ಕ್ರೈಂ

ಕಲ್ಲೆಂಬಿಯ ದೈವ ನರ್ತಕ ರಮೇಶ್ ಕಲ್ಲೆಂಬಿ ನಿಧನ

ಆಲೆಟ್ಟಿವ: ಆಲೆಟ್ಟಿ ಗ್ರಾಮದ ಕಲ್ಲೆಂಬಿಯ ನಿವಾಸಿ ದೈವ ನರ್ತಕ ದಿ.ಕುಕ್ಕ ರವರ ಪುತ್ರ ದೈವ ನರ್ತಕ ರಮೇಶ್ ಕಲ್ಲೆಂಬಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರ್ಷ ಪ್ರಾಯವಾಗಿತ್ತು ಮೃತರು ಆಲೆಟ್ಟಿ ಭಾಗದಲ್ಲಿ ಕೆಲವು ಮನೆತನದ ತರವಾಡು ಮನೆಯ ನೇಮೋತ್ಸವದ ಸಂದರ್ಭದಲ್ಲಿ ಕಲ್ಲುರ್ಟಿ ಗುಳಿಗ ದೈವದ ನರ್ತನ ಸೇವೆ ಮಾಡಿಕೊಂಡು ಬರುತ್ತಿದ್ದರು. ಮೃತರು ಅವಿವಾಹಿತರಾಗಿದ್ದು ತಾಯಿ ಸರೋಜಿನಿ ಹಾಗೂ ಸಹೋದರಿಯರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

ಕಲ್ಲೆಂಬಿಯ ದೈವ ನರ್ತಕ ರಮೇಶ್ ಕಲ್ಲೆಂಬಿ ನಿಧನ Read More »

ಆಸ್ಪತ್ರೆಯಿಂದ ಕೈದಿ ಪರಾರಿ

ಸುಳ್ಯ : ಸುಳ್ಯ ತಾಲೂಕು ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದ ಕೈದಿಯೊರ್ವ ಪರಾರಿಯಾದ ಘಟನೆ ಶನಿವಾರ ವರದಿಯಾಗಿದೆ ಓರ್ವ ಕೈದಿಯನ್ನು ಆರೋಗ್ಯ ತಪಾಸಣೆ ಮಾಡಿಸಲು ಆಸ್ಪತ್ರೆಗೆ ಇಬ್ಬರು ಪೋಲಿಸರು ಕರೆ ತಂದಿದ್ದು ಈ ವೇಳೆ ಓರ್ವ ಪೋಲಿಸ್ ಚೀಟಿ ಮಾಡಿಸುವ ಸಂದರ್ಭದಲ್ಲಿ ಕೈದಿ ತನ್ನ ಕೈಯಲ್ಲಿ ಇದ್ದ ಕೋಳದೊಂದಿಗೆ ಎಸ್ಕೆಪ್ ಆಗಿದ್ದು ಇದೀಗ ಪೋಲಿಸರು ಹುಡುಕಾಟ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ‌ಯನ್ನು ನಿರೀಕ್ಷಿಸಲಾಗುತ್ತಿದೆ.

ಆಸ್ಪತ್ರೆಯಿಂದ ಕೈದಿ ಪರಾರಿ Read More »

ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಕಡಬ: ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ.ಮೃತರನ್ನು ಕಡಬ ಹಳೇಸ್ಟೇಷನ್ ನಿವಾಸಿ ಹಸೈನಾ‌ರ್ ಎಂದು ಗುರುತಿಸಲಾಗಿದೆ. ಮೃತರು ತನ್ನ ಮನೆಯಿಂದ ಕಡಬ ಕಡೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಅಪಘಾತದ ದಶ್ಯ ಇಂಡಸ್ಟ್ರೀಸ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವು Read More »

ವಿದ್ಯಾರ್ಥಿನಿಗೆ ಬಸ್ಸಲ್ಲಿ ಲೈಂಗಿಕ ದೌಜನ್ಯ ಎಸಗಿದ ಅನ್ಯ ಕೋಮಿನ ಯುವಕನಿಗೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು ಮಂಜೂರು

