Author name: Tejas

ರಸ್ತೆಯಲ್ಲಿ ಮತ್ತೊಂದು ಹೆಣ್ಣು ಮಗು ಪತ್ತೆ!

ದ.ಕ ಜಿಲ್ಲೆಯಲ್ಲಿ ಕಾಡಿನಲ್ಲಿ ನಾಲ್ಕು ತಿಂಗಳ ಮಗುವೊಂದು ಪತ್ತೆಯಾದ ಕೆಲವೇ ದಿನಗಳಲ್ಲಿ ಕೂಡೋಳುಕೆರೆ -ಮುಂಡೋಟ್ಟು ರಸ್ತೆಯಲ್ಲಿ ಅಂದಾಜು 3 ತಿಂಗಳ ಹೆಣ್ಣು ಮಗು ಪತ್ತೆಯಾಗಿದ್ದು ಪುತ್ತೂರಿನ ನೆಲ್ಲಿಕಟ್ಟೆ, ಕೇರ್ ಆಫ್ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ಮಕ್ಕಳ ದತ್ತು ಕೇಂದ್ರದಲ್ಲಿ ದಾಖಲಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 1 ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ, 0824-2440004 ಸಂಪರ್ಕಿಸುವುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಇಂದು […]

ರಸ್ತೆಯಲ್ಲಿ ಮತ್ತೊಂದು ಹೆಣ್ಣು ಮಗು ಪತ್ತೆ! Read More »

ಪೆರಾಜೆ : ಶ್ರದ್ಧಾ ಭಕ್ತಿಯಿಂದ ನಡೆದ ಭಗವತಿ ದೊಡ್ಡ ಮುಡಿ ಉತ್ಸವ

ಪೆರಾಜೆ ಶ್ರೀ ಶಾಸ್ತಾವು ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಶ್ರೀ ಭಗವತಿ ದೊಡ್ಡಮುಡಿ ಏ.1ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಸಹಸ್ರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು. ಕ್ಷೇತ್ರದ ಆಡಳಿತ ಮಂಡಳಿಯವರು,ಸಮಿತಿ ಸದಸ್ಯರು, ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು.

ಪೆರಾಜೆ : ಶ್ರದ್ಧಾ ಭಕ್ತಿಯಿಂದ ನಡೆದ ಭಗವತಿ ದೊಡ್ಡ ಮುಡಿ ಉತ್ಸವ Read More »

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವದಿ ಜಾತ್ರೋತ್ಸವ ಏ.13ರಿಂದ ಆರಂಭಗೊಳ್ಳಲಿದ್ದುಏಪ್ರಿಲ್ 1ರಂದು ಬೆಳಿಗ್ಗೆ 9 ಗಂಟೆಗೆ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.ಈ ಸಂದರ್ಭಗಳಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ವ್ಯವಸ್ಥಾಪನಾ ಸಮಿತಿಸದಸ್ಯರಾದ ತೀರ್ಥರಾಮ ಪರ್ನೋಜಿ,ಬಾಲಕೃಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ,ವಸಂತ ಪೆಲ್ತಡ್ಕ,ಮಾಲತಿ ಬೋಜಪ್ಪ,ಚಂಚಲಾಕ್ಷ್ಮಿನಾಗೇಂದ್ರ,ಮಾಜಿ ಸದಸ್ಯರಾದ

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್‌ಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ್: ಪರಮಾಣು ಒಪ್ಪಂದಕ್ಕೆ  ಸಹಿ ಹಾಕದಿದ್ದರೆ ಮತ್ತು ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದ ಜೊತೆ ಮಾತುಕತೆಗೆ ಒಪ್ಪದಿದ್ದರೆ ಇರಾನ್‌ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಇಂದು ಬೆದರಿಕೆ ಹಾಕಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಯುಎಸ್ ಮತ್ತು ಇರಾನಿನ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ದೃಢಪಡಿಸಿದರು.ಈ ಬಗ್ಗೆ ಅಂತಿಮ ಎಚ್ಚರಿಕೆಯ ಸಂದೇಶ ರವಾನಿಸಿದ ಟ್ರಂಪ್, “ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ಬಾಂಬ್ ದಾಳಿ ನಡೆಸಬೇಕಾಗುತ್ತದೆ. ಅವರು ಹಿಂದೆಂದೂ

ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್‌ಗೆ ಟ್ರಂಪ್ ಬೆದರಿಕೆ Read More »

ಮಾದಕ ದ್ರವ್ಯ ಸೇವನೆ ಮಾಡಿದ ಆರೋಪಿಯ ಬಂಧನ

ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಯೊಬ್ಬನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು ನಿವಾಸಿ ನಿಝಾಮುದ್ದೀನ್ (27ವ.) ಬಂಧಿತ ಆರೋಪಿ.ಮಾ.31ರಂದು ಬೆಳಿಗ್ಗೆ 9 ಗಂಟೆಗೆ ಉಪ್ಪಿನಂಗಡಿ ಠಾಣೆ ಪಿಎಸ್‌ಐ ಅವಿನಾಶ್‌ರವರು ಸಿಬ್ಬಂದಿಗಳೊಂದಿಗೆ ರಂಜಾನ್ ಹಬ್ಬದ ಪ್ರಯುಕ್ತ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉಪ್ಪಿನಂಗಡಿ ಜಂಕ್ಷನ್‌ನಲ್ಲಿರುವ ಫೈ ಓವರ್ ಬಳಿ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಅಮಲು ಸೇವನೆ ಮಾಡಿ ನಶೆಯಲ್ಲಿದ್ದವರಂತೆ ಮಾತನಾಡುತ್ತಾ ಅನುಚಿತವಾಗಿ ವರ್ತಿಸುತ್ತಿರುವುದನ್ನು ಕಂಡು ವಿಚಾರಿಸಿದಾಗ ಸಮರ್ಪಕ ಉತ್ತರವನ್ನು ನೀಡಲು

ಮಾದಕ ದ್ರವ್ಯ ಸೇವನೆ ಮಾಡಿದ ಆರೋಪಿಯ ಬಂಧನ Read More »

ನಾಳೆ (ಏ.1) ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವದಿ ಜಾತ್ರೋತ್ಸವ ಏ.13ರಿಂದ ಆರಂಭಗೊಳ್ಳಲಿದೆ.ನಾಳೆ (ಏ.1) ಬೆಳಿಗ್ಗೆ 9 ಗಂಟೆಗೆ ಗೊನೆ ಮುಹೂರ್ತ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಸೀಮೆಯ ಹೆಚ್ಚಿನ ಭಕ್ತರು ಭಾಗವಹಿಸಬೇಕೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆ (ಏ.1) ತೊಡಿಕಾನ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಸುಳ್ಯದಿಂದ ಹೋಗುತ್ತಿದ್ದಾಗ ಪ್ರಸಿದ್ದ ಭಾಗವತ ಸತೀಶ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವು

ಬೆಳ್ತಂಗಡಿ : ಪ್ರಸಿದ್ಧ ಭಾಗವತರಾದ ಸತೀಶ್ ಆಚಾರ್ಯ(40 ವ) ಇಂದು ಮುಂಜಾನೆ 4 ಗಂಟೆಗೆ ಅಂಡಿಂಜೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ವರದಿಯಾಗಿದೆ.ಅವರು ಮಂಗಳದೇವಿ ಮೇಳದಲ್ಲಿ ಭಾಗತರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರು.ಸತೀಶ್‌ ಆಚಾರ್ಯ ಅವರು ಸುಳ್ಯದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಇಂದು ಮುಂಜಾನೆ 4 ಗಂಟೆಗೆ ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಅಂಡಿಂಜೆ ಸಮೀಪ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಇವರು ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಈ ದುರ್ಘಟನೆ

