Author name: Tejas

ಮೇದಿನಡ್ಕ : ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಅರಣ್ಯ ಇಲಾಖೆ ಸುಳ್ಯ ವಲಯ ಇದರ ಸಹಯೋಗದೊಂದಿಗೆ ಚೈತ್ರ ಯುವತಿ ಮಂಡಲ(ರಿ)ಅಜ್ಜಾವರ ಪ್ರತಾಪ ಯುವಕ ಮಂಡಲ (ರಿ)ಅಜ್ಜಾವರ,ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕರ್ಲಪ್ಪಾಡಿ, ಅರಿವು ಕೇಂದ್ರ ಅಜ್ಜಾವರ, ಸ. ಹಿ. ಪ್ರಾ ಶಾಲೆ ಅಡ್ಪoಗಾಯ ಇವುಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮೇದಿನಡ್ಕ ಅರಣ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗಸ್ತು ಅರಣ್ಯ ಪಾಲಕರಾದ ಗೀತಾ ಬಿ, ದೀಪಕ್ ಕೆ.ಎಸ್, ಭಾಗ್ಯ ಪಿ.ಸಿ, ಅರಣ್ಯ ವೀಕ್ಷಕರಾದ ಶ್ರೀಧರ್, ಭವಿತ್, ಮಾಯಿಲಪ್ಪ ಹಾಗೂ […]

ಮೇದಿನಡ್ಕ : ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ Read More »

ಸಂಪಾಜೆ : ಚರಂಡಿಗೆ ಬಿದ್ದ ಪಿಕಪ್

ಸಂಪಾಜೆ ಗೇಟ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆಯ ಪಕ್ಕದ ಚರಂಡಿಗೆ ಬಿದ್ದ ಘಟನೆ ವರದಿಯಾಗಿದೆ.ಸಂಪಾಜೆಯಿಂದ ಅರಮನೆ ಎಂಬಲ್ಲಿಯ ತೋಟಕ್ಕೆ ಪಿಕಪ್ ನಲ್ಲಿ ಕೆಲಸದವನ್ನು ಮತ್ತು ಸಿಮೆಂಟ್ ಲೋಡ್ ಕೊಂಡೊಯ್ಯುವ ವೇಳೆ ಪೆಟ್ರೋಲ್ ಪಂಪ್ ತಿರುವಿನಲ್ಲಿ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ. ಪರಿಣಾಮವಾಗಿ ಪಿಕಪ್ ವಾಹನದಲ್ಲಿರುವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದುದೇವರಗುಂಡ ಪ್ರಸಾದ್ ಅವರ ಪಿಕಪ್ ಎಂದು ತಿಳಿದುಬಂದಿದೆ.

ಸಂಪಾಜೆ : ಚರಂಡಿಗೆ ಬಿದ್ದ ಪಿಕಪ್ Read More »

ಸುಳ್ಯದಲ್ಲಿ‌ ಸರಣಿ‌ ಅಪಘಾತ

ಸುಳ್ಯದ ಶ್ರೀ ರಾಂಪೇಟೆಯ ಬಾಳೆಮಕ್ಕಿಯಲ್ಲಿ ರಸ್ತೆ ಮಧ್ಯೆ ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ ಕಾರಿಗೆ ಹಿಂದುಗಡೆಯಿಂದ ಬರುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆಯಿತು. ಇದರ ಹಿಂದುಗಡೆಯಿಂದ ಬಂದ ಬೈಕ್ ಸ್ಕೂಟಿಗೆ ತಾಗಿ ದ್ವಿಚಕ್ರ ವಾಹನಗಳ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.ಮಹಾರಾಷ್ಟ್ರ ನೋಂದಾವಣೆಯ ಕಾರು ರಸ್ತೆ ಮಧ್ಯೆ ಸಡನ್ನಾಗಿ ಬ್ರೇಕ್ ಹಾಕಿದ್ದರಿಂದ ಸ್ಕೂಟಿ ಸವಾರರು ನಿಯಂತ್ರಣ ತಪ್ಪಿ ಕಾರಿನ ಹಿಂಬದಿಗೆ ತಾಗಿ ರಸ್ತೆ ಮೇಲೆ ಬಿದ್ದರು. ಪರಿಣಾಮವಾಗಿ ಸವಾರರಿಬ್ಬರು ಅಲ್ಪ ಸ್ವಲ್ಪ ಗಾಯಗೊಂಡಿರುವುದಾಗಿ ತಿಳಿದು

