ಕ್ರೈಂ

ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯ ಬಂಧನ

ಕೆಲ ದಿನಗಳ ಹಿಂದೆ ನೆಲ್ಯಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮಾನಭಂಗ ಮಾಡಲು ಯತ್ನಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಬಾಲಕಿ ಕುಟುಂಬದವರೊಂದಿಗೆ ಜ.3ರಂದು ರಾತ್ರಿ ನೆಲ್ಯಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ನಡೆದ ನೇಮೋತ್ಸವಕ್ಕೆ ತೆರಳಿದ್ದ ಸಂದರ್ಭದಲ್ಲಿ ಜ.4ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಹಿರ್ದೇಶೆಗೆ ತೆರಳುತ್ತಿದ್ದ ವೇಳೆ, ಸ್ಥಳೀಯ ನಿವಾಸಿ ಚಂದ್ರಶೇಖರ ಕಟ್ಟೆಮಜಲು ಎಂಬಾತ ಬಾಲಕಿಯ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.ಆರೋಪಿಯನ್ನು ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಲಾಗಿದ್ದು ಆರೋಪಿಗೆ […]

ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯ ಬಂಧನ Read More »

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನ ಸಾವು

ಮಂಗಳೂರಿನಿಂದ ಬಾಗಲಕೋಟೆಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 65 ವರ್ಷದ ಪ್ರಯಾಣಿಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣದಲ್ಲಿ ನಡೆದಿದೆ. ಬಸ್ ಕೆರೂರ ನಿಲ್ದಾಣಕ್ಕೆ ತಲುಪಿದಾಗ, ಕಂಡಕ್ಟರ್ ಪ್ರಯಾಣಿಕನನ್ನು ಎಬ್ಬಿಸಲು ಹೋದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತರು ಮುದ್ದೇಬಿಹಾಳ ಪಟ್ಟಣದ ನಿವಾಸಿ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಕೆರೂರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕ್ಕಾಗಿ ಮುದ್ದೇಬಿಹಾಳ ಪೊಲೀಸ್‌ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನ ಸಾವು Read More »

ಸುಳ್ಯ ಶಾಸಕರಿಗೆ ಸಾಮಾಜಿಕ ಜಾಲತಾಣ ದಲ್ಲಿ ಅವಮಾನ, ಮಂಡಲ ಬಿಜೆಪಿ ಖಂಡನೆ, ಪ್ರತಿಭಟನೆಯ ಎಚ್ಚರಿಕೆ

ಸುಳ್ಯ : ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ರವರನ್ನು ಬಿಲ್ಲವ ಸಂದೇಶ್ ಎನ್ನುವ ಫೇಸ್ಬುಕ್ ಖಾತೆಯಲ್ಲಿ ತೀರಾ ಅವಮಾನಕರವಾಗಿ ಬರೆದು ಶ್ರದ್ದಾಂಜಲಿ ಸಲ್ಲಿಸಿರುವುದನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಸುಳ್ಯ ಮಂಡಲ ಬಿಜೆಪಿ ಯು ಖಂಡಿಸಿದೆ. ಸುಳ್ಯದ ಶಾಸಕರಾದ ಕು ಭಾಗೀರಥಿ ಮುರುಳ್ಯರವರು ಅತ್ಯಂತ ಕಡು ಬಡ ಕುಟುಂಬದಿಂದ ಬಂದವರಾಗಿದ್ದು ತಮ್ಮ ಸಂಘಟನಾ ಬದ್ಧತೆ ಹಾಗೂ ಕ್ರಿಯಾಶೀಲತೆಯಿಂದ ತಾಲೂಕು ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಜನಸೇವೆ ಸಲ್ಲಿಸಿ ಇದೀಗ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಶಾಸಕರಾಗಿ ಆಯ್ಕೆಯಾದ ದಿನದಿಂದ ನಿರಂತರವಾಗಿ ಕ್ಷೇತ್ರದಲ್ಲಿ

