ಪಿಕಪ್ ಪಲ್ಟಿಯಾಗಿ ಚಾಲಕನಿಗೆ ಗಾಯ
ಜಾಲ್ಲೂರು ಗ್ರಾಮದ ಕುಂಬರ್ಚೊಡು ಬಳಿ ಪಿಕಪ್ ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ಬುಧವಾರ ವರದಿಯಾಗಿದೆ.ಕಾಟೂರು ಭಾಗಕ್ಕೆ ಜಲ್ಲಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿಯಾದ ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಈ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್ಸ್ ನಿಂದಾಗಿ ಈ ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ. ಈ ಹಿಂದೆ ಇಲ್ಲಿ ರಿಕ್ಷಾ ಹಾಗು ಲಾರಿ ಕೂಡ ಪಲ್ಟಿಯಾದ ಘಟನೆ ಸಂಭವಿಸಿತ್ತು. ಕೊಡಲೇ ಈ ಹಂಪ್ಸನ್ನು ತೆರಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಿಕಪ್ ಪಲ್ಟಿಯಾಗಿ ಚಾಲಕನಿಗೆ ಗಾಯ Read More »










