Author name: Tejas

ಕುಮಾರಧಾರ ನದಿಗೆ ವ್ಯಕ್ತಿ ಹಾರಿರುವ ಶಂಕೆ: ಬಿರುಸಿನ ಹುಡುಕಾಟ ಆರಂಭ

ಕುಮಾರಧಾರ ನದಿಗೆ ವ್ಯಕ್ತಿಯೊಬ್ಬ ಹಾರಿರುವ ಶಂಕೆ ಮೂಡಿದೆಕಡಬ ತಾಲೂಕಿನ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಎಂಬವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ನದಿ ಬದಿಯಲ್ಲಿ ಧರ್ಮಯ್ಯ ಅವರ ಶೂ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೌರ್ಯ ತಂಡದ ಸದಸ್ಯರಿಂದ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ. ಧರ್ಮಯ್ಯ ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳಕ್ಕೆ ಬಂದಿದ್ದ ಎನ್ನಲಾಗಿದೆ. ಹೆಚ್ಚಿನ […]

ಕುಮಾರಧಾರ ನದಿಗೆ ವ್ಯಕ್ತಿ ಹಾರಿರುವ ಶಂಕೆ: ಬಿರುಸಿನ ಹುಡುಕಾಟ ಆರಂಭ Read More »

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ : ನಳಿನ್ ಕುಮಾರ್ ಕಟೀಲ್

ಮಂಗಳೂರು : ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ : ನಳಿನ್ ಕುಮಾರ್ ಕಟೀಲ್ Read More »

ರುಬಿನಗೆ ವೀಲ್ ಚೇರ್ ವಿತರಣೆ

ಅಜ್ಜಾವರ: ಶ್ರೀರಕ್ಷ ಸಂಘದ ರುಬಿನ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ಅನ್ನು ಗ್ರಾಮದ ಪ್ರಥಮ ಪ್ರಜೆಯಾದ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷಸತ್ಯವತಿ ಬಸವನ ಪಾದೆ ಮೂಲಕ ವಿತರಿಸಲಾಯಿತು.ಈ ಸಂದರ್ಭ ಅಡಪಂಗಾಯ ಒಕ್ಕೂಟದ ಅಧ್ಯಕ್ಷ ಬೇಬಿ, ವಲಯದ ಮೇಲ್ವಿಚಾರಕಿ ವಿಶಾಲ, ಸೋಲಾರ್ ಸಿಬ್ಬಂದಿ ರಂಜಿತ್, ಸೇವಾ ಪ್ರತಿನಿಧಿ ರಜನಿ ಉಪಸ್ಥಿತರಿದ್ದರು.

ರುಬಿನಗೆ ವೀಲ್ ಚೇರ್ ವಿತರಣೆ Read More »

ತಾಯಿ ಮಗು ಸಾವು: ಕುಟುಂಬಸ್ಥರ ಆಕ್ರಂದನ

ಪುತ್ತೂರು: ಯುವತಿಯೋರ್ವಳು ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಜೂ. 20ರ ರಾತ್ರಿ ನಡೆದಿದೆ.ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಮೃತಳು. ಇದೀಗ ಅವರ ಹಸುಗೂಸು ಮೂರು ದಿನದ ಬಳಿಕ ಗುರುವಾರ ಮುಂಜಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು,

ತಾಯಿ ಮಗು ಸಾವು: ಕುಟುಂಬಸ್ಥರ ಆಕ್ರಂದನ Read More »

