Author name: Tejas

ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್

ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್ಬರೋಬ್ಬರಿ 9 ತಿಂಗಳ ಬಳಿಕ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ ಮತ್ತು ಬುಚ್ ವಿಲ್ಲೋರ್ ಇಂದು ಭೂಮಿಯತ್ತ ಹೊರಟಿದ್ದಾರೆ. ಸ್ಪೇಸ್‌ಎಕ್ಸ್ ಸಂಸ್ಥೆಯ ಸಂಸ್ಥಾಪಕ ಎಲೋನ್ ಮಸ್ಕರ್, ‘ಸ್ಪೇಸ್‌ಎಕ್ಸ್‌ ಡ್ರಾಗನ್‌ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕ್ ಆಗಿದೆ’ ಎಂದು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಕ್ರೂ-10 ಸ್ಪೇಸ್‌ಎಕ್ಸ್‌ ಕ್ರೂ ಡ್ರಾಗನ್ ಕ್ಯಾಪ್ಸುಲ್ ಐಎಸ್‌ಎಸ್‌ಗೆ ತಲುಪಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತೀಯ ಕಾಲಮಾನ ಬುಧವಾರ (ಮಾ. 19) ಬೆಳಗ್ಗೆ 3.27ಕ್ಕೆ ಭೂಮಿಗೆ ಕಾಲಿಡಲಿದ್ದಾರೆ.

ಭೂಮಿಗೆ ಹತ್ತಿರವಾಗುತ್ತಿರೋ ಸುನೀತಾ ವಿಲಿಯಮ್ಸ್ Read More »

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವರದಿಯಾಗಿದೆ.ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ಲಿಂಗಪ್ಪ ನಾಯ್ಕ ರವರ ಪತ್ನಿ ರೇವತಿ ಎಂಬವರೇ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಮಹಿಳೆ.ವಿಷ ಸೇವಿಸಿದ ರೇವತಿಯವರನ್ನು ಮನೆಯವರು ಮತ್ತು ಸ್ಥಳೀಯರು ಸೇರಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.ಮೃತರು ಪತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ Read More »

ಕಾಲೇಜು ಹುಡುಗಿಯರಿಗೆ ಕಿರುಕುಳ ನೀಡಿದ ಯುವಕನಿಗೆ ಊರವರಿಂದ ಗೂಸ

ಪುತ್ತೂರು ನಗರದ ಕಲ್ಲಿಮಾರು ಎಂಬಲ್ಲಿದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಉಪಟಳ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಗೂಸ ನೀಡಿದ ಘಟನೆ ಮಾ.18 ರಂದು ಸಂಜೆ ವರದಿಯಾಗಿದೆ.ಹುಡುಗಿಯರಿಗೆ ಕಿರುಕುಳ ನೀಡಿದ ಗದಗ ಮೂಲದ ಲಿಂಗಪ್ಪ ಎಂಬವನನ್ನು ಊರವರೇ ಹಿಡಿದು ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾಲೇಜು ಹುಡುಗಿಯರಿಗೆ ಕಿರುಕುಳ ನೀಡಿದ ಯುವಕನಿಗೆ ಊರವರಿಂದ ಗೂಸ Read More »

ಬೆಳ್ಳಾರೆಯ ಖ್ಯಾತ ಉದ್ಯಮಿ ನಿಧನ

ಬೆಳ್ಳಾರೆಯ ನೆಟ್ಟಾರಿನಲ್ಲಿರುವ ಅರ್ನಾಡಿ ರೈಸ್ ಮಿಲ್ ನ ಮಾಲಕರಾದ ಸದಾನಂದ ಭಟ್( 72 ವರ್ಷ)ಅರ್ನಾಡಿ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಾ. 17ರಂದು ನಿಧನರಾದರು. 1983 ರಲ್ಲಿ ರೈಸ್ ಮಿಲ್ಲನ್ನು ಸ್ಥಾಪಿಸುವ ಮೂಲಕ ಭತ್ತ ಬೆಳೆಯುವ ರೈತರಿಗೆ ಪಾಲಿಗೆ ವರದಾನವಾದರು. ಭತ್ತದೊಂದಿಗೆ, ತೆಂಗಿನ ಎಣ್ಣೆ, ಸಾಂಬಾರ ಪದಾರ್ಥಗಳನ್ನು ಕನಿಷ್ಠ ದರದಲ್ಲಿ ಪುಡಿ ಮಾಡಿ ಕೊಡುವುದು ಇತ್ಯಾದಿ ಮಾಡುತ್ತಿದ್ದರು. ಇತ್ತೀಚಿಗೆ ಮಿಲ್ಲನ್ನು ನಡೆಸಲು ಲೀಸ್ ನಲ್ಲಿ ಮನೋಹರ ಗಾಣಿಗರಿಗೆ ನೀಡಿ ತಮ್ಮ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್

