Author name: Tejas

ಇಂದು(ಆ.19) ಸುಳ್ಯದಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ

ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ಹಿಂದೂ ಬಾಂಧವರನ್ನು ಸಂಘಟಿಸುವ ಸಲುವಾಗಿ ಶ್ರೀ ಕೃಷ್ಣ ಪರಮಾತ್ಮನ ಜನ್ಮ ದಿನಾಚರಣೆಯನ್ನು ಆಚರಿಸುವ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆಯೊಂದಿಗೆ 12 ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಅರ್ಥಪೂರ್ಣವಾದ ಶೋಭಾಯಾತ್ರೆ ಆಚರಣೆ ಇಂದು ಮಧ್ಯಾಹ್ನನತಂತರ ನಡೆಯಲಿದೆ.ಆ. 19 ರಂದು ಮದ್ಯಾಹ್ನದ ನಂತರ ನಡೆಯಲಿರುವ ಉತ್ಸವದಉದ್ಘಾಟನೆಯನ್ನು ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದಾರೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಖ್ಯಾತ ವಾಗ್ನಿಗಳಾದ ಚಕ್ರವರ್ತಿ ಸೂಲಿಬೆಲೆ […]

ಇಂದು(ಆ.19) ಸುಳ್ಯದಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ Read More »

ಒಂದೇ ದೇಹ, ಎರಡು ತಲೆ-ಹೃದಯಗಳಿರುವ ಶಿಶು ಜನನ

ಪ್ರಕ್ರತಿಯಲ್ಲಿ ವಿಚಿತ್ರ ಘಟನೆಗಳು ಸಂಭವಿಸುತ್ತ ಇರುತ್ತವೆ.ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಪರೂಪದ ವೈದ್ಯಕೀಯ ಘಟನೆಯೊಂದು ವರದಿಯಾಗಿದೆ. ಮಹಾರಾಜ ತುಕೋಜಿರಾವ್‌ ಆಸ್ಪತ್ರೆಯಲ್ಲಿ ಸೋನಾಲಿ ಮತ್ತು ಅಸಾರಾಂ ದಂಪತಿಗೆ ಎರಡು ತಲೆ, ಎರಡು ಹೃದಯ, ನಾಲ್ಕು ತೋಳು ಮತ್ತು ಎರಡು ಕಾಲುಗಳಿರುವ ಮಗು ಜನಿಸಿದೆ. ಈ ಅವಳಿ ಶಿಶುವಿಗೆ ಒಂದೇ ಎದೆ ಮತ್ತು ಹೊಟ್ಟೆ ಇದ್ದು, ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ಸಂಯೋಜಿತ ಅವಳಿಗಳು ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪದ ಘಟನೆಯಾಗಿದ್ದು, ಇಂತಹ ಶಿಶುಗಳ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ.

ಒಂದೇ ದೇಹ, ಎರಡು ತಲೆ-ಹೃದಯಗಳಿರುವ ಶಿಶು ಜನನ Read More »

ಸುಳ್ಯ ಸರಕಾರ ಪದವಿ ಪೂರ್ವ ಕಾಲೇಜು ನೂತನ ಅಕ್ಷರ ದಾಸೋಹ ಕೊಠಡಿಗೆ ಭೂಮಿ ಪೂಜೆ,ಅಮೃತ ಮಹೋತ್ಸವ ಲೋಗೋ ಮತ್ತು ಮನವಿ ಪತ್ರ ಬಿಡುಗಡೆ

ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಅಮೃತ ಮಹೋತ್ಸವ-2025 ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯಲ್ಲಿ ನೂತನ ಅಕ್ಷರ ದಾಸೋಹ ಕೊಠಡಿಗೆ ಭೂಮಿ ಪೂಜೆ ಕಾರ್ಯಕ್ರಮ ಆ.18 ರಂದು ನಡೆಯಿತು.ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು.ಬಳಿಕ ಮಾತನಾಡಿದ ಅವರು “ಈ ಶಾಲೆಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ನೂರಾರು ಮಂದಿ ಹಳೆ ವಿದ್ಯಾರ್ಥಿಗಳು ಇಂದು ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ವಿವಿಧ

