Author name: Tejas

ಭೀಕರ ಕಾರು ಅಪಘಾತದಲ್ಲಿ ಕುದ್ಮಾರಿನ‌ ಯುವಕ ಸಾವು

ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಕಾರು ಚಾಲಕ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ರಾ.ಹೆ.75ರ ಮೆಲ್ಕಾರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಕಡಬ ತಾಲೂಕಿನ ಸವಣೂರು ಸಮೀಪದ ಕುದ್ಮಾರು ನಿವಾಸಿ ಕಾರ್ತಿಕ್(23) ಸಾವನ್ನಪ್ಪಿದ ಯುವಕ ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ಸವಣೂರು ನಿವಾಸಿಗಳಾದ ಹರ್ಷಿತ್, ದೀಕ್ಷಿತ್, ಜಗದೀಶ್ ಮತ್ತು ನಿತಿನ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಉದ್ಯೋಗದ ಸಂದರ್ಶನ ಮುಗಿಸಿ ಉದ್ಯೋಗಕ್ಕೆ ಆಯ್ಕೆಯಾಗಿ ಮಂಗಳೂರಿನಿಂದ ಸವಣೂರಿನತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಭೀಕರ ಕಾರು ಅಪಘಾತದಲ್ಲಿ ಕುದ್ಮಾರಿನ‌ ಯುವಕ ಸಾವು Read More »

ನಿಜವಾಯಿತ್ತು ಅಂಜನಾ ಪ್ರಶ್ನೆ ಚಿಂತನೆ,15 ದಿವಸಗಳ ಬಳಿಕ ಯುವಕ ಕಾಡಿನಲ್ಲಿ ಪತ್ತೆ!

ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದ ದೇವಸ್ತುರು ನಿಂದ ಕಳೆದ 15 ದಿನಗಳಿಂದ ನಾಪತ್ತೆ ಯಾಗಿ ಮನೆಯವರಿಗೆ ಆತಂಕ ಮೂಡಿಸಿದ್ದ ಸೋಮೇಟ್ಟಿ ಕೀರ್ತನ್ (31) ಮಾಂದಳಲಪಟ್ಟಿ ಅರಣ್ಯದಲ್ಲಿ ಜೀವಂತವಾಗಿ ಪತ್ತೆ ಯಾಗಿದ್ದಾನೆ. 15 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕೀರ್ತನ್ ಸ್ಥಳೀಯವಾಗಿ ಹುಡುಕಾಟ ನಡೆಸಲಾಗಿತ್ತು, ಅಂಜನಾ ಪ್ರಶ್ನೆ ಮೂಲಕ ಅರಣ್ಯದ ಒಳಗೆ ತೆರಳಿರುವ ಬಗ್ಗೆ ಸೂಚನೆ ನೀಡಲಾಗಿತ್ತು, ಜೊತೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿತ್ತು. ಇಂದು ಬೆಳಗ್ಗೆ ಅರಣ್ಯ ಪದೇಶದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ

ನಿಜವಾಯಿತ್ತು ಅಂಜನಾ ಪ್ರಶ್ನೆ ಚಿಂತನೆ,15 ದಿವಸಗಳ ಬಳಿಕ ಯುವಕ ಕಾಡಿನಲ್ಲಿ ಪತ್ತೆ! Read More »

ನ.28ಕ್ಕೆ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು‌ ತಿಳಿದು ಬಂದಿದೆ.ಶ್ರೀ ಕೃಷ್ಣಮಠಕ್ಕೆ ಆಗಮಿಸಲಿರುವ ಅವರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ.ಗೀತಾ ಜಯಂತಿ ಯ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯಲಿರುವ “ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವ” ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.

