ಕ್ರೈಂ

ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ ನಾಗೇಶ್ ಇನ್ನಿಲ್ಲ

ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ (67) ಅವರು ಅನಾರೋಗ್ಯದಿಂದ ಆ.18ರಂದು ಬೆಂಗಳೂರಿನಲ್ಲಿ ನಿಧನರಾದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದರು.ಅವರ ಸ್ವಕ್ಷೇತ್ರವಾದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಾಳೆ (ಬುಧವಾರ) ಅಂತಿಮ ಸಂಸ್ಕಾರ ನೆರವೇರಲಿದೆ.ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದಿಂದ 2008 ಮತ್ತು 2018 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರು, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ ನಾಗೇಶ್ ಇನ್ನಿಲ್ಲ Read More »

ಸಂಪಾಜೆ : ಕಾರು ರಸ್ತೆಯ ತಡೆ ಬೇಲಿಗೆ ಡಿಕ್ಕಿ ಹೊಡೆದು ಜಖಂ

ಕೊಡಗು ಸಂಪಾಜೆ ಶಾಲಾ ಬಳಿ ಫಾರ್ಚೂನರ್ ಕಾರು ರಸ್ತೆಯ ಬದಿಯ ತಡೆ ಬೇಲಿಗೆ ಗುದ್ದಿ ಅಪಘಾತವಾದ ಘಟನೆ ಆ.14 ರಂದು ರಾತ್ರಿ ಸಂಭವಿಸಿದೆ.ಸುಳ್ಯದಿಂದ ಮಡಿಕೇರಿಯತ್ತ ಹೋಗುತ್ತಿದ್ದ ಫಾರ್ಕ್ಚುನರ್ ಕಾರು ಕೊಡಗು ಸಂಪಾಜೆ ಶಾಲಾ ಬಳಿ ತಲುಪುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಮಾಹಿತಿಯನ್ನು ತಿಳಿದ ಸಂಪಾಜೆ ತಾಜುದ್ದೀನ್ ಟರ್ಲಿ ಹಾಗೂ ರಚನ್ ಸುಳ್ಯಕೋಡಿ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯರ

ಸಂಪಾಜೆ : ಕಾರು ರಸ್ತೆಯ ತಡೆ ಬೇಲಿಗೆ ಡಿಕ್ಕಿ ಹೊಡೆದು ಜಖಂ Read More »

ಬೆಳ್ಳಾರೆ : ಮಹಿಳೆ ಮಗುವಿನೊಂದಿಗೆ ನಾಪತ್ತೆ

ಪುತ್ತೂರು ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನ ನಿವಾಸಿ ವಿವಾಹಿತೆ ಮಹಿಳೆಯೊಬ್ಬರು ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಆ.10ರಂದು ವರದಿಯಾಗಿದೆ.ರಮ್ಯಾ ಎ. ವಿ( 29 ವರ್ಷ )ಹಾಗೂ ಅವರ ಪುತ್ರಿ ಪ್ರಾಪ್ತಿ 3 ವರ್ಷ ಇವರು ಮನೆಯಿಂದ ನಾಪತ್ತೆಯಾದವರು.ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ತಾಯಿ ಮಗು ಕಂಡು ಬಂದಲ್ಲಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳ್ಳಾರೆ : ಮಹಿಳೆ ಮಗುವಿನೊಂದಿಗೆ ನಾಪತ್ತೆ Read More »

ಅರಣ್ಯ ಇಲಾಖೆಯ‌ ಬೊಲೆರೋ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ಅಪಘಾತ

ಸುಳ್ಯದ ಹಳೇಗೇಟು ಬಳಿ ಅರಣ್ಯ ಇಲಾಖೆಯ‌ ಬೊಲೆರೋ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ಅಪಘಾತ ಸಂಭವಿಸಿದ ಘಟನೆ ಆ.12ರಂದು ಸಂಜೆ ವರದಿಯಾಗಿದೆ.ಅರಣ್ಯ ಇಲಾಖೆಯ ಬೊಲೆರೋ ವಾಹನವು ಸುಳ್ಯದಿಂದ ಪೈಚಾರ್ ಕಡೆಗೆ ಹೋಗುತ್ತಿತ್ತು. ಮಹೀಂದ್ರ ಜೀತೋ ವಾಹನವು ಮಡಿಕೇರಿ ಕಡೆಗೆ ಹೋಗುತ್ತಿತ್ತು.ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ವಾಹನಗಳು ಜಖಂಗೊಂಡಿವೆ‌.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ‌.