ಬೆಳ್ಳಾರೆಯ ಖ್ಯಾತ ಉದ್ಯಮಿ ನಿಧನ Read More »

ಅಪಘಾತದಲ್ಲಿ ಯುವ ವಕೀಲ ನಿಧನ,ಅಂಗಾಂಗ ದಾನ

ಕಳೆದ ವಾರ ಬಿ.ಸಿ.ರೋಡಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಥಮ್ ಬಂಗೇರ (27) ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಪ್ರಥಮ್ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬ ಮಾನವೀಯತೆ ಮೆರೆದಿದೆ.ಮೃತರ ಎರಡು ಕಣ್ಣು, ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ

ಅಪಘಾತದಲ್ಲಿ ಯುವ ವಕೀಲ ನಿಧನ,ಅಂಗಾಂಗ ದಾನ Read More »

ಅರಂಬೂರು : ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ದೈವಂಕಟ್ಟು ಮಹೋತ್ಸವ

ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಅಂಗವಾಗಿ ಮಾ.16ರಂದು ಶ್ರೀ ವಿಷ್ಣುಮೂರ್ತಿ ದೈವ,ಶ್ರೀ ಚಾಮುಂಡಿಯಮ್ಮ ಶ್ರೀ ಗುಳಿಗ ದೈವದ ಕೋಲ ನಡೆಯಿತು.ಸಂಜೆ ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಹಪರಿವಾರ ದೈವಗಳಿಗೆ ಕೂಡಲಾಯಿತು.ಮಾ.17ರಂದು ಶ್ರೀ ಕಾರ್ನರ್ ದೈವದ ವೆಳ್ಳಾಟಂ,ಕೊರಚ್ಚನ್ ದೈವದ ವೆಳ್ಳಾಟಂ,ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್ ನಡೆಯಿತು.ನಂತರ ಶ್ರೀ ವಿಷ್ಣುಮೂರ್ತಿ ದೈವಕ್ಕೆ ಕೂಡಲಾಯಿತು.ತದನಂತರ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಿತು.ಕರ್ನಾಟಕ

ಅರಂಬೂರು : ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ದೈವಂಕಟ್ಟು ಮಹೋತ್ಸವ Read More »

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು

ಕಳೆದ ಮಾರ್ಚ್ 9ರಂದು ದಕ್ಷಿಣಕನ್ನಡ ಜಿಲ್ಲೆಯ ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಹಿಂದೂ ಯುವಕರು ಅನ್ಯಧರ್ಮದವರನ್ನು ಪ್ರೀತಿಸಿ ವಿವಾಹವಾಗಿ ಎಂದು ಕರೆ ನೀಡಿದ್ದರು. ಮತಾಂತರ ಎಂದು ಬಡಿದಾಡಿದ್ದು ಸಾಕು ಮಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು ಎಂದಿದ್ದರಲ್ಲದೇ, ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ. ಬೇರೆ ಧರ್ಮದ ಹುಡುಗಿಯರನ್ನೂ ನೋಡು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದರು.ಸೂಲಿಬೆಲೆಯವರ ಈ ಹೇಳಿಕೆ

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು Read More »

ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಗಂಡನಿಗೆ ಅಪಹಾಸ್ಯ ಮಾಡಿದ ಹಿನ್ನಲೆ,ಪತಿ ಆತ್ಮ ಹತ್ಯೆ

