Author name: Tejas

ನ.19ಕ್ಕೆ ಪುತ್ತೂರಿನಲ್ಲಿ ಅಟಲ್ ವಿರಾಸತ್ ಸಮಾವೇಶ

ಭಾರತದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ನ.19ರಂದು ಪುತ್ತೂರಿನಲ್ಲಿ ಅಟಲ್ ವಿರಾಸತ್ ಸಮಾವೇಶ ನಡೆಯಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು. ದೇಶ ಕಂಡ ಅಪೂರ್ವ ರಾಷ್ಟ್ರಭಕ್ತ ಅಟಲ್ ಬಿಹಾರಿ ವಾಜಪೇಯಿ ಯವರ ಜನಶತಾಬ್ದಿ ಪ್ರಯುಕ್ತ ದೇಶಾದ್ಯಂತ ಅಟಲ್ ವಿರಾಸತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಆ ದಿನ ಬೆಳಗ್ಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೆರವಣಿಗೆ ಆರಂಭವಾಗಿ […]

ನ.19ಕ್ಕೆ ಪುತ್ತೂರಿನಲ್ಲಿ ಅಟಲ್ ವಿರಾಸತ್ ಸಮಾವೇಶ Read More »

ಅರಮನೆಗಯ ಸೇತುವೆ ಮುಂದಿನ ಮಳೆಗಾಲಕ್ಕೆ ಮೊದಲು ಸಂಚಾರಕ್ಕೆ ಮುಕ್ತವಾಗಲಿ : ಶಾಸಕಿ ಭಾಗೀರಥಿ ಮುರುಳ್ಯ

ಅರಂತೋಡು : ಅರೆಮನೆಗಯ ಭಾಗದ ಜನರ ಬಹುಕಾಲದ ಬೇಡಿಕೆ ಇಡೇರುವ ಹಂತದಲ್ಲಿದೆ.ಮುಂದಿನ ಮಳೆಗಾಲಕ್ಕೆ ಮೊದಲು ಈ ಸೇತುವೆ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಲಿ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಅವರು ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮ ಪಂಚಾಯತ್ ಮತ್ತು ಮರ್ಕಂಜ ಗ್ರಾಮ ವ್ಯಾಪ್ತಿಗೆ ಒಳಪಟ್ಟ ಬಲ್ನಾಡ್ ಹೊಳೆಗೆ ಅರಮನೆಗಯ ಎಂಬಲ್ಲಿ‌ ಸುಮಾರು 175 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಇದಕ್ಕೆ ಅನುದಾನ ಮಂಜುರಾಗಲು ಭಾಜಪ ನಾಯಕರು ಸಹಕಾರ

ಅರಮನೆಗಯ ಸೇತುವೆ ಮುಂದಿನ ಮಳೆಗಾಲಕ್ಕೆ ಮೊದಲು ಸಂಚಾರಕ್ಕೆ ಮುಕ್ತವಾಗಲಿ : ಶಾಸಕಿ ಭಾಗೀರಥಿ ಮುರುಳ್ಯ Read More »

ಹುಚ್ಚು ನಾಯಿ ಕಡಿತಗೊಳಗಾದ ಮಹಿಳೆ ಗಂಭೀರ

ಸುಳ್ಯ ತಾಲೂಕಿನ ಸಂಪಾಜೆ ಗ್ರಾನದ ಮಹಿಳೆಯೊಬ್ಬರು ಹುಚ್ಚು ನಾಯಿಯ ಕಡಿತಗೊಳಗಾಗಿ ರೇಬೀಸ್ ರೋಗಕ್ಕೆ ತುತ್ತಾಗಿರುವ ಘಟನೆ ವರದಿಯಾಗಿದೆ.ನೆಲ್ಲಿ ಕುಮೇರಿಯ ಮಹಿಳೆಗೆಯೊಬ್ಬರಿಗೆ ಇತ್ತೀಚೆಗೆ ಹುಚ್ಚು ನಾಯಿಯೊಂದು ಕಡಿದಿತ್ತು ಎನ್ನಲಾಗಿದೆ.ನಾಯಿ ಕಚ್ಚಿದ್ದನ್ನು ಮನೆಯಲ್ಲಿ ಯಾರಿಗೂ ತಿಳಿಸದೆ ಮಹಿಳೆ ಟಿಟಿ ಇಂಜೆಕ್ಷನ್ ಹಾಕಿಸಿಕೊಂಡಿದ್ದರು. ಆದರೆ 40 ದಿನದ ಬಳಿಕ ಅವರಲ್ಲಿ ರೇಬಿಸ್ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಇದೀಗ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ‌ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹುಚ್ಚು ನಾಯಿ ಕಡಿತಗೊಳಗಾದ ಮಹಿಳೆ ಗಂಭೀರ Read More »