ಸುಳ್ಯ : ವಿದ್ಯಾರ್ಥಿನಿ ಜೊತೆಗೆ ಬಸ್ಸಿನಲ್ಲಿ ಲೈಂಗಿಕ ದೌಜನ್ಯ ಎಸಗಿದ್ದಾನೆ ಎನ್ನಲಾದ ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಮೂರು ಜನರನ್ನು ಸುಳ್ಯ ಪೋಲಿಸ್ ಬಂಧಿಸಿದ್ದರು. ಇದೀಗ ಈ ಬಂಧಿತರಾದ ಭಜರಂಗದಳ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಮಿಥುನ್ ರವರಿಗೆ ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರು ಗೊಳಿಸಿರುವುದಾಗಿ ತಿಳಿದು ಬಂದಿದೆ. ಇವರ ಪರವಾಗಿ ಹರೀಶ್ ಬೂಡುಪನ್ನೆ ಹಾಗೂ ಮಹೇಶ್ ಕಜೆ ವಾದಿಸಿದ್ದಾರೆ.

ವಿದ್ಯಾರ್ಥಿನಿಗೆ ಬಸ್ಸಲ್ಲಿ ಲೈಂಗಿಕ ದೌಜನ್ಯ ಎಸಗಿದ ಅನ್ಯ ಕೋಮಿನ ಯುವಕನಿಗೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು ಮಂಜೂರು Read More »

ಸಹೋದರನಿಂದಲೇ ಗರ್ಭಿಣಿಯಾದ ತಂಗಿ

ಸಹೋದರನೇ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ನೆನ್ನೆ ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ನಡೆದಿದೆ. ಹೌದು, ತಂಗಿಗೆ ಶ್ರೀರಕ್ಷೆಯಾಗಿರಬೇಕಿದ್ದ ಅಣ್ಣ ಈ ಕೃತ್ಯ ಎಸಗಿದ್ದಾನೆ. ಬಾಲಕಿ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಆಕೆಯ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಆಕೆಗೆ ಮೂರು ತಿಂಗಳಾಗಿರುವುದನ್ನು ದೃಢಪಡಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಾಲಕಿ ತನ್ನ ತಾಯಿಗೆ ತನ್ನ ಅಣ್ಣ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಕೇಳಿದ್ದಾಗಿ ತಿಳಿಸಿದ್ದಾಳೆ.

ಸಹೋದರನಿಂದಲೇ ಗರ್ಭಿಣಿಯಾದ ತಂಗಿ Read More »

ಮುಂಜಾನೆ ಎಲ್ ಪಿ ಜಿ ಸಿಲಿಂಡರ್ ಸ್ಫೋಟ; 6 ಜನರ ಸ್ಥಿತಿ ಗಂಭೀರ

ಇಂದು ಮುಂಜಾನೆ ದಾವಣಗೆರೆಯಲ್ಲಿ ಸಿಲಿಂಡರ್‌ ಸ್ಪೋಟಗೊಂಡು, 6 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಸಿಲಿಂಡ‌ರ್ ಸ್ಫೋಟದ ತೀವ್ರತೆಗೆ ಮನೆ ಮೇಲ್ಟಾವಣಿ ಸಂಪೂರ್ಣವಾಗಿ ಕುಸಿತಗೊಂಡಿದೆ. ಬೆಳಿಗ್ಗೆ ಸಿಲಿಂಡ‌ರ್ ಆನ್ ಮಾಡಲು ಹೋದಾಗ ಏಕಾಏಕಿ ಸ್ಪೋಟವಾಗಿದೆ ಎನ್ನಲಾಗಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮುಂಜಾನೆ ಎಲ್ ಪಿ ಜಿ ಸಿಲಿಂಡರ್ ಸ್ಫೋಟ; 6 ಜನರ ಸ್ಥಿತಿ ಗಂಭೀರ Read More »

ಬಾಗಿಲಿನ ದಾರಂದ ಬಿದ್ದು ಮಗು ಸಾವು

ಬೆಳ್ತಂಗಡಿ : ತಲೆಯ ಮೇಲೆ ಭಾಗಿಲಿನ ದಾರಂದ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳ್ತಂಗಡಿಯ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾದ ಕೊನಲೆ ಎಂಬಲ್ಲಿ ನಡೆದಿದೆ.ಹಾರೀಸ್ ಮುಸ್ಲಿಯಾ‌ರ್ ಮತ್ತು ಅಸ್ಮಾ ದಂಪತಿ ಪುತ್ರಿ, ಕೇರ್ಯಾ ಸರಕಾರಿ ಶಾಲೆಯ 1 ನೇ ತರಗತಿಯ ಅಲ್ಪಿಯಾ (6) ಮೃತ ಬಾಲಕಿಯಾಗಿದ್ದಾಳೆ. ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಳೆ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲು ಮನೆಯ ಪಕ್ಕದಲ್ಲಿ ದಾರಂದವನ್ನು ಜೋಡಿಸಿದ್ದರು. ಈ ಸಂದರ್ಭದಲ್ಲಿ

