Author name: Tejas

ಸಂಪಾಜೆ : ಫೆ.11ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಫೆ. 11ರಂದು ನಡೆಯಲಿದೆ ಎಂದು ಮಾಜಿ ಗ್ರಾ. ಪಂ. ಅಧ್ಯಕ್ಷ ಹಾಲಿ ಸದಸ್ಯ ಜಿ. ಕೆ.ಹಮೀದ್ ತಿಳಿಸಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ಸಜ್ಜನ ಸಮುದಾಯಭವನದಲ್ಲಿ ನಡೆಯಲಿದೆ. ವಿಧಾನ ಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ, […]

ಸಂಪಾಜೆ : ಫೆ.11ಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ Read More »

ಅರಂತೋಡು ಗ್ರಾಮ ಪಂಚಾಯತ್ ಗ್ರಾಮ ಸಭೆ

ಅರಂತೋಡು, ಫೆ‌ 10 : ಆರಂತೋಡು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಅಧ್ಯಕ್ಷತೆ ಯಲ್ಲಿ ಪಂಚಾಯತ್ ಅಮೃತ ಸಭಾಂಗಣದಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ಪಂಚಾಯತ್ ಆಡಳಿತ ಸಮಿತಿ 5ವರ್ಷದಲ್ಲಿ ಮಾಡಿದ ಕೆಲಸ ಕಾರ್ಯಗಳ.ಸಾಧನೆಯ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯ.ಎಂ. ಸಿ. ಭಾಗವಹಿಸಿದ್ದರು.ಸಭೆ ಪ್ರಮುಖವಾಗಿ ಆರಂತೋಡು ಗ್ರಾಮದಲ್ಲಿ

ಅರಂತೋಡು ಗ್ರಾಮ ಪಂಚಾಯತ್ ಗ್ರಾಮ ಸಭೆ Read More »

ಚೆಂಬು : ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ಚೆಂಬು ಗ್ರಾಮದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತ ಠಾಣೆಯ ಪೋಲೀಸರು ಫೆ.10ರಂದು ದಾಳಿ ನಡೆಸಿದ ಘಟನೆ ವರದಿಯಾಗಿದೆ.ಕೆಡ್ಡಸದ ಹಿನ್ನಲೆಯಲ್ಲಿ ಚೆಂಬು ಗ್ರಾಮದಲ್ಲಿ ಕೆಲವರು ಸೇರಿಕೊಂಡು ಗದ್ದೆಯೊಂದರಲ್ಲಿ ಕೋಳಿ ಅಂಕ ಆಯೋಜಿಸಿದ್ದರು.ಕೋಳಿ ಅಂಕ ನಡೆಸಲು ಕಬ್ಬಿಣದ ಬೇಲಿಯನ್ನು ಹಾಕಿದ್ದರು.ಆ ವೇಳೆಗೆ ಸ್ಥಳದಲ್ಲಿದ್ದ ಜನರು ಓಡಿ ತಪ್ಪಿಸಿಕೊಂಡರು. ಕೋಳಿ ಅಂಕ ನಡೆಸಲು ಗದ್ದೆಯಲ್ಲಿ ಇರಿಸಿದ್ದ ಕಬ್ಬಿಣದ ಬೇಲಿಯನ್ನು ಪೊಲೀಸರು ವಶಕ್ಕೆ ಪಡೆದರು. ಕೋಳಿಯಾಗಲೀ, ಜನರಾಗಲಿ ಅವರಿಗೆ ಸಿಗಲಿಲ್ಲವೆಂದು ತಿಳಿದುಬಂದಿದೆ.

ಚೆಂಬು : ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ Read More »

ಎಸ್ಸಿ, ಎಸ್ಟಿ ಸಮುದಾಯದವರಿಗೆ 30 – 40 ಸೈಟ್ ಭಾಗ್ಯ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಭೂಮಿಯ ಜೊತೆಗೆ ಸೈಟ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿಂದು ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಭೂಮಿ ಖರೀದಿ ಮಾಡಿ ಸೈಟ್ ನೀಡಲು ವಿಶೇಷ ಅನುದಾನ ನೀಡಿದ್ದು, ಮುಖ್ಯಮಂತ್ರಿ ಅನುಮೋದನೆ ಬಳಿಕ 30 – 40 ಸೈಟ್‌ಗಳನ್ನು ಎಸ್ಸಿ, ಎಸ್ಟಿ ಸಮುದಾಯದವರಿಗೆ ನೀಡಲಾಗುವುದು ಎಂದು ಹೇಳಿದರು.

ಎಸ್ಸಿ, ಎಸ್ಟಿ ಸಮುದಾಯದವರಿಗೆ 30 – 40 ಸೈಟ್ ಭಾಗ್ಯ! Read More »

ಅರಂತೋಡು : ಫೆ.12ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 12-02-2026 ರ ಕುಂಭ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದುಸಂಪರ್ಕಿಸಿ:7022077809

ಅರಂತೋಡು : ಫೆ.12ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಸುಳ್ಯ : ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಪ್ರಾರಂಭವಾಗಿ 28 ವರ್ಷ ಆಗಿರುವ ಹಿನ್ನಲೆಯಲ್ಲಿ ಫೆ. 9 ರಂದು ಸೊಸೈಟಿ ಸಭಾಂಗಣದಲ್ಲಿ ಸ್ಥಾಪನಾ ದಿನಾಚರಣೆಯ ಸಮಾರಂಭ ನಡೆಯಿತು.ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಿಲಿಯಂ ಲಸ್ರಾದೋ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ವೆಂಕಟ್ರಮಣ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ.ಜಯರಾಮ್, ಮಾಜಿ

