ಕ್ರೈಂ

ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ಆರೋಪಿನೋರ್ವನಿಗೆ ಮಧ್ಯಂತರ ಜಾಮೀನು ಮಂಜೂರು

ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ಆರೋಪಿನೋರ್ವನಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಝಾಕೀರ್ ಸವಣೂರು (35) ಮಧ್ಯಂತರ ಜಾಮೀನು ಪಡೆದ ಆರೋಪಿಯಾಗಿದ್ದಾನೆ.ಈತ ಪ್ರವೀಣ್‌ ನೆಟ್ಟಾರ್ ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾದವರಲ್ಲಿ ಈತನೂ ಒಬ್ಬನಾಗಿದ್ದ. ಈ ಪ್ರಕರಣದಲ್ಲಿ ಆರಂಭದಲ್ಲೇ ಬಂಧಿಸಲ್ಪಟ್ಟ ಇಬ್ಬರು ಪ್ರಮುಖ ಶಂಕಿತರಲ್ಲಿ ಝಾಕೀರ್ ಸವಣೂರು ಕೂಡ ಒಬ್ಬ.

ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ಆರೋಪಿನೋರ್ವನಿಗೆ ಮಧ್ಯಂತರ ಜಾಮೀನು ಮಂಜೂರು Read More »

ಕು. ಅಭಿಜ್ಞಾ ಭಟ್ ನಿಧನ

ಸುಳ್ಯದ ಇಎನ್ ಟಿ ವೈದ್ಯ ಡಾ. ರವಿಶಂಕರ್ ರವರ ಹಿರಿಯ ಪುತ್ರಿ ಕು. ಅಭಿಜ್ಞಾ ಭಟ್ (ವರ್ಷ)ಅಲ್ಪಕಾಲದ ಅಸೌಖ್ಯದಿಂದ ಜೂ.10 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅಭಿಜ್ಞಾ ಭಟ್ ಇತ್ತೀಚಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 ಅಂಕಗಳೊಂದಿಗೆ ರಾಜ್ಯದಲ್ಲಿ 4 ನೇ ರ್ಯಾಂಕ್ ಪಡೆದಿದ್ದರು.

ಕು. ಅಭಿಜ್ಞಾ ಭಟ್ ನಿಧನ Read More »

ಪಾಕ್ ಬಾಂಬ್ ದಾಳಿ – 11 ಮಕ್ಕಳು ಸೇರಿದಂತೆ 13 ಮಂದಿ ಸಾವು

ಅಫ್ಘಾನಿಸ್ತಾನದ ಗಡಿಯಲ್ಲಿ ಪಾಕಿಸ್ತಾನ ಸೇನೆ ಬಾಂಬ್ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಗಂಭೀರ ಆರೋಪ ಮಾಡಿದೆ. ಈ ದಾಳಿಯಲ್ಲಿ 11 ಮಕ್ಕಳು ಸೇರಿ ಕನಿಷ್ಠ 13 ಜನ ಸಾವನ್ನಪ್ಪಿದ್ದು, 14 ಜನ ಗಾಯಗೊಂಡಿದ್ದಾರೆ ಎಂದು ವಕ್ತಾರ ಜಬೀಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಇದು ಅಮಾನವೀಯ ಕೃತ್ಯ ಎಂದು ಖಂಡಿಸಿದ್ದಾರೆ. ಪಾಕಿಸ್ತಾನ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತವೂ ಪಾಕಿಸ್ತಾನದ ಈ ಕೃತ್ಯವನ್ನು ಖಂಡಿಸಿದೆ. ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಫೆಬ್ರವರಿಯಿಂದ ಗಡಿ ಸಂಘರ್ಷದಲ್ಲಿ

ಪಾಕ್ ಬಾಂಬ್ ದಾಳಿ – 11 ಮಕ್ಕಳು ಸೇರಿದಂತೆ 13 ಮಂದಿ ಸಾವು Read More »

