Author name: Tejas

ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ

ಬೆಳಗಾವಿಯ ತಹಶೀಲ್ದಾರ ಕಚೇರಿಯ ಕೊಠಡಿಯಲ್ಲಿಯೇ ಎಸ್ ಡಿಎ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವರದಿಯಾಗಿದೆ.ದ್ವಿತೀಯ ದರ್ಜೆ ಗುಮಾಸ್ತ ರುದ್ರಣ್ಣ ಯಡವನ್ನವರ ಎಂಬ ಸಿಬ್ಬಂದಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ತಹಶೀಲ್ದಾರರು ಕುಳಿತುಕೊಳ್ಳುವ ಸ್ಥಳದಲ್ಲಿಯ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಬರುತ್ತಿದ್ದಂತೆ ವಿಚಾರ ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ Read More »

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ರಿಂದ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲ್ ದಾಸ್ ರವರಿಗೆ ಗೌರವಾರ್ಪಣೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದರವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೆ. ಗೋಕುಲ್ ದಾಸ್ ರವರಿಗೆ ಇಂದು ತಮ್ಮ ಕಚೇರಿಯಲ್ಲಿ ಶುಭಹಾರೈಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ ಉಪಸ್ಥಿತರಿದ್ದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ರಿಂದ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲ್ ದಾಸ್ ರವರಿಗೆ ಗೌರವಾರ್ಪಣೆ Read More »

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆ‌ರ್ ದಾಖಲು

ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ತಾರಕಕ್ಕೆ ಏರಿದ್ದು, ಹೆಚ್‌ಡಿಕೆ ಬೆದರಿಸುವುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎ1 ಆರೋಪಿಯಾಗಿ ಹೆಚ್. ಡಿ. ಕುಮಾರಸ್ವಾಮಿ, ಎ2 ನಿಖಿಲ್, ಹಾಗೂ ಎ3 ಆರೋಪಿ ಜೆಡಿಎಸ್ ಮುಖಂಡ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆ‌ರ್ ದಾಖಲು Read More »

ವಿದ್ಯುತ್ ಕಂಬಕ್ಕೆ ಸ್ಕೋರ್ಪಿಯೊ ಡಿಕ್ಕಿ,ತಪ್ಪಿದ ಭಾರೀ ದುರಂತ

ಪುತ್ತೂರು ಬೈಪಾಸ್ ರಸ್ತೆಯಲ್ಲಿ ಸ್ಕೊರ್ಪಿಯೊ ವಾಹನ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ಘಟನೆ ನ.5 ರಂದು ನಸುಕಿನ ಜಾವ ನಡೆದಿದೆ.ಮಂಗಳೂರಿಗೆ ತೆರಳುತ್ತಿದ್ದ ಸ್ಕೊರ್ಪಿಯ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.

ವಿದ್ಯುತ್ ಕಂಬಕ್ಕೆ ಸ್ಕೋರ್ಪಿಯೊ ಡಿಕ್ಕಿ,ತಪ್ಪಿದ ಭಾರೀ ದುರಂತ Read More »

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ

33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.5 ಮಂಗಳವಾರ ನಡೆಸುವುದರಿಂದ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆವರೆಗೆ 33 ಕೆ.ವಿ ಕಾವು-ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆವಿ ಕಾವು ಹಾಗೂ ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆ ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇಲ್ಲಿದೆ ಮಾಹಿತಿ Read More »

ಸ್ಕೂಟಿ ಸವಾರ ಮೃತಪಟ್ಟು ಎರಡು ದಿನ ಕಳೆದರೂ ಸ್ಥಳದಿಂದ ಕದಡದ ಮೃತಪಟ್ಟ ವ್ಯಕ್ತಿಯ ಕೋಳಿ

ಕಡಬ: ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಮುರಚೆಡವು ಬಳಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದು ಎರಡು ದಿನ ಕಳೆದರೂ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಘಟನೆ ನಡೆದ ಸ್ಥಳದಲ್ಲಿಯೇ ಇದೆ.ಸೀತಾರಾಮ ಅವರು ದೀಪಾವಳಿ ಪ್ರಯುಕ್ತ ಎಡಮಂಗಲದ ತನ್ನ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಡಿಂಬಾಳದಿಂದ ಕೋಳಿ ತೆಗೆದುಕೊಂಡು ಸ್ಕೂಟಿಯಲ್ಲಿ ಎಡಮಂಗಲದತ್ತ ಹೋಗುತ್ತಿದ್ದ ವೇಳೆ ನ. 2

ಸ್ಕೂಟಿ ಸವಾರ ಮೃತಪಟ್ಟು ಎರಡು ದಿನ ಕಳೆದರೂ ಸ್ಥಳದಿಂದ ಕದಡದ ಮೃತಪಟ್ಟ ವ್ಯಕ್ತಿಯ ಕೋಳಿ Read More »

ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆತೀರ್ಥರಾಮ ಎಚ್. ಬಿ ಯವರಿಗೆ ಗೌರವ ಸಮರ್ಪಣೆ

