ಕ್ರೈಂ

ಅಪ್ರಾಪ್ತ ಯುವತಿಯನ್ನು ಗರ್ಭಿಣಿಯಾಗಿಸಿದ ಯುವಕ ಜೈಲಿಗೆ ಹೋಗುತ್ತಿದ್ದಂತೆ ಇತ್ತ ಮಗುವಿಗೆ ಜನ್ಮ ನೀಡಿದ ಯುವತಿ

ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಅಪ್ರಾಪ್ತ ಯುವತಿಯೊಬ್ಬಳನ್ನು ಗರ್ಭಿಣಿಯನ್ನಾಗಿಸಿದ ಯುವಕ ಜೈಲಿಗೆ ಹೋಗುತ್ತಿದ್ದಂತೆ ಇತ್ತ ಯುವತಿ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.ನಾಲ್ಕೂರು ಗ್ರಾಮದ ಯುವತಿಯೊಬ್ಬಳು ಗುತ್ತಿಗಾರಿನಲ್ಲಿ ರೂಂ ಪಡೆದು ವಾಸವಿದ್ದು, ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯ ಯುವಕನೊಬ್ಬ ಈಖೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭವತಿಯನ್ನಾಗಿಸಿದ್ದ. ಯುವತಿಗೆ ಒಂಬತ್ತು ತಿಂಗಳಾಗುತ್ತಿದ್ದಂತೆ ಪ್ರಕರಣ ಬಯಲಿಗೆ ಬಂದಿದ್ದು, ಈ ಸಂಬಂಧ ಬಾಳುಗೋಡಿನ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಅಪ್ರಾಪ್ತ ಯುವತಿಯನ್ನು ಗರ್ಭಿಣಿಯಾಗಿಸಿದ ಯುವಕ ಜೈಲಿಗೆ ಹೋಗುತ್ತಿದ್ದಂತೆ ಇತ್ತ ಮಗುವಿಗೆ ಜನ್ಮ ನೀಡಿದ ಯುವತಿ Read More »

ಹಿರಿಯ ಸಾಹಿತಿ ಎಸ್.ಎಲ್ ಬೈರಪ್ಪ ವಿಧಿವಶ

ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸೆ.24ರಂದುನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪ ಬೆಂಗಳೂರಿನ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ದಾಟು, ಗೃಹಭಂಗ ಮುಂತಾದ ಪ್ರಸಿದ್ದ ಕಾದಂಬರಿಗಳನ್ನು ಬರೆದಿರುವ ಎಸ್.ಎಲ್. ಭೈರಪ್ಪ, ಸರಸ್ವತಿ ಸಮ್ಮಾನ್ ಪ್ರಶಸ್ತಿಗೂ ಭಾಜನರಾಗಿದ್ದರು.2023 ರಲ್ಲಿ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇಂದು ಮಧ್ಯಾಹ್ನ 2.38 ಗಂಟೆಗೆ ಹೃದಯಾಘಾತದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ಭೈರಪ್ಪ ಮೃತಪಟ್ಟಿದ್ದಾರೆ.

ಹಿರಿಯ ಸಾಹಿತಿ ಎಸ್.ಎಲ್ ಬೈರಪ್ಪ ವಿಧಿವಶ Read More »

ಪಡ್ರೆ ಲಕ್ಷ್ಮಣ ಗೌಡ ನಿಧನ

ಸುಳ್ಯ ಮೂಲತ ಸುಳ್ಯ ಗಾಂಧಿನಗರ ನಿವಾಸಿ, ಉಪ್ಪಿನಂಗಡಿಯಲ್ಲಿ ಚಾಲಕರಾಗಿದ್ದ ಪಡ್ರೆ ಲಕ್ಷ್ಮಣ ಗೌಡ(62) ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 23 ರಂದು ಉಪ್ಪಿನಂಗಡಿಯ ಮನೆಯಲ್ಲಿ ನಿಧನರಾದರು.ಮೃತರು ಪತ್ನಿ ವಸಂತಿ, ಪುತ್ರ ಮನೋಹರ, ಪುತ್ರಿ ಗುಣಶ್ರೀ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ಪಡ್ರೆ ಲಕ್ಷ್ಮಣ ಗೌಡ ನಿಧನ Read More »

