Author name: Tejas

ಅರಂತೋಡು : ವಾಹನ ಚಾಲಕ ಮಾಲಕ ಸಂಘದ ನೂತನ‌ ಪದಾಧಿಕಾರಿಗಳ ಆಯ್ಕೆ

ಅರಂತೋಡು ವಾಹನ ಮಾಲಕ ಚಾಲಕ ಸಂಘದ ಮಹಾಸಭೆಯು ಆರಂತೋಡು ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜನಾರ್ಧನ ಇರ್ಣೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂದಿನ ೩ವರ್ಷದ ಅವಧಿಗೆ ಅಧ್ಯಕ್ಷರಾಗಿ ಪ್ರಸನ್ನ ಕಲ್ಲಗದ್ದೆ, ಕಾರ್ಯದರ್ಶಿಯಾಗಿ ಗೋವರ್ಧನ ಇರ್ಣೆ, ಖಜಾಂಜಿಯಾಗಿ ಗೋವರ್ಧನ ಬೊಳ್ಳೂರು ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಅರಂತೋಡು : ವಾಹನ ಚಾಲಕ ಮಾಲಕ ಸಂಘದ ನೂತನ‌ ಪದಾಧಿಕಾರಿಗಳ ಆಯ್ಕೆ Read More »

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದಎನ್.ಡಿ.ಎ ಒಕ್ಕೂಟ ಬಹುಮತ ಪಡೆದಿರುವುದು ಖುಷಿಯ ವಿಚಾರ : ಭಾಗೀರಥಿ ಮುರುಳ್ಯ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎನ್.ಡಿ.ಎ ಒಕ್ಕೂಟದ ಅಲೆಗೆ ಕೊಚ್ಚಿಹೊಗಿದ್ದು , ಬಿಜೆಪಿ ನೇತೃತ್ವದ ಎನ್.ಡಿ.ಎ ಪ್ರಚಂಡ ಬಹುಮತವನ್ನು ಪಡೆದು ಅಧಿಕಾರಕ್ಕೇರುತ್ತಿರುವುದು ಖುಷಿಯ ವಿಚಾರ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಮಾದ್ಯಮ ಹೇಳಿಕೆಯಲ್ಲಿ ತಿಳಿಸಿದ ಅವರು ಭ್ರಷ್ಟಾಚಾರ ರಹಿತ ,ದೇಶದ ಭದ್ರತೆ, ಸಮಗ್ರ ಅಭಿವೃದ್ಧಿಗಳಿಂದ ಜನಮನ್ನಣೆ ಗಳಿಸಿರುವ ಬಿಜೆಪಿ ದೇಶದ ಮೂಲೆ ಮೂಲೆಯಲ್ಲಿ ಭದ್ರವಾಗಿ ನೆಲೆಯೂರುತ್ತಿದೆ.ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಸುಳ್ಳು ಭರವಸೆಗಳನ್ನು ಬಿಹಾರದ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದಎನ್.ಡಿ.ಎ ಒಕ್ಕೂಟ ಬಹುಮತ ಪಡೆದಿರುವುದು ಖುಷಿಯ ವಿಚಾರ : ಭಾಗೀರಥಿ ಮುರುಳ್ಯ Read More »

ವಿಷ ಸೇವಿಸಿದ ಹತ್ತನೇ ತರಗತಿಯ ವಿದ್ಯಾರ್ಥಿ ಸಾವು

ಉಪ್ಪಿನಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.ಮೃತಳನ್ನು ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಪುತ್ರಿ ಹರ್ಷಿತಾ (15) ಎಂದು ಗುರುತಿಸಲಾಗಿದೆ.ಉಪ್ಪಿನಂಗಡಿಯ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಈಕೆ ನವೆಂಬರ್ 4ರಂದು ತಲೆನೋವು ಕಾರಣದಿಂದ ಶಾಲೆಗೆ ತೆರಳದೇ ಮನೆಯಲ್ಲಿ ಉಳಿದಿದ್ದಳು. ಈ ವೇಳೆ ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಳಾಗಿದ್ದಾಳೆ.ಘಟನೆಯಾಗುವ ವೇಳೆ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದು ಅಸ್ವಸ್ಥಳಾದ ಮಗಳನ್ನು