ನ.28ಕ್ಕೆ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ Read More »

ತುಳು ಸ‌ಮ್ಮೇಳನದ ಮನವಿ ಪತ್ರ ಬಿಡುಗಡೆಗೊಳಿಸಿದ ಡಾ/ ವಿರೇಂದ್ರ ಹೆಗ್ಗಡೆ

ಡಿಸೆಂಬರ್ ತಿಂಗಳಿನಲ್ಲಿ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳಬ ಕಡಬದಲ್ಲಿ ನಡೆಯಲಿದ್ದು ಸಮ್ಮೇಳನದ ಮನವಿ ಪತ್ರವನ್ನು ಅ.27ರಂದು ಧರ್ಮಸ್ಥಳದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.ನೇತ್ರಾವತಿ ತುಳುಕೂಟ ರಾಮಕುಂಜ ಇವರ ನೇತೃತ್ವದಲ್ಲಿ ತೆಗ್‌ರ್ ತುಳುಕೂಟ ನೂಜಿಬಾಳ್ತಿಲ ಇದರ ಆಶ್ರಯದಲ್ಲಿ ಕಡಬ ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮಿ ಜನಾರ್ದನ ಆಂಜನೇಯ ದೇವಸ್ಥಾನದಲ್ಲಿ ಈ ಸಮ್ಮೇಳನ ನಡೆಯಲಿದೆ.ಈ ಸಂದರ್ಭದಲ್ಲಿ ನೇತ್ರಾವತಿ ತುಳುಕೂಟದ ಅಧ್ಯಕ್ಷ ಕೆ.ಸೇಸಪ್ಪ ರೈ, ನೂಜಿಬಾಳ್ತಿಲ ತೆಗ್‌ರ್ ತುಳುಕೂಟದ ಸಂಚಾಲಕ ಉಮೇಶ್ ಸಾಯಿರಾಮ್, ಶ್ರೀ

ತುಳು ಸ‌ಮ್ಮೇಳನದ ಮನವಿ ಪತ್ರ ಬಿಡುಗಡೆಗೊಳಿಸಿದ ಡಾ/ ವಿರೇಂದ್ರ ಹೆಗ್ಗಡೆ Read More »

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ )ಇದರ ವತಿಯಿಂದ ನಿವೇದಿತಾ ಜಯಂತಿ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ )ಇದರ ವತಿಯಿಂದ ನಿವೇದಿತಾ ಜಯಂತಿ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಈ ದಿನ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಪುಷ್ಟಮೇದಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ದಮಯಂತಿ ಅಡ್ಕಬಲೆ, ಶ್ರೀಮತಿ ಲಕ್ಷ್ಮಿ ಬಿ. ಎಸ್ ಮಾವಂಜಿ, ಶ್ರೀಮತಿ ಶ್ಯಾಮಲ ಬೊಳ್ಳಾಜೆ, ಶ್ರೀಮತಿ ತೀರ್ಥ ಕುಮಾರಿ ನೆಲ್ಲೂರು ಕೆಮ್ರಾಜೆ ದೀಪ ಬೆಳಗಿಸಿ , ಭಾರತಮಾತೆ ಮತ್ತು ನಿವೇದಿತಾ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ. ಸಾಮೂಹಿಕ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ )ಇದರ ವತಿಯಿಂದ ನಿವೇದಿತಾ ಜಯಂತಿ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ Read More »

ಮಂಡೆಕೋಲು : 21 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ , ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಅಕ್ಟೋಬರ್ 26 ರಂದು ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಯೋಜನೆಯ ಅಜ್ಜಾವರ ವಲಯಕ್ಕೆ ಸಂಬಂಧಿಸಿದ ಮಂಡೆಕೋಲು ಗ್ರಾಮದ ನಾಲ್ಕು ಒಕ್ಕೂಟಗಳಾದ ಮಂಡೆಕೋಲು, ಕಲ್ಲಡ್ಕ-ಪೆರಾಜೆ, ಪೇರಾಲು ಹಾಗೂ ಪೇರಾಲು-ಅಂಬ್ರೋಟಿ-ಎ ಒಕ್ಕೂಟಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.ಆ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ವಹಿಸಿದ್ದರು.

