Author name: Tejas

ಸುಳ್ಯದಲ್ಲಿ ಆಧಾರ್ ಸೇವಾ ಕೇಂದ್ರ ಮತ್ತೆ ಆರಂಭ

ಸುಳ್ಯದಲ್ಲಿ ಕೆಲವು ಸಮಯದಿಂದ ಎದುರಾಗಿದ್ದ ಆಧಾರ್‌ ಸಮಸ್ಯೆ ಪರಿಹಾರ ಕಂಡಿದೆ. ಸುಳ್ಯ ಅಂಚೆ ಇಲಾಖೆಯಲ್ಲಿ ಮಧ್ಯಾಹ್ನ ಬಳಿಕ ಆಧಾರ್ ಸೇವೆ ಆರಂಭವಾಗಿದೆ.ಸುಳ್ಯದಲ್ಲಿ ಆಧಾ‌ರ್ ಸೇವೆ ಸ್ಥಗಿತವಾಗಿದ್ದರಿಂದ ಜನರು ಬೆಳ್ಳಾರೆ, ಪುತ್ತೂರು ತಾಲೂಕಿಗೆ ಹೋಗಿ ಆಧಾರ್ ತಿದ್ದುಪಡಿ ಸಹಿತ ಇನ್ನಿತರ ಕೆಲಸಮಾಡಿಕೊಂಡು ಬರಬೇಕಾಗಿದ್ದು. ತಾಲೂಕು ಪಂಚಾಯತ್, ನಗರ ಪಂಚಾಯತ್ ಸಭೆಯಲ್ಲಿ ಚರ್ಚೆಗಳಾಗಿದ್ದವು.ಸುಳ್ಯಕ್ಕೆ ಉಸ್ತುವಾರಿ ಸಚಿವರು ಬಂದಾಗ ಗಮನ ಸೆಳೆಯಲಾಗಿತ್ತು. ಶಾಸಕರು ಕೂಡಾ ಆಧಾರ್ ಕೇಂದ್ರ ಪುನರಾರಂಭಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಪಟ್ಟಿದ್ದರು.

ಸುಳ್ಯದಲ್ಲಿ ಆಧಾರ್ ಸೇವಾ ಕೇಂದ್ರ ಮತ್ತೆ ಆರಂಭ Read More »

ಗಾಳ ಹಾಕಲು ತೆರಳಿದ ವ್ಯಕ್ತಿ ಕೆರೆಗೆ ಬಿದ್ದು ಸಾವು

ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಪಲ್ಲಾದೆ ಎಂಬಲ್ಲಿ ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ರಾತ್ರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಶ್ರೀಧರ ಎಂದು ಗುರುತಿಸಲಾಗಿದೆ.ಈತ ಪಲ್ಲಾದೆ ಯಲ್ಲಿರುವ ಖಾಸಗಿ ತೋಟದಲ್ಲಿರುವ ದೊಡ್ಡ ಕೆರೆಗೆ ಮೀನು ಹಿಡಿಯಲೆಂದು ಬಂದಿದ್ದ ಮೀನುಹಿಡಿಯುವ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಅನುಮಾನಿಸಲಾಗಿದೆ.ಕೆರೆಯಲ್ಲಿ ಈತನ ಮೃತದೇಹ ಆ.26 ರಂದು ಪತ್ತೆಯಾಗಿದ್ದು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಗಾಳ ಹಾಕಲು ತೆರಳಿದ ವ್ಯಕ್ತಿ ಕೆರೆಗೆ ಬಿದ್ದು ಸಾವು Read More »

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿಯ ಗ್ರಾಮ ಪಂಚಾಯತ್ ಸದಸ್ಯತ್ವ ರದ್ದು