ಸುಳ್ಯದಿಂದ ಹೋಗುತ್ತಿದ್ದಾಗ ಪ್ರಸಿದ್ದ ಭಾಗವತ ಸತೀಶ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವು Read More »

ಅರಂತೋಡು : ಸಂಭ್ರಮದ ಈದುಲ್ ಫಿತರ್ ಆಚರಣೆ

ಅರಂತೋಡು ನಲ್ಲಿ ಈದುಲ್ ಫಿತರ್ ಹಬ್ಬವನ್ನು ಮುಸ್ಲಿಂ ಭಾಂಧವರು ಬಹಳ ಸಂಭ್ರಮದಿಂದ ಆಚರಿಸಲಾಯಿತು, ಈದ್ ನಮಾಜ್ ನೇತ್ರತ್ವ ವನ್ನು ಖತಿಬ್ ಬಹು, ಇಸ್ಮಾಯಿಲ್ ಪೈಝಿ ಗಟ್ಟಮನೆ ನಿರ್ವಹಿಸಿ, ಈದ್ ಸಂದೇಶ ನೀಡಿದರು, ಜಮಾತ್ ಪದಾಧಿಕಾರಿಗಳು, ಅದೀನ ಸಂಘ ಸಂಸ್ಥೆ ಪದಾಧಿಕಾರಿಗಳು, ಜಮಾತ್ ನ ಸರ್ವ ಸದಸ್ಯರು ಪಾಲ್ಗೊಂಡರು

ಅರಂತೋಡು : ಸಂಭ್ರಮದ ಈದುಲ್ ಫಿತರ್ ಆಚರಣೆ Read More »

ಅರೆಭಾಷೆಯನ್ನು ವಿಸ್ತರಿಸಲು ವಿನೂತನ ಕಾರ್ಯಕ್ರಮ: ಸದಾನಂದ ಮಾವಂಜಿ

ಅರೆಭಾಷೆ ಇಂದು ಜಾತಿ, ಗಡಿ ಮೀರಿ ಬೆಳೆಯುತ್ತಿರುವುದು ಸಂತೋಷದ ವಿಚಾರವಾಗಿದೆ.ಇದನ್ನು ಇನ್ನಷ್ಟು ವಿಸ್ತರಿಸಲು ಗಡಿನಾಡ ಉತ್ಸವ ಸೇರಿದಂತೆ ಇನ್ನಿತರ ವಿನೂತನ ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುವುದು” ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಹೇಳಿದರು. ಅವರು ಮಾ.30ರಂದು ಆಲೆಟ್ಟಿ ಗ್ರಾಮದ ಕುಡೆಕಲ್ಲು ಐನ್ ಮನೆ ವಠಾರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ನಡೆದ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಐನ್ ಮನೆ ಎನ್ನುವುದು ಎಲ್ಲರನ್ನು

ಅರೆಭಾಷೆಯನ್ನು ವಿಸ್ತರಿಸಲು ವಿನೂತನ ಕಾರ್ಯಕ್ರಮ: ಸದಾನಂದ ಮಾವಂಜಿ Read More »

ಅರಂತೋಡು ಕುಲ್ಚಾರ್ ಸೇತುವೆಗೆ ಕಾರು ಡಿಕ್ಕಿ ಹೊಡೆದು ಜಖಂ!ಮೂವರಿಗೆ ಗಾಯ

ಸುಳ್ಯ ತಾಲೂಕಿ ಅರಂತೋಡು ಕುಲ್ಚಾರ್ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದ ವೇಳೆ ಸೇತುವೆಯ ತಡೆಗೋಡೆಗೆ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ನಡೆದಿದೆ‌. ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾರಿನ ಮುಂಬಾಗ ಜಖಂಗೊಂಡಿದೆ.

ಅರಂತೋಡು ಕುಲ್ಚಾರ್ ಸೇತುವೆಗೆ ಕಾರು ಡಿಕ್ಕಿ ಹೊಡೆದು ಜಖಂ!ಮೂವರಿಗೆ ಗಾಯ Read More »

error: Content is protected !!
Scroll to Top