ಕ್ರೈಂ

ಹೊತ್ತಿ ಉರಿದ ಪಟಾಕಿ ಅಂಗಡಿ,ಮಹಿಳೆ ಗಂಭೀರ

ದೀಪಾವಳಿ ಇನ್ನು ಕೆಲವೇ ದಿನಗಳಲ್ಲಿ ಆಗಮಿಸಲಿದೆ.ಎಲ್ಲೆಲ್ಲೂ ಈಗ ಪಟಾಕಿ ಅಂಗಡಿಗಳು ಸದ್ದು ಮಾಡುತ್ತಿವೆ.ಹೈದರಾಬಾದ್ ಸುಲ್ತಾನ್ ಬಜಾರ್‌ನ ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಪಟಾಕಿ ಬಾಂಬುಗಳಂತೆ ಸಿಡಿದಿದ್ದು, ಅಂಗಡಿಯೊಳಗಿದ್ದ 25ಕ್ಕೂ ಹೆಚ್ಚು ಮಂದಿ ಒಬ್ಬರ ಮೇಲೊಬ್ಬರು ಹತ್ತಿ ಹೊರಗೋಡಿ ಬಂದಿದ್ದಾರೆ. ಪಟಾಕಿ ಅಂಗಡಿಯ ಪಕ್ಕದಲ್ಲೇ ಇದ್ದ ಹೋಟೆಲ್ ಸಹ ಧಗಧಗಿಸಿದ್ದು, ಗ್ರಾಹಕರು ಹೊರಗೋಡಿ ಜೀವ ರಕ್ಷಸಿಕೊಂಡಿದ್ದಾರೆ. 8 ಕಾರುಗಳು, 10ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿವೆ. ಓರ್ವ ಮಹಿಳೆಗೆ ತೀವ್ರ ಗಾಯವಾಗಿದ್ದು, ಅದೃಷ್ಟವಷಾತ್ ಪ್ರಾಣಾಪಾಯ ಸಂಭವಿಸಿಲ್ಲ.

ಹೊತ್ತಿ ಉರಿದ ಪಟಾಕಿ ಅಂಗಡಿ,ಮಹಿಳೆ ಗಂಭೀರ Read More »

ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳನ್ನು ಮತ್ತೆ ಸೆರೆ ಹಿಡಿದ ಪೊಲೀಸರು

: ಸುಳ್ಯ ಸರಕಾರಿ ಆಸ್ಪತ್ರೆ ಬಳಿಯಿಂದ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳನನ್ನು ಸುಳ್ಯ ಪೊಲೀಸರು ಮತ್ತೆ ಸೆರೆ ಹಿಡಿದಿದ್ದಾರೆ.ಕೆಲ ದಿನಗಳ ಹಿಂದೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿ ತಮಿಳುನಾಡು ಕಡೆಗೆ ತೆರಳಿದ್ದ ಸಂಶಯ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಆತನನ್ನು ಸತ್ಯಮಂಗಲ ಪರಿಸರದಲ್ಲಿ ವಶಕ್ಕೆ ಪಡೆದು ಸುಳ್ಯಕ್ಕೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳನ್ನು ಮತ್ತೆ ಸೆರೆ ಹಿಡಿದ ಪೊಲೀಸರು Read More »

ಜಾಂಡೀಸ್ ಗೆ ಯುವಕ ಬಲಿ

ಸುಳ್ಯ ನಗರದ ಹಳೆಗೇಟು ಹೊಸಗದ್ದೆ ನಿವಾಸಿ ಭವಾನಿಯವರ ಪುತ್ರ ರೋಷನ್ ರವರು ಜಾಂಡಿಸ್ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಎರಡು ವಾರಗಳ ಹಿಂದೆ ಜಾಂಡಿಸ್ ರೋಗಗಕ್ಕೆ ಒಳಗಾಗಿದ್ದ ಅವರು ಸುಳ್ಯ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಜಾಂಡೀಸ್ ಗೆ ಯುವಕ ಬಲಿ Read More »

ತೊಡಿಕಾನ : ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ನಷ್ಟ

ತೊಡಿಕಾನ ಸಮೀಪದ ಬಂಗಾರಕೋಡಿ ಎಂಬಲ್ಲಿ‌ ಇಲ್ಲಿಯ ತೋಟವೊಂದಕ್ಕೆ ಕಾಡಾನೆಗಳು ದಾಳಿ ನಡೆಸಿ ಅಪಾರ ಕ್ರಷಿ ಬೆಳೆಗಳನ್ನು ನಾಶ ಪಡಿಸಿದ ಘಟನೆ ವರದಿಯಾಗಿದೆ.ಇಲ್ಲಿಯ ವಿದ್ಯಾ ಅವರ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳು 10 ಅಡಿಕೆ,ಎರಡು ಬಾಳೆ ಮರ,ಒಂದು ಜೀಕುಜ್ಜೆ ಮರಗಳನ್ನು ಮುರಿದು ಹಾಕಿವೆ.ಅಲ್ಲದೆ ಒಂದು‌ ತೆಂಗಿನ ಮರಕ್ಕೆ ಹಾನಿ ಮಾಡಿವೆ ಎಂದು ತಿಳಿದು ಬಂದಿದೆ.ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ.

