Author name: Tejas

ಕೋಳಿ ಸಾಕಾಣೆಗೆ ಕೇಂದ್ರ ಸರಕಾರದಿಂದ ಭಾರೀ ಸಹಾಯಧನ,ಈ ಕೆಳಗಿನ ಮಾಹಿತಿಯನ್ನು ತಪ್ಪದೆ ಓದಿ

ಕೋಳಿ ಸಾಕಣೆ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸ್ವ ಉದ್ಯೋಗ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿಯನ್ನು ನೀಡಿದೆ. ಕೋಳಿ ಸಾಕಣೆ ಕೇಂದ್ರ ಸ್ಥಾಪಿಸಲು ಶೇ.50ರಷ್ಟು ಸಬ್ಸಿಡಿಯೊಂದಿಗೆ 50 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸಾಲ ಪಡೆಯಲು ಬಯಸುವವರು ಒಂದು ಎಕರೆ ಭೂಮಿಯನ್ನ ಹೊಂದಿರಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ಜನರಿಗೆ ಸಾಲವನ್ನ ನೀಡುತ್ತವೆ. ಹೆಚ್ಚಿನ ವಿವರಗಳನ್ನ ಹತ್ತಿರದ ಪಶುಸಂಗೋಪನಾ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಳ್ಳಬಹುದು

ಕೋಳಿ ಸಾಕಾಣೆಗೆ ಕೇಂದ್ರ ಸರಕಾರದಿಂದ ಭಾರೀ ಸಹಾಯಧನ,ಈ ಕೆಳಗಿನ ಮಾಹಿತಿಯನ್ನು ತಪ್ಪದೆ ಓದಿ Read More »

ರೂ 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಪೊಲೀಸ್ ಬಲೆಗೆ !

ಪಹಣಿಯಲ್ಲಿ ವಾರಸುದಾರರ ಹೆಸರನ್ನುಸೇರ್ಪಡೆಗೊಳಿಸಲು 4ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮುಲ್ಕಿ ಕಂದಾಯ ನಿರೀಕ್ಷಕರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ವ್ಯಕ್ತಿಯೊಬ್ಬರು ತನ್ನ ಅಜ್ಜಿಯ ಮರಣಾನಂತರ ಆಕೆಯ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರೀಸುದಾರರ ಹೆಸರನ್ನು ಸೇರ್ಪಡೆ ಮಾಡುವಂತೆ ಮೂಲ್ಕಿ ತಹಶೀಲ್ದಾರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಮೂಲ್ಕಿ ಕಂದಾಯ ನಿರೀಕ್ಷಕರ ಕಛೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಯಾವುದೇ ಕ್ರಮ ಕೈಗೊಳ್ಳದೆ ಕಂದಾಯ ನಿರೀಕ್ಷಕ ಜಿ ಎಸ್ ದಿನೇಶ್ ಅರ್ಜಿಯನ್ನು ತಮ್ಮಲ್ಲಿ ಉಳಿಸಿಕೊಂಡಿದ್ದರು. ವರ್ಷದ ಬಳಿಕ ಅರ್ಜಿದಾರರು

ರೂ 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಪೊಲೀಸ್ ಬಲೆಗೆ ! Read More »

ತೊಡಿಕಾನ : ಶಾಲೆಗೆ ಬೆಂಚು ಡೆಸ್ಕ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ )ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯಕ್ಷೇತ್ರದ ಸರಕಾರಿ ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನ ಶಾಲೆಗೆ 42500 ಮೌಲ್ಯದ 5ಜೊತೆ ಬೆಂಚು ಡೆಸ್ಕ್ ಅನ್ನು ವಿತರಣೆ ಮಾಡುವ ಕಾರ್ಯಕ್ರಮ ಇಂದು ನಡೆಯಿತು ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ ಅಮೆಚೂರು ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಯೋಜನೆ ಕಾರ್ಯಕ್ರಮಗಳ ಬಗ್ಗೆ

ತೊಡಿಕಾನ : ಶಾಲೆಗೆ ಬೆಂಚು ಡೆಸ್ಕ್ ವಿತರಣೆ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಆಶ್ಲೇಷ ಬಲಿ ಪೂಜೆ