ವಿಷ ಸೇವಿಸಿದ ಹತ್ತನೇ ತರಗತಿಯ ವಿದ್ಯಾರ್ಥಿ ಸಾವು Read More »

ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಭಾವನ್ಮಾಕವಾಗಿ, ಧಾರ್ಮಿಕವಾಗಿ ಸದೃಢ ಯುವಜನತೆ ಸದೃಢವಾದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಎಂದು ಸುಳ್ಯ ಎನ್ನೆಂ ಸಿ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಹೇಳಿದರು.ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ವಲಯ ಹಾಗೂಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಾಲ್ಸೂರು ವಲಯ ಹಾಗೂ ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ ಇದರ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ದಲ್ಲಿ ಸಂಪನ್ಮೂಲ

ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಸಾಲು ಮರದ ತಿಮ್ಮಕ್ಕ ಇನ್ನಿಲ್ಲ

: ಕನ್ನಡ ನಾಡಿನ ಹೆಮ್ಮೆಯ ಸಾಧಕಿ ಪದ್ಮಶ್ರೀ ವ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನವೆಂಬರ್ 2ರಿಂದ ಜಯನಗರ ಅಪೊಲೋ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಚಿಕ್ಕಯ್ಯ-ತಿಮ್ಮಯ್ಯ ದಂಪತಿಗೆ ಮಕ್ಕಳಾಗುವುದಿಲ್ಲ. ಮಕ್ಕಳಿಲ್ಲದ ದುಃಖವನ್ನು ಮರೆಯಲು ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ ಇನ್ನಿಲ್ಲ Read More »

ನಾಯಿ ದಾಳಿಗೆ ವ್ಯಕ್ತಿ ಸಾವು

ಉಳ್ಳಾಲ: ನಾಯಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿದ ಘಟನೆ ಉಳ್ಳಾಲದ ಕುಂಪಲದಲ್ಲಿ 14ರಂದು ನಡೆದಿದೆ.ಮೃತ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಬಳಿ ರಸ್ತೆ ಬದಿಯ ಅಂಗಡಿಯ ಎದುರಲ್ಲಿ ಕಳೆದ ರಾತ್ರಿ ದಯಾನಂದ ಮಲಗಿದ್ದರು. ಮದ್ಯಪಾನ ಸೇವಿಸಿ ಮಲಗಿದ್ದ ಇವರ ಮೇಲೆ ಮುಂಜಾನೆ ವೇಳೆ ನಾಯಿ ದಾಳಿ ಮಾಡಿದೆ. ಈ ವೇಳೆ ಅಲ್ಲಿಂದ ರಸ್ತೆಯ ಮತ್ತೊಂದೆಡೆಯ ಮನೆಯತ್ತ ಓಡಿದ್ದರು. ಅಲ್ಲಿಯೂ ಬೆನ್ನಟ್ಟಿದ್ದ ನಾಯಿ

ನಾಯಿ ದಾಳಿಗೆ ವ್ಯಕ್ತಿ ಸಾವು Read More »

ಬಿಹಾರ ಚುನಾವಣೆ ಮತ ಎಣಿಕೆ : 153 ಸ್ಥಾನಗಳೊಂದಿಗೆ ಬಿಜೆಪಿ-ಜೆಡಿಯು ಮೈತ್ರಿಕೂಟ ಭಾರಿ ಮುನ್ನಡೆ

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, 243 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.ಆರಂಭಿಕ ಸುತ್ತುಗಳಲ್ಲಿ ಎನ್‌ಡಿಎ ಮೈತ್ರಿಕೂಟ 152 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 64, ಜೆಡಿಯು 69, ಎಲ್‌ಜೆಪಿ 15, ಎಚ್‌ಎಎಂ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಮಹಾಘಟಬಂಧನ್ ಮೈತ್ರಿಕೂಟ 86 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಆರ್.ಜೆ.ಡಿ 64, ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಲೆಫ್ಟ್ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ. ಮಹುವಾ ಕ್ಷೇತ್ರದಲ್ಲಿ ತೇಜ್ ಪ್ರತಾಪ್‌ ಯಾದವ್‌ ಹಿನ್ನಡೆ ಅನುಭವಿಸಿದ್ದಾರೆ. ರಾಘೋಪುರ ಕ್ಷೇತ್ರದಲ್ಲಿ

