ಅರಣ್ಯದಲ್ಲಿ ಹೊಸ ವರ್ಷ ಆಚರಣೆ ಪಾರ್ಟಿಗೆ ತಯಾರು ನಡೆಸುತ್ತಿದ್ದ 30 ಮಂದಿ ಅರಣ್ಯ ಇಲಾಖೆಯ ವಶ,ಬಿಡುಗಡೆ ಯಾರ್ಯರು ಇದ್ರು ಇಲ್ಲಿದೆ ಮಾಹಿತಿ
ಅರಂತೋಡು: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮ ಪ್ರವೇಶ ಮಾಡಿ ಹೊಸ ವರ್ಷ ಆಚರಣೆ ಮಾಡಿ ಪಾರ್ಟಿ ಮಾಡಲು ತಯಾರು ಮಾಡುತ್ತಿದ್ದ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟ ಘಟನೆ ಬುಧವಾರ ವರದಿಯಾಗಿದೆ.ಮಂಗಳವಾರ ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ ಯುವಕರು ಅರಣ್ಯ ಇಲಾಖೆಯ ವಶವಾಗಿದ್ದರು ಎನ್ನಲಾಗಿದೆ. ಆಲೆಟ್ಟಿ ಗ್ರಾಮದ ಜಗದೀಶ ಎಂಬರ ಮಗ […]