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

ಸುಳ್ಯ : ಆಲೆಟ್ಟಿ ಗ್ರಾಮದ ಕೋಲ್ಚಾರ್ ಪೈಂಬಚಾಲ್ ಸಮೀಪದ ತೋಟಕೊಚ್ಚಿ ಎಂಬಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮೃತ ವ್ಯಕ್ತಿಯನ್ನು ಪೈಂಬಚಾಲ್ ತೋಟಕೊಚ್ಚಿ ನಿವಾಸಿ ಮಹಮ್ಮದ್ ಶರೀಫ್ (35) ಎಂದು ಗುರುತಿಸಲಾಗಿದೆ.ವಿದ್ಯುತ್ ಕಂಬಕ್ಕೆ ಮರ ಬಿದ್ದ ಪರಿಣಾಮ ಲೈನ್ ಆಫ್ ಮಾಡಲು ಹೋಗುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ದಾರುಣವಾಗಿ ಮೃತಪಟ್ಟರು ಎಂದು ತಿಳಿದು ಬಂದಿದೆ‌.ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ್ದು, ಗಂಭೀರವಾಗಿ ಗಾಯಗೊಂಡ ಮಹಮ್ಮದ್ ಶರೀಫ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು Read More »

ಪಿಕಪ್ – ಸ್ಕೂಟರ್ ಭೀಕರ ಅಪಘಾತ ; ಇಬ್ಬರು ಸಾವು

ಬೆಳ್ತಂಗಡಿ ತಾಲೂಕಿನ ಬಳ್ಳಮಂಜ-ಪಣಕಜೆ ರಸ್ತೆಯ ಪಾಲ್ಯರದಲ್ಲಿ ನಿನ್ನೆ ಸಂಜೆ ಪಿಕಪ್ ವಾಹನ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆಕ್ಟಿವಾ ಸವಾರ ಡಾಕಯ್ಯ ಗೌಡ ಹಾಗೂ ಹಿಂಬದಿ ಸವಾರ ಚಂದಪ್ಪ ಮೂಲ್ಯ ಅವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿಕಪ್ – ಸ್ಕೂಟರ್ ಭೀಕರ ಅಪಘಾತ ; ಇಬ್ಬರು ಸಾವು Read More »

ಅಡ್ತಲೆ ಪರಮೇಶ್ವರ ಗೌಡ ನಿಧನ

ಅಡ್ತಲೆ ಕುಟುಂಬದ ಹಿರಿಯರು,ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಅಡ್ತಲೆ ಪರಮೇಶ್ವರ ಗೌಡ(70 ವರ್ಷ) ಜೂ.9ರಂದು ಬೆಳಗ್ಗೆ 7.30 ಸುಮಾರಿಗೆ ಅಸೌಖ್ಯದಿಂದ ನಿಧನರಾದರು‌.ಮ್ರತರು ಪತ್ನಿ ಒಂದು ಗಂಡು,ಒಂದು ಹೆಣ್ಣು ಮಕ್ಕಳನ್ನು ಕುಟುಂಬಸ್ಥರನ್ನು,ಬಂಧು,ಬಳಗವನ್ನು,ಅಗಲಿದ್ದಾರೆ‌.

ಅಡ್ತಲೆ ಪರಮೇಶ್ವರ ಗೌಡ ನಿಧನ Read More »

ಅರಂತೋಡು : ಬೈಕ್ ಗೆ ಕಾರು ಡಿಕ್ಕಿ ಹೊಡೆದು ಪರಾರಿ!

ಅರಂತೋಡು ಗ್ರಾಮದ ಬಿಳಿಯಾರು ಮಾಣಿ ಮೈಸೂರು ರಸ್ತೆಯಲ್ಲಿ ಜೂ.9ರಂದು ಬೆಳಿಗ್ಗೆ ಬೈಕೊಂದಕ್ಕೆ ಕಾರು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ವರದಿಯಾಗಿದೆ.ವೇಗವಾಗಿ ಬಂದ ಇನೋವಾ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಢಿಕ್ಕಿಯ ಪರಿಣಾಮ ಬೈಕ್‌ ಸವಾರ ರಸ್ತೆಗಪ್ಪಳಿಸಿ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅರಂತೋಡು : ಬೈಕ್ ಗೆ ಕಾರು ಡಿಕ್ಕಿ ಹೊಡೆದು ಪರಾರಿ! Read More »

