Author name: Tejas

ಶಾಸಕರಿಂದ ಶಾಲಾ ನೂತನ‌ ಕೊಠಡಿಗೆ ಗುದ್ದಲಿ ಪೂಜೆ

ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಕಂದ್ರಪ್ಪಾಡಿ ಇದರ ನೂತನ ಶಾಲಾ ಕೊಠಡಿಯ ಗುದ್ದಲಿ ಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನ.18ರಂದು ನೆರವೇರಿಸಿದರು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಂಬೆ, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ನಾಯಕರು,ಕಾರ್ಯಕರ್ತರು, ಶಾಲಾಮಕ್ಕಳು ಉಪಸ್ಥಿತರಿದ್ದರು ‌

ಶಾಸಕರಿಂದ ಶಾಲಾ ನೂತನ‌ ಕೊಠಡಿಗೆ ಗುದ್ದಲಿ ಪೂಜೆ Read More »

ಒಕ್ಕಲಿಗ ಗೌಡ ಸೇವಾವಾಹಿನಿ ಲೋಕಾರ್ಪಣೆ ಹಾಗೂ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ

ವಿಟ್ಲ: ಸಮಾನಮನಸ್ಕ ಒಕ್ಕಲಿಗ ಗೌಡ ಸಮಾಜದ ಯುವ ಮನಸ್ಸುಗಳು ಒಂದಾಗಿ ಸೇವಾ ಚಟುವಟಿಕೆ ಪ್ರಾರಂಭಿಸಿರುವುದು ಸದ್ವಿಚಾರ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಎಲ್ಲಾ ವಿಧದಲ್ಲಿ ಸ್ಪಂದಿಸುವ ಗುಣವನ್ನು ನಾವು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಡಾ: ಧರ್ಮಪಾಲನಾಥ ಸ್ವಾಮೀಜಿ ಕರೆ ನೀಡಿದರು.ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ನ ತೀರ್ಥರಾಮಗೌಡ ಪಾಂಬಾರು ಅವರಿಗೆ ಮನೆನಿರ್ಮಾಣಕ್ಕೆ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ ಮತ್ತು ನೂತನ ದ.ಕ.ಒಕ್ಕಲಿಗ ಗೌಡ ಸೇವಾವಾಹಿನಿ ಟ್ರಸ್ಟ್ ಲೋಕಾರ್ಪಣೆ ಸಮಾರಂಭದಲ್ಲಿ

ಒಕ್ಕಲಿಗ ಗೌಡ ಸೇವಾವಾಹಿನಿ ಲೋಕಾರ್ಪಣೆ ಹಾಗೂ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ Read More »

ಪರಿವಾರಕಾನದಲ್ಲಿ ಸೀಫುಡ್ ಸಮುದ್ರ ಫಿಶ್ ಮಾರ್ಕೇಟ್ ಶುಭಾರಂಭ : ಭರ್ಜರಿ ವ್ಯಾಪಾರ

ಸುಳ್ಯ: ಸುಳ್ಯ ಪರಿವಾರಕಾನದ ಉಡುಪಿ ಗಾರ್ಡನ್ ಹೊಟೇಲ್ ಸಮೀಪ ‘ಸೀಫುಡ್ ಸಮುದ್ರ ಫಿಶ್ ಮಾರ್ಕೇಟ್ ಶುಭಾರಂಭಗೊಂಡಿದ್ದು ಭಾರೀ ವ್ಯಾಪಾರ ನಡೆಯುತ್ತಿದೆ. ಸಯ್ಯದ್ ಝನುಲ್ ಅಬಿದಿನ್ ತಂಜಳ್ ಜಯನಗರ ದುವಾ ನೆರವೇರಿಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್, ಮೊಗರ್ಪಣೆ ಜುಮಾ ಮಸ್ಟಿದ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಫಿಶ್ ಮಾರ್ಕೇಟ್‌ನ ಮಾಲಕರಾದ ಹಮೀದ್‌, ಶಾಕಿಫ್‌ ಉಪಸ್ಥಿತರಿದ್ದರು.ಮೀನು ಮಾರುಕಟ್ಟೆಯಲ್ಲಿ ಅಂಜಲ್,ಭೂತಾಯಿ,ಬಂಗುಡೆ,ಬೆರ್ಕೆ,ಮದ್ಮಲ್,ಮಾಸಿ,ಸೀಡಿ,ಎಟ್ಟಿ ಸೇರಿದಂತೆ ಉತ್ತಮವಾದ ಎಲ್ಲ ಬಗೆಯ ಮೀನುಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತಿದೆ.ಮೀನು ಪ್ರಿಯರಿಗೆ ಇದೊಂದು ಸಿಹಿ ಸುದ್ದಿಯಾಗಿದೆ.ಸುಮಾರು 25