ಬಿಹಾರ ಚುನಾವಣೆ ಮತ ಎಣಿಕೆ : 153 ಸ್ಥಾನಗಳೊಂದಿಗೆ ಬಿಜೆಪಿ-ಜೆಡಿಯು ಮೈತ್ರಿಕೂಟ ಭಾರಿ ಮುನ್ನಡೆ Read More »

ಚೆಂಬು : ಕಳ್ಳತನ ಮಾಡಿದ ಆರೋಪಿಗಳ ಬಂಧನ

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಗಡಿಭಾಗದ ಎಂ.ಚೆಂಬು ಗ್ರಾಮದ ನಿವಾಸಿ ವೀರಪ್ಪ ಪಿ.ಪಿ. ರವರ ಮನೆಯಿಂದ ಕಳ್ಳತನ ಮಾಡಿದ್ದ ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಮನೆಯವರು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ರೂಮಿನಲ್ಲಿದ್ದ ಗೋದ್ರೇಜ್‌ನ ಸಣ್ಣ ಕ್ಯಾಶ್ ಲಾಕರ್‌ನಲ್ಲಿ ಇಟ್ಟಿದ್ದ ಅಂದಾಜು ರೂ. 15,000/- ನಗದು ಮತ್ತು 120 ಗ್ರಾಂ ತೂಕದ ಚಿನ್ನಾಭರಣಗಳನ್ನು ನ 5 ರಂದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು.ಮಡಿಕೇರಿ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಡಿಕೇರಿ

ಚೆಂಬು : ಕಳ್ಳತನ ಮಾಡಿದ ಆರೋಪಿಗಳ ಬಂಧನ Read More »

ಸುಳ್ಯ ತಾಲೂಕಿನ ಹಿರಿಯ ಸಹಕಾರಿ ಪಿ.ಸಿ ಜಯರಾಮರಿಗೆ ಸಹಕಾರಿ ರತ್ನ ಪ್ರಶಸ್ತಿ

ಸುಳ್ಯ ತಾಲೂಕಿನ ಹಿರಿಯ ಸಹಕಾರಿ ಧುರೀಣ ಪಿ.ಸಿ.ಜಯರಾಮರಿಗೆ ಕರ್ನಾಟಕ ಸರಕಾರವು ಸಹಕಾರ ರತ್ನ ಪ್ರಶಸ್ತಿ ಘೋಷಿಸಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ ನ. 14 ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ಏರ್ಪಡಿಸಲಾಗುವ ಸಹಕಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸುಳ್ಯ ಬ್ಲಾಕ್‌ನ ಅಧ್ಯಕ್ಷರಾಗಿರುವ ಪಿ.ಸಿ.ಜಯರಾಮರವರು, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷರಾಗಿ ೧೯೯೭ರಿಂದ ೨೦೦೭ ರ ವರೆಗೆ ಹಾಗೂ ೨೦೨೦ರಿಂದ ೨೦೨೫ ರ ವರೆಗೆ

ಸುಳ್ಯ ತಾಲೂಕಿನ ಹಿರಿಯ ಸಹಕಾರಿ ಪಿ.ಸಿ ಜಯರಾಮರಿಗೆ ಸಹಕಾರಿ ರತ್ನ ಪ್ರಶಸ್ತಿ Read More »

ಅರಂತೋಡು : ನ.16ಕ್ಕೆ ಕೊರಗಜ್ಜ ದೈವಕ್ಕೆ ಅಗೆಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 16-11-2025 ರ ವೃಶ್ಚಿಕ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ:7022077809

ಅರಂತೋಡು : ನ.16ಕ್ಕೆ ಕೊರಗಜ್ಜ ದೈವಕ್ಕೆ ಅಗೆಲು ಸೇವೆ Read More »

error: Content is protected !!
Scroll to Top