ಕ್ರೈಂ

ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತ ಆತ್ಮಹತ್ಯೆ

ಪವಿತ್ರ ಕ್ಷೇತ್ರವಾದ ಶಬರಿಮಲೆಯಲ್ಲಿ ಕರ್ನಾಟಕದ ಭಕ್ತರೊಬ್ಬರು ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಅಯ್ಯಪ್ಪ ಸ್ವಾಮಿಯ ಭಕ್ತನನ್ನು ಕರ್ನಾಟಕದ ಕನಕಪುರದ ನಿವಾಸಿ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ.ಭಕ್ತ ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್ ಗಳ ಮಂಟಪದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ಅಲ್ಲಿದ್ದವರು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆ ಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.ಕುಮಾರ ಸ್ವಾಮಿ ಖಿನ್ನತೆಯಿಂದಬಳಲುತ್ತಿದ್ದು, ಈ ಹಿನ್ನೆಲೆ ಅವರು ಆತ್ಮಹತ್ಯೆ […]

ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತ ಆತ್ಮಹತ್ಯೆ Read More »

ಕಲ್ಮಕಾರಿನಲ್ಲಿ ಅಯ್ಯಪ್ಪ ವ್ರತದಾರಿ ಮೇಲೆ ಕಾಡಾನೆ ಧಾಳಿ,ಗಂಭೀರ

ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಅಯ್ಯಪ್ಪ ವೃತದಾರಿ ಚರಿತ್ ಎಂಬವರ ಮೇಲೆ ಆನೆ ದಾಳಿ ಮಾಡಿ ಗಂಭೀರ ಗಾಯವಾದ ಘಟನೆ ಇಂದು (ಮಂಗಳವಾರ) ಬೆಳಗ್ಗೆ ವರದಿಯಾಗಿದೆ. ಗಂಭೀರ ಗಾಯಗೊಂಡ ಚರಿತ್ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಬೆಳಗ್ಗಿನ ವೇಳೆ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕಲ್ಮಕಾರಿನಲ್ಲಿ ಅಯ್ಯಪ್ಪ ವ್ರತದಾರಿ ಮೇಲೆ ಕಾಡಾನೆ ಧಾಳಿ,ಗಂಭೀರ Read More »

ರಿಕ್ಷಾ ನಿಲ್ದಾಣದಲ್ಲಿ ವಿಷ ಸೇವಿಸಿ ರಿಕ್ಷಾ ಚಾಲಕ ಆತ್ಮಹತ್ಯೆಗೆ ಯತ್ನ

ಉಬರಡ್ಕದ ನಿವಾಸಿ, ಸುಳ್ಯ ಕುರುಂಜಿಭಾಗ್ ನ ರಿಕ್ಷಾ ಚಾಲಕ ರಮೇಶ್ ಎಂಬವರು ರಿಕ್ಷಾ ನಿಲ್ದಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.ವಿಷ ಸೇವಿಸಿ ಬಳಿಕ ಇತರ ರಿಕ್ಷಾ ಚಾಲಕರಿಗೆ ವಿಷ ಸೇವಿಸಿರುವುದಾಗಿ ತಿಳಿಸಿಸದ್ದರು. ಇತರ ರಿಕ್ಷಾ What’s ರಮೇಶರನ್ನು ಅಲ್ಲಿದ್ದವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವದಾಗಿ ತಿಳಿದು ಬಂದಿದೆ.

ರಿಕ್ಷಾ ನಿಲ್ದಾಣದಲ್ಲಿ ವಿಷ ಸೇವಿಸಿ ರಿಕ್ಷಾ ಚಾಲಕ ಆತ್ಮಹತ್ಯೆಗೆ ಯತ್ನ Read More »

