ಮಾನವನು ಸತ್ಯ,ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದನ್ನು ದೇವರು ಇಷ್ಟಪಡುತ್ತಾನೆ : ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ
ಅಜ್ಜಾವರ : ನಾವು ಸತ್ಯ,ಧರ್ಮ ನ್ಯಾಯ ಮಾರ್ಗದಲ್ಲಿ ನಡೆಯುವುದನ್ನು ದೇವರು ಇಷ್ಟಪಡುತ್ತಾನೆ ಎಂದು ಅಜ್ಜಾವ ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಅಂಗವಾಗಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾರೂ ಸ್ವಾರ್ಥಕ್ಕಾಗಿ ಸುಳ್ಳು ಹೇಳಿ ನ್ಯಾಯಾ ಮಾರ್ಗದಲ್ಲಿ ನಡೆಯದೆ ಇತರರಿಗೆ ಅನ್ಯಾಯ ಮಾಡಿದರೆ ಭಗವಂತ ಮೆಚ್ಚಲಾರ.ಈ ನಿಟ್ಟಿನಲ್ಲಿ ಸತ್ಯ,ಧರ್ಮ,ನ್ಯಾಯ ಮಾರ್ಗದಲ್ಲಿ ನಡೆದು ಪರೋಪಕಾರಿಯಾಗಿ ಬದುಕಬೇಕು.ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿಯವರು ಹೇಳಿದರು.ಈ ಸಂದರ್ಭದಲ್ಲಿ ಸ್ವಾಮೀಜಿಯವರ 211ನೇ […]