ಅರಣ್ಯ ಇಲಾಖೆಯ‌ ಬೊಲೆರೋ ಹಾಗೂ ಮಹೀಂದ್ರ ಜೀತೋ ವಾಹನದ ನಡುವೆ ಅಪಘಾತ Read More »

ಕೊಯನಾಡು : ಲಾರಿ ಡಿಕ್ಕಿ ಹೊಡೆದು ಯುವಕ ಗಂಭೀರ,ಮಂಗಳೂರು ಆಸ್ಪತ್ರೆಗೆ ಶಿಷ್ಟ್

ಸಂಪಾಜೆ ಚಡಾವು ಬಳಿ ಲಾರಿ ಮತ್ತು ಬೈಕ್ ಅಪಘಾತ ಸಂಭವಿಸಿ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ಆ.9ರಂದು ವರದಿಯಾಗಿದೆ.ಕೊಯನಾಡಿನ ಯುವಕ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವನು. ಡಿಕ್ಕಿ ಹೊಡೆದ ದ ಲಾರಿಯನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಾಳುವನ್ನು ಅರಂತೋಡಿನ ಸಮ್ರದ್ದಿ ಆಂಬ್ಯುಲೆನ್ಸ್ ಮೂಲಕ ಶರತ್ ಅಡ್ಯಡ್ಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಬಳಿಕ ಹೆಚ್ಚಿನ ಚಿಕಿತ್ಸೆಗೆ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ‌.

ಕೊಯನಾಡು : ಲಾರಿ ಡಿಕ್ಕಿ ಹೊಡೆದು ಯುವಕ ಗಂಭೀರ,ಮಂಗಳೂರು ಆಸ್ಪತ್ರೆಗೆ ಶಿಷ್ಟ್ Read More »

ಕಾಡುಪಂಜ : ಕಾಡು ಕೋಣ ಹತ್ಯೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

ಕಾಡುಕೋಣ ಹತ್ಯೆ ಮಾಡಿ ಮಾಂಸ ಮಾರಾಟ ಮಾಡಿದ ಆರೋಪಕ್ಕೊಳಗಾಗಿ ಬಂಧಿತರಾಗಿದ್ದ ಇಬ್ಬರಿಗೆ ಸುಳ್ಯ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಕಾಡುಕೋಣ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇಲೆ ಸಂಪಾಜೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆ. 5 ರಂದು ದಾಳಿ ಮಾಡಿ ಪೆರಾಜೆ ಗ್ರಾಮದ ಶರತ್ ಮತ್ತು ಗೌತಮ್ ಅವರನ್ನು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದರು.ನಂತರ ಅವರನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರಿ ಪಡಿಸಲಾಗಿತ್ತು.ಅಲ್ಲಿಯ ನ್ಯಾಯಾಧೀಶರು ಕಾಡು ಕೋಣ ಹತ್ಯೆ ಮಾಡಿದ ಸ್ಥಳ ದ.ಕ ಜಿಲ್ಲೆಯ ಸುಳ್ಯ

ಕಾಡುಪಂಜ : ಕಾಡು ಕೋಣ ಹತ್ಯೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು Read More »

ಕಟ್ಟಮನೆ ಗೋಪಾಲ ಗೌಡ ನಿಧನ

ಮಡಿಕೇರಿ ತಾಲೂಕು ಚೆಂಬು ಗ್ರಾಮದ ನಿವಾಸಿ ಕಟ್ಟೆಮನೆ ಗೋಪಾಲ(68) ಅವರು ಹೃದಯಾಘಾತದಿಂದ ಜುಲೈ 4 ರಂದು ದಾರಿ ಮಧ್ಯೆ ನಿಧನರಾದರು.ಮೃತರು ತಮ್ಮ ಮನೆಯಿಂದ ನಾಯಿಯನ್ನು ದೇವಾಲಯ ಬಳಿ ಚುಚ್ಚು ಮದ್ದು ನೀಡಲು ಕರೆದುಕೊಂಡು ಬರುವ ವೇಳೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಸಂಪಾಜೆ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಎಂದು ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು‌ಇಬ್ಬರು ಸಹೋದರನ್ನು ಆಗಲಿದ್ದಾರೆ.

