Author name: Tejas

Unlock Your Career Potential: The Power of Communication

Effective communication is the cornerstone of success in any career. It’s not just about speaking clearly; it’s about building connections and understanding others. In today’s competitive workplace, strong communication skills can set you apart from your peers and open up new opportunities. *Enhance Your Communication Skills* Here are some practical tips to improve your communication […]

Unlock Your Career Potential: The Power of Communication Read More »

ಜಗನ್ನಾಥ ಆಲಡ್ಕ ನಿಧನ

ಅರಂತೋಡು : ಸಂಪಾಜೆ ಗ್ರಾಮದ ಆಲಡ್ಕ ನಿವಾಸಿ ಜಗನ್ನಾಥ ಆಲಡ್ಕ( 26 )ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ಶನಿವಾರ ನಿಧನರಾದರು.ಅವರು ಕೆಲವು ಸಮಯದಿಂದ ಅಸೌಖ್ಯಕೊಳಗಾಗಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು‌.ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.

ಜಗನ್ನಾಥ ಆಲಡ್ಕ ನಿಧನ Read More »

ಎರಡು ಕಾರುಗಳ ನಡುವೆ ಭೀಕರ ಅಪಘಾತ

ಧರ್ಮಸ್ಥಳ : ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಧರ್ಮಸ್ಥಳದ ಶಕ್ತಿನಗರದಿಂದ ವರದಿಯಾಗಿದೆ. ಗುರುವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡುವೆ ಅಪಘಾತ ಸಂಭವಿಸಿದೆ. ಐ20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರುಗಳು ಎರಡೂ ಜಖಂಗೊಂಡಿದೆ.

ಎರಡು ಕಾರುಗಳ ನಡುವೆ ಭೀಕರ ಅಪಘಾತ Read More »

ರಬ್ಬರ್ ಆಸಿಡ್ ಸೇವಿಸಿದ ವ್ಯಕ್ತಿ ಸಾವು

ಅರಂತೋಡು : ರಬ್ಬರ್ ಆಸಿಡ್‌ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ 70)ಪಾಲ್ತಾಡುರವರು ಭಾನುವಾರ ಮೃತಪಟ್ಟರು.ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್ ಆಸಿಡ್‌ ಸೇವಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.ಮೃತರು ಓರ್ವ ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ರಬ್ಬರ್ ಆಸಿಡ್ ಸೇವಿಸಿದ ವ್ಯಕ್ತಿ ಸಾವು Read More »

ಪೆರಾಜೆ ಬಿಳಿಯಾರಿನಲ್ಲಿ ಸರಣಿ ಅಪಘಾತ

ಸ್ಕೂಟಿ ಸ್ಕಿಡಾಗಿ ಯುವಕನೋರ್ವ ಬಿದ್ದು ಗಾಯಗೊಂಡಿದ್ದು , ಯುವಕ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಲೆಂದು ಕಾರು ಚಾಲಕ ಬ್ರೇಕ್ ಹಾಕಿದ ವೇಳೆ ಹಿಂಬದಿಯಿಂದ ಕಾರಿಗೆ ಬೈಕ್ ಢಿಕ್ಕಿ ಹೊಡೆದ ಘಟನೆ ಶನಿವಾರ ಪೆರಾಜೆ ಬಿಳಿಯಾರಿನಿಂದ ವರದಿಯಾಗಿದೆ. ಅರಂತೋಡಿನ ಯುವಕನೋರ್ವ ಸುಳ್ಯದಿಂದ ಅರಂತೋಡಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಬಿಳಿಯಾರು ಪೆಟ್ರೋಲ್ ಪಂಪ್ ಬಳಿ ಸ್ಕೂಟಿ ಸ್ಕಿಡ್ ಆಗಿ ಪಲ್ಟಿಯಾಯಿತೆನ್ನಲಾಗಿದೆ. ಪರಿಣಾಮವಾಗಿ ಯುವಕ ರಸ್ತೆಗೆ ಎಸೆಯಲ್ಪಟ್ಟು ಕೈಗೆ ಗಾಯವಾಗಿತ್ತು.ಈ ಅಪಘಾತ ನಡೆದ ಸಂದರ್ಭದಲ್ಲಿ ಅರಂತೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಅರಂತೋಡಿನ ಸತ್ಯ ಎಂಬವರು

