Author name: Tejas

ಕೇರ್ಪಳ ವಸಂತ ಕಟ್ಟೆ ಸಮಿತಿಅಧ್ಯಕ್ಷರಾಗಿ ಕುಶಾಲಪ್ಪ ಗೌಡ-ಪ್ರಧಾನ ಕಾರ್ಯದರ್ಶಿಯಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ

ಸುಳ್ಯ ನಗರದ ಕೇರ್ಪಳ ವಸಂತ ಕಟ್ಟೆಯ ಪದಾಧಿಕಾರಿಗಳ ಸಭೆಯು ಡಿ.10ರಂದು ನಡೆಯಿತು. ಸಮಿತಿ ಅಧ್ಯಕ್ಷ ಬಾಲಕೃಷ್ಣ ಎಸ್.ಬಿ. ಲ್ಯಾಬ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಕೇರ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಸುಪ್ರೀತ್ ಮೋಂಟಡ್ಕ ಹಾಗೂ ಕೋಶಾಧಿಕಾರಿಯಾಗಿ ವಿನಯ್ ಕೇರ್ಪಳ ಆಯ್ಕೆಯಾದರು. ಕಾರ್ಯದರ್ಶಿ ಸುನಿಲ್ ಕೇರ್ಪಳ ಸ್ವಾಗತಿಸಿದರು. ಚಂದ್ರಪ್ರಕಾಶ್ ಕೇರ್ಪಳ ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಸುಪ್ರೀತ್ ಮೋಂಟಡ್ಕ ವಂದಿಸಿದರು.

ಕೇರ್ಪಳ ವಸಂತ ಕಟ್ಟೆ ಸಮಿತಿಅಧ್ಯಕ್ಷರಾಗಿ ಕುಶಾಲಪ್ಪ ಗೌಡ-ಪ್ರಧಾನ ಕಾರ್ಯದರ್ಶಿಯಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ Read More »

ಮಾರುತಿ ಇಂಟೆರ್ ನ್ಯಾಶನಲ್ ಪಬ್ಲಿಕ್ ಸ್ಕೂಲಿನ ವಾರ್ಷಿಕೋತ್ಸವ, ಸಂಭ್ರಮ 2025-26ಕ್ಕೆ ಚಾಲನೆ

ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಗೂನಡ್ಕ ಇದರ ಶಾಲಾ ವಾರ್ಷಿಕೋತ್ಸವದ ಸಂಭ್ರಮ 2025 – 2026 ಡಿ.11ರಂದು ಶಾಲಾ ವಠಾರದಲ್ಲಿ ನಡೆಯಿತು.ಶಾಲಾ ಅಧ್ಯಕ್ಷ ರುಕ್ಮಯ್ಯ ದಾಸ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು‌.ಮಂಡ್ಯ ಕಾವೇರಿ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾ ಸಾಧಕರನ್ನು ಗೌರವಿಸಿ ಮಾತನಾಡಿದರು.ಮಾರುತಿ ಪೌಂಡೆಶನ್ ನಿರ್ದೇಶಕಿ ಲೀಲಾವತಿ,ಪೋಷಕರ ಸಮಿತಿ ಅಧ್ಯಕ್ಷ ರಮೇಶ್,ಉಪಾಧ್ಯಕ್ಷ ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ‌.ಶಾಲಾ ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿದರು.ಪ್ರಾಂಶುಪಾಲೆ ಶೋಭಾ ಕಿಶೋರ್ ವರದಿ ವಾಚಿಸಿದರು.

