Author name: Tejas

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ, ಜನಜಾಗೃತಿ ವೇದಿಕೆ ಸುಳ್ಯ ಇದರ ವತಿಯಿಂದ ಪ್ರಕಟವಾದ “ಜಾಗೃತಿ-ಪ್ರಗತಿ ಪಥ” ಎಂಬ ಸ್ಮರಣ ಸಂಚಿಕೆಯ ವಿತರಣಾ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ, ಜನಜಾಗೃತಿ ವೇದಿಕೆ ಸುಳ್ಯ ಇದರ ವತಿಯಿಂದ ಪ್ರಕಟವಾದ “ಜಾಗೃತಿ-ಪ್ರಗತಿ ಪಥ” ಎಂಬ ಸ್ಮರಣ ಸಂಚಿಕೆಯ ವಿತರಣಾ ಕಾರ್ಯಕ್ರಮನ. 21 ರಂದು ಸುಳ್ಯ ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು.ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂ‌ರ್ ಅಧ್ಯಕ್ಷತೆ ವಹಿಸಿ, ಸ್ಮರಣ ಸಂಚಿಕೆಯ ಸಂಪಾದಕ ನೆಲೆಯಲ್ಲಿ ಮಾತನಾಡಿದರು. ಕ್ಷೇತ್ರದ ಮೇಲೆ ಬಂದಿರುವ ಅಪಪ್ರಚಾರಕ್ಕೆ ಉತ್ತರವಾಗಿ ಸಂಚಿಕೆ ಮೂಡಿ ಬಂದಿದೆ. ಕ್ಷೇತ್ರದ ಸಮಾಜ ಸೇವಾ ಚಿಂತನೆಯ ಕುರಿತು ಸಮಗ್ರ ಮಾಹಿತಿಗಳು […]

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ, ಜನಜಾಗೃತಿ ವೇದಿಕೆ ಸುಳ್ಯ ಇದರ ವತಿಯಿಂದ ಪ್ರಕಟವಾದ “ಜಾಗೃತಿ-ಪ್ರಗತಿ ಪಥ” ಎಂಬ ಸ್ಮರಣ ಸಂಚಿಕೆಯ ವಿತರಣಾ ಕಾರ್ಯಕ್ರಮ Read More »

ವೈಭವದಿಂದ ನಡೆದ ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಪನ್ನ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದಪ್ರಯುಕ್ತ ಐದನೇ ದಿನ ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರು ಕಟ್ಟೆ ಉತ್ಸವವು ಸಂಪನ್ನಗೊಂಡಿತು. ನಾಡಿನ ನಾನ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಲಕ್ಷ ದೀಪೋತ್ಸವದ ಗೌರಿಮಾರು ಕಟ್ಟೆ ಉತ್ಸವದಲ್ಲಿ ಪಾಲ್ಗೊಂಡು ಕಣ್ತುಂಬಿ ಧನ್ಯತಾ ಭಾವ ಹೊಂದಿದರು. ಲಕ್ಷ ದೀಪೋತ್ಸವದಐದು ದಿನಗಳ ಉತ್ಸವದಲ್ಲಿ ಕೊನೆಯ ದಿನ ಗೌರಿಮಾರು ಕಟ್ಟೆ ಉತ್ಸವದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಉತ್ಸವ ಆರಂಭಗೊಂಡಿತು. ಬಳಿಕ ದೇಗುಲದ ಒಳಾಂಗಣದಲ್ಲಿ 16 ಸುತ್ತು ಪ್ರದಕ್ಷಿಣೆಯ ಉತ್ಸವ ಬಲಿ

ವೈಭವದಿಂದ ನಡೆದ ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಪನ್ನ Read More »