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿ ವ್ಯಕ್ತಿ ಸಾವು

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬದಿಯಡ್ಕದಿಂದ ವರದಿಯಾಗಿದೆ. ಮೃತರನ್ನು ಬದಿಯಡ್ಕದ ಚುಲ್ಲಿಕ್ಕಾನದ ನಿವಾಸಿ ವಿನ್ಸೆಂಟ್ ಕ್ರಾಸ್ತಾ (52) ಎಂದು ತಿಳಿದು ಬಂದಿದೆ.ಭಾನುವಾರ ಸಂಜೆ ವಿನ್ಸೆಂಟ್ ತನ್ನ ಮನೆಯ ಸಮೀಪವಿರುವ ಸಣ್ಣ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಿದ್ದಾಗ ಈ ಘಟನೆ ನಡೆದಿದೆ. ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಅವರು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಅವರನ್ನು ತಕ್ಷಣ ಕುಂಬ್ಳೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರಲ್ಲಿ ಅವರು ತಲುಪುವ ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.ವಿನ್ಸೆಂಟ್ ಬೇಲಾ ಕಟ್ಟತಂಗಡಿಯ ವೆಲ್ಡಿಂಗ್ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು.

ಆಮ್ಲೆಟ್ ಗಂಟಲಿನಲ್ಲಿ ಸಿಲುಕಿ ವ್ಯಕ್ತಿ ಸಾವು Read More »

ಪೆರಾಜೆ : ಹೃದಯಾಘಾತದಿಂದ ನಿಧನ

ಪೆರಾಜೆ ಗ್ರಾಮದ ಪೆರುಮುಂಡ ನರೇಂದ್ರ ಪಿ.(51)ಅವರು ಹೃದಯಾಘಾತದಿಂದ ಸೆ. ೨೨ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಬೆಳಿಗ್ಗೆ ಎದೆನೋವು ಬಂದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ತಾಯಿ ಕಮಲ, ಪತ್ನಿ ಸುಲೋಚನಾ, ಮಕ್ಕಳಾದ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

ಪೆರಾಜೆ : ಹೃದಯಾಘಾತದಿಂದ ನಿಧನ Read More »

ಕಲ್ಲಿನ ಕೋರೆಯ ನೀರಲ್ಲಿ ಮುಳುಗಿ ಬಾಲಕ ಸಾವು

ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಕಬಕ ಬಳಿ ಕಲ್ಲಿನ ಕೋರೆಯಲ್ಲಿ ನಡೆದಿದೆ.ಮೃತರನ್ನು ಕಬಕ ಕಲ್ಲಂದಡ್ಕ ನಿವಾಸಿ ಅಜ್ವಾನ್‌ (13)ಎಂದು ಗುರುತಿಸಲಾಗಿದೆ.ಸ್ನೇಹಿತರ ಜೊತೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಲ್ಲಿನ ಕೋರೆಯ ನೀರಲ್ಲಿ ಮುಳುಗಿ ಬಾಲಕ ಸಾವು Read More »

ಹಿರಿಯ ಜಾನಪದ ಕಲಾವಿದೆ ಕೊರಪ್ಪೊಲು ನಾರಾಜೆ ಇನ್ನಿಲ್ಲ

ಹಿರಿಯ ಜಾನಪದ ಕಲಾವಿದೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರಾದ ಸುಳ್ಯ ಜಯನಗರ ನಾರಾಜೆ ನಿವಾಸಿ ಕೊರಪ್ಪೊಲು ತನ್ನ ಮನೆಯಲ್ಲಿ ಸೆ.19ರಂದು ಅಸೌಖ್ಯದಿಂದ ನಿಧನರಾದರು.ಅವರಿಗೆ 85 ವರ್ಷ ಪ್ರಾಯವಾಗಿತ್ತು.ವಿವಿಧಜಾನಪದ ಕುಣಿತ,ಪಾರ್ದನಗಳ ಕಲಾವಿದರಾಗಿದ್ದರು.ತನ್ಬ ಮಕ್ಕಳಾದ ಮುದ್ದಪ್ಪ ಮತ್ತು ತಿಮ್ಮಪ್ಪ ಸೇರಿದಂತೆ ಸೊಸೆಯಂದಿರು ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ‌.

