Author name: Tejas

ವಿದ್ಯಾರ್ಥಿನಿಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲು

ಅತೀ ದೊಡ್ಡ ಪುಷ್ಪ ರಂಗೋಲಿ ಬಿಡಿಸಿದ ವಿದ್ಯಾರ್ಥಿನಿಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಎಣಿಂಜೆ ನಿವಾಸಿ ಶೇಖ‌ರ್ ಶೆಟ್ಟಿ ಅವರ ಪುತ್ರಿ ಶ್ರದ್ಧಾ ಶೆಟ್ಟಿ ಅವರು 8 ಅಡಿ (246 ಸೆಮೀ) ವ್ಯಾಸದ ಅಳತೆಯ ವೃತ್ತಾಕಾರದ ಹೂಗಳ ರಂಗವಲ್ಲಿಯನ್ನು 1 ಗಂಟೆ 39 ನಿಮಿಷಗಳಲ್ಲಿ ಗುಲಾಬಿ, ಮಲ್ಲಿಗೆ ಮೊದಲಾದ ವಿವಿಧ ಜಾತಿಗಳ, ಕೆಂಪು,ಬಿಳಿ,ಕೇಸರಿ,ಹಳದಿ ಮೊದಲಾದ ಬಣ್ಣಗಳ ಹೂಗಳ ದಳಗಳಲ್ಲಿ ರಚಿಸಿ ದಾಖಲೆ ಮಾಡಿದ್ದಾರೆ. ಈಕೆ ಉಜಿರೆ ಎಸ್ ಡಿ […]

ವಿದ್ಯಾರ್ಥಿನಿಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲು Read More »

ತಾಯಿ ಮಗ ವಿಷ ಸೇವಿಸಿ ಮಗ ಸಾವು

ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಶಾಲಾ ಬಳಿಯ ಕುಶಾಲಪ್ಪ ದೇರಪ್ಪಜ್ಜನ ಮನೆಯಲ್ಲಿ ಅವರ ಪತ್ನಿ ಹಾಗೂ ಮಗ ವಿಷ ಸೇವಿಸಿ ಮಗ ಮೃತಪಟ್ಟ ಘಟನೆ ವರದಿಯಾಗಿದೆ.ಕುಶಾಲಪ್ಪ ರವರ ಪತ್ನಿ ಸುಲೋಚನಾ ಮತ್ತು ಮಗ ನಿತಿನ್ ಕುಮಾ‌ರ್ ಇಂದು ಇಲಿ ಪಾಷಣ ಸೇವಿಸಿದ ಘಟನೆ ನಡೆದಿದ್ದು, ಮಗ ನಿತಿನ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರು ತಂದೆ ಕುಶಾಲಪ್ಪ, ಪತ್ನಿ ದೀಕ್ಷಾರನ್ನು ಅಗಲಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ನಿತಿನ್ ಅವರಿಗೆ

ತಾಯಿ ಮಗ ವಿಷ ಸೇವಿಸಿ ಮಗ ಸಾವು Read More »

ಅಪ್ರಾಪ್ತ ಬಾಲಕಿಯ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ!

ಪುತ್ತೂರು : ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ಆಟೋ ಚಾಲಕನೊಬ್ಬ ಅತ್ಯಾಚಾರ ಎಸಗಿ, ಮತ್ತೆ ಮತ್ತೆ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿದ ಘಟನೆ ತಡವಾಗಿ ವರದಿಯಾಗಿದೆ.ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಆರೋಪಿ ಆಟೋ ಚಾಲಕನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಸಂತ್ರಸ್ತ ಬಾಲಕಿ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದಾಳೆ. 2024 ರ ಆಗಸ್ಟ್ ತಿಂಗಳಿನಲ್ಲಿ ಕಾಲೇಜಿಗೆ ರಜೆ ಇದ್ದುದರಿಂದ ಆಕೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಬಾಲಕಿಗೆ

ಅಪ್ರಾಪ್ತ ಬಾಲಕಿಯ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ! Read More »

ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

ಅರಂತೋಡು ಸಮೀಪ ಸೇತುವೆಯ ಬಳಿ ತಿರುವಿನಲ್ಲಿ ದ್ವಿಚಕ್ರವಾಹನ ಒಂದು ಯು ಟರ್ನ್ ತೆಗೆಯುವ ಸಂದರ್ಭಕಲ್ಲುಗುಂಡಿ ಕಡೆಯಿಂದ ಬರುತ್ತಿದ್ದ ಆಲ್ಟ್ ಕಾರು ಬೈಕಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಒಮ್ಮೆಲೆ ಸ್ಟೇರಿಂಗ್ ಅನ್ನು ತಿರುಗಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ತಡೆ ಬೇಲಿಗೆ ಡಿಕ್ಕಿ ಹೊಡೆದ ಘಟನೆ ಇದೀಗ ನಡೆದಿದೆ.ಕಾರು ಕಾಸರಗೋಡು ಭಾಗದ ಬಂದಿಯೋಡು ಕಡೆಯವರದಾಗಿದ್ದು ಘಟನೆಯಿಂದ ಕಾರು ಚಾಲಕನಿಗೆ ಮುಖದ ಭಾಗ ಗಾಯವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ Read More »

