to Top