ಸುಳ್ಯದಲ್ಲಿ‌ ಸರಣಿ‌ ಅಪಘಾತ Read More »

ಅನೇಕ ಅಭಿಮಾನಿಗಳ ಮನಗೆದ್ದು ಜನಪ್ರಿಯರಾಗಿರು ಸಿಂಗರ್ ಅಖಿಲ ಪಜಿಮಣ್ಣು ಅವರ ದಾಂಪತ್ಯ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಅನೇಕ ಅಭಿಮಾನಿಗಳ ಮನಗೆದ್ದು ಜನಪ್ರಿಯರಾಗಿರುವ ಅಖಿಲಾ ಪಜಿಮಣ್ಣು ಅವರ ದಾಂಪತ್ಯದಲ್ಲಿ ಇದೀಗ ಬಿರುಕು ಮೂಡಿದೆ. ವಿಚ್ಛೇದನಕ್ಕಾಗಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ಬೆಳಗಾವಿ ಮೂಲದ ಅಮೆರಿಕ ನಿವಾಸಿ ಧನಂಜಯ್ ಶರ್ಮ ಜೊತೆ ಅಖಿಲಾ ವಿವಾಹ ನೆರವೇರಿತ್ತು. ಆದರೆ ಅವರ ಸಂಸಾರದಲ್ಲಿ ಸಾಮರಸ್ಯ ಮಾಯವಾಗಿದೆ. ಸದ್ಯ ಈ ಜೋಡಿ ಬೇರೆಯಾಗಲು ನಿರ್ಧರಿಸಿದೆ. ಇವರಿಬ್ಬರು ಪುತ್ತೂರಿನ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಅನೇಕ ಅಭಿಮಾನಿಗಳ ಮನಗೆದ್ದು ಜನಪ್ರಿಯರಾಗಿರು ಸಿಂಗರ್ ಅಖಿಲ ಪಜಿಮಣ್ಣು ಅವರ ದಾಂಪತ್ಯ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ Read More »

ಸುಳ್ಯದ ಎ.ಸಿ.ಎಫ್ ವರ್ಗಾವಣೆ

ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿಯವರು ವರ್ಗಾವಣೆಗೊಂಡಿದ್ದಾರೆ.ಸುಳ್ಯಕ್ಕೆ ಮಂಗಳೂರು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಎ.ಸಿ.ಎಫ್. ಆಗಿರುವ ಪ್ರಶಾಂತ್ ಪೈ ಯವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.ಪ್ರವೀಣ್ ಕುಮಾ‌ರ್ ಶೆಟ್ಟಿಯವರ ನ್ನು ಪ್ರಶಾಂತ್ ಕುಮಾರ್ ಪೈ ಯವರ ಜಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಪ್ರಶಾಂತ್ ಪೈಯವರು ಜೂ.20ರಂದು ಸುಳ್ಯಕ್ಕೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆಂದು ತಿಳಿದುಬಂದಿದೆ.

ಸುಳ್ಯದ ಎ.ಸಿ.ಎಫ್ ವರ್ಗಾವಣೆ Read More »

ಸೈನಿಕ ಹ್ರದಯಘಾತದಿಂದ ನಿಧನ

ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕಡಬ ತಾಲೂಕಿನ ಕರಾಳ ಸಮೀಪದ ಅಲಾರ್ಮೆಯಲ್ಲಿ ನಡೆದಿದೆ. ಪ್ರಭಾಕರನ್ ಮೃತರು.ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಅಡ್ಡಗದ್ದೆ ಬಳಿ ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು .ರಂಗಸ್ವಾಮಿ ಮತ್ತು ಸೆಲ್ಲಾಯಿ ದಂಪತಿಯ ನಾಲ್ಕು ಮಕ್ಕಳಲ್ಲಿ ಇವರು ಕೊನೆಯ ಮಗನಾಗಿದ್ದರು..ಪ್ರಸ್ತುತ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಕಡಬ ಕಳಾರ ಬಳಿ ಖರೀದಿಸಿದ್ದ ಜಾಗದಲ್ಲಿ ಮನೆ ನಿರ್ಮಿಸಿದ್ದರು. ಎರಡು ವಾರದ ಹಿಂದೆಯಷ್ಟೇ

ಸೈನಿಕ ಹ್ರದಯಘಾತದಿಂದ ನಿಧನ Read More »