ಸುಳ್ಯ ಸೀಮೆ ದೇವಸ್ಥಾನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ ಗುರುವಾರ ರಾತ್ರಿ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ,ಮಾಜಿ ಅಧ್ಯಕ್ಷಕರು ಸದಸ್ಯರು,ಸೀಮೆಯ ಭಕ್ತಾಧಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಆಶ್ಲೇಷ ಬಲಿ ಪೂಜೆ Read More »

ಕೆ.ಎಸ್.ಆರ್.ಟಿ.ಸಿ‌ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಕೆ ಎಸ್ ಆರ್ ಟಿಸಿ ಬಸ್ಸು ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುತ್ತೂರಿನ ಮುರ ಎಂಬಲ್ಲಿಂದ ಗುರುವಾರ ವರದಿಯಾಗಿದೆ.ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಅಬ್ದುಲ್ ಕುಂಞ (65) ಮೃತಪಟ್ಟ ವ್ಯಕ್ತಿ‌ ಎಂದು ಗುರುತಿಸಲಾಗಿದೆ.ಅಬ್ದುಲ್ ಕುಂಞಯವರು ಮುರದ ಮೆಡಿಕಲ್ ಶಾಪ್ ಗೆ ಬಂದಿದ್ದು, ವಾಪಸ್ಸು ರಸ್ತೆ ದಾಟಿ ಕೆದಿಲ ರಸ್ತೆಯತ್ತ ಹೋಗುತ್ತಿರುವಾಗ ಅವರ ಬೈಕ್ ಗೆ ಬಸ್ಸು ಢಿಕ್ಕಿ ಹೊಡೆದಿದೆ. ಬಸ್ಸು ಮಾಣಿಯಿಂದ ಪುತ್ತೂರಿನತ್ತ ಹೋಗುತ್ತಿತ್ತು.ಗಾಯಾಳು ಸವಾರನನ್ನು ಸ್ಥಳೀಯರ ನೆರವಿನಿಂದ ತಕ್ಷಣ

ಕೆ.ಎಸ್.ಆರ್.ಟಿ.ಸಿ‌ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು Read More »

ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರಿಗೆ ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024

ಬೆಂಗಳೂರಿನಲ್ಲಿ ಯಶ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್ ಸ್ಟಾರ್ ಆಫ್ ಸೌತ್ ಇಂಡಿಯಾ 2024 ಬ್ಯೂಟಿ ಕಾಂಪಿಟೇಶನ್ ಕಾರ್ಯಕ್ರಮದಲ್ಲಿ ಸುಳ್ಯದ ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರು ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024 ಪಡೆದುಕೊಂಡಿದ್ದಾರೆ.

ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರಿಗೆ ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024 Read More »

ಭೀಕರ ಅಪಘಾತದಲ್ಲಿ ಅಮರಮುಡ್ನೂರು ಗ್ರಾಮದ ಯುವಕ ಸಾವು

ಸೂರಿಕುಮೇರು ಎಂಬಲ್ಲಿ ನಿನ್ನೆ ತಡರಾತ್ರಿ ಬೈಕ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಮರ ಮುಡ್ನೂರು ಗ್ರಾಮದ ಮರ್ಗಿಲಡ್ಕ ನಿವಾಸಿ ಪುನೀತ್( 30) ಮ್ರತಪಟ್ಟಿದ್ದಾರೆ.ಮಂಗಳೂರಿನಲ್ಲಿ ಕೋಸ್ಟಲ್ ಕೋಳಿ ಫಾರ್ಮ್ ನಲ್ಲಿ ಚಾಲಕರಾಗಿದ್ದ ಅವರು ಕೆಲಸ ಮುಗಿಸಿ ಮನೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಸೂರಿಕುಮೇರು ರಾಜ್ಯ ಹೆದ್ದಾರಿಯಲ್ಲಿ ಟೆಂಪೊ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಭೀಕರ ಅಪಘಾತದಲ್ಲಿ ಅಮರಮುಡ್ನೂರು ಗ್ರಾಮದ ಯುವಕ ಸಾವು Read More »

