Author name: Tejas

ಆರಂತೋಡು : ಗ್ರಾಮ ಪಂಚಾಯತ್ ನ ಎನ್. ಆರ್. ಎಲ್. ಎಂ ನೂತನ ಕಟ್ಟಡಕ್ಕೆ ಸುಳ್ಯ ಶಾಸಕರಿಂದ ಗುದ್ದಲಿ ಪೂಜೆ

ಅರಂತೋಡು, ಮೇ .21 : ಆರಂತೋಡು ಗ್ರಾಮ ಪಂಚಾಯತ್ ನ ಎನ್.ಆರ್. ಎಲ್. ಎಂ. ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಕುl ಭಾಗಿರಥಿ ಮುರುಳ್ಯ ರವರು ನೆರವೇಸಿದರು.ಅವರು ಮಾತನಾಡಿ ಆರಂತೋಡು ಗ್ರಾಮ ಪಂಚಾಯತ್ ನ ಸಭಾಂಗಣಕ್ಕೆ ಅವಶ್ಯಕತೆ ಇರುವ ಪಾಕ ಶಾಲೆ ನಿರ್ಮಾಣಕ್ಕೆ ರೂ 5ಲಕ್ಷ ಅನುದಾನದ ಭರವಸೆ ಯೊಂದಿಗೆ ಆರಂತೋಡು ಗ್ರಾಮಕ್ಕೆ ಬಿಡುಗಡೆಯಾದ ಅನುದಾನಗಳ ಮಾಹಿತಿ ನೀಡಿದರು. ಅರಮನೆಗಯಾದ ಬಳಿ ಬಲ್ನಾಡ್ ಹೊಳೆಗೆ ಸೇತುವೆ ನಿರ್ಮಾಣಕ್ಕೆ 1.75ಕೋಟಿ […]

ಆರಂತೋಡು : ಗ್ರಾಮ ಪಂಚಾಯತ್ ನ ಎನ್. ಆರ್. ಎಲ್. ಎಂ ನೂತನ ಕಟ್ಟಡಕ್ಕೆ ಸುಳ್ಯ ಶಾಸಕರಿಂದ ಗುದ್ದಲಿ ಪೂಜೆ Read More »

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೇರಿದ ತುಮಕೂರಿನ ಸಿದ್ದಾರ್ಥ ಕಾಲೇಜಿನ ಮೇಲೆ ಇಡಿ ಅಧಿಕಾರಿಗಳು ದಾಳಿ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೇರಿದ ತುಮಕೂರಿನ ಸಿದ್ದಾರ್ಥ ಕಾಲೇಜಿನ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮುಂಜಾನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 5 ಕಾರುಗಳಲ್ಲಿ ಆಗಮಿಸಿದ್ದು, ಕಾಲೇಜಿನ​​ ಕಚೇರಿಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ತುಮಕೂರಿನಲ್ಲಿರುವ ಎಸ್ ಎಸ್ ಐಟಿ ಕಾಲೇಜು ಹಾಗೂ ತುಮಕೂರಿನ ಹೆಗ್ಗೆರೆ ಬಳಿಯಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೇರಿದ ತುಮಕೂರಿನ ಸಿದ್ದಾರ್ಥ ಕಾಲೇಜಿನ ಮೇಲೆ ಇಡಿ ಅಧಿಕಾರಿಗಳು ದಾಳಿ Read More »

ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಐವರು ಸಾವು

ಸ್ಕಾರ್ಪಿಯೋ ಕಂಟೇನರ್ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳ್ಳಂಬೆಳಗ್ಗೆ ನಡೆದಿದೆ.ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಭೀಕರ ಅಪಘಾತ ನಡೆದಿದೆ.ಸ್ಕಾರ್ಪಿಯೋದಲ್ಲಿದ್ದ ನಾಲ್ವರು ಹಾಗೂ ಖಾಸಗಿ ಬಸ್ನಲ್ಲಿದ್ದ ಒಬ್ಬ ಸ್ಥಳದಲ್ಲೇ ಮೃತಪಟ್ಟವರು ಎಂದು ತಿಳಿದು ಬಂದಿದೆ. ಹಲವರು ಗಾಯಗೊಂಡಿದ್ದಾರೆ.

ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಐವರು ಸಾವು Read More »

ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರು ಸೇರಿ ಮೂವರಿಂದ ಸಾಮೂಹಿಕ ಅತ್ಯಾಚಾರ

ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಗಾವಿ ಹೊರ ವಲಯದ ರೆಸಾರ್ಟ್‌ನಲ್ಲಿ ನಡೆದಿದೆ.ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾರದ ಹಿಂದೆ ಆರೋಪಿಗಳ ಪೈಕಿ ಒಬ್ಬನ ಹೆಸರಿನಲ್ಲಿ ರೆಸಾರ್ಟ್ ರೂಮ್ ಬುಕ್ ಮಾಡಲಾಗಿತ್ತು. ಬಾಲಕಿಯ ಸ್ನೇಹಿತ ಆಕೆಯನ್ನು ರೂಮ್ ಗೆ ಕರೆತಂದಿದ್ದ. ಬಳಿಕ ಮೂವರು ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.ಮನೆಗೆ ವಾಪಸ್ ಬಂದ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ತೀವ್ರ ಹೊಟ್ಟೆ ನೋವು ಎಂದಿದ್ದ

ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರು ಸೇರಿ ಮೂವರಿಂದ ಸಾಮೂಹಿಕ ಅತ್ಯಾಚಾರ Read More »

ಹುಟ್ಟೂರಿಗೆ ತಲುಪಿದ ಏರೋಸ್ಪೇಸ್ ಇಂಜಿನಿಯರ್ ಆಕಾಂಕ್ಷ ಎಸ್ ನಾಯರ್ ಶವ

ಪಂಜಾಬ್ ನಲ್ಲಿ ಧರ್ಮಸ್ಥಳ ಬೊಳಿಯಾರ್ ನಿವಾಸಿ ಸುರೇಂದ್ರ ನಾಯ‌ರ್ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಆಕಾಂಕ್ಷ ಎಸ್ ನಾಯರ್(22) ಅವರ ಶವ ಹುಟ್ಟೂರಿಗೆ ತಲುಪಿದೆ.ಪಂಜಾಬ್ ನಲ್ಲಿ ಕಾಲೇಜ್ ಕಟ್ಟಡದಿಂದ ಮೇ.17 ರಂದು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಆಕಾಂಕ್ಷ ಮೃತದೇಹ ಮೇ.21 ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್‌ ಮೂಲಕ ಧರ್ಮಸ್ಥಳದ ಬೊಳಿಯಾರ್ ಗೆ ತೆಗೆದುಕೊಂಡು ಬಂದಿದ್ದಾರೆ.

ಹುಟ್ಟೂರಿಗೆ ತಲುಪಿದ ಏರೋಸ್ಪೇಸ್ ಇಂಜಿನಿಯರ್ ಆಕಾಂಕ್ಷ ಎಸ್ ನಾಯರ್ ಶವ Read More »

ಗುತ್ತಿಗಾರು : ಕಾರು ಬೈಕ್ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರರಿಗೆ ಗಾಯ

ಸುಳ್ಯ ತಾಲೂಕಿನ‌ ಗುತ್ತಿಗಾರಿನಲ್ಲಿ ಕಾರು – ಬೈಕ್ ಅಪಘಾತ ನಡೆದು ಬೈಕ್‌ ಸವಾರನಿಗೆ ಗಾಯವಾದ ಘಟನೆ ಮಂಗಳವಾರ ಸಂಜೆ ನಡೆದಿದೆ.ಗುತ್ತಿಗಾರು ಕಡೆ ಬರುತಿದ್ದ ಹರೀಶ್ ಉಬರಡ್ಕರ ಕಾರು ಮತ್ತು ಪೆಟ್ರೋಲ್ ಬಂಕ್ ನಿಂದ ಹೊರಟು ಮೇಲಿನ ಪೇಟೆ ಕಡೆ ಹೊರಟ ದೀಪಕ್ ಚಿಲ್ಪಾರು ಎಂಬವರ ಬೈಕ್ ಪರಸ್ಪರ ಡಿಕ್ಕಿ ಹೊಡೆದಿದ್ದು ಬೈಕ್ ಸವಾರನಿಗೆ ಗಾಯವಾಗಿರುವುದಾಗಿ ವರದಿಯಾಗಿದೆ. ಬೈಕ್ ನಲ್ಲಿದ್ದ ದೀಪಕ್ ರ ಪತ್ನಿಗೂ ಅಲ್ಪ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಗುತ್ತಿಗಾರು : ಕಾರು ಬೈಕ್ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರರಿಗೆ ಗಾಯ Read More »

