Author name: Tejas

ಸಂಪಾಜೆ : ಭಾ.ಕೃ ಸಂ. ಪ. ಗೇರು ಸಂಶೋಧನಾ ನಿರ್ದೇಶನಾಲಯದಿಂದ ಕೃಷಿಕರಿಗೆ ಆರ್ ಕೆ ವಿ ವೈ ಮಾದರಿ ಗ್ರಾಮ ಯೋಜನೆಯಡಿ ಗೇರು ಕೃಷಿ ಮಾಹಿತಿ

ಸಂಪಾಜೆ ಗ್ರಾಮ ಪಂಚಾಯತ್, ಭಾ.ಕೃ.ಸಂ.ಪ ಗೇರು ಸಂಶೋದನಾ ನಿರ್ದೇಶನಾಲಯ ಪುತ್ತೂರು , ಕೃಷಿ ಇಲಾಖೆ ಸುಳ್ಯ , ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ(ನಿ.) ವಿಟ್ಲ, ಮಂಗಳೂರು, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ ಸುಳ್ಯಎನ್ ಆರ್ ಎಲ್ ಎಂ ಸುಳ್ಯ, ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.)ಸಂಪಾಜೆ* ಜಂಟಿ ಆಶ್ರಯದಲ್ಲಿ ಮಣ್ಣು ಪರೀಕ್ಷೆ ತರಬೇತಿ ಹಾಗೂ ಗೇರು ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ವಹಿಸಿ, […]

ಸಂಪಾಜೆ : ಭಾ.ಕೃ ಸಂ. ಪ. ಗೇರು ಸಂಶೋಧನಾ ನಿರ್ದೇಶನಾಲಯದಿಂದ ಕೃಷಿಕರಿಗೆ ಆರ್ ಕೆ ವಿ ವೈ ಮಾದರಿ ಗ್ರಾಮ ಯೋಜನೆಯಡಿ ಗೇರು ಕೃಷಿ ಮಾಹಿತಿ Read More »

ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಟಿ. ಎಂ. ಶಹೀದ್ ನೇಮಕ

ಅರಂತೋಡಿನ ಪ್ರಭಾವಿ ನಾಯಕ ಟಿ.ಎಂ ಶಾಹಿದ್ ತೆಕ್ಕಿಲ್ ರವರು ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕಗೊಂಡಿರುತ್ತಾರೆ. ರಾಜಕೀಯದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಕ್ರಿಯಾಶೀಲ ರಾಜಕಾರಣಿ ಟಿ.ಎಂ ಶಾಹಿದ್ ತೆಕ್ಕಿಲ್ ರವರು ಸುಳ್ಯ ತಾಲೂಕು ಎನ್.ಎಸ್.ಯು.ಐ ನ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ರಾಜ್ಯ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಯುವ ಕಾಂಗ್ರೇಸ್ ನ ಪ್ರಧಾನ

ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಟಿ. ಎಂ. ಶಹೀದ್ ನೇಮಕ Read More »

ಕೈ ರುಚಿ..ಅತಿರಸ ಅತ್ರಾಸ ಕಜ್ಜಾಜಯ

ಮನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತದೆ ಆಹಾರದ ಬಗ್ಗೆ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್ ಯಾಕೆ…! ಇಂತಹ ಸಾತ್ವಿಕ ಆಹಾರ ಸವಿ ಸವಿ ರುಚಿಯ ದಿಡೀರಾಗಿ ಅತಿರಸ ಎಂದಾಗಲೇ ಬಾಯಿಯಲ್ಲಿ ನೀರೂರಿಸುವ ಜನ ಸವಿಯಲು ಅತ್ಯಂತ ರುಚಿಕರವಾದ ತಿಂಡಿ ಸ್ವಾದ ಬಾಯಿ ಚಪ್ಪರಿಸಿ ಸವಿಯೋದಕ್ಕೆ ಬೆಸ್ಟ್ ಫುಡ್ ಸವಿದು ಮೆಚ್ಚಿಗೆ ಸೂಚಿಸಿದ ಜನ

ಕೈ ರುಚಿ..ಅತಿರಸ ಅತ್ರಾಸ ಕಜ್ಜಾಜಯ Read More »

ಟೀಂ ಇಂಡಿಯಾಗೆ ಮತ್ತೊಂದು ಜಯ; ಬಾಂಗ್ಲಾವನ್ನು ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಸೆ.24ರಂದು ನಡೆದ ಏಷ್ಯಾ ಕಪ್ 2025ರ ಸೂಪರ್ ಪೋರ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ ಎದುರು 41 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ನೇರವಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಬಾಂಗ್ಲಾ 124 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಭಿಷೇಕ್ ಶರ್ಮಾ(75), ಗಿಲ್ (29), ಹಾರ್ದಿಕ್(38) ರನ್ ಗಳಿಸಿದರು. ಕುಲೀಪ್ 3, ಬುಮ್ರಾ