ಕಟ್ಟಮನೆ ಗೋಪಾಲ ಗೌಡ ನಿಧನ Read More »

ಮೆಸ್ಕಾಂ ಅಪರೇಟರ್ ಮೇಲೆ ಮೆಸ್ಕಾಂ ಎ.ಇ ಸುಪ್ರಿತ್ ಹಲ್ಲೆ ನಡೆಸಿ ರಕ್ತ ಗಾಯ

ಮೆಸ್ಕಾಂ ಆಪರೇಟ‌ರ್ ಮೇಲೆ ಮೆಸ್ಕಾಂ ಎ.ಇ. ಯೊಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.ಎ.ಇ ಸುಪ್ರಿತ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಸುಳ್ಯ ಮೆಸ್ಕಾಂ ನಲ್ಲಿ 33 ಕೆ.ವಿ. ಲೈನ್ ಜಂಪರ್ ಕಡಿತವಾಗಿತ್ತೆಂದೂ, ಇದರ ರಿಪೇರಿಗೆಂದು ಮೆಸ್ಕಾಂ ಆಪರೇಟರ್ ರಾಘವ ಎಂಬವರು ಲೈನ್ ಆಫ್ ಮಾಡಿದ್ದರೆಂದೂ ಹೇಳಲಾಗಿದೆ. ಈ ಮಾಹಿತಿಯನ್ನು ಸೆಕ್ಸನ್ ಮುಖ್ಯಸ್ಥರಾಗಿರುವ ಇಂಜಿನಿಯರ್ ಗೆ ರಾಘವರುನೀಡಿದ್ದರೆನ್ನಲಾಗಿದೆ.ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮೆಸ್ಕಾಂ ಆಪರೇಟಿವ್ ಕಚೇರಿಗೆ ಬಂದ ಜೆ.ಇ. ಸುಪ್ರೀತ್ ರವರು ಕಚೇರಿಯಲ್ಲಿದ್ದ ಆಪರೇಟ‌ರ್ ರಾಘವರೊಡನೆ ಲೈನ್ ಆಫ್

ಮೆಸ್ಕಾಂ ಅಪರೇಟರ್ ಮೇಲೆ ಮೆಸ್ಕಾಂ ಎ.ಇ ಸುಪ್ರಿತ್ ಹಲ್ಲೆ ನಡೆಸಿ ರಕ್ತ ಗಾಯ Read More »

ರುಕ್ಮಿಣಿ ಓಟೆಡ್ಕ ನಿಧನ

ಸುಳ್ಯ ತಾಲೂಕು ಆರಂತೋಡು ಗ್ರಾಮದ ದಿ. ಭವಾನಿಶಂಕರ ಓಟೆಡ್ಕರವರ ಧರ್ಮಪತ್ನಿ ರುಕ್ಕಿಣಿಯವರು ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಆ. 1ರಂದು ರಾತ್ರಿ ನಿಧನರಾದರು.

ರುಕ್ಮಿಣಿ ಓಟೆಡ್ಕ ನಿಧನ Read More »

ಅರಂತೋಡು : ಅಭಿನಂದನ್ ಫೂಟ್ ವೇರ್ಸ್ ಮಾಲಕ ನಿಧನ

ಅರಂತೋಡು ಗ್ರಾಮದ ನಿವಾಸಿ, ಅಭಿನಂದನ್ ಫೂಟ್ ವೇರ್ಸ್ ಮಾಲಕರಾಗಿದ್ದ ಜಿ ಎಂ ಅಬ್ದುಲ್ ರಹ್ಮಾನ್ (ಅಂದ ಗುಂಡಿ)ಜುಲೈ 30 ರಂದು ನಿಧನರಾದರು.ಇವರು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶ್ರಫ್ ಗುಂಡಿಯವರ ಸಹೋದರಮೃತರು ಪತ್ನಿ, ಪುತ್ರ ಆಸೀಫ್, ಪುತ್ರಿ ಸ್ವಾಲಿಯಾ, ಅಳಿಯ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅರಂತೋಡು : ಅಭಿನಂದನ್ ಫೂಟ್ ವೇರ್ಸ್ ಮಾಲಕ ನಿಧನ Read More »

error: Content is protected !!
Scroll to Top