Author name: Tejas

ಅಜ್ಜಾವರ : ಸ್ವಾಮೀಜಿ ಶ್ರೀ ಯೋಗೇಶ್ವರನಾಂದ ಸರಸ್ವತಿಯವರ ಕ್ರತಿ ವಸುದೈವಂ ಕುಟುಂಬಕಂ ಮತ್ತು ಕಲಿಕೆಯ ಮಹಿಮೆ ಬಿಡುಗಡೆ

ಸುಳ್ಯತಾಲೂಕಿನ ಅಜ್ಜಾವರ ಗ್ರಾಮದ ಚೈತನ್ಯ ಸೇವಾಶ್ರಮದಲ್ಲಿ ಶಿವರಾತ್ರಿ ಪ್ರಯುಕ್ತ ಶಿವೂಜೆ,ಗುರುಪೂಜೆ,ಗಣತಿಪೂಜೆ ಪುಸ್ತಕ ಬಿಡುಗಡೆ,ಭಜನಾ ಸತ್ಸಂಗ ಕಾರ್ಯಕ್ರಮ ಫೆ.26ರಂದು ನಡೆಯಿತು.ಪೆರಾಜೆ ಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಅವರು ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ ಕ್ರತಿ ವಸುದೈವ ಕುಟುಂಬಕಂ ಮತ್ತು ಕಲಿಕೆಯ ಮಹಿಮೆಯನ್ನು ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು ಸ್ವಾಮೀಜಿಯವರು ಪುಸ್ತಕದಲ್ಲಿ ಬರೆದಿರುವಂತೆ ನಾವೇಲ್ಲರೂ ಒಂದೆ.ಒಂದೆ ಕುಟುಂಬದವರಂತೆ ಬದುಕಿ ಬಾಳೋಣ ಎಂದು ಹೇಳಿದರು.ಪ್ರೊಫೆಸರ್ ಅನಿಲ್ ಬಿ.ವಿ ಮಾತನಾಡಿ ಜೀವನದ ಬದುಕಿನ ಜಂಜಾಟದಲ್ಲಿ ಕಷ್ಟ ಸುಖಗಳು ಸಹಜ..ಜೀವನದಲ್ಲಿ ಕಷ್ಟಗಳ‌ನ್ನು ಮೀರಿ […]

ಅಜ್ಜಾವರ : ಸ್ವಾಮೀಜಿ ಶ್ರೀ ಯೋಗೇಶ್ವರನಾಂದ ಸರಸ್ವತಿಯವರ ಕ್ರತಿ ವಸುದೈವಂ ಕುಟುಂಬಕಂ ಮತ್ತು ಕಲಿಕೆಯ ಮಹಿಮೆ ಬಿಡುಗಡೆ Read More »

ಮಂಗಳೂರು ಮೂಲದ ಯುವತಿ ತನುಷ್ಕಾ ಯುದ್ಧ ವಿಮಾನದ ಪೈಲೆಟ್ ಆಗಿ ಆಯ್ಕೆ

ಇದೇ ಮೊದಲ ಬಾರಿಗೆ ಯುವತಿಯೊಬ್ಬರು ಭಾರತೀಯ ವಾಯುಪಡೆಯ ಹೆಮ್ಮೆ ಹಾಗೂ ಯಶಸ್ವಿ ಯುದ್ಧವಿಮಾನಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಾಗ್ವಾರ್ ವಿಮಾನವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿದ್ದಾರೆ. ಮಂಗಳೂರು ಮೂಲದ ಪ್ಲೆಯಿಂಗ್ ಆಫೀಸ‌ರ್ ತನುಷ್ಕಾ ಸಿಂಗ್‌ ಅವರಿಗೆ ಈ ಸದಾವಕಾಸ ದೊರಕಿದ್ದು, ಆಕೆ ಯುದ್ಧ ವಿಮಾನ ಸ್ಕ್ಯಾಡ್ರನ್‌ನಲ್ಲಿ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.

ಮಂಗಳೂರು ಮೂಲದ ಯುವತಿ ತನುಷ್ಕಾ ಯುದ್ಧ ವಿಮಾನದ ಪೈಲೆಟ್ ಆಗಿ ಆಯ್ಕೆ Read More »

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ಮಂಗಳವಾರ ವರದಿಯಾಗಿದೆ.ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ (28) ಮೃತ ಯುವಕ.ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿದೆ. ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಪ್ಪಿನಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ Read More »

ಬೈಕ್ ಸ್ಕೂಟಿ ಅಪಘಾತದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗಂಭೀರ

ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಘಟನೆ ಐತೂರು ಗ್ರಾ. ಪ. ಸದಸ್ಯರೊಬ್ಬರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮನಮೋಹನ್ ಗೋಲ್ಯಾಡಿ ಗಂಭೀರ ಗಾಯಗೊಂಡ ವ್ಯಕ್ತಿ.ಪೆರಿಯಶಾಂತಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಬೈಕ್‌ ಸವಾರ, ಐತೂರು ಗ್ರಾಮ ಪಂಚಾಯತ್ ಸದಸ್ಯ ಮನಮೋಹನ್ ಗೋಲ್ಯಾಡಿ ಗಂಭೀರವಾಗಿ ಗಾಯಗೊಂಡಿದ್ದುಅವರನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೈಕ್ ಸ್ಕೂಟಿ ಅಪಘಾತದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗಂಭೀರ Read More »

