Author name: Tejas

ಅರಂಬೂರು : ಇಂದು ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಶುಭಾರಂಭ

ಸುಳ್ಯ ನಗರ ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನವರಸಗಳ ರಸಪಾಕದ ಖಾದ್ಯಗಳನ್ನು ಉಣಬಡಿಸುವ ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಸೆ.24ರಂದು ಶುಭಾರಂಭಗೊಳ್ಳುತಿದೆ. ರಸಪಾಕ ಗ್ರೂಪ್‌ನ ಈ ನೂತನ ಹೋಟೆಲ್‌ನಲ್ಲಿ ದೇಶದ ಎಲ್ಲಾ ವಿಧದ ಸಸ್ಯಾಹಾರಿ ಖಾದ್ಯಗಳು ದೊರೆಯುವ ರುಚಿ ವೈವಿಧ್ಯತೆಯ ತಾಣವಾಗಲಿದೆ.ಉತ್ತರ ಭಾರತದ ಎಲ್ಲಾ ಸಸ್ಯಾಹಾರಿ ಊಟ ಉಪಹಾರಗಳು, ಜೈನ್ಸ್ ಫುಡ್‌ಗಳು, ಚೈನೀಸ್ ಖಾದ್ಯಗಳು, ರುಚಿ ವೈವಿಧ್ಯತೆಯ ಚಾರ್ಟ್ಸ್ಗಳು, ಫ್ರೆಶ್ ಜ್ಯೂಸ್, ಐಸ್‌ಕ್ರೀಂ ಸೇರಿದಂತೆ ಎಲ್ಲಾ ವರ್ಗದವರಿಗೂ ಇಷ್ಟವಾಗುವ ಎಲ್ಲಾ ಊಟ, ಉಪಾಹಾರಗಳು ಅತ್ಯಂತ […]

ಅರಂಬೂರು : ಇಂದು ನೂತನ ಹೋಟೆಲ್ ‘ಶ್ರೀಕೃಷ್ಣ ರಸಪಾಕ ಗ್ರಾಂಡ್’ ಶುಭಾರಂಭ Read More »

ಪಡ್ರೆ ಲಕ್ಷ್ಮಣ ಗೌಡ ನಿಧನ

ಸುಳ್ಯ ಮೂಲತ ಸುಳ್ಯ ಗಾಂಧಿನಗರ ನಿವಾಸಿ, ಉಪ್ಪಿನಂಗಡಿಯಲ್ಲಿ ಚಾಲಕರಾಗಿದ್ದ ಪಡ್ರೆ ಲಕ್ಷ್ಮಣ ಗೌಡ(62) ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 23 ರಂದು ಉಪ್ಪಿನಂಗಡಿಯ ಮನೆಯಲ್ಲಿ ನಿಧನರಾದರು.ಮೃತರು ಪತ್ನಿ ವಸಂತಿ, ಪುತ್ರ ಮನೋಹರ, ಪುತ್ರಿ ಗುಣಶ್ರೀ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ಪಡ್ರೆ ಲಕ್ಷ್ಮಣ ಗೌಡ ನಿಧನ Read More »

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪೌರಾಡಳಿತ ಮತ್ತು ಹಜ್ಜ್ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನ

ಕರ್ನಾಟಕ ಸರಕಾರದ ಪೌರಾಡಳಿತ ಮತ್ತು ಹಜ್ಜ್ ಸಚಿವರಾದ ರಹೀಂ ಖಾನ್ ರವರು ಸೆ.21 ರಂದು ಅರಂತೋಡು ಟಿ.ಎಂ ಶಹೀದ್ ತೆಕ್ಕಿಲ್ ರವರ ತೆಕ್ಕಿಲ್ ನಿವಾಸಕ್ಕೆ ಭೇಟಿ ನೀಡಿದರು. ಸಂಧರ್ಭದಲ್ಲಿ ಅವರನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನದಲ್ಲಿ ಸುಳ್ಯಕ್ಕೆ ವಿಶೇಷ ಅನುದಾನವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಸುಳ್ಯ ನಗರ

ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪೌರಾಡಳಿತ ಮತ್ತು ಹಜ್ಜ್ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನ Read More »