ಅರಂತೋಡು ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ ಸಮಾರೋಪ

ಅಲ್ಲಾಹುವನ್ನು ಮರೆತಿದ್ದೇವೆ. ನಮ್ಮ ಶರೀರಕ್ಕೆ ದೇವರು ಸಮಯ ನಿಗಧಿಪಡಿಸಲಾಗಿದೆ, ಮರಣ ಎಂಬುದು ಖಚಿತ, ಆದುದರಿಂದ ಮರಣಾನಂತರದ ಜೀವನವೇ ಶಾಶ್ವತ ಎಂದು ಖ್ಯಾತ ವಾಗ್ಮಿ ಬಹು| ಅಬೂಬಕ್ಕರ್ ಸಿದ್ಧೀಕ್ ಅಝ್ಹರಿ ಪಯ್ಯನ್ನೂರು ಹೇಳಿದರು. ಅವರು ಡಿ.17 ರಂದು ಅರಂತೋಡು ಎಸ್.ಕೆ.ಎಸ್.ಎಸ್.ಎಪ್ ಶಾಖೆ ವತಿಯಿಂದ ನಡೆದ ಏಕದಿನ ಧಾರ್ಮಿಕ ಉಪನ್ಯಾಸದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷ ಜುಬೈರ್ ಎಸ್.ಇ ವಹಿಸಿದರು. ದುವಾವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ನೆರವೇರಿಸಿದರು. ಅತಿಥಿಗಳಾಗಿ

ಅರಂತೋಡು ಮಸೀದಿಯಲ್ಲಿ ಧಾರ್ಮಿಕ ಉಪನ್ಯಾಸ ಸಮಾರೋಪ Read More »

ಕಲ್ಲುಗುಂಡಿಯಲ್ಲಿ ಕಾರು ಪಲ್ಟಿ ಹೊಡೆದು ಜಖಂ

ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಕಾರು ಪಲ್ಟಿಯಾದ ಘಟನೆ ಗುರುವಾರ ವರದಿಯಾಗಿದೆ.ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಟ್ಯಾಕ್ಸಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ.ಪ್ರಯಾಣಿಕರು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

ಕಲ್ಲುಗುಂಡಿಯಲ್ಲಿ ಕಾರು ಪಲ್ಟಿ ಹೊಡೆದು ಜಖಂ Read More »

ಕೃಷಿ ಉತ್ಪತ್ತಿಯ ಕುಸಿತ, ಧನ ಸಹಾಯ ಸ್ಥಗಿತಗೊಳಿಸಲಾಗಿದೆ ಎಂಬ ಮನೆ ಮುಂದೆ ಅಳವಡಿಸಿದ ಬ್ಯಾನರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

ಸುಳ್ಯ ತಾಲೂಕಿನಲ್ಲಿ ಈ ವರ್ಷ ಅಡಿಕೆ ಕ್ರಷಿಗೆ ಎಲೆ ಚುಕ್ಕಿ ರೋಗ ಬಾಧಿಸಿ ರೈತರು ಬಹಳ ಅರ್ಥಿಕ‌ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಇನ್ನೇನು ವಿವಿಧ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.ಎಲ್ಲ ಕಾರ್ಯಕ್ರಮಗಳಿಗೆ ಧನ ಸಹಾಯ ಅಗತ್ಯ ಇರುವುದರಿಂದ ಧನ ಸಹಾಯಕ್ಕಾಗಿ ಮನೆ ಮನೆ ತೆರಳುವುದು,ಸಂಗ್ರಹಿಸುವುದು ಸಾಮಾನ್ಯವಾಗಿದೆ.ಸುಳ್ಯ ಪರಿಸರದಲ್ಲಿ ಅಡಿಕೆ ಎಲೆಚುಕ್ಕಿ ರೋಗ ಹೆಚ್ಚು ಬಾಧಿಸಿರುವುದರಿಂದ ಇಲ್ಲಿಯ ರೈತರು ಅತೀ ಹೆಚ್ಚು ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ರೈತರೊಬ್ಬರು ತಮ್ಮ ಮನೆಯ ಮುಂದೆ ಬ್ಯಾನರ್ ಅಳವಡಿಸಿದ್ದಾರೆ.ಅದರಲ್ಲಿ ಕ್ರಷಿ ಉತ್ವತಿಯ ಕುಸಿತದಿಂದ ಎಲ್ಲಾ ರೀತಿಯ

ಕೃಷಿ ಉತ್ಪತ್ತಿಯ ಕುಸಿತ, ಧನ ಸಹಾಯ ಸ್ಥಗಿತಗೊಳಿಸಲಾಗಿದೆ ಎಂಬ ಮನೆ ಮುಂದೆ ಅಳವಡಿಸಿದ ಬ್ಯಾನರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ Read More »

error: Content is protected !!
Scroll to Top