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಆರೋಪಿ ಬೆಳ್ಳಾರೆ ಗ್ರಾಮ ಪಂಚಾಯತ್ 1 ನೇ ವಾರ್ಡ್ ಚುನಾಯಿತ ಸದಸ್ಯ ಕೆ. ಮಹಮ್ಮದ್ ಇಟ್ಬಾಲ್ ಇವರು 2024-25 ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆಯನ್ನು ನಿಗದಿತ ಅವಧಿಯೊಳಗೆ ದಾಖಲು ಮಾಡದೇ ಇರುವ ಕಾರಣ, ರಾಜ್ಯ ಚುನಾವಣಾ ಆಯೋಗವು ಉಲ್ಲೇಖದ ಆದೇಶದಂತೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಬಿ)(4)ರಡಿ ಸದರಿಯವರನ್ನು ಗ್ರಾಮ ಪಂಚಾಯತಿ ಸದಸ್ಯತ್ವದಿಂದ ತೆಗೆದುಹಾಕಿ ಹಾಗೂ ಅವರ ಸದಸ್ಯ ಸ್ಥಾನವು ಖಾಲಿ

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿಯ ಗ್ರಾಮ ಪಂಚಾಯತ್ ಸದಸ್ಯತ್ವ ರದ್ದು Read More »

ಕಾಫಿ ಬೋರ್ಡ್ ಅಧಿಕಾರಿಗಳು ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಭೇಟಿ

ಕಾಫಿ ಬೋರ್ಡ್ ನ ಅಧಿಕಾರಿಗಳು ಜೇನು ಸೊಸೈಟಿ ಸಂಸ್ಕರಣ ಘಟಕ ಕ್ಕೆಭೇಟಿ ನೀಡಿದರು. ಜೇನು ಸೊಸೈಟಿ ಯ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಸ್ವಾಗತಿಸಿದರು ಈ ಸಂದರ್ಭದಲ್ಲಿ ಸುಪ್ರೀತ್ ಮೋoಟಡ್ಕ, ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಫಿ ಬೋರ್ಡ್ ಅಧಿಕಾರಿಗಳು ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಭೇಟಿ Read More »

ಸುಳ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಿ ಕೊಡುವಂತೆ ರಾಜ್ಯ ಕಾನೂನು ಸಚಿವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಸುಳ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಿ ಕೊಡುವಂತೆ ರಾಜ್ಯ ಕಾನೂನು ಸಚಿವರಾದ ಹೆಚ್.ಕೆ ಪಾಟೀಲ್ ಅವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದ್ದಾರೆ.ಸುಳ್ಯ ನ್ಯಾಯಲಯವು 50 ವರುಷಗಳ ಹಳೆಯದಾಗಿದ್ದು ಹಂಚಿನ ಮೇಲ್ಟಾವಣಿಯಲ್ಲಿ ಕಲಾಪಗಳು ನಡೆಯುತ್ತಿದೆ. ಮಳೆಗಾಲದಲ್ಲಿ ಹಲವಾರು ತೊಂದರೆಗಳನ್ನು ಮನಗಂಡು ನೂತನ ಸಂಕೀರ್ಣದ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ. ಮನವಿ ಸ್ವೀಕರಿಸಿದ ಸಚಿವರು ಶೀಘ್ರವಾಗಿ ಸರಕಾರದಿಂದ ಅನುದಾನವನ್ನು ಬಿಡುಗಡೆ ಮಾಡುತ್ತೆನೆಂದು ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಿ ಕೊಡುವಂತೆ ರಾಜ್ಯ ಕಾನೂನು ಸಚಿವರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿ Read More »

ಅರಂತೋಡು : ಭಾರತೀಯ ಗಡಿಭದ್ರತಾ ಪಡೆಗೆ ಸುಶ್ಮಿತಾ ಮೇಲಡ್ತಲೆ ಆಯ್ಕೆ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆ ಸುಶ್ಮಿತಾ ಎಂ.ಎ ಗಡಿ ಭಾರತೀಯ ಭದ್ರತಾ ಪಡೆಗೆ ಆಯ್ಕೆಗೊಂಡಿದ್ದಾರೆ.ಸ್ಟಾಫ್ ಸೆಲೆಕ್ಷನ್ ಕಮಿಷನ್‌ ನಡೆಸುವ ಎಸ್‌.ಎಸ್.ಸಿ ಜಿ.ಡಿ ಪರೀಕ್ಷೆಯಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ.ಇವರು ಅರಂತೋಡು ಗ್ರಾಮದ ಅಡ್ತಲೆ ದಿ.ನಾಗಪ್ಪ ಗೌಡ ಎಂ.ಎಂ ಮತ್ತು ಜಾನಕಿ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮರ್ಕಂಜ, ಪಿ.ಯು.ಸಿಯನ್ನು ಎನ್‌.ಎಂ.ಪಿ.ಯು ಅರಂತೋಡಿನಲ್ಲಿ ಪೂರೈಸಿ , ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ

ಅರಂತೋಡು : ಭಾರತೀಯ ಗಡಿಭದ್ರತಾ ಪಡೆಗೆ ಸುಶ್ಮಿತಾ ಮೇಲಡ್ತಲೆ ಆಯ್ಕೆ Read More »

ದ.ಕ ಜಿಲ್ಲೆಯಲ್ಲಿ ಮಾದರಿ ಕಾಫಿ ಕ್ರಷಿ ಮಾಡೋಣ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದ.ಕ ಜಿಲ್ಲೆಯಲ್ಲಿ ಅಡಿಕೆಯೊಂದಿಗೆ ಕಾಫಿ ಬೆಳೆದು ಮಾದರಿ‌ ಕಾಫಿ‌ ಕ್ರಷಿ‌ ಮಾಡೋಣ ಎಂದು‌ ಸಂಸದ ಕ್ಯಾಪ್ಟನ್ ಬ್ರಿಜೇಶ್ ಔಟ ಹೇಳಿದರು.ಅವರು‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ವಿನೂತನ ಪ್ರಯತ್ನವಾಗಿ ಕಾಪಿಕೊ ಉದ್ಘಾಟನೆ ಹಾಗೂ ಕಾಫಿ ಬೆಳೆ ಉತ್ತೇಜನ ಕಾರ್ಯಗಾರಕ್ಕೆ ಆ.೨೫ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.ಸುಳ್ಯ ಭಾಗದಲ್ಲಿ ಈಗಾಗಲೇ ಅಡಿಕೆ ಹಳದಿ ರೋಗದಿಂದ ಕೃಷಿಕರು ಕಂಗೆಟ್ಟಿದ್ದು, ಕೃಷಿಕರು ಅಡಿಕೆ ಜೊತೆಗೆ ಉಪಬೆಳೆಯಾಗಿ ಕಾಫಿಯನ್ನು ಬೆಳೆ ಉತ್ತೇಜಿಸುವ ಸಲುವಾಗಿ ಕಾಪಿಕೋ ಉದ್ಘಾಟನೆಯಾಗಿದೆ.ಅಡಿಕೆ

ದ.ಕ ಜಿಲ್ಲೆಯಲ್ಲಿ ಮಾದರಿ ಕಾಫಿ ಕ್ರಷಿ ಮಾಡೋಣ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ Read More »

(ಪ್ರಕೃತಿ) ಸಸ್ಯ ಶ್ಯಾಮಲೆ ಬಿಟ್ಟರ್ ಜಿಂಜರ್ ಶ್ಯಾಂಪು..!

ಜಗತ್ತಿನಲ್ಲಿಯೇ ಪ್ಯೂರ್ ಶಾಂಪೂ ಅಂದರೆ ಇದೆ ಹೂವಿನಿಂದ ಬರೋ ಜಲ್ ನಮ್ಮ ಪ್ರಕೃತಿಯಲ್ಲಿ ಎಲ್ಲವೂ ಇದೆ ತಾರುಣ್ಯದ ಜೊತೆ ಅವುಗಳಿಗೂ ಭಾವನೆಗಳಿವೆ ಅದ್ಭುತವಾದ ಹೂ ದೃಶ್ಯ ಕಹಿ ಶುಂಠಿ ನರಿ ಕಬ್ಬು ಸಸ್ಯಗಳು ನೈಸರ್ಗಿಕ ಶಾಂಪೊವನ್ನು ಉತ್ಪಾದಿಸುತ್ತವೆ. ಇದು ಸಾಮಾನ್ಯ ಗಿಡವಲ್ಲ ಈ ಗಿಡದ ಹೆಸರು ಬಿಟ್ಟರ್ ಜಿಂಜರ್ ಇದನ್ನು ಹಿಚುಕುದರಿಂದ ಈ ರೀತಿಯ ದ್ರವ ಬರುತ್ತದೆ.ಆ ದ್ರವವು ಒಂದು ರೀತಿಯ ಶಾಂಪೂ ರೀತಿಯಕೆಲಸ ಮಾಡುತ್ತದೆ ಏಕೆಂದರೆ ಇದರಲ್ಲಿ ಯಾವುದೇ ರೀತಿಯ ಕೆಮಿಕಗಳು ಮಿಶ್ರಣ ವಾಗಿರುವುದಿಲ್ಲ ಮತ್ತು