ಹಮಿಧಾಬಿ ಕಾವಿನಮೂಲೆ ನಿಧನ

ಬೆಳ್ಳಾರೆ ಗ್ರಾಮದ ಕಾವಿನ ಮೂಲೆ ದಿ! ಅಬ್ದುಲ್ ಲತೀಫ್ ಸಾಹೇಬ್ ರ ಧರ್ಮಪತ್ನಿ ಹಮಿದಾಭಿ ಕಾವಿನ ಮೂಲೆ ರವರು ಹೃದಯಾಘಾತ ದಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಡಿ. 10 ರಂದು ನಿಧನರಾದರು.ಅವರಿಗೆ 72 ವರ್ಷ ಪ್ರಾಯವಾಗಿತ್ತು.ಮೃತರು ಮೂರು ಮಂದಿ ಪುತ್ರರು ಮೂರು ಮಂದಿ ಪುತ್ರಿಯರನ್ನು ಸೇರಿದಂತೆ ಕುಟುಂಬಸ್ಥರನ್ನು ಆಗಲಿದ್ದಾರೆ.

ಹಮಿಧಾಬಿ ಕಾವಿನಮೂಲೆ ನಿಧನ Read More »

ಸುಳ್ಯದಲ್ಲಿ ಭೀಕರ ಕಾರು ಅಪಘಾತ ಇಲ್ಲಿದೆ ವಿಡಿಯೋ‌ ಸಮೇತ ವರದಿ

ಸುಳ್ಯ ಆಲೆಟ್ಟಿ ಸಂಪರ್ಕಿಸುವ ರಸ್ತೆಯ ಗುರುಂಪು ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಳಭಾಗದ ಮನೆಯ ಹಿಂಬದಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ವರದಿಯಾಗಿದೆ.ನಿದ್ರೆ ಮಂಪರಿನಲ್ಲಿದ್ದ ಚಾಲಕ ಎದುರಿನ ತಡೆಗೋಡೆಯೊಂದಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.ಬಳಿಕ ಹಿಂದಕ್ಕೆ ಸರಿದ ಕಾರು ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕಾರು ಆಲೆಟ್ಟಿ ರಸ್ತೆಯ ಮೂಲಕ ಕೇರಳದ ಕಣ್ಣೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಸುಳ್ಯದಲ್ಲಿ ಭೀಕರ ಕಾರು ಅಪಘಾತ ಇಲ್ಲಿದೆ ವಿಡಿಯೋ‌ ಸಮೇತ ವರದಿ Read More »

ನಟ ದರ್ಶನ್ ಗೆ ಜಾಮೀನು ಮಂಜೂರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಆರೋಪಿಗಳಿಗೆ ಜಾಮೀನು ನೀಡಿ ಹೈಕೋರ್ಟ್‌ ಪೀಠ ಆದೇಶಿಸಿದೆ.ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶುಕ್ರವಾರ (ಡಿ.13) ಈ ಆದೇಶ ಹೊರಡಿಸಿದೆ.ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ‌, ನಾಗರಾಜ್‌, ಅನುಕುಮಾರ್‌, ಲಕ್ಷ್ಮಣ್‌, ಜಗದೀಶ್‌, ಪ್ರದೋಷ್ ಗೆ ಇದೀಗ ಜಾಮೀನು ನೀಡಲಾಗಿದೆ.

ನಟ ದರ್ಶನ್ ಗೆ ಜಾಮೀನು ಮಂಜೂರು Read More »

ಮಹಿಳೆ ಅಸೌಖ್ಯದಿಂದ ನಿಧನ

ಸುಳ್ಯ ತಾಲೂಕಿನ ಬೆಳ್ಳಾರೆ ಶ್ರೀ ದುರ್ಗಾ ಜ್ಯುವೆಲ್ಲರಿ ಮಾಲಕ, ಕಲ್ಮಡ್ಕ ಗ್ರಾಮದ ಮಾಳಿಗೆ ನಾರಾಯಣ ಆಚಾರ್ಯ ರವರ ಪತ್ನಿ ಹರಿಣಾಕ್ಷಿ (44)ಅವರು ಅಸೌಖ್ಯದಿಂದ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಹಿಳೆ ಅಸೌಖ್ಯದಿಂದ ನಿಧನ Read More »