ಸುಳ್ಯ : ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ Read More »

ಅಡ್ಯಡ್ಕ : ಸಿ.ಆರ್.ಸಿ ಕಾಲೋನಿ ನಿವಾಸಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿ ನಿವಾಸಿ ಸದಾಶಿವರವರು ಫೆ. ೮ರಂದು ತನ್ನ ಮಗಳ ಮನೆ ತಮಿಳುನಾಡಿನಲ್ಲಿ ಹೃದಯಾಘಾತದಿಂದ ನಿಧನರಾರು. ಅವರಿಗೆ ಸುಮಾರು ೭೦ ವರ್ಷ ಪ್ರಾಯವಾಗಿತ್ತು.ಸದಾಶಿವರು ಒಂದು ವಾರದ ಹಿಂದೆ ತನ್ನ ಮಗಳ ಮನೆ ತಮಿಳುನಾಡಿಗೆ ತೆರಳಿದ್ದರ.ಅವರ ಪಾರ್ಥಿವ ಶರೀರ ಫೆ.,9ರಂದು ರಾತ್ರಿ ಸುಮಾರು 8 ಗಂಟೆಗೆ ಅಡ್ಯಡ್ಕಕ್ಕೆ ತಲುಪಲಿದೆ. ಬಳಿಕ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ‌.ಮೃತರು ಪುತ್ರ ರಾಮಕೃಷ್ಣ, ಮಗಳು, ಮೊಮ್ಮಕ್ಕಳನ್ನು ಬಂಧುಗಳನ್ನು ಅಗಲಿದ್ದಾರೆ.

ಅಡ್ಯಡ್ಕ : ಸಿ.ಆರ್.ಸಿ ಕಾಲೋನಿ ನಿವಾಸಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು Read More »

ಸುಳ್ಯ : ಕಾಂಗ್ರೆಸ್ ನಿಂದ ಸುಳ್ಯದಲ್ಲಿ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಗೆ ಚಾಲನೆ

ಕೇಂದ್ರ ಸರಕಾರವು ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಮತ್ತು ನಿಯಮಗಳನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ.ಜಿಲ್ಲಾ ಕಾಂಗ್ರೆಸ್‌ನ ನೇತೃತ್ವದಲ್ಲಿ ೪ ದಿನಗಳ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಆಯೋಜನೆಗೊಂಡಿರುವ ಹಿನ್ನಲೆಯಲ್ಲಿ ಫೆ.9ರಂದು ಸುಳ್ಯದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.ಸುಳ್ಯದ ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪಾದಯಾತ್ರೆಗೆ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾ‌ರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಿ.ಸಿ.ಜಯರಾಮ್ ಸ್ವಾಗತಿಸಿದರು. ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ,

ಸುಳ್ಯ : ಕಾಂಗ್ರೆಸ್ ನಿಂದ ಸುಳ್ಯದಲ್ಲಿ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಗೆ ಚಾಲನೆ Read More »

ಪಂಜ : ಶ್ರೀ ದೇವರ ಕಾಚುಕುಜುಂಬ ದೈವದ ನೇಮ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವಾರ್ಷೀ ಜಾತ್ರೋತ್ಸವದ ಪ್ರಯುಕ್ತ ಫೆ.7.ರಂದು ರಾತ್ರಿ ಶ್ರೀ ದೇವರ ಶ್ರೀ ಕಾಚುಕುಜುಂಬ ದೈವದ ನೇಮ ಮತ್ತು ಶ್ರೀ ಉಳ್ಳಾಕುಲು ದೈವದ ನೇಮ ಮೂಲಸ್ಥಾನ ಪಂಬೆತ್ತಾಡಿ ಗ್ರಾಮದ ಗರಡಿ ಬೈಲಿನಲ್ಲಿ ನಡೆಯಿತು.ಫೆ. 7 ರಂದು ಪೂರ್ವಾಹ್ನ ಗರಡಿ ಬೈಲು ಮೂಲನಾಗನ ಕಟ್ಟೆಯಲ್ಲಿ ತಂಬಿಲ ಸೇವೆ. ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವನೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿದೇವಳದ

ಪಂಜ : ಶ್ರೀ ದೇವರ ಕಾಚುಕುಜುಂಬ ದೈವದ ನೇಮ Read More »

ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸಾರ್ವಜನಿಕ ಸಮಾಲೋಚನಾ ಸಭೆ

ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ವತಿಯಿಂದ ನೊಂದ ಕೃಷಿಕರ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆ ಇಂದು (ಫೆ. 8) ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಅಡ್ತಲೆ ವಠಾರದಲ್ಲಿ ನಡೆಯಿತು. ಆನೆ ದಾಳಿಯಿಂದ ನೊಂದ ಹಲವಾರು ಕೃಷಿಕರು ತಮ್ಮ ಬೆಳೆ ನಾಶವಾದ ಕುರಿತು ಹಾಗೂ ಅರಂತೋಡು-ಅಡ್ತಲೆ ರಸ್ತೆಯಲ್ಲಿ ಸಂಚರಿಸುವಾಗ ಆನೆಗಳಿಂದಾದ ಭಯದ ವಾತಾವರಣವನ್ನು ಸಭೆಯಲ್ಲಿ ತಿಳಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸಾರ್ವಜನಿಕ ಸಮಾಲೋಚನಾ ಸಭೆ Read More »

error: Content is protected !!
Scroll to Top