Author name: Tejas

ಸಾಕು ನಾಯಿಯನ್ನು ಕೊಂದು ತಿಂದ ಚಿರತೆ

ಅಜ್ಜಾವರ ಗ್ರಾಮದ ಪಡ್ಡಂಬೈಲು ನಲ್ಲಿ ಮನೆಯ ಅಂಗಳಕ್ಕೆ ಬುಧವಾರ ರಾತ್ರಿ ಚಿರತೆಯೊಂದು ಬಂದು ಸಾಕು ನಾಯಿ ಕೊಂದು ತಿಂದಿದೆ. ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ಶಂಕರ ಪಾಟಾಳಿಯವರ ಅಂಗಳದಲ್ಲಿ ಫೆ.4ರಂದು ರಾತ್ರಿ ಸುಮಾರು 1 ಗಂಟೆ 40 ನಿಮಿಷದಿಂದ 1 ಗಂಟೆ 42 ನಿಮಿಷದ ಒಳಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ ವೇಳೆ ಮನೆಯ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಹೊರಗೆ ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದೆ ನಂತರ […]

ಸಾಕು ನಾಯಿಯನ್ನು ಕೊಂದು ತಿಂದ ಚಿರತೆ Read More »

ಅರಂತೋಡು : ಭೀಕರ ಬೈಕ್ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಗಂಭೀರ

ಸುಳ್ಯ ತಾಲೂಕಿನ ಅರಂತೋಡು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಲೆಟ್ ಬೈಕ್ ಸ್ಕಿಡ್ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಫೆ.5ರಂದು ಮುಂಜಾನೆ ನಡೆದಿದೆ. ಗಾಯಾಳು ಮೈಸೂರು ಮೂಲದ ಪೊಲೀಸ್ ಸಿಬ್ಬಂದಿ ಎಂದು ಹೇಳಲಾಗುತ್ತಿದೆ.ಗಾಯಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅರಂತೋಡು : ಭೀಕರ ಬೈಕ್ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಗಂಭೀರ Read More »

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವು

ಪುತ್ತೂರಿನ ಮುರ ಎಂಬಲ್ಲಿ ಬೈಕ್ ಹಾಗೂ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮ್ರತಪಟ್ಟ ಬೈಕ್ ಸವಾರನನ್ನು ಚೇತನ್ ಕೆಮ್ಮಿಂಜೆ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವು Read More »

ಬೈಕ್ ಸವಾರನ ಮೇಲೆ ಮರ ಬಿದ್ದು ಗಾಯ

ಕಡಬ ತಾಲೂಕಿನ ಕೋಡಿಂಬಳ ಗ್ರಾಮದ ಪುಳಿಕುಕ್ಕು ಎಂಬಲ್ಲಿ ಭಾರೀ ಗಾತ್ರದ ಮರದ ರೆಂಬೆ ಮರಿದು ಬಿದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ ಸವಾರ ಗಾಯ ಗೊಂಡ ಘಟನೆ ಫೆ.4 ರಂದು ಸಂಜೆ ನಡೆದಿದೆ.ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೋಲೀಸರು ಆಗಮಿಸಿದ್ದಾರೆ. ಗಾಯ ಗೊಂಡ ಬೈಕ್ ಸವಾರ ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ತೆರಳಿದ್ದಾರೆ.ಕೆಲವು ಸಮಯಗಳ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಸ್ವಲ್ಪ ಮುಂದೆ ಮರವೊಂದು ಉರುಳಿ ಬಿದ್ದು ಬೈಕ್ ಸವಾರ ಒಬ್ಬರು ಮೃತ ಪಟ್ಟಿದ್ದರು.