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿ ವ್ಯಕ್ತಿ ಸಾವು

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬದಿಯಡ್ಕದಿಂದ ವರದಿಯಾಗಿದೆ. ಮೃತರನ್ನು ಬದಿಯಡ್ಕದ ಚುಲ್ಲಿಕ್ಕಾನದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ತಿಳಿದು ಬಂದಿದೆ.ಭಾನುವಾರ ಸಂಜೆ ವಿನ್ಸೆಂಟ್ ತನ್ನ ಮನೆಯ ಸಮೀಪವಿರುವ ಸಣ್ಣ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದಾಗ ಈ ಘಟನೆ ನಡೆದಿದೆ. ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಅವರು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಅವರನ್ನು ತಕ್ಷಣ ಕುಂಬ್ಳೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರಲ್ಲಿ ಅವರು ತಲುಪುವ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.ವಿನ್ಸೆಂಟ್ ಬೇಲಾ ಕಟ್ಟತಂಗಡಿಯ ವೆಲ್ಡಿಂಗ್ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು.

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿ ವ್ಯಕ್ತಿ ಸಾವು Read More »

ಪೆರಾಜೆ : ಹೃದಯಾಘಾತದಿಂದ ನಿಧನ

ಪೆರಾಜೆ ಗ್ರಾಮದ ಪೆರುಮುಂಡ ನರೇಂದ್ರ ಪಿ.(51)ಅವರು ಹೃದಯಾಘಾತದಿಂದ ಸೆ. ೨೨ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಬೆಳಿಗ್ಗೆ ಎದೆನೋವು ಬಂದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ತಾಯಿ ಕಮಲ, ಪತ್ನಿ ಸುಲೋಚನಾ, ಮಕ್ಕಳಾದ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

ಪೆರಾಜೆ : ಹೃದಯಾಘಾತದಿಂದ ನಿಧನ Read More »

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿನವರಾತ್ರಿಯ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ದಿನಾಂಕ 22/9/2025 ರಂದು ನವರಾತ್ರಿ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬ ಉದ್ಘಾಟನೆಗೊಂಡಿತು.ಕಾರ್ಯಕ್ರಮವನ್ನು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶ್ರೀಯುತ .ನಿತ್ಯಾನಂದ ಮುಂಡೋಡಿ ಅವರು ಉದ್ಘಾಟಿಸಿ ಶಾಲೆ ಹಾಗೂ ಕಾರ್ಯಕ್ರಮದ ಕುರಿತು ಮಾತನಾಡಿ ಶುಭ ಹಾರೈಸಿದರು. ಗೊಂಬೆ ಹಬ್ಬದ ಮಹತ್ವ ಹಾಗೂ ವಿಶೇಷತೆಯನ್ನು ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ ಅವರು ವಿವರಿಸಿದರು . ರಾಮ, ಲಕ್ಷ್ಮಣ , ಸೀತಾ , ಹನುಮಂತ ಜೊತೆಗೆ ಶಾರದೆ , ಲಕ್ಷ್ಮೀ, ಸರಸ್ವತಿ, ನವದುರ್ಗೆಯರಾಗಿ ಹಾಗೂ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿನವರಾತ್ರಿಯ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ Read More »

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ ಬೇಂದ್ರೆ ರಾಷ್ಟ್ರಪ್ರಶಸ್ತಿ

ಬೆಳಕು ಸಾಹಿತ್ಯಿಕ,ಶೈಕ್ಷಣಿಕ,ಸಾಂಸ್ಕೃತಿಕ ಟ್ರುಸ್ಟ್(ರಿ)ರಾಯಚೂರು ಇದರ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಸೆ:21 ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜರುಗಿದೆ. ಇಲ್ಲಿ ನೀಡುವ ದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರ’ಸರಿಯಾಗಲಿ ಸಮಾಜ’ಎಂಬ ಕವನ ಆಯ್ಕೆಯಾಗಿದ್ದು’ನೆನಪಿನ ಬುತ್ತಿ’ ಸಂಪಾದಿತ ಕವನ ಸಂಕಲನದಲ್ಲೂ ಅದು ಸ್ಥಾನ ಪಡೆದಿರುವುದಕ್ಕೆ ಇವರುದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಣ್ಯರ ಸಮಕ್ಷಮ ಸ್ವೀಕರಿಸಿದರು.