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸಾಧ್ಯತೆ

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮೇ.21 ರಿಂದ 23 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನೀರು ನುಗ್ಗುವ ತಗ್ಗು ಪ್ರದೇಶಗಳು, ಕೆರೆ-ನದಿ-ಸಮುದ್ರ ತೀರಗಳಿಗೆ ಮಕ್ಕಳು ತೆರಳದಂತೆ ಪೋಷಕರು ಜಾಗ್ರತೆ ವಹಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸಾಧ್ಯತೆ Read More »

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಶಾಮಿಯಾನದ ಲಾರಿಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಸವಾರ ಮೃತಪಟ್ಟ ಘಟನೆ ಮೇ.18ರಂದು ರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿ ನಡೆದಿದೆ.ಆರ್ಯಾಪು ಗ್ರಾಮದ ದೇವಸ್ಯ ನಿವಾಸಿ ಸುದೀಪ್ ಚೊಕ್ಕಾಡಿ(38ವ.)ಮೃತಪಟ್ಟವರು.ನೇರಳಕಟ್ಟೆಯಲ್ಲಿರುವ ತಂಗಿ ಮನೆಯಲ್ಲಿ ನಡೆಯಲಿದ್ದ ಅಗೇಲು ಸೇವೆ ಕಾರ್ಯಕ್ರಮಕ್ಕೆ ಹೋಗಲೆಂದು ಅವರು ದೇವಸ್ಯ ತನ್ನ ಮನೆಯಿಂದ ಹೊರಟು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಮುರದಲ್ಲಿ ಖಾಸಗಿ ಆಯುರ್ವೇದಿಕ್ ಉತ್ಪನ್ನಗಳ ಮಾರ್ಕೆಟಿಂಗ್ ಪ್ರತಿನಿsಯಾಗಿ ಕೆಲಸ ನಿರ್ವಹಿಸುತ್ತಿದ್ದ ಸುದೀಪ್ ಅವರು ತಾಯಿ ಮತ್ತು ವಿಶೇಷಚೇತನ

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು Read More »

ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ ಆತ್ಮ ಹತ್ಯೆಗೆ ಪ್ರೇಮ ವೈಪಲ್ಯ ಕಾರಣ?

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಬೊಳಿಯೂರು ಗ್ರಾಮದ ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ (22) ಅವರು ಪಂಜಾಬ್‌ನ ಫಗ್ವಾರದಲ್ಲಿರುವ ಲವಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕಟ್ಟಡದಿಂದ ಮೇ 17ರ ಶನಿವಾರ ಜಿಗಿದು ಸಂಶಯಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಪ್ರೇಮ ವೈಫಲ್ಯದಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದ್ದು, ಈ ಸಂಬಂಧ ಆಕೆ ಪ್ರೀತಿಸುತ್ತಿದ್ದಳೆನ್ನಲಾದ ಅದೇ ವಿಶ್ವವಿದ್ಯಾಲಯದ ವಿವಾಹಿತ ಪ್ರಾಧ್ಯಾಪಕನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಎಂದು

ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ ಆತ್ಮ ಹತ್ಯೆಗೆ ಪ್ರೇಮ ವೈಪಲ್ಯ ಕಾರಣ? Read More »

ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಎಸ್ ನಾಯರ್ ನಿಗೂಢ ಸಾವು

ಧರ್ಮಸ್ಥಳದ ಗ್ರಾಮದ ಬೊಳಿಯಾ‌ರ್ ನಿವಾಸಿ, ಪ್ರಸ್ತುತ ಬೆಳ್ತಂಗಡಿಯ ಲಾಯಿಲ ಗ್ರಾಮದ ಕಾಶಿಬೆಟ್ಟು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಎಸ್ ನಾಯರ್ (22) ನಿಗೂಢವಾಗಿ ಸಾವನ್ನಪ್ಪಿದ ಘಟನೆ ಪಂಜಾಬ್ ನಲ್ಲಿ ಮೇ. 17 ರಂದು ಸಂಜೆ ನಡೆದಿದೆ.ಪಂಜಾಬಿನ ಎಲ್.ಪಿ.ಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು. ಜಪಾನ್ ಗೆ ಉದ್ಯೋಗಕ್ಕೆ ಹೋಗುವವರಿದ್ದು

ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಎಸ್ ನಾಯರ್ ನಿಗೂಢ ಸಾವು Read More »

error: Content is protected !!
Scroll to Top