ಬೈಕ್ ಸವಾರನ ಮೇಲೆ ಮರ ಬಿದ್ದು ಗಾಯ Read More »

ಸಂಪಾಜೆ ಪೇರಡ್ಕ ಗೂನಡ್ಕ ಉರೂಸ್ ಸಮರೋಪ, ನಮ್ಮ ಕಾಯಕದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿ – ಸಯ್ಯದ್ ಝೈನುಲ್ ಆಬಿದಿನ್ ತಂಘಳ್ ದುಗ್ಗಲಡ್ಕ

ನಾವು ಮಾಡುವ ಕೆಲಸ ಅಥವಾ ಸೇವೆಯಲ್ಲಿ ವಂಚನೆ ಮೋಸ ಇರಬಾರದು. ಪ್ರಾಮಾಣಿಕವಾಗಿರಬೇಕು, ಯಜಮಾನನಿಗೆ ಯಾವತ್ತು ಮೋಸ ಮಾಡಬಾರದು ಅವರಿಗೆ ತೃಪ್ತಿಯಾಗುವಂತಾ ಸೇವೆ ಮತ್ತು ಕಾಯಕವಾಗಿರಬೇಕೆಂದು ಬಹು| ಸಯ್ಯದ್ ಝೈನುಲ್ ಆಬಿದೀನ್ ತಂಘಳ್ ದುಗ್ಗಲಡ್ಕ ಹೇಳಿದರು. ಅವರು ಫೆ.2 ರಂದು ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕ ಇದರ ಉರೂಸ್ ಸಮಾರೋಪ ಸಮಾರಂಭದಲ್ಲಿ ದುವಾಶೀರ್ವಾಚನ ಮಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ಸ್ಥಳೀಯ ಖತೀಬರಾದ

ಸಂಪಾಜೆ ಪೇರಡ್ಕ ಗೂನಡ್ಕ ಉರೂಸ್ ಸಮರೋಪ, ನಮ್ಮ ಕಾಯಕದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿ – ಸಯ್ಯದ್ ಝೈನುಲ್ ಆಬಿದಿನ್ ತಂಘಳ್ ದುಗ್ಗಲಡ್ಕ Read More »

ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಾಟ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರ ಮೇಲೆ ಫೆ. 4ರ ಮಂಗಳವಾರ ಅನಂತಾಡಿಯಲ್ಲಿ ಗುಂಡು ಹಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಫೈರಿಂಗ್ ನಡೆಯಲು ಕಾರಣ ಏನೆಂದು ತಿಳಿದು ಬಂದಿಲ್ಲ ಚಿತ್ತರಂಜನ್ ಶೆಟ್ಟಿ ಅನಂತಾಡಿಗೆ ಯಾಕೆ ಹೋಗಿದ್ದರು ಎಂಬ ವಿಚಾರವೂ ತಿಳಿದು ಬಂದಿಲ್ಲ.ಮಿಸ್ ಫೈಯರ್ ಎಂಬ ಮಾಹಿತಿ ಇದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ಅವರೇ ಹೋಗಿ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಾಟ Read More »

ಅರಂಬೂರು : ಮಾ.15 ,16, 17 ಮತ್ತು 18 ರಂದು ವೈಭವದ  ಶ್ರೀ ವಯನಾಟ್ ಕಲವನ್ ದೈವಂಕಟ್ಟು ಮಹೋತ್ಸವ

ಅರಂತೋಡು, ಫೆ. 4 : ಮಾ.15 ,16, 17 ಮತ್ತು 18 ರಂದು   ಆಲೆಟ್ಟಿ ಗ್ರಾಮದ ಅರಂಬೂರು   ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಭಾರೀ ವೈಭವದಿಂದ ನಡೆಯಲಿದೆ ಎಂದು ಮಹೋತ್ಸವದ ಅಧ್ಯಕ್ಷರಾದ ಪಿ.ಬಿ ಸುಧಾರ ರೈ  ಹಾಗೂ ಇತರ ಪದಾಧಿಕಾರಿಗಳು ತಿಳಿಸಿದ್ದಾರೆ. ದೈವಸ್ತಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು  ಮಾತನಾಡಿದರು. ತೀಯಾ ಸಮಾಜದ ಆಡಳಿತಕ್ಕೆ ಒಳಪಡುವ ತಾಲೂಕಿನ ಏಕೈಕ ವಯನಾಟ್ ಕುಲವನ್ ದೈವಸ್ಥಾನವಾಗಿರುವ   ಅರಂಬೂರಿನಲ್ಲಿ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ, ಎಲ್ಲರ ಸಹಕಾರದಲ್ಲಿ