(ಪ್ರಕೃತಿ) ಸಸ್ಯ ಶ್ಯಾಮಲೆ ಬಿಟ್ಟರ್ ಜಿಂಜರ್ ಶ್ಯಾಂಪು..! Read More »

ಭೀಮರಾವ್ ಸಾಹಿತ್ಯಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿ : ಡಾ.ಪ್ರಭಾಕರ ಶಿಶಿಲ

ಸಾಹಿತ್ಯದಲ್ಲಿ ಮುಂದುವರೆದರೇ ಭೀಮರಾವ್‌ ವಾಷ್ಠರ್‌ ಉತ್ತಮ ಸಾಹಿತಿಯಾಗುತ್ತಿದ್ದರು. ಇನ್ನೂ ಇತರ ಕ್ಷೇತ್ರಗಳ ಬಿಟ್ಟು ಸಾಹಿತಿಯಾಗಿ ಕವಿಯಾಗಿ ಹೆಚ್ಚು ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಲಿ ಅವರು ಸಾಹಿತ್ಯದ ಬೆಳವಣಿಗೆಗಾಗಿ ತ್ಯಾಗ ಮಾಡಿದ ವ್ಯಕ್ತಿ ಎಂದು ಹಿರಿಯ ಲೇಖಕ ಡಾ.ಪ್ರಭಾಕರ ಪ್ರಭಾಕರ ಶಿಶಿಲ ಹೇಳಿದರು.ಅವರು ಸುಳ್ಯದಲ್ಲಿ ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ನಡೆದ ಭೀಮರಾವ್ ವಾಷ್ಠರ್ ಉತ್ಸವದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದ ಸಂಘಟಕ, ಗಾಯಕ ಲಕ್ಷ್ಮಣ್ ಪೆರುಮಾಳ್

ಭೀಮರಾವ್ ಸಾಹಿತ್ಯಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿ : ಡಾ.ಪ್ರಭಾಕರ ಶಿಶಿಲ Read More »

ಆ.೨೫: ಸುಳ್ಯದಲ್ಲಿ ಕಾಪಿಕೊ ಉದ್ಘಾಟನೆ ಮತ್ತು ಕಾಫಿ ಬೆಳೆ ಉತ್ತೇಜನ ಕಾರ್ಯಗಾರ : ವೆಂಕಟ್ ವಳಂಬೆ

ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ವಿನೂತನ ಪ್ರಯತ್ನವಾಗಿ ಕಾಪಿಕೊ ಉದ್ಘಾಟನೆ ಹಾಗೂ ಕಾಫಿ ಬೆಳೆ ಉತ್ತೇಜನ ಕಾರ್ಯಗಾರಕ್ಕೆ ಚಾಲನೆ ಆ.೨೫ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದರು.ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಸಂಸದ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ, ಕಾಫಿ ಬೆಳೆ ಉತ್ತೇಜನ ಕಾರ್ಯಗಾರ ಸಮಿತಿ ಸುಳ್ಯ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಬ್ರಿಜೇಶ್

ಆ.೨೫: ಸುಳ್ಯದಲ್ಲಿ ಕಾಪಿಕೊ ಉದ್ಘಾಟನೆ ಮತ್ತು ಕಾಫಿ ಬೆಳೆ ಉತ್ತೇಜನ ಕಾರ್ಯಗಾರ : ವೆಂಕಟ್ ವಳಂಬೆ Read More »

error: Content is protected !!
Scroll to Top