Author name: Tejas

ಸುಳ್ಯ : ರಾಣಿ ಅಬ್ಬಕ್ಕ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ

ಎ.ಬಿ.ವಿ.ಪಿ ವತಿಯಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ರಾಣಿ ಅಬ್ಬಕ್ಕ ರಥಯಾತ್ರೆ ಸುಳ್ಯಕ್ಕೆ ಸೆ.15ರಂದು ಆಗಮಿಸಿತು.ಮಡಿಕೇರಿಯಿಂದ ಗಾಂಧಿನಗರಕ್ಕೆ ಆಗಮಿಸಿದ ರಥಯಾತ್ರೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಗಣ್ಯರು ಅದ್ದೂರಿ ಸ್ವಾಗತ ಕೋರಿದರು.ರಾಣಿ ಅಬ್ಬಕ್ಕ ಪ್ರತಿಮೆಗೆ ಶಾಸಕಿ ಭಾಗೀರಥಿ ಯವರು ಹಾರಾರ್ಪಣೆಗೈದರು. ನಗರ ಪಂಚಾಯತ್‌ ಅಧ್ಯಕ್ಷ ಶಶಿಕಲಾ ಎ. ನೀರಬಿದಿರೆ, ಹಿರಿಯರಾದ ಪಿ.ಕೆ.ಉಮೇಶ್., ಎ.ಬಿ.ವಿ.ಪಿ. ಪ್ರಮುಖರಾದ ಕುಲದೀಪ್ ಪೆಲ್ತೆಡ್ಕ, ನಂದನ್ ಪವಿತ್ರಮಜಲು ಪುಷ್ಪಾರ್ಚನೆಗೈದರು.ಈ ಸಂದರ್ಭದಲ್ಲಿ ಪ್ರಮುಖರಾದ […]

ಸುಳ್ಯ : ರಾಣಿ ಅಬ್ಬಕ್ಕ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ Read More »

ಸಂಪಾಜೆ : ಹಿರಿಯ ಉದ್ಯಮಿ ಇಸ್ಮಾಯಿಲ್ ಚೆಡಾವು ನಿಧನ

ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಕೊಯನಾಡು ಚೆಡಾವು ನಿವಾಸಿ ಕೊಯನಾಡು ಜುಮಾ ಮಸೀದಿ ಮಾಜಿ ಉಪಾಧ್ಯಕ್ಷ, ಹಿರಿಯ ಉದ್ಯಮಿ, ಇಸ್ಮಾಯಿಲ್ ಚೆಡಾವು ರವರು ಅಲ್ಪ ಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 15 (ನಿನ್ನೆ ರಾತ್ರಿ) ರಂದು ನಿಧನರಾದರು.ಮೃತರು ಪತ್ನಿ, ಗಂಡು ಮಕ್ಕಳಾದ ರಫೀಕ್, ರಹೀಮ್, ಹಾಗೂ ಬಂಧು ಬಳಗ ವನ್ನು ಅಗಲಿದ್ದಾರೆ.

ಸಂಪಾಜೆ : ಹಿರಿಯ ಉದ್ಯಮಿ ಇಸ್ಮಾಯಿಲ್ ಚೆಡಾವು ನಿಧನ Read More »

ಬಾವಿಗೆ ಬಿದ್ದು ವ್ಯಕ್ತಿ ಸಾವು

ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೆ.16ರಂದು ವರದಿಯಾಗಿದೆ‌ಬಾವಿಗೆ ಬಿದ್ದು ಮ್ರತಪಟ್ಟ ವ್ಯಕ್ತಿ ನೆಲ್ಲೂರು ಕೆಮ್ರಾಜೆ ಗ್ರಾಮದ ಇರಂತಕತೆ ನಿವಾಸಿ ನಾರಾಯಣ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಗೆ ಬಿದ್ದು ವ್ಯಕ್ತಿ ಸಾವು Read More »

ಅರಂತೋಡು : ಸೆ.16ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 16-09-2025 ರ ಕನ್ಯಾ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ:7022077809

ಅರಂತೋಡು : ಸೆ.16ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಮುಂದಿನ ಪೀಳಿಗೆಗೆ ಅರೆಭಾಷೆ ಸಂಸ್ಕೃತಿ,ಸಂಪ್ರದಾಯಗಳನ್ನು ಪರಿಚಯಿಸಲು ಸದಾನಂದ ಮಾವಜಿ ಕರೆ

ಮೈಸೂರು: ಅರೆಭಾಷೆ ಸಂಸ್ಕೃತಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅವರು ಅವುಗಳನ್ನು ಅನುಸರಿಸಿ ಮುನ್ನಡೆಯುವಂತೆ ಹಿರಿಯರು ಪ್ರೇರಣೆ ನೀಡಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಕರೆ ನೀಡಿದ್ದಾರೆ. ಅವರು ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಕೈಲ್ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಯುವ ಪೀಳಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಮತ್ತೊಬ್ಬ ಮುಖ್ಯ ಅತಿಥಿ ಕೊಡಗು

ಮುಂದಿನ ಪೀಳಿಗೆಗೆ ಅರೆಭಾಷೆ ಸಂಸ್ಕೃತಿ,ಸಂಪ್ರದಾಯಗಳನ್ನು ಪರಿಚಯಿಸಲು ಸದಾನಂದ ಮಾವಜಿ ಕರೆ Read More »

