ಕ್ರೈಂ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ಧೇಶಕ ಸಂತೋಷ್‌ಕುಮಾರ್ ರೈ ನಿಧನ

ಸುಳ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾಗಿದ್ದು, ಪ್ರಸ್ತುತ ವಿಜಯಪುರ ಜಿಲ್ಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್‌ಕುಮಾರ್ ರೈಯವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದುಬಂದಿದೆ. ಸಂತೋಷ್‌ಕುಮಾರ್ ರೈಯವರು ಬೆಳ್ಳಾರೆ ಸಮೀಪದ ಸವಣೂರಿನವರಾಗಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ಧೇಶಕ ಸಂತೋಷ್‌ಕುಮಾರ್ ರೈ ನಿಧನ Read More »

ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿಗೆ ತಯಾರು ನಡೆಸುತ್ತಿದ್ದ 30 ಮಂದಿ ಅರಣ್ಯ ಇಲಾಖೆಯ ವಶ,ಬಿಡುಗಡೆ ಯಾರ್ಯರು ಇದ್ರು ಇಲ್ಲಿದೆ ಮಾಹಿತಿ

ಅರಂತೋಡು: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮ ಪ್ರವೇಶ ಮಾಡಿ ಹೊಸ ವರ್ಷ ಆಚರಣೆ ಮಾಡಿ ಪಾರ್ಟಿ ಮಾಡಲು ತಯಾರು ಮಾಡುತ್ತಿದ್ದ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟ ಘಟನೆ ಬುಧವಾರ ವರದಿಯಾಗಿದೆ.ಮಂಗಳವಾರ ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ ಯುವಕರು ಅರಣ್ಯ ಇಲಾಖೆಯ ವಶವಾಗಿದ್ದರು ಎನ್ನಲಾಗಿದೆ. ಆಲೆಟ್ಟಿ ಗ್ರಾಮದ ಜಗದೀಶ ಎಂಬರ ಮಗ

ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿಗೆ ತಯಾರು ನಡೆಸುತ್ತಿದ್ದ 30 ಮಂದಿ ಅರಣ್ಯ ಇಲಾಖೆಯ ವಶ,ಬಿಡುಗಡೆ ಯಾರ್ಯರು ಇದ್ರು ಇಲ್ಲಿದೆ ಮಾಹಿತಿ Read More »

ಪ್ರಿಯಕರನಿಗೆ ಚೂರಿಯಿಂದ ಇರಿದ ಯುವತಿ

ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಪಾರ್ಟಿಗೆ ಬಂದಿದ್ದ ಪ್ರಿಯತಮನಿಗೆ ಚೂರಿಯಿಂದ ಇರಿದ ಘಟನೆ ಬುಧವಾರ ನಡೆದಿದೆ. ಮನುಕುಮಾ‌ರ್ (25) ಚಾಕು ಇರಿತಕ್ಕೊಳಗಾದ ಯುವಕ. ಈತನಿಗೆ ಪ್ರಿಯತಮೆ ಭವಾನಿ ಚಾಕುವಿನಿಂದ ಇರಿದಿದ್ದಾಳೆ. ಪ್ರಿಯತಮೆ ಹಾಗೂ ಮನುಕುಮಾರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲವು ದಿನಗಳಿಂದ ಅವರು ವೈಮನಸ್ಸಿಂದ ದೂರವಾಗಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿದ ಸಂದರ್ಭದಲ್ಲಿ ಮನುಕುಮಾರ್ ಮನೆಗೆ ತೆರಳುತ್ತಿದ್ದ ವೇಳೆ ಯುವತಿ ಮನುಕುಮಾರಿಗೆ ಚಾಕು ಇರಿದಿದ್ದಾಳೆ.

ಪ್ರಿಯಕರನಿಗೆ ಚೂರಿಯಿಂದ ಇರಿದ ಯುವತಿ Read More »

ಹುತಾತ್ಮ ಯೋಧ ದಿವಿನ್‌ರಿಗೆ ಅಂತಿಮ ನಮನ ಸಲ್ಲಿಸಿದ ಸದಾನಂದ ಮಾವಜಿ

ಮಡಿಕೇರಿ: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ತೀವ್ರ ಗಾಯಗೊಂಡು ಹುತಾತ್ಮರಾದ ಸೈನಿಕ ಪಿ.ಪಿ. ದಿವಿನ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಸೂದನ ಈರಪ್ಪ, ಸಿಬ್ಬಂದಿ ಜ್ಯೋತಿ ಅವರುಗಳು ಜೊತೆಯಲ್ಲಿದ್ದು ಹುತಾತ್ಮ ದಿವಿನ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ದಿವಿನ್ ಅವರ ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ

ಹುತಾತ್ಮ ಯೋಧ ದಿವಿನ್‌ರಿಗೆ ಅಂತಿಮ ನಮನ ಸಲ್ಲಿಸಿದ ಸದಾನಂದ ಮಾವಜಿ Read More »

ಕಡಬ ಠಾಣೆಯಲ್ಲಿ ಹಿಂದು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ರೌಡಿಶೀಟರ್ ರದ್ದುಗೋಳಿಸಿದ ಹೈಕೋರ್ಟ್

ಕಡಬ ತಾಲೂಕಿನ ಮರ್ಧಾಳ ಹಿಂದೂ ಕಾರ್ಯಕರ್ತರಾದ ವಿನುತ್ ಕೆ ಮತ್ತು ಶ್ರೀಕರ ಕಂಪ ಇವರ ಮೇಲೆ ದಾಖಲಾಗಿದ್ದ ರೌಡಿಶೀಟರ್ ನ್ನು ಕರ್ನಾಟಕದ ಉಚ್ಚ ನ್ಯಾಯಾಲಯ ರದ್ದುಗೋಳಿಸಿ ಆದೇಶ ಮಾಡಿದೆ.ಅರ್ಜಿದಾರರ ಪರ ಹೈಕೋರ್ಟ್ ನ್ಯಾಯವಾದಿ ಬಿ ವಿನೋದ್ ಕುಮಾರ್ ವಾದ ಮಂಡಿಸಿದರು.

ಕಡಬ ಠಾಣೆಯಲ್ಲಿ ಹಿಂದು ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ರೌಡಿಶೀಟರ್ ರದ್ದುಗೋಳಿಸಿದ ಹೈಕೋರ್ಟ್ Read More »

ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿ, ಹೆಂಡತಿಯ ಕೊಲೆಗೆ ಯತ್ನಿಸಿದ ಆರೋಪಿಗೆ ಮರಣದಂಡನೆ ವಿಧಿಸಿದ ಮಂಗಳೂರು ನ್ಯಾಯಾಲಯ

ಮೂವರು ಮಕ್ಕಳನ್ನು ಬಾವಿಗೆ ನೂಕಿ ಹಾಕಿ ಕೊಲೆಗೈದು, ಪತ್ನಿಯನ್ನು ಕೊಲೆಗೆ ಯತ್ನಿಸಿದ್ದ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ, ಕಿನ್ನಿಗೋಳಿ ಪದ್ಮನೂರು ನಿವಾಸಿ ಹಿತೇಶ್ ಶೆಟ್ಟಿಗಾರ್ ಎಂಬಾತನಿಗೆ ಮಂಗಳೂರು ನ್ಯಾಯಾಲಯವು ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ.ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಸಂಜೆ 5.15ಕ್ಕೆ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ (11), ದಕ್ಷಿತ್ (5) ಎಂಬವರನ್ನು ಬಾವಿಗೆ ತಳ್ಳಿ ಹಾಕಿ ಕೊಲೆ ಮಾಡಿದ್ದಲ್ಲದೆ, ತನ್ನ ಪತ್ನಿ ಲಕ್ಷ್ಮಿ ಯನ್ನು

ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿ, ಹೆಂಡತಿಯ ಕೊಲೆಗೆ ಯತ್ನಿಸಿದ ಆರೋಪಿಗೆ ಮರಣದಂಡನೆ ವಿಧಿಸಿದ ಮಂಗಳೂರು ನ್ಯಾಯಾಲಯ Read More »

ಕೋಳಿಕಲ್ಲು ಮಲೆ ಮೀಸಲು ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿ ಮಾಡುತ್ತಿದ್ದ 30 ಜನರು ಅರಣ್ಯ ಇಲಾಖೆಯ ವಶ!

ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆಯಲ್ಲಿ ಹೊಸ ವರ್ಷ ಆಚರಣೆ ಪಾರ್ಟಿ ಮಾಡುತ್ತಿದ್ದ 40 ಜನರು ಅರಣ್ಯ ಇಲಾಖೆಯ ವಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ.ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶದ ಬಗ್ಗೆ ಬಂಧಿಸಿ ಕೇಸು ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಇದರಲ್ಲಿ ಕಡಬ, ಸುಳ್ಯ ಹಾಗೂ ಪೆರಾಜೆ ಭಾಗದವರು ಇದ್ದರೆಂದು ಹೇಳಲಾಗಿದೆ

ಕೋಳಿಕಲ್ಲು ಮಲೆ ಮೀಸಲು ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿ ಮಾಡುತ್ತಿದ್ದ 30 ಜನರು ಅರಣ್ಯ ಇಲಾಖೆಯ ವಶ! Read More »

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಗೆ ಪೊಲೀಸರಿಂದ ಗುಂಡು ಹಾರಾಟ

ಹಳೇಹುಬ್ಬಳ್ಳಿ ಘೋಡ್ಕೆ ಪ್ಲಾಟ್‌ನಲ್ಲಿ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಸೆರೆ ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಓರ್ವನ ಕಾಲಿಗೆ ಪೊಲೀಸರು ಗುಂಡು ಹೊಡೆದು ಆತನನ್ನು ವಶಕ್ಕೆ ಪಡೆದಿದ್ದಾರೆಈತನು ಕ್ಷುಲಕ ವಿಷಯವಾಗಿ ಸೋಮವಾರ ರಾತ್ರಿ ಹಳೇಹುಬ್ಬಳ್ಳಿ ಆನಂದನಗರ ರಸ್ತೆ ಘೋಡ್ಕೆ ಪ್ಲಾಟ್‌ನ ತಬ್ಲಿಕ್ ಮಸೀದಿ ಬಳಿ ಅದೇ ಪ್ರದೇಶದ ಸಮೀರ ಶೇಖ್ (18) ಹಾಗೂ ಈತನ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬುವರಿಗೆ ಚಾಕುವಿನಿಂದ ತಲೆಮರೆಸಿಕೊಂಡಿದ್ದ.ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಗೆ ಪೊಲೀಸರಿಂದ ಗುಂಡು ಹಾರಾಟ Read More »

ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಯತ್ನ

ಶಿಕ್ಷಕರ ಕಿರುಕುಳದಿಂದ ಪುತ್ತೂರಿನ ಹೈಸ್ಕೂಲ್ ಒಂದರ ವಿದ್ಯಾರ್ಥಿಯೊಬ್ಬಳು ನೋವಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಬೀರವಾಗಿ ಅಸ್ವಸ್ಥಗೊಂಡ ಬಗ್ಗೆ ವರದಿಯಾಗಿದೆ. ಶಾಲಾ ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದಾಗಿ ತಂದೆ ಆರೋಪಿಸಿದ್ದು. ಮಗಳು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಕಲ್ಲೇರಿ ಮೂಲದ ಸದ್ಯ ಪಡೀಲುನಲ್ಲಿದ್ದು ಪುತ್ತೂರು ನಗರದಲ್ಲಿರುವ ಸರಕಾರಿ ಪ್ರೌಢ ಶಾಲೆಯೊಂದರಲ್ಲಿ ಓದುತ್ತಿರುವ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದವಳು.

ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಯತ್ನ Read More »

ಗಿರಿಜಾಶಂಕರ ತುದಿಯಡ್ಕ ವಿಧಿವಶ

ಸುಳ್ಯ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ಆಲೆಟ್ಟಿ ಗ್ರಾಮದ ದಿ.ತುದಿಯಡ್ಕ ವಿಷ್ಣಯ್ಯ ರವರ ಪುತ್ರ ರೊ.ಗಿರಿಜಾ ಶಂಕರ ತುದಿಯಡ್ಕ ಅವರು ಅನಾರೋಗ್ಯ ದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಕಾರಣದಿಂದಾಗಿ ಚಿಕಿತ್ಸೆಗೆ ಸ್ಪಂದಿಸಿದೆ ಆಸ್ಪತ್ರೆಯಲ್ಲಿಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.ಮೃತರು ಪತ್ನಿ ಜಯಶ್ರೀ,ಇಬ್ಬರು ಪುತ್ರರಾದ ಸುಬ್ರಹ್ಮಣ್ಯ, ವಿಷ್ಣು ಪ್ರಕಾಶ್ ಮತ್ತು ಓರ್ವ ‌ಪುತ್ರಿ ಸುಶ್ಮಿತಾ ಹಾಗೂ ಸಹೋದರರಾದ

ಗಿರಿಜಾಶಂಕರ ತುದಿಯಡ್ಕ ವಿಧಿವಶ Read More »

error: Content is protected !!
Scroll to Top