ಟೀಂ ಇಂಡಿಯಾಗೆ ಮತ್ತೊಂದು ಜಯ; ಬಾಂಗ್ಲಾವನ್ನು ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ Read More »

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ  “ನಿರಂಜನ ಬದುಕು –  ಬರಹ:  ನೆನಪು”  ಕಾರ್ಯಕ್ರಮ

ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರೆಂದೇ ಪ್ರಸಿದ್ಧರಾದ ಕುಲ್ಕುಂದ ಶಿವರಾಯರ ಜನ್ಮ ಶತಮಾನೋತ್ಸವದ ಪ್ರಯುಕ್ತ “ನಿರಂಜನ ಬದುಕು – ಬರಹ : ನೆನಪು” ಕಾರ್ಯಕ್ರಮವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 26,2025ನೇ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ವೆಂಕಟೇಶ್ ಕೆ ಪ್ರಭು ಅವರು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲರಾದ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖ್ಯಾತ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ  “ನಿರಂಜನ ಬದುಕು –  ಬರಹ:  ನೆನಪು”  ಕಾರ್ಯಕ್ರಮ Read More »

ಅರಂಬೂರಿನ‌ಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಸಸ್ಯಹಾರಿ ಹೋಟೆಲ್ ಶುಭಾರಂಭ

ಸುಳ್ಯದ ಅರಂಬೂರಿನಲ್ಲಿ ನಾರಾಯಣ ಕೇಕಡ್ಕ ಹಾಗೂ ಕೃಷ್ಣ ಕಾಮತ್ ರವರ ಪಾಲುದಾರಿಕೆಯಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಸಸ್ಯಹಾರಿ ಹೋಟೆಲ್ ಸೆ.24ರಂದು ಶುಭಾರಂಭಗೊಂಡಿತು.ಎಡನೀರು ಮಠದ ಸಚ್ಚಿಸಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿ ಹೋಟೆಲ್ ಉದ್ಘಾಟಿಸಿ ಶುಭ ಹಾರೈಸಿದರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಿಬ್ಬನ್ ಕತ್ತರಿಸಿ ಹೋಟೆಲ್ ಲೋಕಾರ್ಪಣೆ ಮಾಡಿದರು.ಹವಾನಿಯಂತ್ರಿತ ಕೊಠಡಿಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.ಕುಂಟಾರು ರವೀಶ ತಂತ್ರಿ ಹಾಗೂ ದೇಲಂಪಾಡಿ ಗಣೇಶ್ ತಂತ್ರಿಯವರು ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ, ಕಾಸರಗೋಡು ಕಾಮತ್ ಮೆಡಿಕಲ್

ಅರಂಬೂರಿನ‌ಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಸಸ್ಯಹಾರಿ ಹೋಟೆಲ್ ಶುಭಾರಂಭ Read More »

ಮೈಸೂರು ದಸರಾದಲ್ಲಿ ಸಂದೀಪ್ ದೇವಾಡಿಗರಿಂದ ಸ್ಯಾಕ್ಸೋಫೋನ್ ಕಚೇರಿ ಕಾರ್ಯಕ್ರಮ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರುನಾಡ ಕಲ್ಪತರು ರಾಜ್ಯ ಪ್ರಶಸ್ತಿ ವಿಜೇತ ಸಂದೀಪ್ ದೇವಾಡಿಗ ಅರಿಯಡ್ಕ ಅವರ ತಂಡವು ಸ್ಯಾಕ್ಸೋಫೋನ್ ಕಚೇರಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.ನಾಡಹಬ್ಬದ ವಿಶೇಷ ಕಾರ್ಯಕ್ರಮವಾಗಿ ಸೆ.30 ರ, 2025ರಂದು ಸಂಜೆ 5 ಗಂಟೆಗೆ ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ಸಂದೀಪ್ ದೇವಾಡಿಗ ಅವರ ಸ್ಯಾಕ್ಸೋಫೋನ್ ಕಚೇರಿ ಜರುಗಲಿದೆ.ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮೂಲದ ಸಂದೀಪ್ ದೇವಾಡಿಗ, ರಾಜ್ಯ ಹಾಗೂ ದೇಶದಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಸ್ಯಾಕ್ಸೋಫೋನ್ ವಾದನ ನೀಡಿದ್ದು, ಸಂಗೀತ ಪ್ರಿಯರಿಂದ ಅಪಾರ ಮೆಚ್ಚುಗೆ

ಮೈಸೂರು ದಸರಾದಲ್ಲಿ ಸಂದೀಪ್ ದೇವಾಡಿಗರಿಂದ ಸ್ಯಾಕ್ಸೋಫೋನ್ ಕಚೇರಿ ಕಾರ್ಯಕ್ರಮ Read More »

