ನೆಲ್ಲಿ ಪುಣಿ ರಾಮಣ್ಣ ಗೌಡ ನಿಧನ
ಚೆಂಬು ಗ್ರಾಮದ ಊರುಬೈಲು ನೆಲ್ಲಿಪುಣಿ ರಾಮಣ್ಣಗೌಡ ಡಿ.5ರಂದು ಹೃದಯಘಾತದಿಂದ ನಿಧನ ಹೊಂದಿದ್ದಾರೆ.
ನೆಲ್ಲಿ ಪುಣಿ ರಾಮಣ್ಣ ಗೌಡ ನಿಧನ Read More »
ಚೆಂಬು ಗ್ರಾಮದ ಊರುಬೈಲು ನೆಲ್ಲಿಪುಣಿ ರಾಮಣ್ಣಗೌಡ ಡಿ.5ರಂದು ಹೃದಯಘಾತದಿಂದ ನಿಧನ ಹೊಂದಿದ್ದಾರೆ.
ನೆಲ್ಲಿ ಪುಣಿ ರಾಮಣ್ಣ ಗೌಡ ನಿಧನ Read More »
ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಗುತ್ತಿಗಾರಿನ ಚಿಕ್ಕುಳಿಯಲ್ಲಿ ನಡೆದಿದೆ.ಗುತ್ತಿಗಾರಿನ ಚಿಕ್ಕುಳಿ ನಿವಾಸಿ ಶೇಷಪ್ಪ ಗೌಡರ ಪುತ್ರಿ ಕುಕ್ಕೆ ಸುಬ್ರಹ್ಮಣ್ಯದ ಕಾಲೇಜು ವಿದ್ಯಾರ್ಥಿನಿ ಪೂಜಾ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದಳು. ಅಸ್ವಸ್ಥಗೊಂಡ ಬಳಿಕ ವಿಷಯ ಗೊತ್ತಾಗಿ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರು ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಇಲಿ ಪಾಷಾಣ ಸೇವಿಸಿದ ವಿದ್ಯಾರ್ಥಿನಿ ಸಾವು Read More »
ಅರಂತೋಡು : ಆತ್ಮಹತ್ಯೆಗೆ ಪ್ರಯತ್ನಿಸಿ ನೇಣು ಬಿಗಿದು ಜಿಗಿದ ವ್ಯಕ್ತಿಯ ತಲೆಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ಕಲ್ಲುಗುಂಡಿಯಿಂದ ಡಿ.5ರಂದು ವರದಿಯಾಗಿದೆ.ಐವರ್ನಾಡು ಗ್ರಾಮದ ಮಾಧವ ಎಂಬ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿ ಬಿ ದ್ದು ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.ಕಲ್ಲುಗುಂಡಿ ಕೂಲಿಶೆಡ್ ಬಳಿ ಕಳೆದ ಹಲವು ವರ್ಷಗಳಿಂದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವರು ಕಲ್ಲುಗುಂಡಿ ಅವರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನೇಣು ಬಿಗಿದು ಜಿಗಿದ ಸಂದರ್ಭ ಕೇಬಲ್ ಕಟ್ಟಾಗಿ ನೆಲಕ್ಕೆ ಬಿದ್ದು ತಲೆಗೆ ಗಾಯ ಮಾಡಿಕೊಂಡು
ಕಲ್ಲುಗುಂಡಿ : ಆತ್ಮಹತ್ಯೆಗೆ ಯತ್ನಿಸಿ ನೇಣು ಹಾಕಿಕೊಂಡು ಜಿಗಿದ ವ್ಯಕ್ತಿ ಆಸ್ಪತ್ರೆಗೆ ದಾಖಲು Read More »
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಡಿ ಕ್ರಾಸ್ ಬಳಿ, ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ದೊಡ್ಡಬಳ್ಳಾಪುರದ ದೀಪಕ್ (30) ಎಂಬುವರೇ ಕೊಲೆಯಾದ ಯುವಕ. ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ದೀಪಕ್ ಮೇಲೆ ದುಷ್ಕರ್ಮಿಗಳು ಲಾಂಗು, ಮಚ್ಚುಗಳಿಂದ ಅಟ್ಯಾಕ್ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಂಗು, ಮಚ್ಚುಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ Read More »
ಸುಳ್ಯದ ಹಳೆಗೇಟು ನಿವಾಸಿ ಶೋಭಾ ಚಿದಾನಂದರವರ ಪುತ್ರ ರಕ್ಷಿತ್ (35) ಅನಾರೋಗ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಡಿ.3ರಂದು ವರದಿಯಾಗಿದೆ.ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಸ್ಪಂದಿಸದೇ ಇದ್ದುದರಿಂದ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು..
