Author name: Tejas

ಸುಳ್ಯ ನಗರ ಪಂಚಾಯತ್ ಆಡಳಿತ ಮಂಡಳಿ ಅವಧಿ ಮುಕ್ತಾಯ

ಸುಳ್ಯ ನಗರ ಪಂಚಾಯತ್ ಆಡಳಿತ ಮಂಡಳಿ ಅವವಧಿ ನ.5ರಂದು ಮುಕ್ತಾಯಗೊಂಡಿದ್ದು ಸರಕಾರ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ಆದೇಶ ಮಾಡಿದೆ. ನ.6ರಂದು ಸುಳ್ಯನಗರ ಪಂಚಾಯತ್ ಗೆ ಸುಳ್ಯ ತಹಶೀಲ್ದಾರ್ ಮಂಜುಳಾ ರನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ.

ಸುಳ್ಯ ನಗರ ಪಂಚಾಯತ್ ಆಡಳಿತ ಮಂಡಳಿ ಅವಧಿ ಮುಕ್ತಾಯ Read More »

ಬಾರ್ ನಡೆಸುತ್ತಿದ್ದ ವ್ಯಕ್ತಿಯ ಶವ ನದಿಯ ತಟದಲ್ಲಿ ಪತ್ತೆ

ನೆಲ್ಯಾಡಿಯ ಬಾರೊಂದನ್ನು ನಡೆಸುತ್ತಿದ್ದ ವ್ಯಕ್ತಿಯ ಶವ ನದಿ ತಟದಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಅಭಿಷೇಕ್‌ ಆಳ್ವ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ನೆಲ್ಯಾಡಿಯ ಚರಣ್ ಬಾರ್ & ರೆಸ್ಟೋರೆಂಟ್ ಅನ್ನು ಲೀಜ್ ಗೆ ಪಡೆದು ಉದ್ಯಮ ನಡೆಸುತ್ತಿದ್ದರು. ಅಭಿಷೇಕ್ ನಾಪತ್ತೆ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಭೀಷೇಕ್ ಕಂಬಳ ಪ್ರೇಮಿಯಾಗಿದ್ದರು.

ಬಾರ್ ನಡೆಸುತ್ತಿದ್ದ ವ್ಯಕ್ತಿಯ ಶವ ನದಿಯ ತಟದಲ್ಲಿ ಪತ್ತೆ Read More »

ಮುಳ್ಯ : ಮಿನಿಲಾರಿ ಪಲ್ಟಿಯಾಗಿ ಓರ್ವನಿಗೆ ಗಾಯ

ಅಜ್ಜಾವರ ಗ್ರಾಮದ ಮುಳ್ಯದಲ್ಲಿ ಇಂಟರ್ ಲಾಕ್ ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿಯೊಂದು ಪಲ್ಟಿಯಾಗಿ ಓರ್ವ ಗಾಯಗೊಂಡ ಘಟನೆ ನ.7ರಂದು ವರದಿಯಾಗಿದೆ.ಇತ್ರೀಚೆಗೆ ಕಾಂತಮಂಗಲ ಸಮೀಪ ಗುತ್ತಿಗಾರು ಗಟ್ಟಿಗಾರಿನ ವ್ಯಕ್ತಿಯೊಬ್ಬರು ಜಾಗ ಖರೀದಿಸಿ ಮನೆ ನಿರ್ಮಾಣ ಮಾಡಿದ್ದರು.ಮನೆಯ ಅಂಗಳಕ್ಕೆ ಇಂಟರ್ ಲಾಕ್ ಹಾಕಲು ಮಿನಿಲಾರಿಯಲ್ಲಿ ಇಂಟರ್ ಲಾಕ್ ಸಾಗಾಟ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಮುಳ್ಯ : ಮಿನಿಲಾರಿ ಪಲ್ಟಿಯಾಗಿ ಓರ್ವನಿಗೆ ಗಾಯ Read More »

ನ.9ರಂದು ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ‌ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನ.09 ರಂದು ವಳಲಂಬೆ ದೇವಸ್ಥಾನದ ವಠಾರದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ.ಪ್ರಾಥಮಿಕ ಶಾಲಾ ವಿಭಾಗ : ಕನ್ನಡ ಗೀತೆ ಗಾಯನ, ಕವಿ-ಸಾಹಿತಿಗಳ ಹೆಸರುಗಳನ್ನು ಬರೆಯುವುದು, ರಾಷ್ಟ್ರಧ್ವಜದ ಚಿತ್ರ ಬಿಡಿಸುವುದು.ಪ್ರೌಢಶಾಲಾ ವಿಭಾಗ : ಕನ್ನಡ ಗೀತೆ ಗಾಯನ, ಕವಿ-ಸಾಹಿತಿಗಳ ಹೆಸರುಗಳನ್ನು ಬರೆಯುವುದು, ಚೀಟಿ ಎತ್ತಿ ಭಾಷಣ.ಪದವಿಪೂರ್ವ/ಪದವಿ ವಿಭಾಗ : ಸ್ಥಳದಲ್ಲಿ