ಗರ್ಭಿಣಿ ಪತ್ನಿಯನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ಪತಿ

ಗರ್ಭಿಣಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಜೂ.19ರಂದು ನಡೆದಿದೆ.ತಿಮ್ಮಪ್ಪ ಮೂಲ್ಯ (50) ಅವರು ತಮ್ಮ ಪತ್ನಿ ಜಯಂತಿ (40) ಅವರನ್ನು ಕೊಲೆ ಮಾಡಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಇದ್ದರೆ ತಿಮ್ಮಪ್ಪ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜಯಂತಿ ಅವರು ಗರ್ಭಿಣಿಯಾಗಿದ್ದು, ಜುಲೈ 2 ರಂದು ಸೀಮಂತ ದಿನ ನಿಗದಿಯಾಗಿತ್ತು. ಆದರೆ ಈ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು

ಗರ್ಭಿಣಿ ಪತ್ನಿಯನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ಪತಿ Read More »

ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ‌ ಆಯ್ಕೆ

ಸಂಪಾಜೆ ವಲಯ 2025 ನೇ ಸಾಲಿನ ಭಜನಾ ಪರಿಷತ್ ನ ನೂತನ lಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ, ಉಪಾಧ್ಯಕ್ಷರಾಗಿ ಭಾರತಿ ಮೈರಾಜೆ, ಕಾರ್ಯದರ್ಶಿ ನಾರಾಯಣ ಅಜ್ಜಿಕಲ್ಲು, ಜತೆ ಕಾರ್ಯದರ್ಶಿಯಾಗಿ ಪರಮೇಶ್ವರ್ ನೆಡ್ಡಿಲ್, ಕೋಶಾಧಿಕಾರಿ ಅಮಿತಾ ಮರ್ಕಂಜ, ಸದಸ್ಯರಾಗಿ ನವೀನ್ ಕುಮಾರ್, ಯತೀಶ್ ಕಂಜಿಪಿಲಿ ಮರ್ಕಂಜ, ಚಂದ್ರ ಶೇಖರ ಆಚಾರ್ಯ ತೊಡಿಕಾನ, ಸತೀಶ್ ಆಚಾರ್ಯ ಸಂಪಾಜೆ, ಸವಿತಾ, ಪುಷ್ಪಲತಾ, ಚಂದ್ರ ಕಲಾ ಕುತ್ತಮೊಟ್ಟೆ ತೊಡಿಕಾನ ರನ್ನು ಆಯ್ಕೆ ಮಾಡಲಾಯಿತು.

ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ‌ ಆಯ್ಕೆ Read More »

ಉಳಾಯಿ ಪಿದಾಯಿ ಜೂಜಾಟ ಅಡ್ಡೆಗೆ ಪೊಲೀಸ್ ದಾಳಿ

ಅಕ್ರಮವಾಗಿ ಮನೆಯೊಂದರಲ್ಲಿ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಓಡಿನ್ನಾಳ ಗ್ರಾಮದ ಪಣಿಜಾಲು ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಉಲಾಯಿ- ಪಿದಾಯಿ ಜೂಜಾಟ ಆಡುತ್ತಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರಗೆ ಜೂ.17 ರಂದು ಸಂಜೆ 5 ಗಂಟೆಗೆ ಬೆಳ್ತಂಗಡಿ ಇನ್ಸೆಕ್ಟ‌ರ್ ಸುಬ್ಬಾಪುರ್ ಮಠ ಮತ್ತು ಸಿಬ್ಬಂದಿ ದಾಳಿ ಮಾಡಿದ್ದಾರೆ.ದಾಳಿ ವೇಳೆ ಜೂಜಾಟದಲ್ಲಿ ನಿರತರಾಗಿದ್ದ ಒಂಬತ್ತು ಮಂದಿಯನ್ನು ಬಂಧಿಸಿದ್ದು. ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ

ಉಳಾಯಿ ಪಿದಾಯಿ ಜೂಜಾಟ ಅಡ್ಡೆಗೆ ಪೊಲೀಸ್ ದಾಳಿ Read More »

ಸುಳ್ಯದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸುಳ್ಯದಲ್ಲಿ ಜೂ.18ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದರು.ಸುಳ್ಯ ತಾಲೂಕು ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ನೂತನವ ಕಚೇರಿ ಕಟ್ಟಡ ಉದ್ಘಾಟನೆಯನ್ನು ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿದರು. ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್ ಮತ್ತು ನೂತನ ಶವಗಾರ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು

ಸುಳ್ಯದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ Read More »

error: Content is protected !!
Scroll to Top