ತೊಡಿಕಾನದಲ್ಲಿ ಮಾ.8ಕ್ಕೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ,ಆಮಂತ್ರ ಪತ್ರಿಕೆ ಬಿಡುಗಡೆ

ಗೌಡ ಯುವ ಸೇವಾ ಸಂಘ ತೊಡಿಕಾನ ವತಿಯಿಂದ ದಿನಾಂಕ 08.03.2025 ರಂದು ನಡೆಯುವ ಹತ್ತು ಕುಟುಂಬ ಹದಿನೆಂಟು ಗೋತ್ರ ಗೌಡ ಬಾಂದವರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂಗಳವಾರ ಅಕ್ಷಯ ಕಲಾ ಮಂದಿರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ಇಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗೌಡ ಯುವ ಸೇವಾ ಸಂಘದ ಪದಾಧಿಕಾರಿಗಳು,ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ತೊಡಿಕಾನದಲ್ಲಿ ಮಾ.8ಕ್ಕೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ,ಆಮಂತ್ರ ಪತ್ರಿಕೆ ಬಿಡುಗಡೆ Read More »

ಪೀಚೆ ಮನೆ ಪವನ್ ಕುಮಾರ್ ನಿಧನ

ಪೆರಾಜೆ ಗ್ರಾಮದ ಪೀಚೆಮನೆ ಪವನಕುಮಾರ್ (50)ರವರು ಅಲ್ಪಕಾಲದ ಅಸೌಖ್ಯದಿಂದ ಫೆ.25ರಂದು ಮೃತಪಟ್ಟಿದ್ದು , ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸ್ವಗೃಹದಲ್ಲಿ ನಡೆಸಲಾಗುವದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ

ಪೀಚೆ ಮನೆ ಪವನ್ ಕುಮಾರ್ ನಿಧನ Read More »

ಐವರ್ನಾಡು ಮೀರಾ ಬಾಲಕೃಷ್ಣ ಕೊಲೆ ಆರೋಪಿಗಳ ದೋಷ ಮುಕ್ತಿ

ಸುಳ್ಯ : ದಿನಾಂಕ 02/03/2008 ರಂದು ಬೆಳಗ್ಗಿನ ಜಾವಾ ಐವರ್ನಾಡು ಗ್ರಾಮದ ಪಾಲೇಪ್ಪಾಡಿ ಮೀರಾ ಬಾಲಕೃಷ್ಣ ಇವರನ್ನು ಯಾರೋ ಅಪರಚಿತರು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಮೀರಾ ಬಾಲಕೃಷ್ಣ ರವರ ಕೈ ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿ ಮನೆಯಲ್ಲಿದ್ದ ಹಣ ವಡವೆ ದೋಚಲು ಪ್ರಯತ್ನಿಸಿದ್ದು, ಆ ಸಮಯದಲ್ಲಿ ಮನೆ ಕೆಲಸದಾಕೆ ವಿಮಲ ಎಂಬುವರು ಮನೆಯ ಒಳಗಡೆ ಪ್ರವೇಶಿಸಿರುವುದನ್ನು ನೋಡಿ ಆಕೆಯ ಮೇಲೆ ಕೂಡಾ ಹಲ್ಲೆಯನ್ನು ಮಾಡಿ ಆರೋಪಿಗಳು ಪರಾರಿಯಾಗಿರುತ್ತಾರೆ.ಮತ್ತು ಆರೋಪಿಗಳು

ಐವರ್ನಾಡು ಮೀರಾ ಬಾಲಕೃಷ್ಣ ಕೊಲೆ ಆರೋಪಿಗಳ ದೋಷ ಮುಕ್ತಿ Read More »

ಸುಳ್ಯದಲ್ಲಿ ಬೆಳಿಗ್ಗೆ ಹೋದ ಕರೆಂಟ್ ರಾತ್ರಿ 8 ಎಂಟು ಗಂಟೆ ಕಳೆದರೂ ಬಂದಿಲ್ಲ, ಸುಳ್ಯದ ಅವಸ್ಥೆ ಮಾರಯರೇ