ಸುಳ್ಯ : ಸುಳ್ಯ ತಾಲೂಕು‌ ಗೌಡ ಮಹಿಳಾ ಘಟಕದಿಂದ ಏ.22ಕ್ಕೆ ಮಕ್ಕಳಿಗೆ ಚೆಸ್ ಸ್ಪರ್ಧೆ

ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದು, ಇದೀಗ ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳಿಗಾಗಿ ಮುಕ್ತ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಎ.22 ರಂದು ಸುಳ್ಯ ಕೊಡಿಯಾಲಬೈಲ್ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಗೌಡ ಸಂಘ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕ್ಕಲ್ಲು ತಿಳಿಸಿದ್ದಾರೆ.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಮಾಹಿತಿ ನೀಡಿದರು.ಒಂದನೇ ತರಗತಿಯಿಂದ ಹತ್ತನೆಯ ತರಗತಿ ವರೆಗಿನ ಶಾಲಾ ಮಕ್ಕಳಿಗಾಗಿ

ಸುಳ್ಯ : ಸುಳ್ಯ ತಾಲೂಕು‌ ಗೌಡ ಮಹಿಳಾ ಘಟಕದಿಂದ ಏ.22ಕ್ಕೆ ಮಕ್ಕಳಿಗೆ ಚೆಸ್ ಸ್ಪರ್ಧೆ Read More »

ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಗೋವುಗಳನ್ನು ರಕ್ಷಿಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು!

ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೆಳ್ತಂಗಡಿಯ ಕಳಿಯ ಗ್ರಾಮದ ಜಾರಿಗೆಬೈಲು ಎಂಬಲ್ಲಿ ಎ.4 ರಂದು ಬೆಳ್ಳಂಬೆಳಗ್ಗೆ ತಡೆಹಿಡಿಯಲಾಗಿದ್ದು ದನಗಳನ್ನು ರಕ್ಷಿಸಲಾಗಿದೆ ತರಕಾರಿ ಸಾಗಾಟದ ವಾಹನದಲ್ಲಿ ಹಿಂಸಾತ್ಮಕವಾಗಿ ಹಸುಗಳನ್ನು ಗೋವಧೆಗೆಂದು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ ಘಟನೆ ಸಂಭವಿಸಿದೆ.ದನ ಸಾಗಾಟದ ವಾಹನವನ್ನು ಯುವಕರು ಬೆನ್ನು ಹತ್ತಿದ್ದು ಇದನ್ನು ಗಮನಿಸಿದ ಚಾಲಕರ ವಾಹನ ಬಿಟ್ಟು ಪರಾರಿಯಾಗಿದ್ದಾನೆ, ಬೆಳ್ತಂಗಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತು

ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಗೋವುಗಳನ್ನು ರಕ್ಷಿಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು! Read More »

ಬಸ್ ಅಪಘಾತವಾಗಿ ಓರ್ವ ಸಾವು

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಅಪಘಾತವಾಗಿ ಓರ್ವ ಸಾವನ್ನಪ್ಪಿ 12 ಮಂದಿಗೆ ಗಾಯಗಳಾಗಿರುವ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ನಡೆದಿದೆ. ಏಪ್ರಿಲ್ 4 ರಂದು ಬೆಳಿಗ್ಗೆ 5 ಗಂಟೆಗೆ ಘಟನೆ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರು, ಯಡಿಯೂರು ನಿವಾಸಿ ಹರ್ಷ (24) ಎಂದು ಗುರುತಿಸಲಾಗಿದೆ. ಅವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮುಲ್ಕಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಗಾಯಗೊಂಡ 12 ಮಂದಿಯಲ್ಲಿ 11 ಜನರು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಘಟನಾ

ಬಸ್ ಅಪಘಾತವಾಗಿ ಓರ್ವ ಸಾವು Read More »

ಏ.6ರಂದು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳದಲ್ಲಿ ನಡೆಯಬೇಕಾಗಿದ್ದ ಪ್ರತಿಭಟಗೆ ತಾತ್ಕಾಲಿಕ ತಡೆ

