ಭವಿಷ್ಯದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ನಶಿಸಿ ಹೋಗದಂತೆ ಕಾಪಾಡುವ ಜವಾಬ್ದಾರಿ ಸಮಸ್ತ ಕನ್ನಡಿಗರಲ್ಲಿರಲಿ!
ನಾವು ಕನ್ನಡ ರಾಜೋತ್ಸವ ಸಂಭ್ರಮದಲ್ಲಿದ್ದೆವೆ.ನ.1ರಂದು ಕರ್ನಾಟಕದಲ್ಲಿ ಕನ್ನಡ ರಾಜೋತ್ಸೋವ ಆಚರಿಸಲಾಗುತ್ತಿದೆ. ಕನ್ನಡ ಭಾಷಾವಾರು 5 ಪ್ರಾಂತ್ಯಗಳಾಗಿ ವಿಂಗಡಿಸಿದ ಮುಂಬೈ, ಹೈದರಾಬಾದ್, ಮದ್ರಾಸ್, ಕೊಡಗು, ನಿಜಾಮರ ಪ್ರಾಂತ್ಯವೆಂದು ಹಂಚಿಕೆಯಲ್ಲಿದ್ದ ಕನ್ನಡ ಭಾಷಿಗರ ಈ ಎಲ್ಲಾ ಪ್ರದೇಶಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸಿ ನವಂಬರ್ 1 -1956 ರಂದು ಮೈಸೂರು ರಾಜ್ಯವೆಂದು ಹೆಸರಿಟ್ಟು ಸಂಭ್ರಮಿಸಿದ ಅವಿಸ್ಮರಣೀಯ ದಿನವನ್ನು ಕನ್ನಡ ರಾಜ್ಯೋತ್ಸವದ ಕನ್ನಡ ಹಬ್ಬವಾಗಿ ಅದ್ದೂರಿಯಾಗಿ ನಾಡಿನೆಲ್ಲೆಡೆ ಆಚರಿಸಲಾಗುತ್ತದೆ.ಕಪ್ಪು ಮಣ್ಣಿನ ನಾಡು ಕರುನಾಡು ಮೈಸೂರು ರಾಜ್ಯವಾಗಿ ಸ್ಥಾಪನೆಗೊಳ್ಳಲು ನಮ್ಮ ನಾಡಿನ ಹಿರಿಯರು ಸ್ವಾತಂತ್ರ್ಯ […]