ಸುಳ್ಯ ಶಾಸಕರಿಗೆ ಸಾಮಾಜಿಕ ಜಾಲತಾಣ ದಲ್ಲಿ ಅವಮಾನ, ಮಂಡಲ ಬಿಜೆಪಿ ಖಂಡನೆ, ಪ್ರತಿಭಟನೆಯ ಎಚ್ಚರಿಕೆ Read More »

ಕಲ್ಲುಗುಂಡಿ : ವೆಂಕಪ್ಪ ಗೌಡ ನಿಧನ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಾಚಿಗದ್ದೆ ನಿವಾಸಿ ಕಣ್ಪಿಲ ವೆಂಕಪ್ಪ ಗೌಡ ರವರು ಜ.6ರಂದು ಸಂಜೆ ನಿಧನರಾದರು. ಅವರ ಅಂತ್ಯಕ್ರಿಯೆ ಇಂದು ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿರುತ್ತಾರೆ.

ಕಲ್ಲುಗುಂಡಿ : ವೆಂಕಪ್ಪ ಗೌಡ ನಿಧನ Read More »

ಮಕ್ಕಳನ್ನು ಸಂಪ್ ಗೆ ದೂಡಿ ತಾಯಿ ಆತ್ಮಹತ್ಯೆ

ತುಮಕೂರಿನ ಹಿರೇಹಳ್ಳಿ ಸಂಗನಹಳ್ಳಿ ಕಾಲೋನಿಯಲ್ಲಿ ಮಂಗಳವಾರ ತಾಯಿಯೊಬ್ಬಳು ತನ್ನ ಐದು ವರ್ಷದ ಅವಳಿ ಮಕ್ಕಳನ್ನು ಮನೆಯ ಮುಂದಿನ ನೀರಿನ ಸಂಪ್‌ಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ವಿಜಯಲಕ್ಷ್ಮಿ (26) ಮತ್ತು ಅವಳಿ ಮಕ್ಕಳನ್ನು ಚೇತನ, ಚೈತನ್ಯ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮಕ್ಕಳನ್ನು ಸಂಪ್ ಗೆ ದೂಡಿ ತಾಯಿ ಆತ್ಮಹತ್ಯೆ Read More »

ಅರಂಬೂರು : ಅಪಘಾತದಲ್ಲಿ ಬೈಕ್ ಸವಾರ ಸಾವು

ಆಲೆಟ್ಟಿ ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂಬೂರಿನಲ್ಲಿ ಬೈಕ್ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ಕಪ್ಪಿದ ಘಟನೆ ವರದಿಯಾಗಿದೆ.ಸಲ್ಮಾನ್ ಎಂಬ ವ್ಯಕ್ತಿ ಬೈಕ್ ಅಪಘಾದಲ್ಲಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.ಜ.5ರಂದು ಮಧ್ಯಾಹ್ನ ಅಪಘಾತ ನಡೆದಿತ್ತು. ಬೈಕ್ ಚಲಾಯಿಸಿಕೊಂಡು ಅರಂಬೂರು ರಸ್ತೆಯಲ್ಲಿ ಹೋಗುತಿದ್ದಾಗ ರಸ್ತೆ ಬದಿ ತಡೆಬೇಲಿಗೆ ಗುದ್ದಿ ರಸ್ತೆಗೆ ಎಸೆಯಲ್ಪಟ್ಟರು. ಪರಿಣಾಮ ಬೈಕ್ ಪಲ್ಟಿಯಾಗಿ ಸಲ್ಮಾನ್ ರಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅರಂಬೂರು : ಅಪಘಾತದಲ್ಲಿ ಬೈಕ್ ಸವಾರ ಸಾವು Read More »

