ಕ್ರೈಂ

ಮೊಬೈಲ್ ಬಳಸದಂತೆ ಮಗನಿಗೆ ಬುದ್ದಿ ಮಾತು ಹೇಳಿದ ತಾಯಿ,ಮಗ ನಿಗೂಡವಾಗಿ ನಾಪತ್ತೆ

ಮೊಬೈಲ್ ಬಳಸದಂತೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ಬೇಸತ್ತು 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿಂದ ವರದಿಯಾಗಿದೆ.ನಾಪತ್ತೆಯಾದ ಬಾಲಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿಯಾಗಿದ್ದು, ಪ್ರಸ್ತುತ ಸುಳ್ಯದ ಬೋರುಗುಡ್ಡೆಯಲ್ಲಿ ಪೋಷಕರೊಂದಿಗೆ ವಾಸವಿದ್ದ ಸೈಯದ್ ಆಲಿ ಸೈಯದ್ ಗೌಸ (16) ಎಂದು ಗುರುತಿಸಲಾಗಿದೆ.ಬಾಲಕನ ತಾಯಿ ಸಲ್ಮಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಲ್ಮಾ ಅವರು ತಮ್ಮ ಪತಿ ಹಾಗೂ ಮಗ ಸೈಯದ್ […]

ಮೊಬೈಲ್ ಬಳಸದಂತೆ ಮಗನಿಗೆ ಬುದ್ದಿ ಮಾತು ಹೇಳಿದ ತಾಯಿ,ಮಗ ನಿಗೂಡವಾಗಿ ನಾಪತ್ತೆ Read More »

ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನ

ಹಾಸನದಲ್ಲಿ ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣವೊಂದು ವರದಿಯಾಗಿದೆ‌. ಪದವಿ ಓದುತ್ತಿರುವ ಆರೋಪಿ, ಬಾಲಕಿಗೆ ಡ್ರಾಪ್‌ ಕೊಡುವುದಾಗಿ ಕರೆದೊಯ್ದು, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ಬೈಕ್‌ನಿಂದ ಜಿಗಿದಿದ್ದು, ಗಂಭೀರ ಗಾಯಗೊಂಡಿದ್ದಾಳೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಇಬ್ಬರು ಸ್ನೇಹಿತರನ್ನೂ ಹುಡುಕುತ್ತಿದ್ದಾರೆ. ಹಾಸನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನ Read More »

ಸವಣೂರು : ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕದಲ್ಲಿ ತೋಟವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಅಡ್ಡೆಗೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿದ್ದಾರೆ. ಉಪ ನಿರೀಕ್ಷಕ ಸಂತೋಷ್ ಬಿ. ಪಿ. ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸವಣೂರು : ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ Read More »

ಸುಳ್ಯದ ವ್ಯಕ್ತಿ ಅಪಘಾತದಲ್ಲಿ ಸಾವು

ಮಾಣಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ 25ರಂದು ನಡೆದಿದೆ.ಸುಳ್ಯ ಗಾಂಧಿನಗರ ನಿವಾಸಿ ಮೊಹಿದೀನ್ ಅವರ ಪುತ್ರ ಖಲಂದರ್ ಷಾ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.ಖಲಂದರ್ ಷಾ ಅವರು ಚಲಾಯಿಸುತ್ತಿದ್ದ ಸ್ಕೂಟಿ ಮೀನಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.ಸ್ಕೂಟಿ ಸಂಪೂರ್ಣ ಜಖಂಗೊಂಡಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆ ವೇಳೆಗೆ ಅವರು ಮೃತಪಟ್ಟಿದ್ದರೆನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ

ಸುಳ್ಯದ ವ್ಯಕ್ತಿ ಅಪಘಾತದಲ್ಲಿ ಸಾವು Read More »

ಪುತ್ತೂರು : ಕಾರಿ‌ನೊಳಗೆ ನುಗ್ಗಿದ ಹಾವು,ಹೆಚ್ಚಿದ ಆತಂಕ

ಪುತ್ತೂರಿನಲ್ಲಿ ಇಲಿಯೊಂದನ್ನು ಹಿಡಿಯಲು ಕಾರಿನೊಳಗೆ ನುಗ್ಗಿದ ಹಾವು, ನಂತರ ಹೊರಬರಲಾಗದೆ ಸಿಲುಕಿಕೊಂಡ ಘಟನೆ ನಡೆದಿದೆ. ನಗರದ ನಿವಾಸಿಯೊಬ್ಬರ ಕಾರಿನ ಅಡಿಭಾಗಕ್ಕೆ ನುಗ್ಗಿದ ಹಾವು, ಇಲಿಯನ್ನು ಹಿಡಿದ ಬಳಿಕ ರಂಧ್ರದಿಂದ ಹೊರಬರಲು ಸಾಧ್ಯವಾಗದೆ ಪರದಾಡಿದೆ. ಕಾರು ಪೇಟೆಗೆ ಬಂದಾಗ ಸ್ಥಳೀಯರು ಇದನ್ನು ಗಮನಿಸಿ, ಹಾವನ್ನು ಹೊರತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಘಟನೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಪುತ್ತೂರು : ಕಾರಿ‌ನೊಳಗೆ ನುಗ್ಗಿದ ಹಾವು,ಹೆಚ್ಚಿದ ಆತಂಕ Read More »