ಮಾರುತಿ ಇಂಟೆರ್ ನ್ಯಾಶನಲ್ ಪಬ್ಲಿಕ್ ಸ್ಕೂಲಿನ ವಾರ್ಷಿಕೋತ್ಸವ, ಸಂಭ್ರಮ 2025-26ಕ್ಕೆ ಚಾಲನೆ Read More »

ಕುಕ್ಕುಜಡ್ಕ : ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ತೇಜಕುಮಾರ್ ಬಡ್ಡಡ್ಕ ಅವರ ಸಮ್ಮೇಳ ಅಧ್ಯಕ್ಷತೆಯಲ್ಲಿಕುಕ್ಕುಜಡ್ಕದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ. 11 ರಂದು ಕುಕ್ಕುಜಡ್ಕ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೆರಾಲು, ಕೋಶಾಧಿಕಾರಿ ದಯಾನಂದ ಆಳ್ವ, ಸಮ್ಮೇಳನದ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಾಡಬಾಕಿಲು,

ಕುಕ್ಕುಜಡ್ಕ : ಸುಳ್ಯ ತಾಲೂಕು 28ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅರಂತೋಡು : ಡಿ.15ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 15-12-2025 ರ ಧನು ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.70220 77809

ಅರಂತೋಡು : ಡಿ.15ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಕಂದಡ್ಕ ನೇಮಕ

ಜಿಲ್ಲಾ ಕಾಂಗ್ರೆಸ್ ಭವನ ಮಲ್ಲಿಕಟ್ಟೆಯಲ್ಲಿ ಜಿಲ್ಲಾ ಅಸಂಘಟಿತ ಘಟಕದ ಅಧ್ಯಕ್ಷರಾದ ಶ್ರೀ ಅಬ್ಬಾಸ್ ಅಲಿ ಅವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕ ಘಟಕದ ಮಾಸಿಕ ಸಭೆ ನಡೆಯಿತು. ಸುಳ್ಯ ತಾಲೂಕು ಅಸಂಘಟಿತ ಅಧ್ಯಕ್ಷರಾದ ದಿವಂಗತ ಎ ಎಸ್ ಚಂದ್ರಲಿಂಗಂ ರವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪಿ ಸಿ ಜಯರಾಮ್ ರವರ ಶಿಪಾರಸ್ಸಿನ ಮೇರೆಗೆ ಶ್ರೀ ಮಂಜುನಾಥ ಕಂದಡ್ಕ ರವರನ್ನು ನೇಮಕಗೊಳಿಸಿ ಆದೇಶ ಮಾಡಿರುತ್ತಾರೆ. ಈ ಸಭೆಗೆ ಜಿಲ್ಲಾ ಅಸಂಘಟಿತ ಪ್ರಧಾನ ಕಾರ್ಯದರ್ಶಿಯಾದ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಕಂದಡ್ಕ ನೇಮಕ Read More »

ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಕಲಾವಿದೆ ಪೂಜಾ ಬೋರ್ಕರ್ ಆಯ್ಕೆ

ಬೆಂಗಳೂರಿನ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ತನ್ನ 25ನೇ ವರ್ಷದ ರಜತ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡುವ ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಪೆರ್ಲಂಪಾಡಿಯ ಕಲಾವಿದೆ ಪೂಜಾ ಬೋರ್ಕರ್ ಆಯ್ಕೆಯಾಗಿದ್ದಾರೆ‌.ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಜ್ಞಾನವಿಕಾಸ ಶಾಲಾ ಸಭಾಭವನದಲ್ಲಿ ಡಿ.21ರಂದು ನಡೆಯಲಿದೆ. ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರಕ್ಕೆ ರಾಜ್ಯದ 9 ಮಂದಿ ವಿವಿಧ ಸಾಧಕರು ಆಯ್ಕೆಯಾಗಿದ್ದಾರೆ.

ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಕಲಾವಿದೆ ಪೂಜಾ ಬೋರ್ಕರ್ ಆಯ್ಕೆ Read More »