ಮಂಡೆಕೋಲು : 21 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ , ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ Read More »

ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮ ಹತ್ಯೆ

ಸುಳ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಜಟ್ಟಿಪಳ್ಳದ ಕಾನತ್ತಿಲ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ದುಗಲಡ್ಕದ ಕೇಶವ ಪೂಜಾರಿ ಎಂಬವರ ಮಗ ವೀಕ್ಷಿತ್(19) ಆತ್ಮಹತ್ಯೆಗೆ ಶರಣಾದವರು. ಇಂದು ಕಾಲೇಜಿನಲ್ಲಿ ಪರೀಕ್ಷೆ ಬರೆದು ರೂಂಗೆ ಬಂದ ವೀಕ್ಷಿತ್ ರೂಂನಲ್ಲಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿದಿನ ವೀಕ್ಷಿತ್ ತನ್ನ ತಾಯಿ ಪದ್ಮನಿ ಅವರನ್ನು ಅವರು ಕೆಲಸ ಮಾಡುವ ಜಾಗದಿಂದ ಮನೆಗೆ ಕರೆದುಕೊಂಡು ಬರುತ್ತಿದ್ದರು.ಆದರೆ ಇಂದು ಬಂದಿರಲಿಲ್ಲ. ಕರೆ ಮಾಡಿದ್ರೆ ಕಾಲ್ ಕೂಡ ರಿಸೀವ್ ಮಾಡಿರಲಿಲ್ಲ..

ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮ ಹತ್ಯೆ Read More »

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ಪಾಷಾಣಮೂರ್ತಿ ಅಮ್ಮನವರ ದೈವಸ್ಥಾನದಲ್ಲಿ ಶ್ರೀ ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ (ಅಗೇಲು ಸೇವೆ) ಕಾರ್ಯಕ್ರಮ ಅ. ೨೮ರಂದು ಹಗಲು ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿಯವರು, ಜೀರ್ಣೋದ್ದಾರ ಸಮಿತಿ ಯವರು, ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರಿಗೆ ಸಮ್ಮಾನ Read More »

ತೊಡಿಕಾನ : ಹಾಸ್ಪಾರೆ ಅಪ್ಪಯ್ಯ ಗೌಡ ನಿಧನ

ತೊಡಿಕಾನ ಗ್ರಾಮದ ಹಾಸ್ಪಾರೆ ಅಪ್ಪಯ್ಯ ಗೌಡ ಅವರು ಅಸೌಖ್ಯದಿಂದ ತಮ್ಮ ಮನೆಯಲ್ಲಿ ಅ.28ರಂದು ನಿಧನರಾದರು.ಅವರಿಗೆ ಸುಮಾರು 70 ವರ್ಷ ಪ್ರಾಯವಾಗಿತ್ತು.ಮ್ರತರು ಪತ್ನಿ,ಮಕ್ಕಳಾದ ಭಾರತಿ,ಕವಿತ,ಸವಿತ ಮತ್ತು ಸತೀಶ ಅಳಿಯಂದಿರನ್ನು ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು ಅಗಲಿದ್ದಾರೆ.

ತೊಡಿಕಾನ : ಹಾಸ್ಪಾರೆ ಅಪ್ಪಯ್ಯ ಗೌಡ ನಿಧನ Read More »

ಸಹಾಯಕ ಸಬ್ ಇನ್ಸ್ ಪೆಕ್ಟರ್ ಉದಯ ಕೈಪಡ್ಕ ನಿಧನ

ಸಂಪಾಜೆ ಗ್ರಾಮದ ಕೈಪಡ್ಕದ ನಿವಾಸಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಉದಯ ಹನಿಯಡ್ಕ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಅನಾರೋಗ್ಯ ದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಉದಯ ಹನಿಯಡ್ಕ ಆನಂದ ಗೌಡ ಹಾಗೂ ರುಕ್ಮಿಣಿ ದಂಪತಿಗಳ ಪ್ರಥಮ ಪುತ್ರ.

ಸಹಾಯಕ ಸಬ್ ಇನ್ಸ್ ಪೆಕ್ಟರ್ ಉದಯ ಕೈಪಡ್ಕ ನಿಧನ Read More »

error: Content is protected !!
Scroll to Top