ಕ್ರೈಂ

ಕಡಿಮೆ ರಕ್ತದ ಒತ್ತಡ ಉಂಟಾಗಿ ಕುಸಿದು 8ನೇ ತರಗತಿ ವಿದ್ಯಾರ್ಥಿ ಸಾವು

ರಾಯಚೂರಿನ ವಿದ್ಯಾವಾಹಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ತಾಲೂಕಿನ ಅತ್ತನೂರು ಗ್ರಾಮದ ವಿದ್ಯಾರ್ಥಿ ತರುಣಕುಮಾರ ತಂದೆ ಮಲ್ಲೇಶ (14) ಶಾಲೆಯಲ್ಲಿ ಲೋ ಬಿಪಿ ಉಂಟಾಗಿ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ.ಶಾಲೆಯಲ್ಲಿ ವಿದ್ಯಾರ್ಥಿ ಕುಸಿದು ಬಿದ್ದಿದ್ದು, ಕೂಡಲೇ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಬಾಲಕ ಸಾವನ್ನಪ್ಪಿದ್ದಾನೆ. ಪೋಷಕರಿಗೆ ಇಬ್ಬರು ಮಕ್ಕಳಿದ್ದು ಮೃತ ಬಾಲಕ ಹಿರಿಯ ಪುತ್ರನೆಂದು ಹೇಳಲಾಗುತ್ತಿದೆ.

ಕಡಿಮೆ ರಕ್ತದ ಒತ್ತಡ ಉಂಟಾಗಿ ಕುಸಿದು 8ನೇ ತರಗತಿ ವಿದ್ಯಾರ್ಥಿ ಸಾವು Read More »

ಕುಟ್ಟಣಮೂಲೆ ವ್ಯಕ್ತಿ ಆತ್ಮಹತ್ಯೆ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಕುಟ್ಟಣಮೂಲೆ ಶಿವಪ್ಪ ನಾಯ್ಕ (65) ಎಂಬವರು ಮನೆ ಸಮೀಪದ ಮರವೊಂದಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮನೆಯವರು ಸುಳ್ಯಕ್ಕೆ ಬಂದಿದ್ದರು. ವಾಪಸ್‌ ಮನೆಗೆ ಹೋಗುವಾಗ ಶಿವಪ್ಪ ನಾಯ್ಕರು ಮನೆಯಲ್ಲಿರಲಿಲ್ಲ. ಬಳಿಕ ಮನೆ ಸಮೀಪ ನೇಣು ಹಾಕಿ ಮೃತಪಟ್ಟಿರುವುದು ಕಂಡು ಬಂತು. ಪೋಲೀಸರು ಸ್ಥಳಕ್ಕೆ ಬಂದುಮಹಜರು ನಡೆಸಿದರು.

ಕುಟ್ಟಣಮೂಲೆ ವ್ಯಕ್ತಿ ಆತ್ಮಹತ್ಯೆ Read More »

ತಮ್ಮನಿಂದ ಅಣ್ಣನಿಗೆ ಗಾರೆ ಕೆಲಸ ಮಾಡುವ ಸಾಧನದಿಂದ ಹಲ್ಲೆ

ಅಣ್ಣ ಸ್ಥಿತಿ ಚಿಂತಾಜನಕ ಸುಳ್ಯ : ತಮ್ಮನೋರ್ವ ಅಣ್ಣನ ಮೇಲೆ ಗಾರೆ ಕೆಲಸ ಮಾಡುವ ಸಾಧನದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ ವರದಿಯಾಗಿದೆ. ಎಂ.ಚೆಂಬು ಗ್ರಾಮದ ನಾಯರ್ ಗದ್ದೆ ದುರ್ಗಾಪ್ರಸಾದ್ ಎಂಬವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ತಮ್ಮ ನಾಯರ್ ಗದ್ದೆ ಪದ್ಮನಾಭ ಎಂಬುವವರಿಂದ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.ಗಂಭೀರ ಸ್ಥಿತಿಯಲ್ಲಿರುವ ದುರ್ಗಾ ಪ್ರಸಾದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮನಿಂದ ಅಣ್ಣನಿಗೆ ಗಾರೆ ಕೆಲಸ ಮಾಡುವ ಸಾಧನದಿಂದ ಹಲ್ಲೆ Read More »

ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನ ಕೈವಾಡ ಆರೋಪ

ಪುತ್ತೂರು ನಗರದ ಕಲ್ಲೇಗ ಟೈಗರ್ಸ್ ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಓರ್ವ ಕಾಂಗ್ರೆಸ್ ಪಕ್ಷದ ಮುಖಂಡ ಎಂದು ತಿಳಿದು ಬಂದಿದೆ.ನಾಲ್ವರು ಆರೋಪಿಗಳಾಗಿರುವ ಮನೀಷ್, ಚೇತನ್, ಮಂಜುನಾಥ್ ಮತ್ತು ಕೇಶವ ಪೊಲೀಸ್ ವಶದಲ್ಲಿದ್ದು ಈ ಪೈಕಿ ಕೇಶವ ಪುತ್ತೂರು ನಗರ ಕಾಂಗ್ರೆಸ್ ನ ಎಸ್ ಸಿ ಘಟಕದ ಅಧ್ಯಕ್ಷ ಎನ್ನಲಾಗಿದೆ.ಎರಡು ತಲವಾರಿನಲ್ಲಿ ಅಕ್ಷಯ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ಪೋಸ್ಟ್ ಮಾರ್ಟಂ ವೇಳೆ 58 ರಷ್ಟು ಗಾಯಗಳು ಪತ್ತೆಯಾಗಿವೆ. ಮೊದಲು ಮೃತ

ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನ ಕೈವಾಡ ಆರೋಪ Read More »

ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ದಾರುಣ ಹತ್ಯೆ -ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

ಪುತ್ತೂರು ನಗರದ ಕಲ್ಲೆಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಕಳೆದ ತಡ ರಾತ್ರಿ ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗದ ಘಟನೆ ವರದಿಯಾಗಿದೆ. ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸಹಿತ ಪೊಲೀಸರು ಭೇಟಿ ನೀಡಿದ್ದು, ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ. ಮೃತ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಬಸ್ ಚಾಲಕರಾಗಿದ್ದ ಬನ್ನೂರು ನಿವಾಸಿ

ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ದಾರುಣ ಹತ್ಯೆ -ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ Read More »

ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗೇಟಿಗೆ ಲಾರಿ ಡಿಕ್ಕಿ

ಸಂಪಾಜೆಯ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗೇಟಿಗೆ ಢಿಕ್ಕಿ ಲಾರಿಯೊಂದು ಡಿಕ್ಕಿ ಹೊಡೆದು ಜಖಂಗೊಂಡ ಘಟನೆ ನ.7ರಂದು ಬೆಳಗ್ಗಿನ ಜಾವ ಸಂಭವಿಸಿದೆ.ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ತಮಿಳುನಾಡು ಮೂಲದ ಲಾರಿಯೊಂದು ಬ್ರೇಕ್ ವೈಫಲ್ಯಗೊಂಡ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗೇಟಿಗೆ ಢಿಕ್ಕಿಯಾಗಿದ್ದು, ಗೇಟು ಹಾಗೂ ಲಾರಿಯ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಲಾರಿಯ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗೇಟಿಗೆ ಲಾರಿ ಡಿಕ್ಕಿ Read More »

ಉದ್ಯೋಗ ಕೊಡುವುದಾಗಿ ಹೇಳಿ ವಂಚನೆ

ಸುಳ್ಯ : ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗ ಕೊಡುವುದಾಗಿ ಹೇಳಿ ಅಮರಪಡ್ನೂರಿನ ನಿವಾಸಿಯೋರ್ವರಿಗೆ ವಂಚಿಸಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಮರಪಡ್ನೂರು ಗ್ರಾಮದ ನಿವಾಸಿ ಯಶ್ವಿನಿ ಕೆ ಬಿ ಎಂಬವರ ದೂರಿನಂತೆ ಇವರಿಗೆ ಜು.15, 2023 ರಂದು ಅಪರಿಚಿತ ವ್ಯಕ್ತಿಯಬ್ಬರು ಕರೆಮಾಡಿ ತಾನು Vistara Airlines , Singapore Branch, Devanahalli Bangalore ಎಂಬ ಸಂಸ್ಥೆಯಿಂದ ಕರೆಮಾಡುತ್ತಿದ್ದು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು, ಈ ಉದ್ಯೋಗದಲ್ಲಿ ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ತಿಳಿಸಿರುತ್ತಾರೆ.