ರೈತರ ಖಾತೆಗೆ ಬೆಳೆ ವಿಮೆ ಕಡಿಮೆ ಜಮೆ ಹಿನ್ನೆಲೆ ಮುಂದಿನ ಹೋರಾಟಕ್ಕೆ ನಿರ್ಧಾರ

ಸುಳ್ಯ : ರೈತರ ಖಾತೆಗೆ ಬೆಳೆ ವಿಮೆ ಕಡಿಮೆ ಜಮೆಯಾಗುತ್ತಿರುವ ಹಿನ್ನಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ರೈತರು ದೂರುಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಹಕಾರಿ ಸಂಘಗಳ ಪ್ರಮುಖರು ಸಭೆ ನಡೆಸಿ, ಮುಂದಿನ ನಡೆ ಹಾಗೂ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು.ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಅವರ ನೇತೃತ್ವದಲ್ಲಿ ಸಭೆ ನಡೆಯಿತು. 2016ರಿಂದ ಆರಂಭಗೊಂಡಿರುವ ಬೆಳೆ ವಿಮೆಯಲ್ಲಿ ಈ ವರೆಗೆ ಉತ್ತಮ ರೀತಿಯಲ್ಲಿ ಬೆಳೆ ವಿಮೆ ಮೊತ್ತ ರೈತರಿಗೆ ಪಾವತಿಯಾಗಿತ್ತು. ಆದರೆ ಈ ವರ್ಷ ಕನಿಷ್ಠ ಮೊತ್ತದ విమ

ರೈತರ ಖಾತೆಗೆ ಬೆಳೆ ವಿಮೆ ಕಡಿಮೆ ಜಮೆ ಹಿನ್ನೆಲೆ ಮುಂದಿನ ಹೋರಾಟಕ್ಕೆ ನಿರ್ಧಾರ Read More »

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ‌ದೇವಳದಲ್ಲಿ ಆಶ್ಲೇಷ ಬಲಿ ಪೂಜೆ

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ದೇವಳದಲ್ಲಿ ಡಿ.9 ಮಂಗಳವಾರದಂದು ರಾತ್ರಿ ಆಶ್ಲೇಷ ಬಲಿ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು ಮಾಜಿ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ಸುಳ್ಯ ಸೀಮೆಯ ಭಕ್ತರು ,ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ‌ದೇವಳದಲ್ಲಿ ಆಶ್ಲೇಷ ಬಲಿ ಪೂಜೆ Read More »

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ಸುಳ್ಯ ಪೋಲಿಸ್ ಠಾಣೆ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ 2025 ನಡೆಯಿತು.ಸುಳ್ಯ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸರಸ್ವತಿ ‘ಪೋಸ್ಕೊ ಕಾಯ್ದೆ’ಯ ಕುರಿತು ಮತ್ತು ಸಬ್ ಇನ್ಸ್ಪೆಕ್ಟರ್ ಸಂತೋಷ ‘ಸೈಬರ್ ಅಪರಾಧಗಳ’ , ‘ಮಾದಕ ವಸ್ತುಗಳ ಬಳಕೆಯ ಅಪರಾಧ’ ಮತ್ತು ‘ಟ್ರಾಫಿಕ್ ನಿಯಮಗಳ’ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು.ರಾಣೆಯ ಸಿಬ್ಬಂದಿಗಳಾದ ಸಂತೋಷ, ಪ್ರಕಾಶ್

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ Read More »

ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು ಡಿಸೆಂಬರ್ 14ರಂದು ಜೆ ಎಲ್ ಆಡಿಟೋರಿಯಂ ವಿಟ್ಲದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮವು ವಿಜ್ರಂಬಣೆಯಿಂದ ನಡೆಯಲಿದೆ.ಬೆಳಿಗ್ಗೆ ವಿದ್ವಾನ್ ಕೊಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ ಮಾಡುವರು.ರವಿಶಂಕರ್ ಸಿ ಮೂಡಂಬೈಲುಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ದಶಮಾನೋತ್ಸವ ಸಮಿತಿ ಅಧ್ಯಕ್ಷರು ಸ್ವರ ಸಿಂಚನ ಸಂಗೀತ ಶಾಲೆ ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ವ್ಯವಸ್ಥಾಪಕರು ಶ್ರೀ ಭಗವತಿ ದೇವಸ್ಥಾನದ ವಿಟ್ಲ ಕೇಶವ್ ಆರ್ ವಿ,

ಡಿ.14ರಂದು ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ Read More »

error: Content is protected !!
Scroll to Top