ಅರಂತೋಡು : ಪೋಷನ್ ಮಾಸಾಚರಣೆ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸುಳ್ಯ ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತ್ ಅರಂತೋಡು, ಸ್ತ್ರೀಶಕ್ತಿ ಗೊಂಚಲು ಅರಂತೋಡು,ಸಹಕಾರಿ ಸಂಘ ಅರಂತೋಡು ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ 2025 ಕಾರ್ಯಕ್ರಮ ಸೆ.15ರಂದು ನಡೆಯಿತು. ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾಕ್ಟರ್ ಸ್ಮಿತಾ ಹರ್ಷವರ್ಧನ್ ಶಿಶು ಮತ್ತು ಮಕ್ಕಳ ಆಹಾರ ಕ್ರಮದ ಬಗ್ಗೆ

ಅರಂತೋಡು : ಪೋಷನ್ ಮಾಸಾಚರಣೆ ಕಾರ್ಯಕ್ರಮ Read More »

ತೆಂಗಿನ ಕಾಯಿ ಕೊಯ್ಯುತ್ತಿದ್ದಾಗ ಗಳೆ ವಿದ್ಯುತ್ ಲೈನ್ ಗೆ ತಾಗಿ ವ್ಯಕ್ತಿ ಸಾವು

ತೆಂಗಿನ ಮರದಿಂದ ತೆಂಗಿನ ಕೀಳುತ್ತಿದ್ದಾಗ ಅಲ್ಯೂಮೀನಿಯಂ ಗಳೆ ವಿದ್ಯುತ್ ಲೈನಿಗೆ ತಾಗಿ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಇದೀಗ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಿಂದ ಸೆ 15ರಂದು ವರದಿಯಾಗಿದೆ.ಮೃತಪಟ್ಟ ವ್ಯಕ್ತಿ ಬೆಳ್ಳಾರೆ ತಂಬಿನಮಕ್ಕಿಯ ರಾಮ ಎಂದು ಗುರುತಿಸಲಾಗಿದೆ. ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ತೆಂಗಿನ ಕಾಯಿ ಕೊಯ್ಯುತ್ತಿದ್ದಾಗ ಗಳೆ ವಿದ್ಯುತ್ ಲೈನ್ ಗೆ ತಾಗಿ ವ್ಯಕ್ತಿ ಸಾವು Read More »

ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರ ಭೇಟಿ

ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು.ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೇಶವ ಅಡ್ತಲೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಸತೀಶ ನಾಯ್ಕ ಅರಂತೋಡು ಮಾಜಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಉಳುವಾರು ಸುಳ್ಯ ಮಂಡಲ ಸಮಿತಿ ಕೋಶಾಧಿಕಾರಿ

ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕರ ಭೇಟಿ Read More »

ಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್, ಮೈಸೂರು ತಂಡವರಿಂದ ಮಂಡೆಕೋಲು ಅರಿವು ಕೇಂದ್ರದ ಮಕ್ಕಳೀಗೆ ಸಮವಸ್ತ್ರ ವಿತರಣೆ

ಮಂಡೆಕೋಲು ಗ್ರಾಮ ಪಂಚಾಯತ್ ನ ಗ್ರಂಥಾಲಯದ ಯಕ್ಷಗಾನ ತಂಡದ ಎಲ್ಲಾ ಮಕ್ಕಳೀಗೇ ಈ ದಿನ ಸಮವಸ್ತ್ರ ವಿತರಿಸಲಾಯಿತು ಚಿನ್ನಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್, ಮೈಸೂರು ತಂಡದ ಸದಸ್ಯರಾದ ಪ್ರೋಪಸರ್ ಪುರುಷೋತ್ತಮ್ ಅಗ್ನಿ, ಚಿನ್ನೂ ಪಿಚ್ಚರ್ಸ್ ತಂಡದ ನಿರ್ದೇಶಕರಾದ ರಾಘುನಾಯಕ್ , ತಂಡದ ಸದಸ್ಯರಾದ ಶ್ರಿ ವತ್ಸಾ, ಡಾ ಸ್ವಾತಿ, ಡಾ ತನ್ಮಯಿ, ಈ ದಿನ ಮಂಡೆಕೋಲು ಗ್ರಂಥಾಲಯಕ್ಕೆ ಮಕ್ಕಳೀಗೆ ಸಮವಸ್ತ್ರ ವಿತರಿಸಿದರು ಈ ಸಂದರ್ಭದಲ್ಲಿ ಯಕ್ಷಗಾನ ತಂಡದ ಪ್ರಧಾನ ಭಾಗವತರಾದ ಯಜ್ಞನಿಧಿ ಬಿರುದಾಂಕಿತ ಯೋಗೀಶ್ ಶರ್ಮಾ, ಹಿರಿಯರಾದ

ಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್, ಮೈಸೂರು ತಂಡವರಿಂದ ಮಂಡೆಕೋಲು ಅರಿವು ಕೇಂದ್ರದ ಮಕ್ಕಳೀಗೆ ಸಮವಸ್ತ್ರ ವಿತರಣೆ Read More »

ಅಕ್ಷತಾ ನಾಗನಕಜೆಯವರಿಗೆ ಸಾಹಿತ್ಯ ರತ್ನ ಪ್ರಶಸ್ತಿ

ಕವಯತ್ರಿ ಅಕ್ಷತಾ ನಾಗನಕಜೆ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿಯವರು ಜಂಟಿಯಾಗಿ ಮಂಗಳೂರಿನಲ್ಲಿ ಆಯೋಜಿಸಿದ “ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ” ವೇದಿಕೆಯಲ್ಲಿ “ಭಾವೈಕ್ಯತಾ ಸಾಹಿತ್ಯ ರತ್ನ” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅಕ್ಷತಾ ನಾಗನಕಜೆಯವರಿಗೆ ಸಾಹಿತ್ಯ ರತ್ನ ಪ್ರಶಸ್ತಿ Read More »

error: Content is protected !!
Scroll to Top