ನ.9ರಂದು ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ‌ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ Read More »

ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಕಡಬ : ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದಲ್ಲಿ ನ.6 ರಂದು ನಡೆದಿದೆ. ನೂಜಿಬಾಳ್ತಿಲ ಗ್ರಾಮದ ಖಂಡಿಗದ ಲೋಕೇಶ್ ಎಂಬವರ ಪುತ್ರ, 9ನೇ ತರಗತಿಯ ಗಗನ್(14) ಆತ್ಮಹತ್ಯೆ ಮಾಡಿಕೊಂಡ ಬಾಲಕ.ಗಗನ್ ಸಂಜೆ ಮನೆಗೆ ಬಂದು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು

ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಉಪ್ಪಿನಂಗಡಿ : ನೈತಿಕ ಪೊಲೀಸರಿಂದ ವಿದ್ಯಾರ್ಥಿಗೆ ಹಲ್ಲೆ

ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದು, ಆತನ ಆರೋಗ್ಯ ವಿಚಾರಿಸುವ ಸಲುವಾಗಿ ಸಹಪಾಠಿ ವಿಧ್ಯಾರ್ಥಿ/ವಿದ್ಯಾರ್ಥಿನಿಯರೊಂದಿಗೆ ಆತನ ಮನೆಗೆ ಹೋಗಲು ನ.6ರಂದು ಬೆಳಗ್ಗೆ ಕಾಲೇಜಿನಿಂದ ಹೊರಟು ಪೆರಿಯಡ್ಕ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವಿಧ್ಯಾರ್ಥಿ/ವಿಧ್ಯಾರ್ಥಿನಿಯರನ್ನು ತಡೆದು ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಆ ಬಳಿಕ ಆರೋಪಿಗಳಾದ ಮುಸ್ತಾಫ ಮತ್ತು ಸಹಸವಾರ ಮುಸ್ತಾಫ ಪೆರಿಯಡ್ಕ ಎಂಬವರು ವಿದ್ಯಾರ್ಥಿಗಳ ಹೆಸರು, ಕಾಲೇಜು ಹಾಗೂ ಊರಿನ ಬಗ್ಗೆ ವಿಚಾರಿಸಿ, ವಿಭಿನ್ನ ಕೋಮುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಜೊತೆಗೆ ತೆರಳುತ್ತಿರುವ

ಉಪ್ಪಿನಂಗಡಿ : ನೈತಿಕ ಪೊಲೀಸರಿಂದ ವಿದ್ಯಾರ್ಥಿಗೆ ಹಲ್ಲೆ Read More »

ಸುಳ್ಯ ತಾಲ್ಲೂಕು ಸಮಸ್ತ ಸಂಯುಕ್ತ ಜಮಾ ಅತ್ ವತಿಯಿಂದ ಅಶ್ರಫ್ ಗುಂಡಿ ಯವರಿಗೆ ಬೀಳ್ಕೊಡುಗೆ

ಪವಿತ್ರ ಮಕ್ಕಾ ಕ್ಕೆ ತೆರಳಿರುವ ಸುಳ್ಯ ತಾಲ್ಲೂಕು ಸಮಸ್ತ ಸಂಯುಕ್ತ ಜಮಾ ಅತ್ ನ ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಯವರನ್ನು ಸಂಯ್ತುಕ್ತ ಜಮಾ ಅತ್ ವತಿಯಿಂದ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಶಾಲು ಹೊದಿಸಿ ಬೀಳ್ಕೊಟ್ಟರು, ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹಾಜಿ ಹೆಚ್ ಎ ಅಬ್ಬಾಸ್ ಸೆಂಟಿಯರ್, ತಾಜ್ ಮೊಹಮ್ಮದ್ ಸಂಪಾಜೆ, ಬೆಳ್ಳಾರೆ ಜಮಾ ಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ಮಂಗಳ, ಕೋಶಧಿಕಾರಿ ಎಸ್ ಎ ಹಮೀದ್ ಹಾಜಿ, ಕಲ್ಲುಗುಂಡಿ ಜಮಾ ಅತ್ ಅಧ್ಯಕ್ಷ

ಸುಳ್ಯ ತಾಲ್ಲೂಕು ಸಮಸ್ತ ಸಂಯುಕ್ತ ಜಮಾ ಅತ್ ವತಿಯಿಂದ ಅಶ್ರಫ್ ಗುಂಡಿ ಯವರಿಗೆ ಬೀಳ್ಕೊಡುಗೆ Read More »