ಹವ್ಯಾಸಿ ಚೆಂಡೆ ಮದ್ದಳೆ ವಾದಕ ಸುಕುಮಾರ ಅಡ್ಯಡ್ಕ ನಿಧನ

ಹವ್ಯಾಸಿ ಯಕ್ಷಗಾನದ ಚೆಂಡೆ ಮತ್ತು ಮದ್ದಳೆ ವಾದಕಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಅಡ್ಯಡ್ಕ ದಿ. ಗುರುವ ಮೊಗೇರರವರ ಪುತ್ರ ಸುಕುಮಾರ ಅಡ್ಯಡ್ಕ(48ವರ್ಷ) ಮೇ. 22 ರಂದು ತನ್ನ ಮನೆಯಲ್ಲಿ ಅನಾರೋಗ್ಯದಿಂದ ನಿಧನರಾದರು.ಪತ್ನಿ ಲಲಿತ, ಪುತ್ರ ಗ್ರೀಷ್ಮರಾಜ್, ಸಹೋದರರು, ಸಹೋದರಿ ಹಾಗೂ ಬಂಧುಮಿತ್ರರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.

ಹವ್ಯಾಸಿ ಚೆಂಡೆ ಮದ್ದಳೆ ವಾದಕ ಸುಕುಮಾರ ಅಡ್ಯಡ್ಕ ನಿಧನ Read More »

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು

ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ಜಗದೀಶ್ ಎಂಬುವವರು ಕಣಜದ ಹುಳು ಕಡಿದು ಸಾವನ್ನಪ್ಪಿದ ಘಟನೆ ಮೇ 19ರಂದು ವರದಿಯಾಗಿದೆ.ತಮ್ಮ ತೋಟದಲ್ಲಿ ಕಳೆ ಕಟಾವು ಯಂತ್ರದಲ್ಲಿ ಕಾಡು ಕಡಿಯುತ್ತಿದ್ದ ಸಂದರ್ಭ ಕಣಜದ ಹುಳದ ಗುಂಪು ಕಚ್ಚಿ ಗಂಭೀರ ಗಾಯಗೊಂಡ ಬಳಿಕ ಸ್ಥಳೀಯರು ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು Read More »

ಬೆಳ್ತಂಗಡಿ : ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ನಾಪತ್ತೆ

ವಿದ್ಯಾರ್ಥಿಗಳ ತಂಡವೊಂದು ನದಿಗೆ ಈಜಲು ಹೋದಾಗ, ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿ ನದಿಯ ನೀರಿನಲ್ಲಿ ಮುಳುಗಿ ನೀರಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜೀರಡ್ಕ ಎಂಬಲ್ಲಿ ಮೇ 19ರಂದು ಸಂಜೆ ನಡೆದಿದೆ.ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಸಿಇ (ECE)ವಿದ್ಯಾರ್ಥಿ, ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸಿ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ.ಮಂಗಳವಾರ ಮೇ 19ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಏಳು ಜನ ಸ್ನೇಹಿತರ ತಂಡವು ಪಜೀರಡ್ಕದ ನೇತ್ರಾವತಿ ನದಿಗೆ ಈಜಾಡಲು ತೆರಳಿತ್ತು.

ಬೆಳ್ತಂಗಡಿ : ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ನಾಪತ್ತೆ Read More »

ತೊಡಿಕಾನ : ಕಿರಣ್ ಚಾಂಬಾಡು ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಚಾಂಬಾಡು ನಿವಾಸಿ ಐತ್ತಪ್ಪ ಅವರ ಮಗ ಕಿರಣ್ ಮಡಿಕೇರಿಯಲ್ಲಿ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮ್ರತರು ಇಬ್ಬರು ಸಹೋದರು,ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ತೊಡಿಕಾನ : ಕಿರಣ್ ಚಾಂಬಾಡು ನಿಧನ Read More »

ಜಯಚಂದ್ರ ತೊಡಿಕಾನ ನಿಧನ

ತೊಡಿಕಾನ ಗ್ರಾಮದ ಕಲ್ಲಪಳ್ಳಿ ನಿವಾಸಿ ಬಳ್ಳದಲ್ಲಿ ನೆಲೆಸಿದ್ದ, ಜಯಚಂದ್ರ (57ವ.) ಹೃದಯಾಘಾತದಿಂದ ಮೇ.18ರಂದು ರಾತ್ರಿ ನಿಧಾನರಾಗಿರುವುದಾಗಿತಿಳಿದುಬಂದಿದೆ. ಇವರು ಬಳ್ಪ ಪೇಟೆಯಲ್ಲಿ ಪ್ಯಾನ್ಸಿ ಅಂಗಡಿಯನ್ನು ನಡೆಸುತ್ತಿದ್ದರು‌.ಮೃತರು ಪತ್ನಿ, ಪುತ್ರಿ, ಸಹೋದರ, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನಂತರ ಬಳ್ಳದಲ್ಲೇ ನೆರವೇರಲಿರುವುದಾಗಿ ತಿಳಿದುಬಂದಿದೆ.ಜಯಚಂದ್ರ ಕ್ರಷಿ ಬಿಂಬ ಪತ್ರಿಕೆಯ ಸಂಪಾದಕ ರಾಧಾಕ್ರಷ್ಣ ತೊಡಿಕಾನ ಅವರ ಸಹೋದರ.

ಜಯಚಂದ್ರ ತೊಡಿಕಾನ ನಿಧನ Read More »

error: Content is protected !!
Scroll to Top