ಅರಂಬೂರು : ಮಾ.15 ,16, 17 ಮತ್ತು 18 ರಂದು ವೈಭವದ  ಶ್ರೀ ವಯನಾಟ್ ಕಲವನ್ ದೈವಂಕಟ್ಟು ಮಹೋತ್ಸವ Read More »

ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಹಲವು ವರ್ಷಳಿಗೊಮ್ಮೆ ನಡೆಯುವ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮುಂದಿನ ಮಾರ್ಚ್ 15,16,17 ಮತ್ತು 18 ರಂದು ನಡೆಯಲಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಫೆ.4 ರಂದು ದೈವಸ್ಥಾನದಲ್ಲಿ ನೆರವೇರಿತು.ದೈವಸ್ಥಾನದ ಕುಟುಂಬದ ಯಜಮಾನ ಹಿರಿಯರಾದ ಕುಂಞಕಣ್ಣ ಅವರು ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿ ಅಧ್ಯಕ್ಷ ಸುಧಾರ ರೈ,ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕಾರ್ಯಾಧ್ಯಕ್ಷರಾದ ಎನ್.ಎ.ರಾಮಚಂದ್ರ, ನಾರಾಯಣ ಕೇಕಡ್ಕ ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಡು, ಕುಂಞರಾಮನ್ ಶ್ರೀ

ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ Read More »

ಸರ್ವ ಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ -ಸದಾನಂದ ಮಾವಜಿ

ಪ್ರಸ್ತುತ ಕಾಲಘಟ್ಟದಲ್ಲಿ ಸರ್ವಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ ಎಂದು ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂಧ ಮಾಜಿ ಹೇಳಿದರು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸರ್ವಧರ್ಮ ಸಮ್ಮೇಳನಗಳು ನಶಿಸಿ ಹೋಗಿದೆ ಇಂದು ಇದರ ಅಗತ್ಯ ಇದೆ. ಪೇರಡ್ಕದ ಸೌಹಾರ್ಧತೆಯು ತೆಕ್ಕಿಲ್ ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದಿದೆ ಅವರ ಕುಟುಂಬದ ಕುಡಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಪೇರಡ್ಕದ ದರ್ಗಾ ಶರಿಫ್ ಕಾರ್ಣಿಕ ಇರುವ ಕ್ಷೇತ್ರ ಅದರ ಅನುಭವ ನನಗೂ ಆಗಿದೆ

ಸರ್ವ ಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ -ಸದಾನಂದ ಮಾವಜಿ Read More »

ದೇವರ ಮೇಲಿನ ಭಕ್ತಿಯಿಂದ ಜೀವನ ಪಾವನವಾಗುತ್ತದೆ: ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ

ದೇವರ ಮೇಲಿನ‌ ಭಕ್ತಿಯಿಂದ ಬದುಕು ಪಾವನವಾಗುತ್ತದೆ, ಜೀವನ ಸುಂದರ ವಾಗುತ್ತದೆ. ಮಡಿವಾಳ ಸಮಾಜ ಆತ್ಮೀಯತೆಯಿಂದ ಬಂಧುತ್ವ ಹೊಂದಿದ ಏಕಮಾತ್ರ ಸಮಾಜ ಎಂದು ಮೂಡಬಿದ್ರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಹೇಳಿದರು.ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರದ ಮನೆ ಚಾರಿಟೇಬಲ್ ಟ್ರಸ್ಟ್ ಹುಳಿಯಡ್ಕ ಇದರ ವತಿಯಿಂದ ಶ್ರೀ ನಾಗಸಾನಿಧ್ಯ ಮತ್ತು ಶ್ರೀ ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವೀರಭದ್ರ ದೇವರ ಭಂಡಾರ ಮನೆ ಗೃಹ ಪ್ರವೇಶ ಮತ್ತು ವಾರ್ಷಿಕ ಪೂಜೆಯ ಅಂಗವಾಗಿ

ದೇವರ ಮೇಲಿನ ಭಕ್ತಿಯಿಂದ ಜೀವನ ಪಾವನವಾಗುತ್ತದೆ: ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ Read More »

error: Content is protected !!
Scroll to Top