ಜಾಂಡೀಸ್ ಗೆ ಸುಳ್ಯದ ಯುವಕ ರಕ್ಷಿತ್ ಸಾವು Read More »
ಪಂಜ ಗ್ರಾಮ ಪಂಚಾಯತ್ ನಲ್ಲಿ ತೆರಿಗೆ ವಸೂಲಾತಿಯ ಹಣ ಬ್ಯಾಂಕ್ ಗೆ ಪಾವತಿಸದೇ ದುರುಪಯೋಗ ಮಾಡಿರುವ ಆರೋಪದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರನ್ನು ಗ್ರಾ.ಪಂ. ಆಡಳಿತ ಅಮಾನತು ಗೊಳಿಸಿರುವುದಾಗಿ ತಿಳಿದುಬಂದಿದೆ.ಡಿ.2ರಂದು ಪಂಚಾಯತ್ ಆಡಳಿತ ಮಂಡಳಿ ಹಣ ದುರುಪಯೋಗ ಮಾಡಿದ ಆರೋಪಕ್ಕೆ ಒಳಗಾದ ಬಾಬುರನ್ನು ಅಮಾನತು ಮಾಡಿರುವುದಾಗಿಯೂ, ಹಾಗೂ ಹಣ ದುರುಪಯೋಗದ ಕುರಿತು ಪೋಲೀಸ್ ದೂರುನೀಡಿರುವುದಾಗಿಯೂ ತಿಳಿದುಬಂದಿದೆ
ಗ್ರಾಮ ಪಂಚಾಯತ್ ಹಣ ದುರುಪಯೋಗ ಸಿಬ್ಬಂದಿ ಅಮಾನತು Read More »
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ಡಿ.3ರಂದು ಮನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದು ಮುಹಮ್ಮದ್ ಹಝೀರಿನ್ ಎಂಬ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಅಂಗಡಿಗೆ ತಿಂಡಿ ತರಲು ಹೋಗಿ ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾರು ಡಿಕ್ಕಿಯಾಗಿ ಬಾಲಕ ಸಾವು Read More »
ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ 32 ವರ್ಷದ ಸಂಧ್ಯಾ ಎಂಬ ಮಹಿಳೆ ಕೊಲೆಯಾಗಿದ್ದಾರೆ. ಗಂಡನನ್ನು ಬಿಟ್ಟು ತವರು ಮನೆಗೆ ಮರಳಿದ್ದ ಸಂಧ್ಯಾ, ಮನೆಯ ಹಿಂಭಾಗ ಬಟ್ಟೆ ತೊಳೆಯುತ್ತಿದ್ದಾಗ ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆಗೀಡಾಗಿದ್ದಾರೆ. ಈ ಘಟನೆಗೆ ಪ್ರೇಮಕಥೆಯೇ ಕಾರಣ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತವರು ಮನೆಗೆ ಬಂದಿದ್ದ ಮಹಿಳೆಯ ಬರ್ಬರ ಕೊಲೆ: ಪ್ರೇಮ ಪ್ರಕರಣ ಕಾರಣ? Read More »
ಮೈಸೂರಿನ ಚಾಮುಂಡಿ ಬೆಟ್ಟಕ್ಕೆಆಗಮಿಸಿದ್ದ ಬೆಂಗಳೂರಿನ ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇವರಾಜ್ (67) ಅವರು ಸೋಮವಾರ ಮೈಸೂರಿನಲ್ಲಿ ಹ್ರದಯಘಾತದಿಂದ ನಿಧನರಾದರು.ಸೋಮವಾರ ಅವರು ಕುಟುಂಬ ಸದಸ್ಯರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜು ನಿಧನ Read More »
ಕಾಫಿ ಕೊಯ್ಯಲು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ದಂಪತಿಯ ತೋಟದಲ್ಲಿ ಆಟವಾಡುತ್ತಿದ್ದ 2 ವರ್ಷದ ಸುಕನ್ಯಾ ಹೆಸರಿನ ಮಗು ಸಂಜೆ ವೇಳೆ ಕಣ್ಮರೆಯಾಗಿ ಮಗುವನ್ನು ಶ್ವಾನ ಪತ್ತೆ ಹಚ್ಚಿದ ಘಟನೆ ಕೊಡಗು ಜಿಲ್ಲೆಯಿಂದ ವರದಿಯಾಗಿದೆ.ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ವಾಸವಿರುವ ಸುನಿಲ್-ನಾಗಿಣಿ ದಂಪತಿ ತಮ್ಮ ಇಬ್ಬರು ಮಕ್ಕಳನ್ನೂ ಜೊತೆಗೂಡಿಸಿಕೊಂಡು ತೋಟಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಹೊರಡುವಾಗ ಸುಕನ್ಯಾ ಕಾಣೆಯಾಗಿರುವುದು ಗಮನಕ್ಕೆ ಬಂದ ತಕ್ಷಣ ಅವರು ತೋಟದ ಇಂಚಿಂಚೂ ಶೋಧಿಸಿದರು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ
ಕಾಣೆಯಾದ ಮಗುವನ್ನು ಪತ್ತೆ ಹಚ್ಚಿದ ಶ್ವಾನ Read More »