ಅರಂತೋಡು ಜಮಾ ಅತ್ ಸೌದಿ ಸಮಿತಿ ಯಿಂದ ಜುಬೈಲ್ ನಲ್ಲಿ ಅಶ್ರಫ್ ಗುಂಡಿ ಯವರಿಗೆ ಸನ್ಮಾನ

ಸೌದಿ ಅರೇಬಿಯಾದ ಜುಬೈ ಲ್ ನಲ್ಲಿ ಅರಂತೋಡು ಜಮಾ ಅತ್ ಸೌದಿ ಸಮಿತಿ ವತಿಯಿಂದ ಉಮ್ರಾ ಯಾತ್ರೆ ಯಲ್ಲಿರುವಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಯವರನ್ನು ನ, 21ರಂದು ಜುಬೈಲ್ ನಲ್ಲಿ ನಡೆದ ಗೆಟ್ ಟುಗೆದರ್ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು ಗೌರವ ಅಧ್ಯಕ್ಷಮೊಹಮ್ಮದ್ ಕಮಾಲ್ಅಶ್ರಫ್ ಗುಂಡಿ ಯವರನ್ನು ಶಾಲುಹೊದಿಸಿ ಸ್ಮರಣಿ ಕೆ ಯನ್ನು ನೀಡಿ ಸನ್ಮಾನಿಸಿದರು,ದುವಾ ವನ್ನುಮೊಹಮ್ಮದ್ ಮದನಿ ಉಸ್ತಾದ್ ದಮ್ಮಮ್ ನೆರವೇರಿಸಿದರು ಅಧ್ಯಕ್ಷತೆಯನ್ನು ವಹಿಸಿದ ಸೌದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಮಾತನಾಡಿ

ಅರಂತೋಡು ಜಮಾ ಅತ್ ಸೌದಿ ಸಮಿತಿ ಯಿಂದ ಜುಬೈಲ್ ನಲ್ಲಿ ಅಶ್ರಫ್ ಗುಂಡಿ ಯವರಿಗೆ ಸನ್ಮಾನ Read More »

ಕಲ್ಲುಗುಂಡಿ : ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ,ಪ್ರಕರಣ ದಾಖಲು

ಈಚರ್ ಲಾರಿಯಲ್ಲಿ ಅಕ್ರಮವಾಗಿ ಕೇರಳ ಕಡೆಯಿಂದ ಮಡಿಕೇರಿಯತ್ತ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದಾಗ ಸುಳ್ಯ ಪೊಲೀಸರು ಲಾರಿ ಮತ್ತು ಕಲ್ಲುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನವಂಬರ್ 20ರಂದು ರಾತ್ರಿ ವರದಿಯಾಗಿದೆ.ಈಚರ್ ವಾಹನದಲ್ಲಿ ಕೇರಳದ ಮಿಂಚಿನ ಪದವು ಎಂಬಲ್ಲಿಂದ ಸುಮಾರು 400 ಕೆಂಪು ಕಲ್ಲುಗಳನ್ನು ಪರವಾನಿಗೆ ಇಲ್ಲದೆ ಕೊಂಡೋಗುತ್ತಿದ್ದಾಗ ಕಲ್ಲುಗುಂಡಿ ಹೊರ ಠಾಣೆಯ ಬಳಿ ರಾತ್ರಿ ಸುಮಾರು 11.15 ರ ವೇಳೆಗೆ ಪೊಲೀಸರು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ.ಈ ಸಂದರ್ಭ ಕಲ್ಲು ಸಾಗಾಟಕ್ಕೆ ಪರವಾನಿಗೆ ಇಲ್ಲದೇ ಇರುವ ಬಗ್ಗೆ

ಕಲ್ಲುಗುಂಡಿ : ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ,ಪ್ರಕರಣ ದಾಖಲು Read More »

ಮಾವಜಿ ಮೋನಪ್ಪ ಗೌಡ ನಿಧನ

ಆಲೆಟ್ಟಿ ಗ್ರಾಮದ ಆರಂಬೂರು ಮಾಂಬುಳಿ ನಿವಾಸಿ ಮಾವಜಿ ಮೋನಪ್ಪ ರವರು ಅಲ್ಪಕಾಲದ ಅಸೌಖ್ಯದಿಂದ ನ. 21 ರಂದು ನಿಧನರಾದರು.ಮೃತರು ಪತ್ನಿ ಶ್ರೀಮತಿ, ಪುತ್ರರಾದ ಸನತ್, ಗಗನ್, ಜೀವನ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಮಾವಜಿ ಮೋನಪ್ಪ ಗೌಡ ನಿಧನ Read More »