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏ.೬ರಂದು ಧರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಬೃಹತ್ ಹಕ್ಕೊತ್ತಾಯ ಸಭೆ, ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಆರಂಭದಲ್ಲಿ ಅನುಮತಿ ನೀಡಿದ್ದರೂ, ಈ ಸಂಬಂಧ ವಾಟ್ಸಪ್ ಮೂಲಕ ರವಾನೆಯಾಗುತ್ತಿದ್ದ ಸಂದೇಶಗಳ ಗಂಭೀರತೆಯರಿತ ನ್ಯಾಯಪೀಠ ಪ್ರತಿಭಟನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.ಉದ್ದೇಶಿತ ಪ್ರತಿಭಟನೆಗೆ ಅವಕಾಶ ನೀಡದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಪೀಠ ಆರಂಭದಲ್ಲಿ, ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿತ್ತು.ಆದರೆ ಉದ್ದೇಶಿತ ಪ್ರತಿಭಟನೆಗೆ ಸಂಬಂಧಿಸಿ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದ್ದ ಕೆಲವು ಸಂದೇಶಗಳು, ಬಹುಸಂಖ್ಯೆಯಲ್ಲಿ ಜನರನ್ನು ಕರೆಸಿಕೊಂಡು ದೇವಸ್ಥಾನ ಪ್ರವೇಶಿಸುವ

ಏ.6ರಂದು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳದಲ್ಲಿ ನಡೆಯಬೇಕಾಗಿದ್ದ ಪ್ರತಿಭಟಗೆ ತಾತ್ಕಾಲಿಕ ತಡೆ Read More »

ಆಯುರ್ವೇದ ವೈದಕೀಯ ಸ್ನಾತಕೋತ್ತರ ಪದವಿ ಪಲಿತಾಂಶ ಪ್ರಕಟ, ಕೆವಿಜಿ ಕಾಲೇಜಿಗೆ ಶೇಕಡ 100 ಫಲಿತಾಂಶದ ದಾಖಲು

ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ ಬೆಂಗಳೂರು ಮಾರ್ಚ್ 2025 ರಲ್ಲಿ ನಡೆಸಿದ ಅಂತಿಮ ವರ್ಷದ ಸ್ನಾತಕೋತರ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆವಿಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ 02 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 01 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.ಅಂತಿಮ ವರ್ಷದ ಸ್ನಾತಕೋತ್ತರ ವಿಭಾಗದಲ್ಲಿ 18 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಡಾ. ಧನ್ಯಶ್ರೀ ಯು. ಬಿ. ಹಾಗೂ ಡಾ. ಪ್ರಿಯ ಪಿ. ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು

ಆಯುರ್ವೇದ ವೈದಕೀಯ ಸ್ನಾತಕೋತ್ತರ ಪದವಿ ಪಲಿತಾಂಶ ಪ್ರಕಟ, ಕೆವಿಜಿ ಕಾಲೇಜಿಗೆ ಶೇಕಡ 100 ಫಲಿತಾಂಶದ ದಾಖಲು Read More »

ಪತ್ನಿಯನ್ನು ಕೊಂದ ಆರೋಪದಡಿ ಪತ್ನಿಗೆ ಎರಡು ವರ್ಷ ಶಿಕ್ಷೆ,ಐದು ವರ್ಷದ ಬಳಿಕ ಲೌವರ್ ಜತೆ ಪತ್ನಿ ಪ್ರತ್ಯಕ್ಷ !

ಮೈಸೂರು: ಪೊಲೀಸರು ಮಾಡಿದ ತಪ್ಪಿನಿಂದಾಗಿ ತಪ್ಪೆ ಮಾಡದ ವ್ಯಕ್ತಿಯೊಬ್ಬರು ಪತ್ನಿಯ ಹತ್ಯೆ ಮಾಡಿದ ಆರೋಪಕೊಳಗಾಗಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ.ಮೃತಪಟ್ಟಿದ್ದಾಳೆಂದು ಅಂದುಕೊಂಡಿದ್ದ ಮಹಿಳೆ ಮಡಿಕೇರಿಯಲ್ಲಿ ತನ್ನ ಪ್ರಿಯಕರನೊಂದಿಗೆ ಪ್ರತ್ಯಕ್ಷವಾಗಿದ್ದು, ಪೊಲೀಸ್‌ ಇಲಾಖೆ ತಲೆ ತಗ್ಗಿಸುವಂತಾಗಿದೆ.ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದ ಮಲ್ಲಿಗೆ ನಾಪತ್ತೆಯಾಗಿರುವ ಬಗ್ಗೆ ಪತಿ ಸುರೇಶ್ ಕುಶಾಲನಗರ ಠಾಣೆಗೆ 2020ರ ನವೆಂಬರ್‌ನಲ್ಲಿ ದೂರು ನೀಡಿದ್ದರು. ಇದೇ ವೇಳೆ ಮೈಸೂರು ಜಿಲ್ಲೆಯ ಬೆಟ್ಟದಪುರ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು.ಬೆಟ್ಟದಪುರ

ಪತ್ನಿಯನ್ನು ಕೊಂದ ಆರೋಪದಡಿ ಪತ್ನಿಗೆ ಎರಡು ವರ್ಷ ಶಿಕ್ಷೆ,ಐದು ವರ್ಷದ ಬಳಿಕ ಲೌವರ್ ಜತೆ ಪತ್ನಿ ಪ್ರತ್ಯಕ್ಷ ! Read More »

error: Content is protected !!
Scroll to Top