ಕ್ರೈಂ

ಕುಕ್ಕುಡೇಲು ಶೀನಪ್ಪ ಗೌಡ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕುಡೇಲು ನಿವಾಸಿ ಶೀನಪ್ಪ ಗೌಡರು ಜ.4ರಂದು ಮುಂಜಾನೆ ನಿಧನರಾದರು.ಅವರಿಗೆ 87 ವರ್ಷ ಪ್ರಾಯವಾಗಿತ್ತು.ಡಿ.4ರಂದು ಮುಂಜಾನೆ ಅಸ್ವಸ್ಥಗೊಂಡ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.ಕೃಷಿಕರಾಗಿದ್ದ ಅವರು ಪತ್ನಿ ಗಿರಿಜಾ, ಪುತ್ರರಾದ ನವೀನ್ ಕುಮಾರ್ ಕುಕ್ಕುಡೇಲು, ಉದಯಕುಮಾರ್ ಕುಕ್ಕುಡೇಲು, ಪುತ್ರಿಯರಾದ ಗೀತಾಂಜಲಿ, ತಾರಕೇಶ್ವರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕುಕ್ಕುಡೇಲು ಶೀನಪ್ಪ ಗೌಡ ನಿಧನ Read More »

ಸುಳ್ಯ ಕೆ.ಎಸ್ .ಆರ್.ಟಿ ಸಿ ಬಸ್ ನಿಲ್ದಾದ ಶೌಚಾಲಯಕ್ಕೆ ತೆರಳುವ ಮಹಿಳೆಯರೇ ಎಚ್ಚರ ! ಶೌಚಾಲಯದ ಕಿಟಕಿ ಮೂಲಕ ಪೊಟೋ ತೆಗೆಯುವ ವಿಕ್ರತ ಕಾಮಿಗಳಿದ್ದಾರೆ ಹುಷಾರ್!

ಸುಳ್ಯ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಕಿಟಕಿ ಮೂಲಕ ಯಾರೋ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. ಕಿಟಕಿಯ ಗ್ಲಾಸ್ ಸರಿಸಿ ಫೋಟೋವನ್ನು ಕ್ಲಿಕ್ಕಿಸಿದ್ದಾನೆ ಎಂದು ತಿಳಿದು ಬಂದಿದೆ.ಮಹಿಳೆ ಈ ಘಟನೆಯನ್ನು ಮತ್ತು ಆತನ ಕೈಯನ್ನು ನೋಡಿದ್ದು ಈ ಸಂಧರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.ಮಹಿಳೆ ಸುಳ್ಯಠಾಣೆಗೆ ದೂರು ನೀಡಿದ್ದಾರೆ.

ಸುಳ್ಯ ಕೆ.ಎಸ್ .ಆರ್.ಟಿ ಸಿ ಬಸ್ ನಿಲ್ದಾದ ಶೌಚಾಲಯಕ್ಕೆ ತೆರಳುವ ಮಹಿಳೆಯರೇ ಎಚ್ಚರ ! ಶೌಚಾಲಯದ ಕಿಟಕಿ ಮೂಲಕ ಪೊಟೋ ತೆಗೆಯುವ ವಿಕ್ರತ ಕಾಮಿಗಳಿದ್ದಾರೆ ಹುಷಾರ್! Read More »

ಮದೆನಾಡಿನಲ್ಲಿ ಕಾರು ಪಲ್ಟಿ

ಚಾಲಕನ ನಿಯಂತ್ರಣ ಕಾರೊಂದು ರಸ್ತೆ ಬದಿಯ ತೋಡಿಗೆ ಮಗುಚಿ ಬಿದ್ದ ಘಟನೆ ಮದೆನಾಡಿನಲ್ಲಿ ಭಾನುವಾರ ವರದಿಯಾಗಿದೆ.ಬೆಂಗಳೂರಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಯಾವುದೇ ಪ್ರಾಣಾಪಾಯ ಹಾಗೂ ಗಾಯಗಳು ಸಂಭವವಿಸಿರುವುದಿಲ್ಲ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಮದೆನಾಡಿನಲ್ಲಿ ಕಾರು ಪಲ್ಟಿ Read More »

