Author name: Tejas

ತೊಡಿಕಾನ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ

ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು ಜರುಗಿದವು.ಸ್ಪರ್ಧಾ ಕಾರ್ಯಕ್ರಮವನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಉದ್ಘಾಟಿಸಿದರು.ಭಜನಾ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ,ಶ್ರೀ ಕ್ಷೇತ್ರ […]

ತೊಡಿಕಾನ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ Read More »

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ 79ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ಅಂಗವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಧ್ವಜಾರೋಹಣ ನೆರವೇರಿಸಿದರು ಮಾತನಾಡಿ ಹಲವಾರು ಮಹನೀಯರ ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ದೊರಕಿದೆ ಈ ಸಂದರ್ಭದಲ್ಲಿ ಅವರ ವೀರ ಮರಣವನ್ನು ನೆನಪಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಒಳ್ಳೆಯ ಪ್ರಜೆಗಳಾಗಿ ಬಾಳೋಣ ಎಂದು ಶುಭ ಹಾರೈಸಿದರುತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ. ಶಹೀದ್ ತೆಕ್ಕಿಲ್ ಮಾತನಾಡಿ ನಮಗೆ

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ Read More »

ಸುಳ್ಯ ತಾಲೂಕು ಭ್ರಷ್ಟಾಚಾರ ಮುಕ್ತ ತಾಲೂಕು‌ ಆಗಲಿ : ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ತಾಲೂಕು ಭ್ರಷ್ಟಾಚಾರ ಮುಕ್ತ ತಾಲೂಕು ಆಗಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ತಾಲೂಕು ವತಿಯಿಂದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸಮ್ಮಾನಿಸಿ ಅವರು ಮಾತನಾಡಿದರು. ತಾಲೂಕಿನ ತಹಶೀಲ್ದಾರ್‌ಗಳು ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಲಿ, ಗ್ರಾಮದಲ್ಲಿ ಎಷ್ಟು ಟಾರ್ಪಲಿನಲ್ಲಿ ಮನೆಗಳಿವೆ ಎಂಬುದು ಗೊತ್ತಾಗುತ್ತದೆ. ಮನೆಗಳಿಗೆ ಅಡಿಸ್ಥಳ

ಸುಳ್ಯ ತಾಲೂಕು ಭ್ರಷ್ಟಾಚಾರ ಮುಕ್ತ ತಾಲೂಕು‌ ಆಗಲಿ : ಶಾಸಕಿ ಭಾಗೀರಥಿ ಮುರುಳ್ಯ Read More »

ಅರಂತೋಡು ನುಸ್ರತುಲ್* ಇಸ್ಲಾಂಮದರದಲ್ಲಿ  79ನೇ ಸ್ವಾತಂತ್ರ್ಯೋತ್ಸ ಆಚರಣೆ

ಬದ್ರಿಯಾ ಜುಮ್ಮಾ ಮಸೀದಿ, ನುಸ್ರತುಲ್ ಇಸ್ಲಾಂ ಮದರಸ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅರಂತೋಡು ಇದರ ಜಂಟಿ ಆಶ್ರಯದಲ್ಲಿ 79 ನೇ ಸ್ವಾತಂತ್ರೋತ್ಸವ ಆಚರಣೆ ಮಾಡಲಾಯಿತು.ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಧ್ವಜಾರೋಹಣ ನೆರವೇರಿಸಿದರು.ಮಸೀದಿ ಖತೀಬ್ ರಾದ ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ಸಂದೇಶ ಭಾಷಣ ಮಾಡಿದರು. ಜಮಾಆತ್ ಉಪಾಧ್ಯಕ್ಷ ಹಾಜಿ ಕೆ.ಎಂ.ಮಹಮ್ಮದ್,ಸದರ್ ಮುವಲ್ಲಿಂ ಅಶ್ರಫ್ ಮುಸ್ಲಿಯಾರ್ ಆಡ್ಕಾರ್ ದುವ ನೆರವೇರಿಸಿದರು .ನಿವೃತ ಉಪನ್ಯಾಸಕ ಅಬ್ದುಲ್ ಮಾಸ್ಟರ್ ಮಾತನಾಡಿ. ಸಹಾಯಕ ಅಧ್ಯಾಪಕ ಅಬ್ದುಲ್ ಅಬ್ದುಲ್ಲ

ಅರಂತೋಡು ನುಸ್ರತುಲ್* ಇಸ್ಲಾಂಮದರದಲ್ಲಿ  79ನೇ ಸ್ವಾತಂತ್ರ್ಯೋತ್ಸ ಆಚರಣೆ Read More »

ಆ.16ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ ಇಲ್ಲ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿಯಲ್ಲಿ ದಿನಾಂಕ 16-08-2025 ರ ಸಿಂಹ ಸಂಕ್ರಮಣದಂದು ಕಲಶ ಸೇವೆ ಇರುವುದು. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತಪ್ರಣೆ ರಾತ್ರಿ ಗಂಟೆ 7:00ಕ್ಕೆ ನಡೆಯಲಿದೆ. ವಿ. ಸೂ :ಅಗೇಲು ಸೇವೆ ಇರುವುದಿಲ್ಲ. ಈ ಸಲದ ಅನ್ನ ಸಂತರ್ಪಣೆ ಮಾಡಿಸುವರು ಗಿರಿಶ. ಬಿ. ಜಿ ಮತ್ತು ಮನೆಯವರು ಗೋಣಿಕೊಪ್ಪ. ಲೋಕೇಶ ಗೌಡ ಮತ್ತು ಮನೆಯವರು. ಶ್ರೀ ದುರ್ಗಾಪರಮೇಶ್ವರಿ ಹೋಟೆಲ್ ಸುಳ್ಯ

ಆ.16ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ ಇಲ್ಲ Read More »

ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಹರಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ ಪುನರಾಯ್ಕೆ

ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ರಂಜಿತ್ ಅಡ್ತಲೆ ಸರ್ವರನ್ನು ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.ಮುಂದಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಹರಿಪ್ರಸಾದ್ ಅಡ್ತಲೆ, ಉಪಾಧ್ಯಕ್ಷರಾಗಿ ಶ್ರೀ ವಿನಯ್ ಬೆದ್ರುಪಣೆ,ಶ್ರೀ ಲೋಹಿತ್ ಮೇಲಡ್ತಲೆ,ಶ್ರೀ ಸ್ವಾತಿಕ್ ಕಿರ್ಲಾಯ, ಕಾರ್ಯದರ್ಶಿಯಿಗಿ ಶ್ರೀ ರಂಜಿತ್ ಅಡ್ತಲೆ,ಜೊತೆ ಕಾರ್ಯದರ್ಶಿಯಾಗಿ ಶ್ರೀ ಮೋಹನ ಕಿನಾಲ , ಖಜಾಂಜಿಯಾಗಿ ಶ್ರೀ ಶಶಿಕುಮಾರ್ ಉಳುವಾರು ಆಯ್ಕೆಗೊಂಡರು. ನೂತನ ನಿರ್ದೆಶಕ ರಾಗಿ

ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಹರಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ ಪುನರಾಯ್ಕೆ Read More »

ಸಂಪಾಜೆ : ಸ್ವಚ್ಚತಾ ಕಾರ್ಯಕ್ರಮ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಆ.14ರಂದು ನಡೆಯಿತು.ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಮಟ್ಟದ ಎಲ್ಲಾ ಸಂಘಟನೆ ದಾರ್ಮಿಕ ಮುಖಂಡರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅಧಿಕಾರಿಗಳು ಜನಪ್ರತಿನಿಧಿಗಳು ವರ್ತಕರು ಯುವಕ ಮಂಡಲ ಸಂಜೀವಿನಿ ಯೋಜನೆ ಒಕ್ಕೂಟ ಆಟೋ ಚಾಲಕ ಮಾಲಕರು, ಲಯನ್ಸ್ ಕ್ಲಬ್ ಊರ ನಾಗರಿಕರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ವಠಾರ, ರಿಕ್ಷಾ ಪಾರ್ಕ್, ಸರಕಾರಿ ಕಟ್ಟಡ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ

ಸಂಪಾಜೆ : ಸ್ವಚ್ಚತಾ ಕಾರ್ಯಕ್ರಮ Read More »

ಸುಳ್ಯ ನಗರ ಮಹಿಳಾ ಗೌಡ ಘಟಕದ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ.ಯವರಿಗೆ ಗೌರವ

ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ. ಯವರು ಜು.31ರಂದು ತಮ್ಮ 28 ವರ್ಷಗಳ ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸುಳ್ಯ ನಗರ ಮಹಿಳಾ ಗೌಡ ಘಟಕದ ಸದಸ್ಯರು ಆ.13 ರಂದು ಅವರ ಮನೆಗೆ ತೆರಳಿ ಶಾಲು, ಪೇಟ, ಫಲ ಪುಷ್ಪ ನೀಡಿ ಗೌರವ ಸಲ್ಲಿಸಿದರು. ಶಿಕ್ಷಕಿ ಪ್ರೇಮಾವತಿ ಟೀಚರ್‌ರವರ ಕುರಿತು ತಾ.ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿಎಸ್ ಗಂಗಾಧರ್, ನಿವೃತ್ತ ವಿಜಯಬ್ಯಾಂಕ್ ಉದ್ಯೋಗಿ ಜನಾರ್ಧನ ಕೊಳಂಜಿರೋಡಿ ಮಾತನಾಡಿದರು.

ಸುಳ್ಯ ನಗರ ಮಹಿಳಾ ಗೌಡ ಘಟಕದ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ.ಯವರಿಗೆ ಗೌರವ Read More »

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನಶಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 13/08/2025ರಂದು ಕಾಲೇಜಿನ ಎನ್.ಎಸ್.ಎಸ್. ಘಟಕವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕದ ಸಹಯೋಗದೊಂದಿಗೆ ನಶಮುಕ್ತ ಭಾರತ ಅಭಿಯಾನವನ್ನು ನಡೆಸಲಾಯಿತುಈ ಕಾರ್ಯಕ್ರಮದ ಪ್ರಯುಕ್ತ ಜನಜಾಗೃತಿ ಜಾಥಾ ಮತ್ತು ಮಾನವ ಸರಪಳಿಯನ್ನು ಸುಳ್ಯ ನಗರದಲ್ಲಿ ದಿನಾಂಕ 11.08.2025 ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ನಶಮುಕ್ತ ಭಾರತದ ಸಾಮೂಹಿಕ ಪ್ರತಿಜ್ಞೆ ಯನ್ನು ದಿನಾಂಕ 13.08.2025 ರಂದು ತೆಗೆದುಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಶಲ್ಯ ತಂತ್ರ ವಿಭಾಗದ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನಶಮುಕ್ತ ಭಾರತ ಅಭಿಯಾನ ಕಾರ್ಯಕ್ರಮ Read More »

ಗೂನಡ್ಕ : ಕಾರು ಅಪಘಾತ

ಸುಳ್ಯ ತಾಲೂಕಿನ ಗೂನಡ್ಕ‌ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಅಪಘಾತವಾಗಿ ಪ್ರಯಾಣಿಕರು ಅಪಾಯದಿಂದ ಪರಾದ ಘಟನೆ ಗುರುವಾರ ವರದಿಯಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಗೂನಡ್ಕ : ಕಾರು ಅಪಘಾತ Read More »

error: Content is protected !!
Scroll to Top