ಮಗುನೊಂದಿಗೆ ತಾಯಿ ಕೆರೆಗೆ ಹಾರಿ,ತಾಯಿ ಮಗು ಸಾವು

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರದಲ್ಲಿ ತಾಯಿ ಮಗು ಕೆರೆಗೆ ಹಾರಿ ಸಾವನ್ನಪ್ಪಿದ ಘಟನೆ ಜ.4ರಂದುಬೆಳಿಗ್ಗೆ ವರದಿಯಾಗಿದೆ.ಹರೀಶ್ ಆರ್ವಾರ ಎಂಬವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ ಮಗು ಮೃತಪಟ್ಟವರು.ಘಟನೆಗೆ ಕಾರಣ ತಿಳಿದು ಬಂದಿಲ್ಲ.ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗುನೊಂದಿಗೆ ತಾಯಿ ಕೆರೆಗೆ ಹಾರಿ,ತಾಯಿ ಮಗು ಸಾವು Read More »

ಯುಪಿ ಬಿಜೆಪಿ ಶಾಸಕ ಸಭೆಯ ವೇಳೆ ಹೃದಯಾಘಾತದಿಂದ ನಿಧನ

ಬಿಜೆಪಿ ಶಾಸಕ ಶ್ಯಾಮ್ ಬಿಹಾರಿ ಲಾಲ್ ಅವರು ತಮ್ಮ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಒಂದು ದಿನದ ನಂತರ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಬರೇಲಿಯ ಫರೀದ್‌ಪುರ ಶಾಸಕರ ಆರೋಗ್ಯ ಹಠಾತ್ತನೆ ಹದಗೆಟ್ಟಿತು ಮತ್ತು ಪಶುಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಅವರೊಂದಿಗಿನ ಸಭೆಯ ಸಮಯದಲ್ಲಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಯುಪಿ ಬಿಜೆಪಿ ಶಾಸಕ ಸಭೆಯ ವೇಳೆ ಹೃದಯಾಘಾತದಿಂದ ನಿಧನ Read More »

ಬೈಕ್ ಅಪಘಾತದಲ್ಲಿ ಯುವಕ ಸಾವು

ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬೀಡಿನಗದ್ದೆ ನಿವಾಸಿ ಯುವಕ ಉಡುಪಿ ಸಮೀಪದ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಅಪಾತದಲ್ಲಿ ಮೃತಪಟ್ಟ ಘಟನೆ ಜ.2ರಂದು ನಸುಕಿನ ವೇಳೆ ವರದಿಯಾಗಿದೆ.ಸೇತುವೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಯುವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ನಸುಕಿನ ವೇಳೆ ೨:೩೦ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮೃತರು ತಂದೆ ಜನಾರ್ದನ ಸೇರಿದಂತೆ ಕುಟುಂಬದವರನ್ನು‌ ಅಗಲಿದ್ದಾರೆ.

ಬೈಕ್ ಅಪಘಾತದಲ್ಲಿ ಯುವಕ ಸಾವು Read More »

ಸಂಪಾಜೆ : ಬೈಕ್ ಅಪಘಾತ, ಮೊಬೈಲ್ ಪೋನ್ ಬ್ಲಾಸ್ಟ್ ಯುವಕನಿಗೆ ಗಾಯ

ಬೈಕ್ ಅಪಘಾತವಾಗಿ ಸವಾರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಚೌಕಿಯಿಂದ ವರದಿಯಾಗಿದೆ.ಗಾಯಗೊಂಡ ಯುವಕನ್ನು ಕೊಯನಾಡು ಚಡಾವು ನಿವಾಸಿ ತನುಷ್ ಗುರುತಿಸಲಾಗಿದೆ.ಮೊಬೈಲ್ ಅಪಘಾತದ ಸ್ಥಳದಲ್ಲಿ ಬ್ಲಾಸ್ಟ್ ಆಗಿ ಉರಿದಿದೆ ಎಂದು ತಿಳಿದು ಬಂದಿದೆ.ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಸಂಪಾಜೆ : ಬೈಕ್ ಅಪಘಾತ, ಮೊಬೈಲ್ ಪೋನ್ ಬ್ಲಾಸ್ಟ್ ಯುವಕನಿಗೆ ಗಾಯ Read More »

error: Content is protected !!
Scroll to Top