ಗೀಸರ್ ನ ಗ್ಯಾಸ್ ಸೋರಿಕೆಯಾಗಿ ಮಹಿಳೆ ಸಾವು

ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಜೂ 7ರಂದು ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಮೈಸೂರು ಮೂಲದ ಮಹಿಳೆ ಮೃತಪಟ್ಟ ಘಟನೆ ವರದಿಯಾಗಿದೆ. ಕೊಡಗಿಗೆ ಪ್ರವಾಸ ಬಂದಿದ್ದ ಈಕೆ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೆ ಅಲ್ಲಿ ಉಳಿದುಕೊಂಡಿದ್ದರು.ಬೆಳಿಗ್ಗೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ.ಬಾತ್ ರೂಮಿನಲ್ಲಿ ಕಿಟಕಿ ಇರಲಿಲ್ಲವೆಂದು ಹೇಳಲಾಗಿದೆ.ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಗೀಸರ್ ನ ಗ್ಯಾಸ್ ಸೋರಿಕೆಯಾಗಿ ಮಹಿಳೆ ಸಾವು Read More »

ಸುಳ್ಯ : ಇಲಿ ಪಾಷಾಣ ಸೇವಿಸಿದ ಯುವಕ ಸಾವು!

ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಜಟ್ಪಿಪಳ್ಳದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜೂ.6ರಂದು ವರದಿಯಾಗಿದೆ.ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಯುವಕನನ್ನು‌ ಜಟ್ಟಿಪಳ್ಳ ನಿವಾಸಿ ದಿ.ಭಾಸ್ಕರ ಅವರ ಮಗ ಉಮೇಶ(32 ವರ್ಷ) ಎಂದು ತಿಳಿದು‌ ಬಂದಿದೆ.ಒಂದು ವಾರದ ಅವರು ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಾಗ ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ವೈದ್ಯರು ಚಿಕಿತ್ಸೆ ಫಲಕಾರಿಯಾಗುವುದು ಅಸಾಧ್ಯ ಎಂದು ತಿಳಿಸಿದ ಕಾರಣ ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮ್ರತರು ತಾಯಿ,ಓರ್ವ ಸಹೋದರ,ಸಹೋದರಿಯನ್ನು ಅಗಲಿದ್ದಾರೆ.

ಸುಳ್ಯ : ಇಲಿ ಪಾಷಾಣ ಸೇವಿಸಿದ ಯುವಕ ಸಾವು! Read More »

ಕೊಡಗು : ಭೀಕರ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವು!

ಕೊಡಗು ಜಿಲ್ಲೆಯ ತಿತಿಮತಿ ಬಳಿಯ ಕೋಣನಕಟ್ಟೆಯಲ್ಲಿ ಕಾಫಿ ತೋಟ ವೀಕ್ಷಿಸಲು ಹೋಗಿದ್ದಾಗನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ಕಾಡಾನೆ ದಾಳಿಯಿಂದ ಸಾವನ್ಜಪ್ಪಿದ ಘಟನೆ ವರದಿಯಾಗಿದೆ.ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಏಕಾಏಕಿ ದಾಳಿ ನಡೆಸಿದೆ.ಆನೆ ದಾಳಿಯಿಂದ ಓಡಿ ಹೋಗಿ ಇಬ್ಬರು ಕಾಫಿ ತೋಟದ ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ.ಚಿಕಿತ್ಸೆಗಾಗಿ ಗೋಣಿಕೊಪ್ಪಲು ಲೋಪಾಮುದ್ರಾ ಆಸ್ಪತ್ರೆಗೆ ರವಾನೆ ವೇಳೆ ಸಂಧ್ಯಾ ಅವರು ಮೃತಪಟ್ಟಿದ್ದಾರೆ.ಗಾಯಾಳು ಕಾರ್ಮಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಡಗು : ಭೀಕರ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವು! Read More »

error: Content is protected !!
Scroll to Top