Author name: Tejas

ಅರಂತೋಡು : ಶ್ರೀ ದುರ್ಗಾ ಗೆಳೆಯರ ಬಳಗ ವತಿಯಿಂದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆ

ಅರಂತೋಡು ಶ್ರೀ ದುರ್ಗಾ ಗೆಳೆಯರ ಬಳಗ ವತಿಯಿಂದ ಮಹಿಳೆಯರ ಮತ್ತು ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಅರಂತೋಡು ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನ ವಠಾರ ದಲ್ಲಿ ಮಾ.16 ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾ ಗೆಳೆಯರ ಬಳಗ ಅಧ್ಯಕ್ಷ ಲಿಖಿನ್ ಕಳುಬೈಲು ವಹಿಸಿದರು.ಪಂದ್ಯಾಟದ ಉದ್ಘಾಟನೆಯನ್ನು ತೋಟಂ ಶ್ರೀ ಉಳ್ಳಾ ಕುಳು ದೈವಸ್ಥಾನ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಎಲ್ಲ ಊರಿನ ಆಟ ಗಾರರು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಎಲ್ಲರನ್ನೂ […]

ಅರಂತೋಡು : ಶ್ರೀ ದುರ್ಗಾ ಗೆಳೆಯರ ಬಳಗ ವತಿಯಿಂದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆ Read More »

ಅರಂತೋಡು : ಬೈಕ್ ಬೈಕ್ ಡಿಕ್ಕಿ ಸವಾರರಿಗೆ ಗಾಯ,ಓರ್ವನ ಹೆಬ್ಬೆರುಳು ತುಂಡಾಗಿ ರಸ್ತೆಗೆ ಬಿತ್ತು.

ಅರಂತೋಡು ಮುಖ್ಯ ರಸ್ತೆಯಲ್ಲಿ ತೊಡಿಕಾನ ತಿರುವು ರಸ್ತೆ ಸಮೀಪ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಎರಡು ಮುಖಾಮುಖಿ ಯಾಗಿ ಡಿಕ್ಕಿ ಹೊಡೆದು ಮೂರು ಬೈಕ್ ಸವಾರರು ಗಾಯ ಗೊಂಡು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ..ಒಬ್ಬ ಸವಾರ ನ ಕಾಲಿನ ಹೆಬ್ಬೆರಳು ತುಂಡು ಆಗಿ ರಸ್ತೆಯಲ್ಲಿ ಬಿದ್ದು ಕೊಂಡಿತು .ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.

ಅರಂತೋಡು : ಬೈಕ್ ಬೈಕ್ ಡಿಕ್ಕಿ ಸವಾರರಿಗೆ ಗಾಯ,ಓರ್ವನ ಹೆಬ್ಬೆರುಳು ತುಂಡಾಗಿ ರಸ್ತೆಗೆ ಬಿತ್ತು. Read More »

ಕಾರ್ ಹಾಗೂ ಲಾರಿ ನಡುವೆ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಿದ್ದಾಪುರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕಾರ ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಒಂದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಅಪಘಾತದಲ್ಲಿ ಕಾರ್ ನಲ್ಲಿದ 3 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಅಂಕಲಿ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಕಾರ್ ಹಾಗೂ ಲಾರಿ ನಡುವೆ ಅಪಘಾತ: ಮೂವರು ಸ್ಥಳದಲ್ಲೇ ಸಾವು Read More »

ಶ್ರತಿ ವಿಸ್ಮಿತ್ ಗೌಡ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ನೀಡುವ ರಾಷ್ಟ್ರೀಯ ವೀರವನಿತೆ ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಗೆ ತುಳು ಹಾಗೂ ಕನ್ನಡ ಭಾಷೆಯ ಯಕ್ಷಗಾನ ಕಲಾವಿದೆ ಹಾಗೂ ತಾಳಮದ್ದಳೆಯಲ್ಲಿಯೂ ಸಾಧನೆ ಮಾಡಿದ ಬಲ್ನಾಡಿನ ಶ್ರುತಿ ವಿಸ್ಮಿತ್ ಆಯ್ಕೆಯಾಗಿದ್ದಾರೆ. ಎ.೬ರಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಶ್ರತಿ ವಿಸ್ಮಿತ್ ಗೌಡ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ Read More »