ಪುತ್ತೂರು: ಮಾಣಿ- ಸಂಪಾಜೆ ರಾ. ಹೆದ್ದಾರಿ 270ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಥಮ ಹಂತದ ಪರಿಶೀಲನಾ ಸಭೆ

ಪುತ್ತೂರು: ಮಾಣಿ- ಸಂಪಾಜೆ ರಾ. ಹೆದ್ದಾರಿ 270ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಥಮ ಹಂತದ ಪರಿಶೀಲನಾ ಸಭೆಯು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ಸೋಮವಾರ ನಡೆಯಿತು.ಮಾಣಿ- ಸಂಪಾಜೆ ರಾ.ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕ ಈ ಹೈವೇಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶಾಸಕರಾದ ಮೊದಲ ವರ್ಷದಲ್ಲೇ ಶಾಸಕ ಅಶೋಕ್ ರೈ ಅವರು ಯೋಜನಾ ವರದಿಗೆ ಸಿದ್ಧಪಡಿಸಲು ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ 3.90 ಕೋಟಿ ರೂ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ಅದರಂತೆ ಡಿಪಿಆ‌ರ್ ಸಿದ್ಧಪಡಿಸಲಾಗಿದೆ. ಸಿದ್ದಪಡಿಸಲಾದ ಡಿಪಿಆರ್ ನ್ನು ಶಾಸಕರು

ಪುತ್ತೂರು: ಮಾಣಿ- ಸಂಪಾಜೆ ರಾ. ಹೆದ್ದಾರಿ 270ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಥಮ ಹಂತದ ಪರಿಶೀಲನಾ ಸಭೆ Read More »

ರಾಷ್ಟ್ರೀಯ ಹೆದ್ದಾರಿ 275 ಅಭಿವೃದ್ಧಿ ಮತ್ತು ಅಗಲೀಕರಣದ DPR ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮೊದಲು ಸುಳ್ಯದಲ್ಲಿ ಸಾರ್ವಜನಿಕ ಸಭೆ ನಡೆಸುವ ಅಗತ್ಯ ಇದೆ : ಡಿ.ಎಂ ಶಾರೀಕ್

ರಾಷ್ಟ್ರೀಯ ಹೆದ್ದಾರಿ 275 ಮಾಣಿಯಿಂದ ಸಂಪಾಜೆಯ ವರೇಗೆ ಅಭಿವೃದ್ಧಿ ಮತ್ತು ಅಗಲೀಕರಣದ DPR ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮೊದಲು, (ಪುತ್ತೂರಿಗೆ ನೀಡಿದ ಸೌಲಭ್ಯಗಳನ್ನು ಸುಳ್ಯಕ್ಕೆ ನೀಡದಿರುವುದು ವಿಷಾದನೀಯ) ಸುಳ್ಯದ ನಗರ ಪಂಚಾಯತ್ ನಲ್ಲಿ ಸಾರ್ವಜನಿಕರ ಸಭೆ ನಡೆಸಿ, ಸುಳ್ಯದ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿ, ಸುಳ್ಯದ ಪಾರ್ಕಿಂಗ್ ಮತ್ತು ಇನ್ನಿತರ ಕೆಲವು ಪ್ರಮುಖ ಸಮಸ್ಯೆಗಳನ್ನು ಏಕ ಕಾಲಕ್ಕೆ ಪರಿಹರಿಸಬೇಕು‌ ಎಂದು ಸಾಮಾಜಿಕ ಹೋರಾಟಗಾರ ಡಿ.ಎಂ ಶಾರೀಕ್ ಒತ್ತಾಯಿಸಿದ್ದಾರೆ.ಸುಳ್ಯ ನಗರ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆಯ ವಿನ್ಯಾಸದೊಂದಿಗೆ ಇಕ್ಕೆಲಗಳಲ್ಲಿ ಪಾರ್ಕಿಂಗ್