ಗುತ್ತಿಗಾರುವಿನ ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ನಿವೃತ್ತ ಸಿಬ್ಬಂದಿ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ತೀರ್ಥರಾಮ ಎಚ್. ಬಿ ಹೊಸೋಳಿಕೆಯವರು ಸರಳ, ಸಜ್ಜನ, ದಕ್ಷ, ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತಿ ಹೊಂದಿದ್ದರು ಹೊಸೋಳಿಕೆ ಕಟ್ಟೆಮನೆ ಕುಟುಂಬದ ಮುಖ್ಯಸ್ಥರಾಗಿರುವ ಇವರನ್ನು ಕುಟುಂಬಸ್ಥರು ದೀಪಾವಳಿ ಹಬ್ಬದಲ್ಲಿ ಕುಟುಂಬಸ್ಥರ ಸಮಾಗಮದಲ್ಲಿ ಗೌರವಿಸಿದರುಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆ ಯವರು ಅಧ್ಯಕ್ಷತೆ ವಹಿಸಿದರು, ರಾಧಾಕೃಷ್ಣ ಹೊಸೋಳಿಕೆ, ಕುಟುಂಬದ ಅಧ್ಯಕ್ಷರಾದ ಎಚ್.

ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆತೀರ್ಥರಾಮ ಎಚ್. ಬಿ ಯವರಿಗೆ ಗೌರವ ಸಮರ್ಪಣೆ Read More »

ಅಜ್ಜಾವರ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಶಿವಾಜಿ ಶಾಖೆ ಅಜ್ಜಾವರ ಇದರ ನೇತೃತ್ವದಲ್ಲಿ ಶ್ರೀ ಶಾರದ ರಾಮ ಸೇವಾ ಪ್ರತಿಷ್ಠಾನ ಬಯಂಬು ಇಲ್ಲಿ ಬಾಲಸಂಸ್ಕಾರ ಕೇಂದ್ರ ಉದ್ಘಾಟನೆಗೊಂಡಿತು. ಅಜ್ಜಾವರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು ದೀಪ ಪ್ರಜ್ವಲಿಸುವ ಮೂಲಕ ಬಾಲ ಸಂಸ್ಕಾರ ಕೇಂದ್ರವನ್ನು ಉದ್ಘಾಟಿಸಿದರು. ಅಟಲ್ ಜೀ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿಯಾದ ಸುಭೋದ್ ಶೆಟ್ಟಿ ಮೇನಾಲ ಇವರು ಬಾಲ ಸಂಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕ ನಡೆಸಿದರು. ವಿಶ್ವ ಹಿಂದೂ ಪರಿಷತ್ತು

ಅಜ್ಜಾವರ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ Read More »

ಮರಬಿದ್ದು ಸ್ಕೂಟಿ ಸವಾರ ಸಾವನ್ನಪ್ಪಿದ ಹಿನ್ನಲೆ,ಸಾರ್ವಜನಿಕರಿಂದ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ

ಎಡಮಂಗಲ : ಸ್ಕೂಟಿ ಸವಾರನ ಮೇಲೆ ಪುಳಿಕುಕ್ಕು ಸಮೀಪ ದೂಪದ ಮರ ಬಿದ್ದು ಸವಾರ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಸ್ತೆ ಪಕ್ಕದ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ನ.2ರ ಶನಿವಾರ ಸಾರ್ವಜನಿಕರು ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಸಾರ್ವಜನಿಕರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಅವಕಾಶ ನೀಡಲಿಲ್ಲ. ಅದರಿಂದಾಗಿ ಕಡಬ -ಪಂಜ ರಸ್ತೆಯಲ್ಲಿ ಸುಮಾರು

ಮರಬಿದ್ದು ಸ್ಕೂಟಿ ಸವಾರ ಸಾವನ್ನಪ್ಪಿದ ಹಿನ್ನಲೆ,ಸಾರ್ವಜನಿಕರಿಂದ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ Read More »

ಸ್ಕೂಟಿ ಮೇಲೆ ಮರ ಬಿದ್ದು‌ ಸ್ಕೂಟಿ ಸವಾರ ಸಾವು

ಕಡಬ ತಾಲೂಕಿನ ಎಡಮಂಗಲ ಸೊಸೈಟಿ ಪಿಗ್ನಿ ಕಲೆಕ್ಟರ್ ಸೀತಾರಾಮ ಕೆರೆಮೂಲೆ ಅವರು ಚಲಾಯಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಪುಳಿಕುಕ್ಕು ಸಮೀಪ ನಡೆದಿದೆ.ಎಡಮಂಗಲ ದೇವಶ್ಯ ಕೆರೆಮೂಲೆ ನಿವಾಸಿಯಾಗಿರುವ ಇವರು ಹಲವಾರು ವರ್ಷಗಳಿಂದ ಪಿಗ್ನಿ ಸಂಗ್ರಹಕರಾಗಿ ಮಾಡುತ್ತಿದ್ದರು. ಬೃಹತ್ ಗಾತ್ರದ ದೂಪದ ಮರ ಬಿದ್ದು, ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಕೂಟಿ ಮೇಲೆ ಮರ ಬಿದ್ದು‌ ಸ್ಕೂಟಿ ಸವಾರ ಸಾವು Read More »

error: Content is protected !!
Scroll to Top