ಸುಳ್ಯದಲ್ಲಿ ಇಂದು ( ಮಂಗಳವಾರ) ಬೆಳಿಗ್ಗೆ 10 ಗಂಟೆಯಿಂದ ಸಂಜೆ ,5 ಗಂಟೆ ತನಕ ಪವರ್ ಕಟ್ ಎಂದು ಮೆಸ್ಕಾಂ ಪ್ರಕಣೆಯಲ್ಲಿ ತಿಳಿಸಿತ್ತು.ಆದರೆ ರಾತ್ರಿ ಎಂಟು ಗಂಟೆಯಾದರೂ ಕರೆಂಟ್ ಬಾರದಿರುವುದರಿಂದ ಜನರು ಮೆಸ್ಕಾಂಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ದಿನ ನಿತ್ಯ ಸಮರ್ಕವಾಗಿ ವಿದ್ಯುತ್ ಸರಬರಾಜಿಲ್ಲದೆ ಮತ್ತು ಲೋ ಒಲ್ಟೋಜ್ ಸಮಸ್ಯೆಯಿಂದ ಜನರು ಕುಡಿಯುವ ನೀರಿಗೆ ಅನೇಕ ಗ್ರಾಮಗಳಲ್ಲಿ ಪರದಾಡುತ್ತಿದ್ದಾರೆ.ಮೆಸ್ಕಾಂನ ಸ್ಥಳೀಯ ಅಧಿಕಾರಿಗಳು ಪೋನ್ ಮಾಡಿದ್ರು ಪೋನ್ ರಿಸಿವ್ ಮಾಡುತ್ತಿಲ್ಲ.

ಸುಳ್ಯದಲ್ಲಿ ಬೆಳಿಗ್ಗೆ ಹೋದ ಕರೆಂಟ್ ರಾತ್ರಿ 8 ಎಂಟು ಗಂಟೆ ಕಳೆದರೂ ಬಂದಿಲ್ಲ, ಸುಳ್ಯದ ಅವಸ್ಥೆ ಮಾರಯರೇ Read More »

ರಾಜ್ಯ ಬಿಜೆಪಿಯ ಗುಂಪುಗಾರಿಕೆ ನಿಯಂತ್ರಿಸುವ ಅಗತ್ಯ ಇದೆ: ಡಿ. ವಿ ಸದಾನಂದ ಗೌಡ

ರಾಜ್ಯ ಬಿಜೆಪಿಯಲ್ಲಿ ಕೆಲವು ದಿನಗಳಿಂದ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಪಕ್ಷದಲ್ಲಿ ಗುಂಪುಗಳು ಸೃಷ್ಟಿ ಆಗಿರುವುದನ್ನು ಸರಿಪಡಿಸಬೇಕು. ಅಧ್ಯಕ್ಷರ ನೇಮಕ ಮಾಡುವುದಕ್ಕಿಂತಲೂ ನಮ್ಮ ಮನಸ್ಸುಗಳನ್ನು ಸರಿ ಮಾಡುವ ಕೆಲಸವನ್ನು ಹಿರಿಯರು ಮಾಡಲೇ ಬೇಕು ಎಂದು ಅವರು ಹೇಳಿದರು.ವಿಶ್ವವಿದ್ಯಾ ನಿಲಯ ಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಅದು ಯಾರ ಕಾಲಘಟ್ಟದಲ್ಲಿ ಅನುಷ್ಠಾನ ಆಗಿದೆಯೋ ಅವರು ಮಾಡಿದ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿ ಮುಂದು ವರಿಸಬೇಕು. ಮುಚ್ಚುವುದು ಪರಿಹಾ ರವಲ್ಲ ಎಂದು

ರಾಜ್ಯ ಬಿಜೆಪಿಯ ಗುಂಪುಗಾರಿಕೆ ನಿಯಂತ್ರಿಸುವ ಅಗತ್ಯ ಇದೆ: ಡಿ. ವಿ ಸದಾನಂದ ಗೌಡ Read More »

ಸಂಪಾಜೆ : ಕಾಫಿ ಬೆಳೆ ಮಾಹಿತಿ ಕಾರ್ಯಕ್ರಮ

ಸುಳ್ಯ ರೈತ ಉತ್ಪಾದಕರ ಕಂಪನಿ ಮೂಲಕ ಕಾಫಿ ಮಂಡಳಿ ಕೊಡಗು ತೋಟಗಾರಿಕೆ ಇಲಾಖೆ ಸುಳ್ಯ ಗ್ರಾಮ ಪಂಚಾಯತ್ ಸಂಪಾಜೆ ದ. ಕ .ಜಂಟಿ ಆಶ್ರಯದಲ್ಲಿ ಕಾಫಿ ಬೆಳೆಯ ಬಗ್ಗೆ ಮಾಹಿತಿ ಕಾರ್ಯಗಾರ ಸಂಪಾಜೆ ಗ್ರಾಮ ಪಂಚಾಯತ್ ಸಭಾವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ಕಾರ್ಯಕ್ರಮದಲ್ಲಿ ವೀರಪ್ಪ ಗೌಡ , ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕಾಫಿ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು, ಕೃಷಿ ಸಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.ಗ್ರಾಮ

ಸಂಪಾಜೆ : ಕಾಫಿ ಬೆಳೆ ಮಾಹಿತಿ ಕಾರ್ಯಕ್ರಮ Read More »

error: Content is protected !!
Scroll to Top