ಸ್ಕೂಟಿ ಸವಾರನ ಮೇಲೆ ಕಾಡಾನೆ ದಾಳಿ,ಆಸ್ಪತ್ರೆಗೆ ದಾಖಲು,ಜಖಂಗೊಂಡ ಸ್ಕೂಟಿ

ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ದೇವರ ಕೊಲ್ಲಿಯಲ್ಲಿ ಜ.4 ರಂದು ನಡೆದಿದೆ.ದೇವರಕೊಲ್ಲಿಯ ಸ್ಥಳೀಯ ನಿವಾಸಿ ಮುತ್ತು ಕಾಡಾನೆ ದಾಳಿಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಎಸ್ಟೇಟ್ ನಲ್ಲಿ ರಾತ್ರಿ ವಾಚೆನ್ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾಡಾನೆಯೊಂದು ದಿಡೀರ್ ದಾಳಿ ಮಾಡಿದೆ. ಅದೃಷ್ಟವಶಾತ್ ಗಾಯಾಳು ಓಡಿ ತಪ್ಪಿಸಿಕೊಂಡು ಸಣ್ಣ ಪುಟ್ಟ ಗಾಯಗಳೊಂದಿಗೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸ್ಕೂಟಿ ಜಖಂಗೊಂಡಿದೆ. ಮುತ್ತು ಅವರನ್ನು ಮಡಿಕೇರಿ ಸರಕಾರಿ

ಸ್ಕೂಟಿ ಸವಾರನ ಮೇಲೆ ಕಾಡಾನೆ ದಾಳಿ,ಆಸ್ಪತ್ರೆಗೆ ದಾಖಲು,ಜಖಂಗೊಂಡ ಸ್ಕೂಟಿ Read More »

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಇನ್ನಿಲ್ಲ

ಸಿಪಿಐ(ಎಂ) ನಾಯಕ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ಭೇಟಿಯಾದಾಗೆಲ್ಲ ದೇಶದ ರೈತರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದರು. ಈ ಸಮುದಾಯಗಳಿಗೆ ನ್ಯಾಯ ಕೊಡಿಸಲು ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದ ಬಯ್ಯಾರೆಡ್ಡಿಯವರು ಒಬ್ಬ ದಣಿವರಿಯದೆ ಇದ್ದ ಜನಪರ ಹೋರಾಟಗಾರ.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಇನ್ನಿಲ್ಲ Read More »

ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ

ಮಂಡೆಕೋಲಿನ ರೈತರ ಕೃಷಿ ತೋಟಕ್ಕೆ ಮೂರು ಕಾಡಾನೆಗಳು ಲಗ್ಗೆ ಇಟ್ಟ ಘಟನೆ ಸುಳ್ಯ ತಾಲೂಕಿನ ಗ್ರಾಮದ ಮಾವಂಜಿಯಿಂದ ವರದಿಯಾಗಿದೆ.ಮಂಡೆಕೋಲು ಗ್ರಾಮದ ಮಾವಂಜಿ ನಾರಾಯಣ ಶಿಬರೂರು ಅವರ ಮೂರು ಕಾಡಾನೆಗಳು ಕಂಡುಬಂದಿವೆ. ಕೆಲವು ದಿನಗಳ ಹಿಂದೆ ಈ ಭಾಗದ ಕೃಷಿ ತೋಟಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಅಪಾರ ಕೃಷಿ ಹಾನಿ ಮಾಡಿತ್ತು.ಇದೀಗ ಮತ್ತೆ ಕ್ರಷಿ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ.

ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ Read More »

ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಧುಗಿರಿ ಡಿವೈಎಸ್ಪಿಯ ಬಂಧನ!ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಡಿವೈಎಸ್ಪಿ

ದೂರು ನೀಡಲು ಡಿವೈಎಸ್ಪಿ ಕಚೇರಿಗೆ ಬಂದ ನೊಂದ ಮಹಿಳೆಯೊಬ್ಬರ ಮೇಲೆ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ನೀಚ ಕೆಲಸವನ್ನು ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಎಸಗಿದ್ದು ಮಧುಗಿರಿ ಪೊಲೀಸರು ಡಿವೈಎಸ್ಪಿಯನ್ನು ಬಂಧಿಸಿದ್ದಾರೆ.ಈ ಕ್ರತ್ಯದ ವಿಡಿಯೋ ಮಾದ್ಯಮಗಳಿಗೆ ದೊರಕಿದೆ.ಈ ಹೇಯ ಕ್ರತ್ಯದಿಂದ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.ಮಧುಗಿರಿ DYSP ರಾಮಚಂದ್ರಪ್ಪರು ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ತನ್ನ ಕಚೇರಿಯಲ್ಲಿನ ಏಕಾಂತ ಗೃಹ ಅಥವಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದು ಅನೈತಿಕ ಚಟುವಟಿಕೆ ಆರಂಭಿಸಿದ್ದಾನೆ. ಕಿಟಕಿಯ

ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಧುಗಿರಿ ಡಿವೈಎಸ್ಪಿಯ ಬಂಧನ!ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಡಿವೈಎಸ್ಪಿ Read More »

ಕೊಳಂಗಾಯ ದಾಮೋದರ ನಿಧನ

ಪೆರಾಜೆ ಗ್ರಾಮದ ಕೊಳಂಗಾಯ ದಾಮೋಧರ ಅವರು ಅಲ್ಫ ಕಾಲದ ಅಸೌಖ್ಯದಿಂದ ಜ.2 ರಂದು ಕೆ. ವಿ. ಜಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವನಜಾಕ್ಷಿ, ಪುತ್ರರಾದ ಜ್ಞಾನೇಶ, ಲಿಕೇಶ, ಡಿಕೇಶ ಹಾಗೂ ಸಹೋದರಿಯರನ್ನು ಆಗಲಿದ್ದಾರೆ.

ಕೊಳಂಗಾಯ ದಾಮೋದರ ನಿಧನ Read More »

ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ಪ್ರೀತಿ ನಾಟಕ ; ಅತ್ಯಾಚಾರ

ಪ್ರೀತಿಯ ಹೆಸರಲ್ಲಿ ಕಾಲೇಜುವೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ನಾಟಕವಾಡಿ ಕುಂಬ್ರಾದ ಬಾಡಿಗೆ ರೂಮಿಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದಲ್ಲದೇ ಅದನ್ನ ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನನ್ನ ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಪ್ರವೀಣ್‌ ಪೂಜಾರಿ ಬಂಧಿತ ಆರೋಪಿ. ಬಾಲಕಿ ನೀಡಿದ ದೂರಿನ ಆಧಾರದ ಪೊಲೀಸರು ಯುವಕನನ್ನು ಬಂಧಿಸಿ ಆತನ ವಿರುದ್ಧ ಪೋಕೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ಪ್ರೀತಿ ನಾಟಕ ; ಅತ್ಯಾಚಾರ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ಧೇಶಕ ಸಂತೋಷ್‌ಕುಮಾರ್ ರೈ ನಿಧನ

ಸುಳ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾಗಿದ್ದು, ಪ್ರಸ್ತುತ ವಿಜಯಪುರ ಜಿಲ್ಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್‌ಕುಮಾರ್ ರೈಯವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದುಬಂದಿದೆ. ಸಂತೋಷ್‌ಕುಮಾರ್ ರೈಯವರು ಬೆಳ್ಳಾರೆ ಸಮೀಪದ ಸವಣೂರಿನವರಾಗಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ಧೇಶಕ ಸಂತೋಷ್‌ಕುಮಾರ್ ರೈ ನಿಧನ Read More »

error: Content is protected !!
Scroll to Top