ಪೆರಾಜೆ ಬಿಳಿಯಾರಿನಲ್ಲಿ ಸರಣಿ ಅಪಘಾತ Read More »

ಸಾಹಿತಿ ಭೀಮರಾವ್ ವಾಷ್ಠರ್ ಅವರ ಎರಡು ಮರಾಠಿ ಕವನಗಳು ಎರಡು ದಸರಾ ಬಹುಭಾಷಾ ಕವಿಗೋಷ್ಠಿಗಳಲ್ಲಿ ವಾಚನ

ಸುಳ್ಯದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಗಳಲ್ಲಿ ತಮ್ಮ ಸ್ವರಚಿತ ಎರಡು ಮರಾಠಿ ಕವನಗಳನ್ನು ವಾಚನ ಮಾಡಿರುತ್ತಾರೆ. ಅ. 9 ರಂದು ಬೃಹತ್ತಾದ ಭವ್ಯ ಗಾಂಧಿ ಮಂಟಪದ ವೇದಿಕೆಯಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಟಿ ಸಮಾರಂಭದಲ್ಲಿ “ಜಗಾತ್ಲ ತೋರ್ಲ ದೇವ್ ಕೃಷ್ಣಾ” ಕವನ ವಾಚಿಸಿದರು. ಅ. 11 ರಂದು ಗೋಣಿಕೊಪ್ಪದ ಶ್ರೀ ಕಾವೇರಿ ದಸರಾ ಸಮಿತಿ ಆಯೋಜಿಸಿದ್ದ ದಸರಾ

ಸಾಹಿತಿ ಭೀಮರಾವ್ ವಾಷ್ಠರ್ ಅವರ ಎರಡು ಮರಾಠಿ ಕವನಗಳು ಎರಡು ದಸರಾ ಬಹುಭಾಷಾ ಕವಿಗೋಷ್ಠಿಗಳಲ್ಲಿ ವಾಚನ Read More »

ಹಿಂದು ಯುವಕನಿಗೆ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ

ಪುತ್ತೂರು: ಹಿಂದು ಯುವಕನಿಗೆ ನಾಲ್ವರಿದ್ದ ಯುವಕರ ತಂಡ ರೈಲಿನಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಂದು ಬೆಳಿಗ್ಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.ಹಲ್ಲೆಗೊಳಗಾದ ಯುವಕ ಹಿಂದೂ ಧರ್ಮೀಯ, ಹಲ್ಲೆ ನಡೆಸಿದ ಯುವಕರು ಅನ್ಯಧರ್ಮಿಯರು ಎಂದು ಹೇಳಲಾಗುತ್ತಿದೆ.ಹಲ್ಲೆ ನಡೆಸಿದ ನಾಲ್ವರನ್ನು ಪುತ್ತೂರು ನಗರ ಠಾಣೆ ಪೊಲೀಸರು ನಾಲ್ವರನ್ನು ಸಾಲ್ಮರ ಮಸೀದಿ ಬಳಿಯಿಂದ ವಶಕ್ಕೆ ಪಡೆದು ಕೊಂಡಿದ್ದಾರೆ. ಪ್ರಕರಣವು ರೈಲ್ವೇ ಪೊಲೀಸರ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ವಶಕ್ಕೆ ಪಡೆದ ಆರೋಪಿಗಳನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್‌

ಹಿಂದು ಯುವಕನಿಗೆ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ Read More »

ಗುಂಡ್ಯ : ಕಂದಕಕ್ಕೆ ಉರುಳಿದ ಬಿದ್ದ ಖಾಸಗಿ ಬಸ್ಸು, ಚಾಲಕ ಸಾವು

ಖಾಸಗಿ ಬಸ್ಸೊಂದು ಚಾಲಕನತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತ ಪಟ್ಘಟನೆ ಶುಕ್ರವಾರ ತಡ ರಾತ್ರಿ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಅಪಘಾತದ ಸಂದರ್ಭ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಮಾತ್ರವಿದ್ದರು. ಹೀಗಾಗಿ ಭಾರೀ ದುರಂತವೊಂದು ಸಂಭವಿಸುವುದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಶುಕ್ರವಾರ ತಡರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದ್ದು, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಬ್ರಹಣ್ಯ ನಾಮಫಲಕ ಹೊಂದಿದ ಈ ಖಾಸಗಿ ಸ್ವೀಪರ್ ಬಸ್ಸು ಲಾವತ್ತಡ್ಕ ಬಳಿ ಕಂದಕಕಕ್ಕೆ ಉರುಳಿ ಗುಂಡ್ಯ ಹೊಳೆಗೆ