ಉದ್ಯೋಗ ಕೊಡುವುದಾಗಿ ಹೇಳಿ ವಂಚನೆ Read More »

ಅರಂತೋಡು : ಗಾಳಿಮಳೆ ಅಪಾರ ಹಾನಿ

ಸುಳ್ಯ ತಾಲೂಕಿನ ವಿವಿಧೆಡೆ ಬುಧವಾರ ರಾತ್ರಿ ಭಾರೀ ಗಾಳಿ ಮಳೆ ಸುರಿದ ಹಿನ್ನಲೆಯಲ್ಲಿ ಅಪಾರವಾಗಿ ಹಾನಿ ಉಂಟಾದ ಘಟನೆ ವರದಿಯಾಗಿದೆ. ಗಾಳಿ ಮಳೆಗೆ ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಬಳಿಯಿದ್ದ ತೆಂಗಿನಮರವೊಂದು ಶಾಲಾ ಕಟ್ಟಡದ ಮೇಲೆ ಬಿದ್ದ ಪರಿಣಾಮವಾಗಿ ಶಾಲಾ ಕಟ್ಟಡ ಹಾಗೂ ಹಂಚುಗಳಿಗೆ ಹಾನಿಯಾಗಿದೆ.ಅಲ್ಲದೆ ವಿದ್ಯುತ್ ಲೈನಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಇದಲ್ಲದೆ ಇತರೆಡೆ ಹಾನಿ ಉಂಟಾದ ಬಗ್ಗೆ ವರದಿಯಾಗುತ್ತಿದೆ.

ಅರಂತೋಡು : ಗಾಳಿಮಳೆ ಅಪಾರ ಹಾನಿ Read More »

ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತ ಯುವಕನನ್ನು ಪುತ್ತೂರು ತಾಲೂಕಿನ ಕುರಿಯ ಪಡ್ಪು ನಿವಾಸಿ, ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೀಕ್ಷಿತ್ (17) ಎಂದು ಗುರುತಿಸಲಾಗಿದೆ.ದೀಕ್ಷಿತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಚಲಿಸುತ್ತಿದ್ದ ಬಸ್ಸು ಹತ್ತಲು ಯತ್ನಿಸಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

ಸುಳ್ಯ: ಚಲಿಸುತ್ತಿದ್ದ ಬಸ್ಸು ಹತ್ತಲು ಯತ್ನಿಸಿದ ವ್ಯಕ್ತಿಯೊಬ್ಬರು ರಸ್ತೆಗೆ ಎಸೆಯಲ್ಪಟ್ಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ‌. ಆಲೆಟ್ಟಿ ಗ್ರಾಮದ ಕೂಳಿಯಡ್ಕ ಕರುಣಾಕರ ಮೃತಪಟ್ಟ ದುರ್ದೈವಿ. ಸುಳ್ಯ ಆಲೆಟ್ಟಿ ಕ್ರಾಸ್ ಬಳಿಯಲ್ಲಿ ಶನಿವಾರ ಸಂಜೆ ಖಾಸಗಿ ಬಸ್ಸು ಹತ್ತಲು ಅವರು ಹೋದಾಗ ಬಸ್ಸಿನ ಬಾಗಿಲು ತಳ್ಳಲ್ಪಟ್ಟು ರಸ್ತೆಗೆ ಆಯತಪ್ಪಿ ಬಿದ್ದರೆನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು.ಮನೆಯಲ್ಲೆ ಮುಂಜಾನೆ ಸಮಸ್ಯೆ ಉಲ್ಬಣವಾದ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ

ಚಲಿಸುತ್ತಿದ್ದ ಬಸ್ಸು ಹತ್ತಲು ಯತ್ನಿಸಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು Read More »

error: Content is protected !!
Scroll to Top