ಬಾಗಿಲಿನ ದಾರಂದ ಬಿದ್ದು ಮಗು ಸಾವು Read More »

ಹೆಲಿಕ್ಯಾಪ್ಟ‌ರ್ ಪತನ: ಮೂವರು ಸಾವು

ಪುಣೆ : ಹೆಲಿಕ್ಯಾಪ್ಟ‌ರ್ ಪತನವಾಗಿ ಮೂವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿರವ ಬವ್ಹಾನ್ ಬದ್ರುಕ್ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಸ್ಥಳೀಯರು ಹಿಂಜೇವಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಪಡೆಗಳು ಹಾಗೂ ಆಂಬುಲೆನ್ಸನ್ ಕೂಡಲೇ ಸ್ಥಳಕ್ಕೆ ಧಾವಿಸಿತಾದರೂ ಮೂವರು ಸಾವನ್ನಪ್ಪಿದ್ದರು. ಇದು ಖಾಸಗಿ ಹೆಲಿಕ್ಯಾಪ್ಟರ್ ಆಗಿದ್ದು, ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.

ಹೆಲಿಕ್ಯಾಪ್ಟ‌ರ್ ಪತನ: ಮೂವರು ಸಾವು Read More »

ಮುಖ್ಯ ಮಂತ್ರಿಯವರ ವಿರುದ್ದ ಪ್ರಕರಣ ದಾಖಲಿಸಲು ಕಾರಣರಾದ ಸ್ನೇಹಮಯಿ ಕೃಷ್ಣರಿಗೆ ಜಾಮೀನು ರಹಿತ ಬಂಧನ ವಾರಂಟ್

ಮೈಸೂರು: ಮುಡಾ ಹಗರಣ ನಡೆದಿದೆ ಎಂದು ದೂರು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಕಷ್ಟ ತಂದೊಡ್ಡಿರುವ ಸ್ನೇಹಮಯಿ ಕೃಷ್ಣ ವಿರುದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.ಹಳಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಎನ್.ಕುಮಾರ್ ಎಂಬುವವರು 2015ರಲ್ಲಿ ರಲ್ಲಿ ಆರ್‌ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.ಅಕ್ಟೋಬ‌ರ್ 1ರಂದು ಮಂಗಳವಾರ ವಿಚಾರಣೆಗೆ ದಿನಾಂಕ

ಮುಖ್ಯ ಮಂತ್ರಿಯವರ ವಿರುದ್ದ ಪ್ರಕರಣ ದಾಖಲಿಸಲು ಕಾರಣರಾದ ಸ್ನೇಹಮಯಿ ಕೃಷ್ಣರಿಗೆ ಜಾಮೀನು ರಹಿತ ಬಂಧನ ವಾರಂಟ್ Read More »

ಕಾರು ಡಿಕ್ಕಿ ಹೊಡೆದು ಬಾಲಕ ದುರ್ಮರಣ

ಕೊಕ್ಕಡ : ಕೊಕ್ಕಡದಲ್ಲಿ ಕಾರು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ವರದಿಯಾಗಿದೆ.ಕೊಕ್ಕಡ ಸಮೀಪದ ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ರವರ ಮಗ ನವಾಫ್ ಇಸ್ಮಾಯಿಲ್ (10 ವ.) ಮೃತಪಟ್ಟ ವಿದ್ಯಾರ್ಥಿ. ಆತೂರಿನ ಆಯಿಷಾ ಸ್ಕೂಲ್ ನ ನಾಲ್ಕನೇ ತರಗತಿಯ ವಿಧ್ಯಾರ್ಥಿ.ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ನಿಂತಿದ್ದ ನವಾಫ್ ಅವರು ಕಾರಿನಡಿಗೆ ಬಿದ್ದರು ಎನ್ನಲಾಗಿದೆ. ಅವರ ಮೇಲೆಯೇ ಕಾರು ಹರಿದ ಪರಿಣಾಮ ತಲೆ ಮತ್ತು

ಕಾರು ಡಿಕ್ಕಿ ಹೊಡೆದು ಬಾಲಕ ದುರ್ಮರಣ Read More »

error: Content is protected !!
Scroll to Top