ನವೋದಯ ಪ್ರವೇಶ ಪರೀಕ್ಷೆಯಲ್ಲಿ ಹೇಮಾನ್ಯ ಉತ್ತಿರ್ಣ

ತೊಡಿಕಾನ: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಹೇಮಾನ್ಯ ಕಾಡುಪಂಜ ಏ. 29 ರಂದು ನಡೆದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ವಿದ್ಯಾಸಂಸ್ಥೆಗೆ ಆಯ್ಕೆಯಾಗಿದ್ದಾರೆ.ಹೇಮಾನ್ಯ ಕಾಡುಪಂಜ ಚಿದಾನಂದ ಮತ್ತು ರೂಪಶ್ರೀ ದಂಪತಿಗಳ ಪುತ್ರಿ. ಸ್ಟಡಿ ಲಿಂಕ್ ಟ್ಯೂ ಟೋರಿಯಲ್ ಕಲ್ಲುಗುಂಡಿ ಇಲ್ಲಿನ ವಿದ್ಯಾರ್ಥಿಯಾಗಿರುವ ಹೇಮಾನ್ಯ, ಸ್ಟಡಿ ಲಿಂಕ್ ಟ್ಯೂ ಟೋರಿಯಲ್ ನ ಹರೀಶ್ ಊರುಬೈಲ್ ಮತ್ತು ಧನ್ಯ ಊರುಬೈಲು ಇವರಿಂದ ತರಬೇತಿ ಪಡೆದಿರುತ್ತಾರೆ .ಹಾಗೂ ಈ ಸಂಸ್ಥೆಯ ಒಟ್ಟು 6 ಮಂದಿ ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.ಪ್ರತಿ

ನವೋದಯ ಪ್ರವೇಶ ಪರೀಕ್ಷೆಯಲ್ಲಿ ಹೇಮಾನ್ಯ ಉತ್ತಿರ್ಣ Read More »

ಪಿಕಪ್-ಕಾರು ಡಿಕ್ಕಿ: ಅಪಾಯದಿಂದ ಪಾರಾದ ಸವಾರರು

ಬೊಳುಬೈಲು : ಸುಳ್ಯ ತಾಲೂಕಿನ‌ ಜಾಲ್ಸೂರು ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೊಳುಬೈಲು ಸಮೀಪ ಪಿಕಪ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂ ಗೊಂಡ ಘಟನೆ ಜೂ. 22 ರಂದು ರಾತ್ರಿ ವರದಿಯಾಗಿದೆ.ಸುಳ್ಯದಿಂದ ಪುತ್ತೂರಿನತ್ತ ಹೋಗುತ್ತಿದ್ದ ಪಿಕಪ್ ಹಾಗೂ ಪುತ್ತೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪಿಕಪ್-ಕಾರು ಡಿಕ್ಕಿ: ಅಪಾಯದಿಂದ ಪಾರಾದ ಸವಾರರು Read More »

ಗಿಡ ನೆಡುವ ಮೂಲಕ ಪರಿಸರ ಜಾಗೃತಿ

ಮಂಡೆಕೋಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಅಧ್ಯಕ್ಷ ಸುರೇಶ್ ಕಣೆಮರಡ್ಕ ವಹಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ ಕಾರ್ಯಕ್ರಮ ಉದ್ಘಾಟಿಸಿದರು. ಹಾಸನ ವಲಯ ಮೀಸಲು ಪೊಲೀಸ್ ಪಡೆಯ ಅಧಿಕಾರಿ ದಿನೇಶ್ ಪರಿಸರ ಜಾಗೃತಿ ಬಗ್ಗೆ ಉಪನ್ಯಾಸ ನೀಡುದರು. ವೇಧಿಕೆಯಲ್ಲಿ ಅಜ್ಜಾವರ ವಲಯ ಮೇಲ್ವಿಚಾರಕಿವಿಶಾಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ಉಪಸ್ಥಿತರಿದ್ದರು. ಈ

ಗಿಡ ನೆಡುವ ಮೂಲಕ ಪರಿಸರ ಜಾಗೃತಿ Read More »