ಸುಳ್ಯದಲ್ಲಿ ನಾಳೆಯಿಂದ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಚಾಂಪಿಯನ್ ಷಿಪ್ ಪಂದ್ಯಾಟ

ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್, ಹಾಗೂ ಸೀನಿಯರ್ ವಿಭಾಗದ ಪುರುಷ ಮತ್ತು ಮಹಿಳೆಯರ ವೈಟ್ ಲಿಪ್ಟಿಂಗ್ ಚಾಂಪಿಯನ್ ಷಿಪ್ 2025 ನ. 7 ರಿಂದ ನ.9ರ ವರೆಗೆ ಯುವಜನ ಸಂಯುಕ್ತ ಮಂಡಳಿ ಬಳಿಯ ಸುಳ್ಯದ ಜೂನಿಯಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಭಾರತೀಯ ವೈಟ್ ಲಿಫ್ಟಿಂಗ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಆನಂದೇ ಗೌಡ ತಿಳಿಸಿದರು.ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಸಂಸ್ಥೆ ಬೆಂಗಳೂರು ಇವರ ಮೂಲಕ ಸುಳ್ಯದ ಸ್ಪೋರ್ಟ್ಸ್ ಮತ್ತು

ಸುಳ್ಯದಲ್ಲಿ ನಾಳೆಯಿಂದ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಚಾಂಪಿಯನ್ ಷಿಪ್ ಪಂದ್ಯಾಟ Read More »

ತೆಕ್ಕಿಲ್ ಹೆಚ್.ಪಿ ಗ್ಯಾಸ್ ಏಜೆನ್ಸಿಯಿಂದ ಪವಿತ್ರ ಉಮ್ರಾ ಯಾತ್ರಾರ್ಥಿ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ

ಪವಿತ್ರ ಉಮ್ರಾ ನಿರ್ವಹಿಸಲು ಮಕ್ಕಾಕ್ಕೆ ತೆರಳಲಿರುವ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿಯವರನ್ನು ತೆಕ್ಕಿಲ್ ಹೆಚ್.ಪಿ ಗ್ಯಾಸ್ ಏಜೆನ್ಸಿ ಮತ್ತು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಬೀಳ್ಕೊಡಲಾಯಿತು.ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಅಶ್ರಫ್ ಗುಂಡಿಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂಧರ್ಭದಲ್ಲಿ ತೆಕ್ಕಿಲ್ ಹೆಚ್.ಪಿ ಗ್ಯಾಸ್ ನ ವ್ಯವಸ್ಥಾಪಕ ಧನುರಾಜ್ ಊರುಪಂಜ ಸಿಬ್ಬಂಧಿಗಳಾದ ಬಬಿತಾ ಅಡ್ಯಡ್ಕ, ಬಿಂದ್ಯಾ ಕಿರ್ಲಾಯ,

ತೆಕ್ಕಿಲ್ ಹೆಚ್.ಪಿ ಗ್ಯಾಸ್ ಏಜೆನ್ಸಿಯಿಂದ ಪವಿತ್ರ ಉಮ್ರಾ ಯಾತ್ರಾರ್ಥಿ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ Read More »

ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ಬೈಕ್ ನೀಡಿದ ತಾಯಿಗೆ ರೂ.26,000 ದಂಡ

ಮಂಗಳೂರು : ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದಕ್ಕಾಗಿ ಆತನ ತಾಯಿಗೆ ಮಂಗಳೂರಿನ 4 ನೇ ಜೆ.ಎಂ.ಎಫ್.ಸಿ ನ್ಯಾಯಾಲಯ 26,000 ರೂ. ದಂಡ ವಿಧಿಸಿ ಆದೇಶಿದ ಘಟನೆ ವರದಿಯಾಗಿದೆ.ಇದೇ ಅಕ್ಟೋಬರ್ 10ರಂದು ರಂದು ಬೈಕಂಪಾಡಿಯಲ್ಲಿ ಹತಿಜಮ್ಮ ಅವರು ತಮ್ಮ ಅಪ್ರಾಪ್ತ ಮಗನಿಗೆ ಮೋ.ಸೈ ಚಲಾಯಿಸಲು ನೀಡಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನವೆಂಬ‌ರ್ 5ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 4 ನೇ ಜೆ.ಎಂ.ಎಫ್.ಸಿ ನ್ಯಾಯಾಲಯ, ಅಪ್ರಾಪ್ತ ಬಾಲಕನಿಗೆ ಮೋ.ಸೈ ಚಲಾಯಿಸಲು

ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ಬೈಕ್ ನೀಡಿದ ತಾಯಿಗೆ ರೂ.26,000 ದಂಡ Read More »

error: Content is protected !!
Scroll to Top