ಎಡಮಂಗಲ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಕಡಬ ತಾಲೂಕಿನ ಎಡಮಂಗಲ ಮರ್ದೂರಡ್ಕ ಎಂಬಲ್ಲಿ ವಿಶ್ವನಾಥ ಎಂಬವರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ.ವಿಶ್ವನಾಥರು ಸ್ಥಳೀಯ ನಿವಾಸಿಯಾಗಿದ್ದು ರೈಲ್ವೆ ಟ್ರ್ಯಾಕ್ ಮೊಬೈಲ್ ಹಿಡಿದುಕೊಂಡು ಕುಳಿತ್ತಿದ್ದರು.ರಾತ್ರಿ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಗುದ್ದಿಕೊಂಡು ಹೋದುದರಿಂದ ವಿಶ್ವನಾಥರು ಮೃತಪಟ್ಟರೆಂದು ಹೇಳಲಾಗುತ್ತಿದೆ.

ಎಡಮಂಗಲ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು Read More »

ನಮ್ಮ ಶ್ರದ್ಧಾ ಕೇಂದ್ರಗಳು ಜೀರ್ಣೋದ್ಧಾರಗೊಂಡಾಗ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ : ಭಾಗೀರಥಿ ಮುರುಳ್ಯ

ನಮ್ಮ ಶ್ರದ್ದಾ ಕೇಂದ್ರಗಳಾದ ಮಂದಿರಗಳು, ದೈವಸ್ಥಾನಗಳನ್ನು ಕಾಲ ಕಾಲಕ್ಕೆ ಜೀರ್ಣೋದ್ದಾರಗೊಳಿಸಿದಾಗ ನಮ್ಮ ಜೀವನದಲ್ಲಿ ಸುಖ ಶಾಂತಿಯಿಂದ ಇರಲು ಸಾಧ್ಯ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯಪಟ್ಟಿದ್ದಾರೆ.ಅವರು ಸುಳ್ಯ ಬೂಡುವಿನ ಸತ್ಯಪದಿನಾಜಿ, ಕುಪ್ಪೆ ಪಂಜುರ್ಜಿ ಮತ್ತು ಗುಳಿಗ ಸಾನಿಧ್ಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶಾಸಕರು ಈ ಭಾಗದ ಜನರ ಕೋರಿಕೆಯಂತೆ ಇಲ್ಲಿಗೆ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಕೊರೆಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.ಕರ್ಲಪ್ಪಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ನಮ್ಮ ಶ್ರದ್ಧಾ ಕೇಂದ್ರಗಳು ಜೀರ್ಣೋದ್ಧಾರಗೊಂಡಾಗ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ : ಭಾಗೀರಥಿ ಮುರುಳ್ಯ Read More »

ಸುಳ್ಯ : ಸಹಕಾರಿ ರತ್ನ ಚಂದ್ರಾ ಕೋಲ್ಚಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ

ಸಹಕಾರಿ ರತ್ನ ಚಂದ್ರ ಕೋಲ್ಟಾರ್ ಅಭಿನಂದನಾ ಸಮಿತಿ ವತಿಯಿಂದ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಬೆಂಗಳೂರು ಇದರ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಚಂದ್ರ ಕೋಲ್ಟಾರ್ ಅವರಿಗೆ ಅಭಿನಂದನಾ ಸಮಾರಂಭ ಮತ್ತು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಇದರ ನೂತನ ಅಧ್ಯಕ್ಷ ಎಸ್.ಚಂದ್ರಶೇಖರ ಮೈಸೂರು ಇವರ ಅಧಿಕೃತ ಭೇಟಿ ಹಾಗೂ ಸನ್ಮಾನ ಕಾರ್ಯಕ್ರಮ ಮಾ.15 ರಂದು ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲದ ನಿರ್ದೇಶಕರಾದ ಎಸ್.ಚಂದ್ರಶೇಖ‌ರ್ ರವರು