ದೇವರಕೊಲ್ಲಿಯಲ್ಲಿ ಭೀಕರ ಅಪಘಾತ :ಓರ್ವ ಸಾವು

ದೇವರಕೊಲ್ಲಿ ಬಳಿ ಸ್ವಿಫ್ಟ್ ಕಾರು ಹಾಗೂ ಕಂಟೈನರ್ ನಡುವೆ ಬುಧವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಾಲ್ವರಲ್ಲಿ ಕಾರಿನಲ್ಲಿದ್ದ ಒರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಪುನಃ ಬೆಂಗಳೂರಿಗೆ ಹಿಂತಿರುಗುತ್ತಿದ್ದರೆನ್ನಲಾಗಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಂಟೈನರ್ ಚಾಲಕನಿಗೂ ಗಂಭೀರ ಗಾಯಗಳಾಗಿವೆ

ದೇವರಕೊಲ್ಲಿಯಲ್ಲಿ ಭೀಕರ ಅಪಘಾತ :ಓರ್ವ ಸಾವು Read More »

ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು

ಬೆಳ್ಳಾರೆ, ಪೆರುವಾಜೆ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಗ್ರಾಮೀಣ ಸಮುದಾಯ ಶಿಬಿರವನ್ನು ಉತ್ತರ  ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಊರುಕೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಊರುಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶಾನುಭಾಗ್ ಇವರು ‘ವಿದ್ಯಾರ್ಥಿ ಜೀವನದಲ್ಲಿ ಗ್ರಾಮೀಣ ಅಧ್ಯಯನ ಶಿಬಿರವು ಒಂದು ಗ್ರಾಮದ ಸಂಪ್ರದಾಯ, ಆಚಾರ ವಿಚಾರಗಳನ್ನು ಸ್ವಾಂಗೀಕರಣ ಮಾಡಲು ಸಹಕಾರಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಎಲ್ಲಾ ಸೌಕರ್ಯಗಳಿಗೆ ಹೊಂದಿಕೊಂಡು ಬಾಳುವುದರ ಜೊತೆಗೆ ಸರ್ವತೋಮುಖ ಬೆಳವಣಿಗೆ ಉಂಟಾಗುತ್ತದೆ’ಎಂದರು. ಕಾರ್ಯಕ್ರಮದ ಪ್ರಾಸ್ತಾವಿಕ

ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು Read More »

ವಿದ್ಯಾರ್ಥಿಗಳ ನಡುವೆ ಬಸ್ಸು ನಿಲ್ದಾಣದಲ್ಲಿ ಹೊಡೆದಾಟ ,ಪ್ರಕರಣ ದಾಖಲು

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಸ್ ನಿಲ್ದಾಣ ಪರಿಸರದಲ್ಲಿ ವಿದ್ಯಾರ್ಥಿಗಳ ಗುಂಪಿನೊಳಗೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿ 8 ಮಂದಿ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಕ್ಷುಲ್ಲಕ ಕಾರಣವನ್ನು ಮುಂದಿರಿಸಿ ಬಸ್ ನಿಲ್ದಾಣದಲ್ಲಿ ಸಂಘರ್ಷ ನಿರತ ವಿದ್ಯಾರ್ಥಿಗಳ ಗುಂಪನ್ನು ಕರ್ತವ್ಯದಲ್ಲಿದ್ದ ಪೊಲೀಸರು ಸಮಾಧಾನಿಸಿ ಚದುರಿಸಲು ಯತ್ನಿಸಿದರೂ ಲೆಕ್ಕಿಸದೆದೂಡಾಟ ಹೊಡೆದಾಟದಲ್ಲಿ ತೊಡಗಿದ್ದ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಗಿರೀಶ್ (21) , ಅಭಿತ್ (20) , ಧನುಷ್ (19) , ಮೋಹನ್‌ (19) ನಂದನ್ (19), ವಿನ್ಯಾಸ್ (18)

ವಿದ್ಯಾರ್ಥಿಗಳ ನಡುವೆ ಬಸ್ಸು ನಿಲ್ದಾಣದಲ್ಲಿ ಹೊಡೆದಾಟ ,ಪ್ರಕರಣ ದಾಖಲು Read More »

error: Content is protected !!
Scroll to Top