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ ಬೇಂದ್ರೆ ರಾಷ್ಟ್ರಪ್ರಶಸ್ತಿ Read More »

ಅಡ್ತಲೆ : ನೂತನ ಚಂದನಾ ಮಹಿಳಾ ಮಂಡಳ ಅಸ್ತಿತ್ವಕ್ಕೆ

ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನೂತನವಾಗಿ ಚಂದನಾ ಮಹಿಳಾ ಮಂಡಳಾ ರಚನೆಗೊಂಡಿದೆ.ಮಹಿಳಾ ಮಂಡಳ ಅಧ್ಯಕ್ಷರಾಗಿ ಸರಸ್ವತಿ ಚಿದಾನಂದ ಅಡ್ತಲೆಉಪಾಧ್ಯಕ್ಷರಾಗಿ ಯಶೋದ ಜಯರಾಮ ಅಡ್ತಲೆಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಅಜಿತ್ ಪಿಂಡಿಮನೆಕೋಶಧಿಕಾರಿಯಾಗಿ ದಿವ್ಯ ಮೋಹನ್ ಅಡ್ತಲೆ ಆಯ್ಕೆಯಾಗಿದ್ದಾರೆ.ನಿರ್ದೆಶಕರಾಗಿ ಶ್ಯಾಮಲಾ ಹರಿಪ್ರಸಾದ್ ಅಡ್ತಲೆ,ಸುಜಯ ಲೋಹಿತ್ ಮೇಲಡ್ತಲೆ, ಲತಾ ಜಯರಾಮ ಮೇಲಡ್ತಲೆ, ಕವಿತಾ ವಿಶ್ವನಾಥ್ ಅಡ್ತಲೆ, ವಿಮಲಾ ಶಶಿಕುಮಾರ್ ಉಳುವಾರು, ಜಯಲತಾ ಭವಾನಿಶಂಕರ್ ಅಡ್ತಲೆ, ದಿನೇಶ್ವರಿ ಶಿವರಾಮ ಪಿಂಡಿಮನೆ, ಹಸ್ತವಿ ಹೇಮಾಕುಮಾರ ಚೀಮಾಡು ಆಯ್ಕೆಗೊಂಡರು.ಸದಸ್ಯರಾಗಿ ಮನಿಮಾಲ ಅಡ್ತಲೆ ,ವಸಂತಿ ಪಿಂಡಿಮನೆ,ಜಯಂತಿ

ಅಡ್ತಲೆ : ನೂತನ ಚಂದನಾ ಮಹಿಳಾ ಮಂಡಳ ಅಸ್ತಿತ್ವಕ್ಕೆ Read More »

ಕಲ್ಲಿನ ಕೋರೆಯ ನೀರಲ್ಲಿ ಮುಳುಗಿ ಬಾಲಕ ಸಾವು

ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಬಕ ಬಳಿ ಕಲ್ಲಿನ ಕೋರೆಯಲ್ಲಿ ನಡೆದಿದೆ.ಮೃತರನ್ನು ಕಬಕ ಕಲ್ಲಂದಡ್ಕ ನಿವಾಸಿ ಅಜ್ವಾನ್‌ (13)ಎಂದು ಗುರುತಿಸಲಾಗಿದೆ.ಸ್ನೇಹಿತರ ಜೊತೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಲ್ಲಿನ ಕೋರೆಯ ನೀರಲ್ಲಿ ಮುಳುಗಿ ಬಾಲಕ ಸಾವು Read More »

ಪೂರ್ಣಿಮಾ ಪೆರ್ಲಂಪಾಡಿಮಡಿಕೇರಿ ದಸರಾ ಕವಿಗೋಷ್ಠಿ ಗೆ ಆಯ್ಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಕೊಳ್ತಿಗೆ ವಲಯದ ಪೆರ್ಲಂಪಾಡಿ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲಂಪಾಡಿ ಇವರು 2025 ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ. ಸೆಪ್ಟೆಂಬರ್ 25ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲಿದ್ದು ಇವರು ಅನೇಕ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರು ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ವಲಯ 15ರ ಬೆಳ್ಳಾರೆ ಜೇಸಿಸ್ ನ 2026ರ ನಿಯೋಜಿತ ಅಧ್ಯಕ್ಷರು

ಪೂರ್ಣಿಮಾ ಪೆರ್ಲಂಪಾಡಿಮಡಿಕೇರಿ ದಸರಾ ಕವಿಗೋಷ್ಠಿ ಗೆ ಆಯ್ಕೆ Read More »

error: Content is protected !!
Scroll to Top