ಪಾಲದಿಂದ ಅಯತಪ್ಪಿ ಬಿದ್ದು ವ್ಯಕ್ತಿ ಸಾವು

ಪಾಲದಿಂದ ಆಕಸ್ಮೀಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ವ್ಯಾಪಾರೆಯಲ್ಲಿ ಗುರುವಾರ ರಾತ್ರಿ ವರದಿಯಾಗಿದೆ.ವ್ಯಾಪಾರೆಯ ಕುಸುಮಾಧರ(40 )ಎಂಬವರು ರಾತ್ರಿ ಮನೆಗೆ ಬರುತ್ತಿದ್ದ ವೇಳೆ ತೋಟದಲ್ಲಿದ್ದ ಪಾಲದಿಂದ ಕೆಳಗೆ ಬಿದ್ದರು.ಅವರ ತಲೆ ಸೇತುವೆಯ ಕೆಳಭಾಗದಲ್ಲಿದ್ದ ಕಲ್ಲಿಗೆ ಬಡಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಪಾಲದಿಂದ ಅಯತಪ್ಪಿ ಬಿದ್ದು ವ್ಯಕ್ತಿ ಸಾವು Read More »

ಅರಂತೋಡು : ಹಾಜಿ ಅಹಮ್ಮದ್ ಕುಂಞ ಪಟೇಲ್ ರವರು ನಿಧನ

ಅರಂತೋಡು : ಅರಂತೋಡು ನಿವಾಸಿ ಹಾಜಿ ಅಹಮ್ಮದ್ ಕುಂಞ ಪಟೇಲ್ ಶುಕ್ರವಾರ ಮುಂಜಾನೆ ಮನೆಯಲ್ಲಿ ನಿಧನರಾದರು.ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಮತ್ತು ಅರಂತೋಡು ನೆಹರು ಸ್ಮಾರಕ ಪಿ.ಯು.ಕಾಲೇಜಿನ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆಗೈದಿದ್ದರು. ಅರಂತೋಡು ನಿವಾಸಿಯಾಗಿರುವ ಬದ್ರುದ್ದೀನ್, ನಾಸೀರುದ್ದೀನ್, ಸೈಫುದ್ದೀನ್, ಹಬೀಬ್ ರಹಿಮಾನ್, ಸಲಾಹುದ್ದೀನ್, ಜಲಾಲುದ್ದೀನ್ ಮತ್ತು ಮರ್ಹೂಮ್ ಅಮೀನ್ , ಮರ್ಹೂಮ್ ಶಿಹಾಬ್ ರವರ ಸಹಿತ ನಾಲ್ಕು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.

ಅರಂತೋಡು : ಹಾಜಿ ಅಹಮ್ಮದ್ ಕುಂಞ ಪಟೇಲ್ ರವರು ನಿಧನ Read More »

ಅಟೋ ಚಾಲಕ ನಿಧನ

ಸುಳ್ಯ ಆಲೆಟ್ಟಿ ಗ್ರಾಮದ ನೆಡ್ಡಿಲು ನಿವಾಸಿ ದಿ.ಗೋಪಾಲ ನಾಯ್ಕ ಅವರ ಮಗ ಅಟೋ ಚಾಲಕ ವಿಜಯ ನೆಡ್ಡಿಲು ಅಸೌಖ್ಯದಿಂದ ಡಿ.11 ರಂದು ರಾತ್ರಿ ನೆಡ್ಡಿಲು ಮನೆಯಲ್ಲಿ ನಿಧನರಾದರು. ಅವರಿಗೆ 37 ವರ್ಷ ವಯಸ್ಸಾಗಿತ್ತು.ಮೃತರು ಅವಿವಾಹಿತ ರಾಗಿದ್ದಾರೆ.ಮೃತರುತಾಯಿ ಕಸ್ತೂರಿ, ಸಹೋದರ ರಾಮಚಂದ್ರ ಮತ್ತು ರವಿಚಂದ್ರ ನೆಡ್ಡಿಲು, ಸಹೋದರಿಯರಾದ ಸವಿತ ಮತ್ತು ಪುಷ್ಪಾವತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಟೋ ಚಾಲಕ ನಿಧನ Read More »

error: Content is protected !!
Scroll to Top