ಚೆಕ್ ಅಮಾನ್ಯಗೊಂಡು ಜೈಲು ಸೇರಿದ ಹಳ್ಳಿ ಮೇಸ್ಟ್ರೀಗೆ ಜಾಮೀನು ಮಂಜೂರು

ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಸುಳ್ಯ ಇಲ್ಲಿ ಸಾಲ ಪಡೆದಿದ್ದ ಸುಳ್ಯ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಪುತ್ತೂರು ತಾಲೂಕು ಬಿರುಮಲೆ ನಿವಾಸಿ ಪ್ರಾಥಮಿಕ ಶಿಕ್ಷಕ ಪುರುಷೋತ್ತಮ ಬಿ ಎಂಬುವವರು ಸಾಲದ ಮರುಪಾವತಿಗಾಗಿ ಚೆಕ್ ನೀಡಿದ್ದು ಇದು ಬ್ಯಾಂಕಿನಲ್ಲಿ‌ ಸಾಕಾಷ್ಟು ಮೊತ್ತ ಇಲ್ಲದೆ ಅಮಾನ್ಯಗೊಂಡಿತ್ತು. ಈ ಬಗ್ಗೆ ಸಹಕಾರಿ ಸಂಘದವರು ಸುಳ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಇವರನ್ನು ಸೆ. 19ರಂದು ಸುಳ್ಯ ಪೊಲೀಸರು ಬಂಧಿಸಿ

ಚೆಕ್ ಅಮಾನ್ಯಗೊಂಡು ಜೈಲು ಸೇರಿದ ಹಳ್ಳಿ ಮೇಸ್ಟ್ರೀಗೆ ಜಾಮೀನು ಮಂಜೂರು Read More »

ಅಪ್ರಾಪ್ತ ಯುವತಿಯನ್ನು ಗರ್ಭಿಣಿಯಾಗಿಸಿದ ಯುವಕ ಜೈಲಿಗೆ ಹೋಗುತ್ತಿದ್ದಂತೆ ಇತ್ತ ಮಗುವಿಗೆ ಜನ್ಮ ನೀಡಿದ ಯುವತಿ

ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಅಪ್ರಾಪ್ತ ಯುವತಿಯೊಬ್ಬಳನ್ನು ಗರ್ಭಿಣಿಯನ್ನಾಗಿಸಿದ ಯುವಕ ಜೈಲಿಗೆ ಹೋಗುತ್ತಿದ್ದಂತೆ ಇತ್ತ ಯುವತಿ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.ನಾಲ್ಕೂರು ಗ್ರಾಮದ ಯುವತಿಯೊಬ್ಬಳು ಗುತ್ತಿಗಾರಿನಲ್ಲಿ ರೂಂ ಪಡೆದು ವಾಸವಿದ್ದು, ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯ ಯುವಕನೊಬ್ಬ ಈಖೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭವತಿಯನ್ನಾಗಿಸಿದ್ದ. ಯುವತಿಗೆ ಒಂಬತ್ತು ತಿಂಗಳಾಗುತ್ತಿದ್ದಂತೆ ಪ್ರಕರಣ ಬಯಲಿಗೆ ಬಂದಿದ್ದು, ಈ ಸಂಬಂಧ ಬಾಳುಗೋಡಿನ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಅಪ್ರಾಪ್ತ ಯುವತಿಯನ್ನು ಗರ್ಭಿಣಿಯಾಗಿಸಿದ ಯುವಕ ಜೈಲಿಗೆ ಹೋಗುತ್ತಿದ್ದಂತೆ ಇತ್ತ ಮಗುವಿಗೆ ಜನ್ಮ ನೀಡಿದ ಯುವತಿ Read More »

ಹಿರಿಯ ಸಾಹಿತಿ ಎಸ್.ಎಲ್ ಬೈರಪ್ಪ ವಿಧಿವಶ

ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸೆ.24ರಂದುನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪ ಬೆಂಗಳೂರಿನ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ದಾಟು, ಗೃಹಭಂಗ ಮುಂತಾದ ಪ್ರಸಿದ್ದ ಕಾದಂಬರಿಗಳನ್ನು ಬರೆದಿರುವ ಎಸ್.ಎಲ್. ಭೈರಪ್ಪ, ಸರಸ್ವತಿ ಸಮ್ಮಾನ್ ಪ್ರಶಸ್ತಿಗೂ ಭಾಜನರಾಗಿದ್ದರು.2023 ರಲ್ಲಿ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇಂದು ಮಧ್ಯಾಹ್ನ 2.38 ಗಂಟೆಗೆ ಹೃದಯಾಘಾತದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ಭೈರಪ್ಪ ಮೃತಪಟ್ಟಿದ್ದಾರೆ.

ಹಿರಿಯ ಸಾಹಿತಿ ಎಸ್.ಎಲ್ ಬೈರಪ್ಪ ವಿಧಿವಶ Read More »

error: Content is protected !!
Scroll to Top