ಸುಳ್ಯ : ಸಹಕಾರಿ ರತ್ನ ಚಂದ್ರಾ ಕೋಲ್ಚಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ Read More »

ಬೂಡು : ಶ್ರೀ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ

ಸುಳ್ಯದ ಬೂಡು ಪರಿಸರದಲ್ಲಿರುವ ಶ್ರೀ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಮಾ.16ರಂದು ನಡೆಯಿತು.ಬೆಳಗ್ಗೆ ಯಿಂದ ವೈದಿಕ ಕಾರ್ಯಕ್ರಮಗಳು ನಡೆಯುವುದು. ಬೆಳಗ್ಗೆ ವೃಷಭ ಲಗ್ನದಲ್ಲಿ ಪ್ರತಿಷ್ಟೆ, ಕಲಶಾಭಿಷೇಕ ನಡೆಯಿತು.

ಬೂಡು : ಶ್ರೀ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ Read More »

ಮುಸ್ಲಿಂ ಯುವಕನಿಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ 19 ಮಂದಿ ಹಿಂದು ಕಾರ್ಯಕರ್ತರ ಖುಲಾಸೆ

ಹಿಂದೂ ಯುವತಿಯೊಂದಿಗಿದ್ದ ಎಂದು ಮುಸ್ಲಿಂ ಯುವಕನನ್ನು ಕಾರಿನಿಂದ ಎಳದು ಹಾಕಿ ಹಲ್ಲೆಗೈದು ಅರೆ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ವಿಡಿಯೋ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 19ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಅತ್ತಾವರದ ಈಝೀ ಡೇ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿಯೊಂದಿಗೆ ಮಳಿಗೆಯ ವ್ಯವಸ್ಥಾಪಕ ಶಾಕೀರ್ ಎಂಬಾತ ಕಾರಿನಲ್ಲಿ ಹೋಗುತ್ತಿದ್ದ. ಈತನ ಕಾರನ್ನು ಅತ್ತಾವರ ನಂದಿಗುಡ್ಡೆ ಬಳಿ ಅಡ್ಡಗಟ್ಟಿದ್ದ ಹಿಂದೂ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾನೆಂದು ಆರೋಪಿಸಿ ಕಂಬಕ್ಕೆ

ಮುಸ್ಲಿಂ ಯುವಕನಿಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ 19 ಮಂದಿ ಹಿಂದು ಕಾರ್ಯಕರ್ತರ ಖುಲಾಸೆ Read More »

ಕಾರು ಹಿಂದಕ್ಕೆ ಚಲಿಸಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಮನೆಯಲ್ಲಿ ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿ ಅಂಗಳದಲ್ಲಿ ನಿಂತಿದ್ದ ವ್ಯಕ್ತಿಗೆ ಗುದ್ದಿದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟ ಘಟನೆ ಇಂದು ನಡೆದಿದೆ.ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ರೇಂಜ‌ರ್ ಜೋಸೇಫ್ ರವರಿಗೆ ಗುದ್ದಿ ಗಾಯಗೊಂಡಿದ್ದರು. ಮನೆಯಲ್ಲಿದ್ದ ಪತ್ನಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅರಣ್ಯ ಇಲಾಖೆಯಲ್ಲಿ ಪಂಜ, ಮಂಗಳೂರು ಹಾಗೂ ಸಂಪಾಜೆ ಸೇವೆ ಸಲ್ಲಿಸಿದ್ದು ಸಂಪಾಜೆಯಲ್ಲಿ

ಕಾರು ಹಿಂದಕ್ಕೆ ಚಲಿಸಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು Read More »

error: Content is protected !!
Scroll to Top