ರಾಷ್ಟ್ರೀಯ ಹೆದ್ದಾರಿ 275 ಅಭಿವೃದ್ಧಿ ಮತ್ತು ಅಗಲೀಕರಣದ DPR ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮೊದಲು ಸುಳ್ಯದಲ್ಲಿ ಸಾರ್ವಜನಿಕ ಸಭೆ ನಡೆಸುವ ಅಗತ್ಯ ಇದೆ : ಡಿ.ಎಂ ಶಾರೀಕ್ Read More »

ಜಯನಗರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ‌ ಪತ್ರಕರ್ತರಿಂದಲೇ ಪ್ರತಿಭಟನೆ

ಜಯನಗರ ವಾರ್ಡಿನ ಮುಖ್ಯರಸ್ತೆ ಹೊಂಡ ಗುಂಡಿಗಳಿಂದ ತುಂಬಿ ಸಂಚರಿಸಲು ಕಷ್ಟಕರ ಆಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನ. 20 ರಂದು ಜಯನಗರ ದಲ್ಲಿ ನಡೆಯಿತು. ಹಳೆಗೇಟಿನಿಂದ ಜಯನಗರ ಕುದ್ಪಾಜೆ ಯವರೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿ ಆವರಿಸಿ ಸಾರ್ವಜನಿಕರಿಗೆ ವಾಹನಗಳಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಕುರಿತು ಸ್ಥಳೀಯ ನಿವಾಸಿಗಳು ಅನೇಕ ಬಾರಿ ಹೋರಾಟಗಳನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ನೀಡಿದ್ದು, ಈ ವಿಷಯಗಳನ್ನು ಪತ್ರಿಕೆಯ

ಜಯನಗರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ‌ ಪತ್ರಕರ್ತರಿಂದಲೇ ಪ್ರತಿಭಟನೆ Read More »

ಚಿರತೆ ದಾಳಿಗೆ ಐದು ವರ್ಷದ ಮಗು ಬಲಿ

ಚಿಕ್ಕಮಗಳೂರಿನ ಕಡೂರು ತಾಲೂಕಿನ ನವಿಲೇಕಲ್ಲುಗುಡ್ಡ ಗ್ರಾಮದಲ್ಲಿ, ತಂದೆಯ ಮುಂದೆಯೇ ಚಿರತೆ ದಾಳಿ ಮಾಡಿ ಸಾನ್ವಿ ಎಂಬ ಮಗುವನ್ನು ಕೊಂದಿದೆ. ಕೂಲಿ ಕಾರ್ಮಿಕ ಬಸವರಾಜ್‌ ಅವರ ಪುತ್ರಿ ಸಾನ್ವಿ, ಮನೆಯ ಹಿಂದೆ ನಿಂತಿದ್ದಾಗ ಚಿರತೆ ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ದಿದೆ. ಘಟನೆ ಬೀರೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯುವಂತೆ ಈ ಹಿಂದೆ ಹಲವು ಬಾರಿ ಮನವಿ ಮಾಡಲಾಗಿತ್ತು

ಚಿರತೆ ದಾಳಿಗೆ ಐದು ವರ್ಷದ ಮಗು ಬಲಿ Read More »

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, 19 ವರ್ಷಗಳ ಬಳಿಕ ಬಂಧನ

ಮಂಗಳೂರು ನಗರ ಪೊಲೀಸರು 2006ರ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಬೀರ್‌ಗೆ ಆಶ್ರಯ ನೀಡಿ, ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪಿ ಅಬ್ದುಲ್ ಸಲಾಂ ಅಡ್ಡರು ಎಂಬಾತನನ್ನು 19 ವರ್ಷಗಳ ಬಳಿಕ ಬಂಧಿಸಿದ್ದಾರೆ. ಕೃತ್ಯ ನಡೆದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಅಬ್ದುಲ್ ಸಲಾಂ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣದ ದೋಷಾರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, 19 ವರ್ಷಗಳ ಬಳಿಕ ಬಂಧನ Read More »

error: Content is protected !!
Scroll to Top