ಪರಿವಾರಕಾನದಲ್ಲಿ ಸೀಫುಡ್ ಸಮುದ್ರ ಫಿಶ್ ಮಾರ್ಕೇಟ್ ಶುಭಾರಂಭ : ಭರ್ಜರಿ ವ್ಯಾಪಾರ Read More »

ಶಿವಪ್ಪ ಸಾವು ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸಾಲ್ಮರ ಕೆರೆಮೂಲೆ ನಿವಾಸಿ ಶಿವಪ್ಪ ಅವರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೆಲಸ ಮಾಡಿಸಿಕೊಂಡ ಮಾಲಕರ ಸಹಿತ ಮೂವರ ವಿರುದ್ದ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಮೃತ ಶಿವಪ್ಪ ಅವರ ಅಳಿಯ ಶಶಿ ಕೆರೆಮೂಲೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ನ.16ರಂದು ಬೆಳಿಗ್ಗೆ ತಾವೋ ವುಡ್ ಇಂಡಸ್ಟ್ರೀಸ್ ನ ಮಾಲೀಕರಾದ ಹೆನ್ರಿ ತಾವೋ ಅವರು ಶಿವಪ್ಪ ಅವರನ್ನು ಮರದ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು ಬಳಿಕ ಅವರನ್ನು

ಶಿವಪ್ಪ ಸಾವು ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು Read More »

ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಪುತ್ತೂರು ತಾಲೂಕಿನ ಕಲ್ಲಾರೆಯ ಕಟ್ಟಡದ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮತ್ ನಿಶ್ಚಾ (17) ಅವರು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಅವರು ಪುತ್ತೂರಿನ ಕಮ್ಯೂನಿಟಿ ಸೆಂಟರ್‌ನ ಸ್ಥಾಪಕ ಹನೀಫ್ ಪುತ್ತೂರು ಅವರ ಪುತ್ರಿ. ಕಲ್ಲಾರೆಯ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದ ಅವರು ಮೂರು ದಿನಗಳ ಹಿಂದೆ ಮನೆಯ ಮಹಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು

ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು Read More »

ಸಿಡಿಲು ಬಡಿದು ಬಾಲಕ ಸಾವು

ಪುತ್ತೂರು : ಸಿಡಿಲು ಬಡಿದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ.ಕೆದಿಲ ಪೇರಮುಗೇರು ನಿವಾಸಿ ಶ್ರೀ ರಾಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸುಬೋದ್ ಸಾವನ್ನಪ್ಪಿದ ಬಾಲಕ.ಆತನಿಗೆ 13 ವರ್ಷ ಪ್ರಾಯವಾಗಿತ್ತು.ಭಾನುವಾರ ಸಂಜೆ ಬಾರಿ ಗುಡುಗು ಸಿಡಿಲು ಸಹಿತ ಮಳೆಯಾಗಿತ್ತು ಈ ಸಂದರ್ಭ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ್ದಾನೆ.ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದ ಆತನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದರು ತಿಳಿಸಿದರು.ಸುಭೋದ್ ಅವರು ಮನೆಯಂಗಳದಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ನಡೆದಿದೆ

ಸಿಡಿಲು ಬಡಿದು ಬಾಲಕ ಸಾವು Read More »

ಭಜನೆ ಇದ್ದಲ್ಲಿ ವಿಭಜನೆ ಇಲ್ಲ :ರಾಜಶೇಖರಾನಂದ ಸ್ವಾಮೀಜಿ

ಹಿಂದೂ ಸಮಾಜವನ್ನು ಒಗ್ಗೂಡಿಸಲು ಭಜನೆಯೊಂದೆ ಅಸ್ತ್ರ.ಭಜನೆ ಇದ್ದಲಿ ವಿಭಜನೆ ಇಲ್ಲ ಭಜನೋತ್ಸವದಂತಹ ಕಾರ್ಯಕ್ರಮಗಳು ಧರ್ಮದ ಜಾಗೃತಿ ಮಾಡುತ್ತವೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಯವರು ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಸುಳ್ಯ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಭಜನೋತ್ಸವ ಸಮಿತಿ ಸಂಪಾಜೆ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಭಜನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಅವರು ದೀಪ

ಭಜನೆ ಇದ್ದಲ್ಲಿ ವಿಭಜನೆ ಇಲ್ಲ :ರಾಜಶೇಖರಾನಂದ ಸ್ವಾಮೀಜಿ Read More »