ಸಹಪಾಠಿಗಳ ಹಲ್ಲೆಯಿಂದ ವೃಷಣ ಕಳೆದುಕೊಂಡ ವಿದ್ಯಾರ್ಥಿ!

ಮೈಸೂರ : ನಗರದ ಜಯಲಕ್ಷ್ಮೀಪುರಂನಲ್ಲಿರುವ ಖಾಸಗಿ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದ raging ಮತ್ತು ಹಲ್ಲೆಯಿಂದ 8ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಒಂದು ವೃಷಣವನ್ನೇ ಕಳೆದುಕೊಂಡಿರುವ ಹೇಯ ಕ್ರತ್ಯ ವರದಿಯಾಗಿದೆ.ಸಹಪಾಠಿಗಳಿಂದ ನಿರಂತರವಾಗಿ ಹಲ್ಲೆ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದ ಬಾಲಕ ಶಿಕ್ಷಕರಿಗೆ ವಿಷಯ ತಿಳಿಸಿದ್ದ. ಇದೇ ಕೋಪದಿಂದ ಆತನ ಸಹಪಾಠಿಗಳಾದ ಮೂವರು ಅಕ್ಟೋಬ‌ರ್ 25ರಂದು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಬಾಲಕನ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ಗಂಭೀರ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.ನೋವಿನಿಂದ ಬಳಲುತ್ತಿದ್ದ ಬಾಲಕ ಪೋಷಕರಿಗೆ ಘಟನೆ ತಿಳಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ

ಸಹಪಾಠಿಗಳ ಹಲ್ಲೆಯಿಂದ ವೃಷಣ ಕಳೆದುಕೊಂಡ ವಿದ್ಯಾರ್ಥಿ! Read More »

ವಿದ್ಯುತ್ ಕಂಬವೇರಿ ವಿದ್ಯುತ್ ಲೈನ್ ದುರಸ್ತಿ ಮಾಡಿದ ಪ್ರಭಾರ ಜೆ.ಇ

ಅರಂತೋಡು ಮೆಸ್ಕಾಂ ಶಾಖೆಯ ಪ್ರಭಾರ ಜೆ.ಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ವಳಲಂಬೆ ರವರು ಲೈನ್ ದುರಸ್ತಿ ವೇಳೆ ಪವ‌ರ್ ಮ್ಯಾನ್ ಜತೆಗೆ ತಾನೂ ಕೂಡ ಕಂಬ ಹತ್ತಿ ಕೆಲಸ ನಿರ್ವಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನ.10 ರಂದು ಅರಂತೋಡು ಭಾಗಕ್ಕೆ ವಿದ್ಯುತ್‌ ಸಂಪರ್ಕಿಸುವ ಲೈನ್ ನಲ್ಲಿ ಅರಂಬೂರು ಸಮೀಪ ತುರ್ತು ದುರಸ್ತಿ ಆಗಬೇಕಿತ್ತು. ಆ ವೇಳೆಗೆ ಓರ್ವ ಸಿಬ್ಬಂದಿ ಮಾತ್ರ ಇದ್ದ ಹಿನ್ನೆಲೆಯಲ್ಲಿ ಪ್ರಭಾರ ಜೆ.ಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ವಳಲಂಬೆ

ವಿದ್ಯುತ್ ಕಂಬವೇರಿ ವಿದ್ಯುತ್ ಲೈನ್ ದುರಸ್ತಿ ಮಾಡಿದ ಪ್ರಭಾರ ಜೆ.ಇ Read More »

ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ವಿನ್ಯಾ ಪಿ.ಸಿ ಪ್ರಥಮ

ಪಂಜಾಬ್ ನ ಜಾಲಂದರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ಕು.ವಿನ್ಯಾ ಪಿ.ಸಿ ಪ್ತಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿನ್ಯಾ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಚೆನ್ನಪ್ಪ ಗೌಡ ಹಾಗೂ ಪವಿತ್ರಾ ದಂಪತಿಗಳ ಪುತ್ರಿ.

ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ವಿನ್ಯಾ ಪಿ.ಸಿ ಪ್ರಥಮ Read More »

ಬಳ್ಪ : ಗಾರೆಕೆಲಸಕ್ಕೆ ತೆರಳಿದ ವ್ಯಕ್ತಿ ನಾಪತ್ತೆ

ಬಳ್ಪ : ಗಾರೆ ಕೆಲಸಕ್ಕೆಂದು ಹೋದ ವ್ಯಕ್ತಿ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಬಳ್ಪ ಗ್ರಾಮದಲ್ಲಿ ನಡೆದಿದೆ. ಸುಬ್ಬಪ್ಪ ಗೌಡ ಎಂಬವರ ಪುತ್ರ ಚನ್ನಕೇಶವ ಜೋಗಿ ಮನೆ (61) ನಾಪತ್ತೆಯಾದವರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.ಚೆನ್ನಕೇಶವ ಅವರು ಗಾರೆ ಕೆಲಸಕ್ಕೆಂದು ಹೋಗುತ್ತೆನೆಂದು ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ ಎಂದು ಮನೆಯವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಇವರು ಪತ್ತೆಯಾದಲ್ಲಿ ಸುಬ್ರಹ್ಮಣ್ಯ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

ಬಳ್ಪ : ಗಾರೆಕೆಲಸಕ್ಕೆ ತೆರಳಿದ ವ್ಯಕ್ತಿ ನಾಪತ್ತೆ Read More »

ಬಾಲಕನ‌ ಶವ ನದಿಯಲ್ಲಿ ಪತ್ತೆ

ಉಡುಪಿ: ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ಎಂಬ ಬಾಲಕನ ಮೃತದೇಹವು ಸೋಮವಾರ ಪೆರ್ಡೂರು ಬಳಿಯ ಅಲಂಗಾರು ಹೊಳೆಬಾಗಿಲು ನದಿಯಲ್ಲಿ ಪತ್ತೆಯಾಗಿದೆ.ಶ್ರೀಶಾನ್ ಭಾನುವಾರ ತನ್ನ ಸ್ನೇಹಿತನೊಂದಿಗೆ ಸ್ನಾನ ಮಾಡಲು ನದಿಗೆ ಹೋಗಿದ್ದನು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಯಿಂದ ಭಯಭೀತನಾದ ಅವನ ಸ್ನೇಹಿತನು ನಡೆದ ಸಂಗತಿಯನ್ನು ಬಹಿರಂಗಪಡಿಸಿರಲಿಲ್ಲ.ಸಂಬಂಧಿಕರು ಬಾಲಕನಿಗಾಗಿ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಲಿಲ್ಲ. ನಂತರ, ಪೊಲೀಸರು ಶ್ರೀಶಾನ್ ಸ್ನೇಹಿತನನ್ನು ವಿಚಾರಣೆಗೊಳಪಡಿಸಿದಾಗ ಘಟನೆಯ ಬಗ್ಗೆ ತಿಳಿದುಬಂದಿದೆ.ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ‌ ಶವ ನದಿಯಲ್ಲಿ ಪತ್ತೆ Read More »

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸುಂದರಿ ಮುಂಡಡ್ಕ ಆಯ್ಕೆ

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ಆದೇಶದ ಮೇರೆಗೆ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಶ್ರೀಮತಿ ಸುಂದರಿ ಮುಂಡಡ್ಕ ಆಯ್ಕೆಯಾಗಿದ್ದಾರೆ‌. ಇವರನ್ನು .ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚಾನ್ ಆಯ್ಕೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸುಂದರಿ ಮುಂಡಡ್ಕ ಆಯ್ಕೆ Read More »

error: Content is protected !!
Scroll to Top