ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ಕನಸಿನ ರಸ್ತೆಗೆ ೩೦ವರ್ಷಗಳ ಬಳಿಕ ಕಾಂಕ್ರೀಟೀಕರಣ- ವಿರಾಜಪೇಟೆ ಶಾಸಕ ಪೊನ್ನಣ್ಣರಿಂದ ಉದ್ಘಾಟನೆ
ಕಾನೂನು ತೊಡಕುಗಳಿಂದ ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ೨೫ ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳದೆ ೩೦ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ೬ ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಳ್ಳುವುದರ ಮೂ ಲಕ ೩೦ವರ್ಷಗಳ ಬಳಿಕ ೨೫ ಮನೆಗಳ ಫಲಾನುಭವಿಗಳ ಕನಸು-ನನಸಾಗಿದ್ದು, ಸೋಮವಾರ ಅವರು ರಸ್ತೆಯನ್ನು ಉದ್ಘಾಟಿಸಿದರು.ಪೆರಾಜೆ ಗ್ರಾಮದ ಪೆರಂಗಜೆ -ನೆಡ್ಚಿಲ್ ಕುಟುಂಬಸ್ಥರ ೨೫ ಮನೆಗಳಿಗೆ ಸಂಪರ್ಕಿಸುವ ರಸ್ತೆಯನ್ನು ಸುಮಾರು ೩೦ ವರ್ಷಗಳಿಂದ ಅಭಿವೃದ್ದಿ ಕಾಣದೇ ಇದ್ದು, ಈ ರಸ್ತೆ ಅಭಿವೃದ್ಧಿ ಕಾಣದೆ ಸರಕುಸಾಗಾಟನೆಗೆ ಮತ್ತು ಶಾಲಾ ಮಕ್ಕಳನ್ನು ದ್ವಿಚಕ್ರ […]