ಹಿರಿಯ ಜಾನಪದ ಕಲಾವಿದೆ ಕೊರಪ್ಪೊಲು ನಾರಾಜೆ ಇನ್ನಿಲ್ಲ Read More »

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಗಳು ಎನ್ನಲಾದ ಯುವಕ ಯುವತಿ ದೇವರಕೊಲ್ಲಿಯಲ್ಲಿ ಪತ್ತೆ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದಿಂದ ಕೇರಳ ಪೊಲೀಸರಿಂದ ಸೆ.17ರಂದು ತಪ್ಪಿಸಿಕೊಂಡಿದ್ದ ಪಾಲಕ್ಕಾಡ್ ಮೂಲದ ಕೊಲೆ ಆರೋಪಿಗಳು ಎಂದು ಹೇಳಲಾಗುತ್ತಿರುವ ಇಬ್ಬರು ದೇವರಕೊಲ್ಲಿ ಮನೆಯೊಂದರಲ್ಲಿ ಸೆ.18ರಂದು ಪತ್ತೆಯಾಗಿದ್ದಾರೆ.ಸಿಕ್ಕಿ ಬಿದ್ದವರು ಓರ್ವ ಯುವಕ ಹಾಗೂ ಒಬ್ಬಳು ಯುವತಿ ಎಂದು ತಿಳಿದು ಬಂದಿದೆ. ತಪ್ಪಿಸಿಕೊಂಡಿದ್ದ ಇವರು ರಾತ್ರಿ ವೇಳೆ ರಬ್ಬ‌ರ್ ತೋಟದ ಮನೆಯ ಬಳಿ ಬಂದು ಆಶ್ರಯ ಪಡೆದಿದ್ದರು.ಸ್ಥಳೀಯರು ಅವರನ್ನು ಹಿಡಿದು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಗಳು ಎನ್ನಲಾದ ಯುವಕ ಯುವತಿ ದೇವರಕೊಲ್ಲಿಯಲ್ಲಿ ಪತ್ತೆ Read More »

ನೆಟ್ಟಾರು : ರಸ್ತೆ ಬದಿಯ ಗುಂಡಿಗೆ ಕಾರು ಬಿದ್ದು ಜಖಂ

ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದ ಘಟನೆ ಗುರುವಾರ ವರದಿಯಾಗಿದೆ.ನೆಟ್ಟಾರು ತಿರುವಿನಲ್ಲಿ ರಿಟ್ಸ್ ಕಾರು ಗುಂಡಿಗೆ ಬಿದ್ದ ಪರಿಣಾಮ ಕಾರು ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.

ನೆಟ್ಟಾರು : ರಸ್ತೆ ಬದಿಯ ಗುಂಡಿಗೆ ಕಾರು ಬಿದ್ದು ಜಖಂ Read More »

ಸಂಪಾಜೆ : ಕೇರಳದಲ್ಲಿ ಕೊಲೆ ಮಾಡಿದ ಆರೋಪಿಗಳ ಥಾರ್ ವಾಹನ ದೇವರಕೊಲ್ಲಿಯಲ್ಲಿ ಪತ್ತೆ, ಆರೋಪಿಗಳು ಪರಾರಿ

ಕೇರಳ ಪಾಲಕ್ಕಾಡ್ ನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಗಳು ಸಂಪಾಜೆ ಬಳಿ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಸೆ. 17ರಂದು ಸಂಜೆ ನಡೆದಿದ್ದು ಅವರ ಥಾರ್ ವಾಹನ ದೇವರಕೊಲ್ಲಿ ಪತ್ತೆಯಾಗಿದೆ.ಆರೋಪಿಗಳು ತಮ್ಮ ಥಾರ್ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯಕಡೆಗೆ ಪ್ರಯಾಣಿಸುವ ಮಾಹಿತಿಯ ಜಾಡು ಹಿಡಿದ ಕೇರಳ ಪೊಲೀಸರು ಅವರನ್ನು ಬಂಧಿಸಲು ಕಲ್ಲುಗುಂಡಿ ಹೊರ ಠಾಣಾ ಸಮೀಪ ತಯಾರಾಗಿದ್ದರು.ಪೊಲೀಸರು ಇರುವ ವಿಷಯ ತಿಳಿದ ಆರೋಪಿ ಗಳು ಕಲ್ಲುಗುಂಡಿ ಪೆಟ್ರೋಲ್

ಸಂಪಾಜೆ : ಕೇರಳದಲ್ಲಿ ಕೊಲೆ ಮಾಡಿದ ಆರೋಪಿಗಳ ಥಾರ್ ವಾಹನ ದೇವರಕೊಲ್ಲಿಯಲ್ಲಿ ಪತ್ತೆ, ಆರೋಪಿಗಳು ಪರಾರಿ Read More »

error: Content is protected !!
Scroll to Top