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳನ್ನು ತಂದು ಇಳಿಸುವಲ್ಲಿ ಕಾರು ಪಾರ್ಕ್‌ ಮಾಡಿದ್ದ ವೈದ್ಯರು !ಆಂಬ್ಯುಲೆನ್ಸ್ ನಲ್ಲಿ ಕರೆ ತಂದ ರೋಗಿಯನ್ನು ಆಸ್ಪತ್ರೆಯ ಎದುರು ಇಳಿಸಲು ಜಾಗವಿಲ್ಲದೇ ಸಮಸ್ಯೆಗೊಳಗಾದ ಚಾಲಕ

ಇಂದು ಸಂಜೆ ಕಲ್ಲುಗುಂಡಿ ಸಮೀಪ ವಾಹನ ಅಪಘಾತವಾಗಿದ್ದು ಅದರಲ್ಲಿ ಓರ್ವ ಗಾಯಾಳುವನ್ನು ಆಂಬುಲೆನ್ಸ್ ನಲ್ಲಿ ಸುಳ್ಯ ತಾಲೂಕು ಆಸ್ಪತ್ರೆಗೆ ಕರೆ ತಂದಾಗ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗ ಇರುವ ಜಾಗದಲ್ಲಿ ವೈದ್ಯರೊಬ್ಬರ ಕಾರು ನಿಲ್ಲಿಸಿದ್ದು ಗಾಯಳುವನ್ನು ಇಳಿಸಲು ಜಾಗವಿಲ್ಲದ ಪರಿಸ್ಥಿತಿ ಉಂಟಾಯಿತು.ಈ ವೇಳೆ ಕಾರನ್ನು ತೆಗೆಯಲು ಆಂಬುಲೆನ್ಸ್ ಚಾಲಕ ಹೇಳಿದರೂ ಕಾರು ತೆಗೆಯದೆ ವೈದ್ಯರು ಸಿಟ್ಟುಗೊಂಡರು.ಬಳಿಕ ಆಂಬುಲೆನ್ಸ್‌ ಚಾಲಕ ಮತ್ತು ವೈದ್ಯರ ನಡುವೆ ಅಲ್ಪ ಸ್ವಲ್ಪ ಮಾತಿಗೆ ಮಾತು ಬೆಳೆಯಿತು. ಬಳಿಕ ಕಾರಿನಳಿನಲ್ಲಿದ್ದ ಗಾಯಳುವನ್ನು ಹೊರಗೆ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳನ್ನು ತಂದು ಇಳಿಸುವಲ್ಲಿ ಕಾರು ಪಾರ್ಕ್‌ ಮಾಡಿದ್ದ ವೈದ್ಯರು !ಆಂಬ್ಯುಲೆನ್ಸ್ ನಲ್ಲಿ ಕರೆ ತಂದ ರೋಗಿಯನ್ನು ಆಸ್ಪತ್ರೆಯ ಎದುರು ಇಳಿಸಲು ಜಾಗವಿಲ್ಲದೇ ಸಮಸ್ಯೆಗೊಳಗಾದ ಚಾಲಕ Read More »

ನೆಲ್ಯಾಡಿ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕುಂಬ್ರ ನಿವಾಸಿ ಸಾವು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರುಮೃತಪಟ್ಟ ಘಟನೆ ವರದಿಯಾಗಿದೆ.ಮ್ರತ ವ್ಯಕ್ತಿ ಕುಂಬ್ರ ನಿವಾಸಿ ಎಂದು ಹೇಳಲಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ಲಭಿಸಿಲ್ಲ .ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನೆಲ್ಯಾಡಿ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕುಂಬ್ರ ನಿವಾಸಿ ಸಾವು Read More »

ಕಲ್ಲುಗುಂಡಿಯಲ್ಲಿ ಕಾರು ಟಾಟಾ ಏಸ್ ಭೀಕರ ಅಪಘಾತ

ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಬಂಗ್ಲಗುಂಡ್ಡೆ ಬಳಿಯಲ್ಲಿ ಕಾರಿಗೆ ಡಿಕ್ಕಿಯಾಗಿ ಟಾಟಾ ಏಸ್ ವಾಹನ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ಪ್ರಯಾಣಿಕರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಲ್ಲುಗುಂಡಿಯಲ್ಲಿ ಕಾರು ಟಾಟಾ ಏಸ್ ಭೀಕರ ಅಪಘಾತ Read More »

error: Content is protected !!
Scroll to Top