ಗುಂಡ್ಯ : ಕಂದಕಕ್ಕೆ ಉರುಳಿದ ಬಿದ್ದ ಖಾಸಗಿ ಬಸ್ಸು, ಚಾಲಕ ಸಾವು Read More »

ಮುಲ್ತಾಝ್ ಅಲಿ ಸಾವು : ಪೊಲೀಸ್ ತನಿಖೆ ಚುರುಕು

ಉದ್ಯಮಿ ಮುಲ್ತಾಝ್ ಅಲಿ ಸಾವು ಕೇಸ್ ಗೆ ಸಂಬಂಧಿಸಿದಂತೆ ಇಂದು ಪೊಲೀಸರ ತನಿಖೆ ಚುರುಕುಗೊಂಡಿದೆ. ಪ್ರಕರಣದ ಸೂತ್ರದಾರ ಹಾಗೂ ಎ2 ಆರೋಪಿ ಕೃಷ್ಣಾಪುರ ನಿವಾಸಿ ಅಬ್ದುಲ್ ಸತ್ತಾರ್, ಎ3 ಆರೋಪಿ ಮುಹಮ್ಮದ್ ಮುಸ್ತಫಾ, 4ನೇ ಆರೋಪಿ ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಶಾಫಿಯನ್ನು ನಿನ್ನೆ ಕೋರ್ಟ್ ಗೆ ಹಾಜರುಪಡಿಸಿದ್ದ ಕಾವೂರು ಪೊಲೀಸರು, ಏಳು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಮೂವರು ಆರೋಪಿಗಳನ್ನು ಅ. 9ರಂದು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಮುಲ್ತಾಝ್ ಅಲಿ ಸಾವು : ಪೊಲೀಸ್ ತನಿಖೆ ಚುರುಕು Read More »

ಬಿ.ಪಿ.ಎಲ್ ಕಾರ್ಡ್ ರದ್ದಾದವರಿಗೆ ಎ.ಪಿ.ಎಲ್ ಕಾರ್ಡ್ ವಿತರಣೆ: ಸಚಿವ ಮುನಿಯಪ್ಪ

ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ. ಕಳ್ಳ ಮಾರ್ಗದಿಂದ BPL ಕಾರ್ಡ್ ಪಡೆದುಕೊಂಡಿದ್ದರೆ ರದ್ದಾಗುತ್ತದೆ. ಈ ನಡುವೆ ಆಹಾರ ಸಚಿವ ವಿ.ಮುನಿಯಪ್ಪ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಕೋಲಾರದಲ್ಲಿ ಶುಕ್ರವಾರ ಮಾತನಾಡಿದ ಅವರು, BPL ಕಾರ್ಡ್ ರದ್ದಾದರೂ ಕೂಡ ಆ ಸದಸ್ಯರನ್ನ APL ಕಾರ್ಡ್‌ಗೆ ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೆ ಅನ್ನಭಾಗ್ಯ ಹಣ ಕೂಡ ವರ್ಗಾವಣೆಯಾಗುತ್ತದೆ ಸರ್ವರ್ ಸಮಸ್ಯೆಯಿಂದ ಹಣ ವರ್ಗಾವಣೆಯಲ್ಲಿ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

ಬಿ.ಪಿ.ಎಲ್ ಕಾರ್ಡ್ ರದ್ದಾದವರಿಗೆ ಎ.ಪಿ.ಎಲ್ ಕಾರ್ಡ್ ವಿತರಣೆ: ಸಚಿವ ಮುನಿಯಪ್ಪ Read More »

error: Content is protected !!
Scroll to Top