ನಿಮ್ಮ ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ ಅಪಹಾಸ್ಯ ಮಾಡಿದ್ದರಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವಮೂರ್ತಿ(32) ಮೃತ ವ್ಯಕ್ತಿ.ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಅಪಹಾಸ್ಯ ಮಾಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಲಾರಿ ಚಾಲಕನಾಗಿದ್ದ ಪರಶಿವಮೂರ್ತಿ ಎರಡು ವರ್ಷದ ಹಿಂದೆ ಮಮತಾ ಅವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಪರಶಿವಮೂರ್ತಿ ಕೂದಲು ಸಂಪೂರ್ಣ ಉದುರಿತ್ತು. ಹೊರಗಡೆ ಹೋದರೆ ನನೆಗೆ ನಾಚಿಕೆಯಾಗುತ್ತೆಂದು ಮಮತಾ ಅಪಹಾಸ್ಯ

ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಗಂಡನಿಗೆ ಅಪಹಾಸ್ಯ ಮಾಡಿದ ಹಿನ್ನಲೆ,ಪತಿ ಆತ್ಮ ಹತ್ಯೆ Read More »

ಆರ್.ಎಸ್.ಎಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಇಲ್ಲಿದೆ ಮಾಹಿತಿ ಓದಿ

ಜನ್ಮ ನೀಡಿದ ರಾಷ್ಟ್ರವೇ ಮೊದಲು’ ಮತ್ತು “ಜನ ಸೇವೆಯೇ ಜನಾರ್ದನ ಸೇವೆ’ ಎಂಬುದನ್ನು ನನಗೆ ಆರ್‌ಎಸ್‌ಎಸ್‌ ಕಲಿಸಿಕೊಟ್ಟಿತು. ಹೀಗಾಗಿ ನನ್ನ ಬದುಕಿನ ಮೂಲ ಉದ್ದೇಶವನ್ನು ಕಲಿಸಿದ್ದು ಆರ್‌ಎಸ್ಎಸ್‌ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.ಅವರು ಅಮೆರಿಕದ ಪಾಡ್‌ಕಾಸ್ಟರ್, ಎ.ಐ. ಸಂಶೋಧಕ ಲೆಕ್ಸ್ ಫ್ರಿಡ್ಮಿನ್ ಜತೆಗಿನ 3 ಗಂಟೆಗಳ ಸುದೀರ್ಘ ಸಂವಾದದಲ್ಲಿ ಮೋದಿ ತಮ್ಮ ಬಾಲ್ಯದಿಂದ ಪ್ರಧಾನಿಯಾಗುವವರೆಗಿನ ಏಳುಬೀಳಿನ ಜೀವನ ಚರಿತ್ರೆಯನ್ನು ಮೋದಿ ಹಂಚಿಕೊಂಡಿದ್ದಾರೆ. ನಮ್ಮ ಹಳ್ಳಿಯಲ್ಲಿ ಆರೆಸ್ಸೆಸ್‌ನ 1 ಶಾಖೆಯಿತ್ತು.

ಆರ್.ಎಸ್.ಎಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಇಲ್ಲಿದೆ ಮಾಹಿತಿ ಓದಿ Read More »

ದೈವರಾಧನೆ ಸಾಮರಸ್ಯದ ಸಂಕೇತ : ನಳೀನ್ ಕುಮಾರ್ ಕಟೀಲ್

ತುಳುನಾಡಿನಲ್ಲಿ ಹಿರಿಯರು ನಂಬಿಕೊಂಡು ಬಂದಿರುವಂತಹ ದೈವಾರಾಧನೆ ಸಾಮರಸ್ಯದ ಸಂಕೇತ ತವಾಗಿದೆ.ದೈವರಾಧನೆ,ನಾಗಾರಾಧನೆ ಇಲ್ಲಿನ ವಿಶೇಷತೆ. ದೈವಾರಾಧನೆಯಿಂದ ಎಲ್ಲರನ್ನು ಒಗ್ಗೂಡಿಸಲುಸಾಧ್ಯ.ದೈವಾರಾಧನೆಯ ಪಾಡ್ಡನಗಳಿಂದ ತುಳು ಸಂಸ್ಕೃತಿ,ಆಚಾರ,ವಿಚಾರ,ಪರಂಪರೆಗಳು ಉಳಿದಿದೆ” ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಮಾ.15 ರಂದು ಸುಳ್ಯ ಬೂಡು ಪರಿಸರದ ಸತ್ಯಪದಿನಾಜಿ,ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ

ದೈವರಾಧನೆ ಸಾಮರಸ್ಯದ ಸಂಕೇತ : ನಳೀನ್ ಕುಮಾರ್ ಕಟೀಲ್ Read More »

error: Content is protected !!
Scroll to Top