ಸುಳ್ಯ ಸರಕಾರ ಪದವಿ ಪೂರ್ವ ಕಾಲೇಜು ನೂತನ ಅಕ್ಷರ ದಾಸೋಹ ಕೊಠಡಿಗೆ ಭೂಮಿ ಪೂಜೆ,ಅಮೃತ ಮಹೋತ್ಸವ ಲೋಗೋ ಮತ್ತು ಮನವಿ ಪತ್ರ ಬಿಡುಗಡೆ Read More »

ಗ್ರಾಮೀಣ ಆಟಗಳು ಮನಸ್ಸಿಗೆ ಹೆಚ್ಚು ಸಂತೋಷ ನೀಡುವ ಆಟಗಳಾಗಿವೆ

ಅರಂತೋಡು, ಆ. 19 : ಗ್ರಾಮೀಣ ಕ್ರೀಡೆಗಳು‌ ಮನಸ್ಸಿಗೆ ತುಂಬಾ ಸಂತೋಷ ನೀಡುವ ಕ್ರೀಡೆಯಾಗಿದೆ.ಚೆನ್ನಮಣೆ ಸೇರಿದಂತೆ ಇತರ ಗ್ರಾಮೀಣ ಕ್ರೀಡೆಗಳನ್ನು ನಮ್ಮ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯ ಇದೆ ಎಂದು ಸಿ.ಆರ್.ಪಿ ಕುಶಾಲಪ್ಪ ಹೇಳಿದರು.ಸಿ. ಸಿ ಆರ್. ಟಿ. ಬಳಗ ಸುಳ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸುಳ್ಯ, ಹಾಗೂ ಸರಕಾರಿ ಪ್ರೌಢ ಶಾಲೆ ಎಲಿ ಮಲೆ ಇವರ ಸಹಯೋಗದಲ್ಲಿ, ಪ್ರಾಥಮಿಕ‌ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆ.16ರಂದು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಸುಳ್ಯ ತಾಲ್ಲೂಕು ಮಟ್ಟದ

ಗ್ರಾಮೀಣ ಆಟಗಳು ಮನಸ್ಸಿಗೆ ಹೆಚ್ಚು ಸಂತೋಷ ನೀಡುವ ಆಟಗಳಾಗಿವೆ Read More »

ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಕಾರ್ಯಕ್ರಮ

ಸುಳ್ಯ:ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ನೂತನ ಭಜನಾ ಮಂದಿರ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಆ.18ರಂದು ನಡೆಯಿತು. ಪೂ.10-20ರ ತುಲಾ ಲಗ್ನ ಮುಹೂರ್ತದಲ್ಲಿನೂತನ ಶ್ರೀಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆಶಿಲಾನ್ಯಾಸ ಹಾಗೂ ಭೂಮಿ ಪೂಜನ ಕಾರ್ಯಕ್ರಮ ನೆರವೇರಿತು.ವೇದಮೂರ್ತಿ ಪುರೋಹಿತ ನಾಗರಾಜ ಭಟ್ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.ಉದ್ಯಮಿ ಹಾಗೂ ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯಿರ್‌ಹಿತ್ಲು ಅಧ್ಯಕ್ಷತೆ

ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಕಾರ್ಯಕ್ರಮ Read More »

ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಸನ್ನೆ ಮಾಡಿದ ಯುವಕ ಮೇಲೆ ಪ್ರಕರಣ ದಾಖಲು

ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆ ನಡೆಯುತ್ತಿದ್ದಾಗ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಸನ್ನೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಬಂಧಿತರು.ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ನಿನ್ನೆ ಜೈ ವೀರಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ 11.50 ರ ವೇಳೆಗೆ ತೊಕ್ಕೊಟ್ಟು ಒಳಪೇಟೆಯ ತಾಜ್ ಸೈಕಲ್ ಶಾಪ್ ಬಳಿ ತಲುಪಿದಾಗ ಯುವಕರ ಗುಂಪೊಂದು ಬ್ಯಾಂಡ್ ಬಾರಿಸುತ್ತಾ ಮೆರವಣಿಗೆ ಮುಂದೆ ಹೋಗಲು ಅವಕಾಶ ನೀಡದೆ ತೊಂದರೆ ನೀಡಿದ್ದಾರೆ.

ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಸನ್ನೆ ಮಾಡಿದ ಯುವಕ ಮೇಲೆ ಪ್ರಕರಣ ದಾಖಲು Read More »

ಅರಂತೋಡು : ಅಖಂಡ ಭಾರತ ಸಂಕಲ್ಪ ಯಾತ್ರೆ

ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತ್ರ್ ಶಕ್ತಿ ದುರ್ಗಾವಾಹಿನಿ ಹನುಮಾನ್ ಶಾಖೆ ಆರಂತೋಡು ಸುಳ್ಯ ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆಪ್ರತಿ ವರ್ಷದಂತೆ ಅಖಂಡ ಸಂಕಲ್ಪ ಯಾತ್ರೆಯ ಮೆರವಣಿಗೆ ಕೋಡಂಕೇರಿಯಿಂದ ದುರ್ಗಾಮತಾ ಭಜನಾ ಮಂದಿರದ ಎದುರುಗಡೆ ಸಂಪನ್ನ ಗೊಂಡು ಸಿರಿಸೌಧ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರಾದ ಪದ್ಮನಾಭ ಯು ಎಸ್ ವಹಿಸಿದರು ಧಾರ್ಮಿಕ ಉಪನ್ಯಾಸವನ್ನು ಸಂದೀಪ್ ಒಳಳಂಬೆ ವಿ ಹೆಚ್ ಪಿ ನ ವಿಧಿ ಪ್ರಮುಖ್ ಸುಳ್ಯ ಪ್ರಖಂಡ

ಅರಂತೋಡು : ಅಖಂಡ ಭಾರತ ಸಂಕಲ್ಪ ಯಾತ್ರೆ Read More »

ಕಾಲೇಜು ಸಿಬ್ಬಂದಿ ಯುವತಿ ಆತ್ಮಹತ್ಯೆ

ಪುತ್ತೂರು ತಾಲೂಕಿನ ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬನ್ನೂರು ಗ್ರಾಮದಲ್ಲಿ ಭಾನುವಾರ ವರದಿಯಾಗಿದೆ.ಬನ್ನೂರು ಗ್ರಾಮದ ಕನಡ್ಕ ನಿವಾಸಿ ಡೊಂಬಯ್ಯ ಕುಲಾಲ್ ಅವರ ಪುತ್ರಿ ತೇಜಸ್ವಿನಿ (22) ಆತ್ಮಹತ್ಯೆಗೆ ಶರಣಾದ ಯುವತಿ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ‌.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಲೇಜು ಸಿಬ್ಬಂದಿ ಯುವತಿ ಆತ್ಮಹತ್ಯೆ Read More »

ಅಡ್ತಲೆ : ಸ್ಪಂದನ ಗೆಳೆಯರ ಬಳಗದ  ವತಿಯಿಂದ‌ ವಿಜೃಂಭಣೆಯಿಂದ ನಡೆದ‌ 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ‌ ಸ್ಪರ್ಧೆ

ಸ್ಪಂದನ ಗೆಳೆಯರ ಬಳಗ(ರಿ) ಅಡ್ತಲೆ ಇವರ ಆಶ್ರಯದಲ್ಲಿ ಆ.17ರಂದು 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ‌ ಸ್ಪರ್ಧೆಯು ನಡೆಯಿತು. ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಅಡ್ತಲೆ- ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ ಸ್ಥಾನದ ಅಧ್ಯಕ್ಷರಾದ ಶ್ರೀ ಸದಾನಂದ ಅಡ್ತಲೆ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ನಂತರ ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ‌ ಸ್ಪರ್ಧೆ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಮನೋರಂಜನಾ ಕ್ರೀಡಾ ಸ್ಪರ್ಧೆಗಳು

ಅಡ್ತಲೆ : ಸ್ಪಂದನ ಗೆಳೆಯರ ಬಳಗದ  ವತಿಯಿಂದ‌ ವಿಜೃಂಭಣೆಯಿಂದ ನಡೆದ‌ 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ‌ ಸ್ಪರ್ಧೆ Read More »

ಭಾರೀ ಮಳೆ ಹಿನ್ನಲೆ, ನಾಳೆ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಮಳೆಯ ಕಾರಣದಿಂದ ದಿನಾಂಕ 18/8/25 ರಂದು ಅಂಗನವಾಡಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿರುತ್ತಾರೆ.

ಭಾರೀ ಮಳೆ ಹಿನ್ನಲೆ, ನಾಳೆ ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ Read More »

error: Content is protected !!
Scroll to Top