ತೊಡಿಕಾನ : ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ನಷ್ಟ Read More »

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್

ಮಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಕಾನ್ಸ್ ಟೇಬಲ್ ತನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ದಾಖಲಿಸಿ ಸಮಯಪ್ರಜ್ಞೆ ಮೆರೆದಿರುವ ಕುರಿತು ಘಟನೆ ವರದಿಯಾಗಿದೆ.ಬುಧವಾರದಂದು ಮುಂಜಾನೆ ಸುಮಾರು 3:40ರ ಸುಮಾರಿಗೆ ನಗರದ ಕೆಪಿಟಿ ಬಳಿ ಪಿಕ್ ಅಪ್ ವಾಹನ ಮತ್ತು ಕಂಟೈನ‌ರ್ ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕ್ಲೀನರ್ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ಪಡೆದ ಕದ್ರಿ ಠಾಣೆಯ ಮಹಿಳಾ ಪೊಲೀಸ್‌ ಕಾನ್ಸೆಬಲ್ ಮನ್ಶಿದಾ ಬಾನು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ತನ್ನ ಸ್ಕೂಟಿಯಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ Read More »

ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ನಿಧನ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕೆರೆಮೂಲೆ ದಿ.ಕೃಷ್ಣ ಕೇಕುಣ್ಣಾಯ ರವರ ಪುತ್ರ ಸುಳ್ಯ ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು. ಅವರಿಗೆ 52 ವರ್ಷ ಪ್ರಾಯವಾಗಿತ್ತು.ಮೃತರು ಕೆಲ ಸಮಯಗಳಿಂದ ಕರುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.ಮೃತರು ತಾಯಿ ಸತ್ಯಭಾಮೆ, ಪತ್ನಿ ಶೋಭಾ, ಪುತ್ರ ಮಾ| ಆದಿತ್ಯ, ಪುತ್ರಿಯರಾದ ಶ್ವೇತಾ,ನಂದಿತಾ ಇತರರನ್ನು ಅಗಲಿದ್ದಾರೆ.

ಕೆ.ವಿ.ಜಿ.ಐ.ಟಿ.ಐ ಕಾಲೇಜಿನ ಉಪನ್ಯಾಸಕ ಗಿರೀಶ್ ಕೇಕುಣ್ಣಾಯ ನಿಧನ Read More »

ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್, ಯೂರಿಯಾ ಬಳಕೆ!

ರಾಂಚಿ: ಝಾರ್ಖಂಡ್‌ನ ಗಡ್ಡಾದಲ್ಲಿ ಪಾನಿಪೂರಿ ವ್ಯಾಪಾರಸ್ಥರು ರುಚಿ ಹೆಚ್ಚಿಸಲು ಯೂರಿಯಾ ಹಾಗೂ ಟಾಯ್ಲೆಟ್ ಸ್ವಚ್ಛ ಮಾಡುವ ಹಾರ್ಪಿಕ್ ಅನ್ನು ಬಳಸುತ್ತಿದ್ದ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಕೊಳಕು ಆಹಾರ ನೀಡಿದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾಲಿನಲ್ಲಿ ಹಿಟ್ಟು ಕಲಸಿದ್ದನ್ನು ಒಪ್ಪಿದರಲ್ಲದೆ, ಪಾನಿಪೂರಿ ಸ್ವಾದ ಹೆಚ್ಚಿಸುವ ಸಲುವಾಗಿ ಅದಕ್ಕೆ ಯೂರಿಯಾ ಹಾಗೂ ಹಾರ್ಪಿಕ್ ಅನ್ನು ಬಳಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಪಾನಿಪೂರಿ ವ್ಯಾಪಾರಸ್ಥರು ಕಾಲಿನಲ್ಲಿ ಹಿಟ್ಟು ಕಲಸುತ್ತಿದ್ದ ವೀಡಿಯೋ ಒಂದು ವೈರಲ್ ಆಗಿತ್ತು.

ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್, ಯೂರಿಯಾ ಬಳಕೆ! Read More »

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳ್ತಂಗಡಿ: ಇಲ್ಲಿಯ ಗೇರುಕಟ್ಟೆ ಎಂಬಲ್ಲಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೋಟದ ಕೆಲಸ ಮಾಡುವವರು ಮೃತದೇಹವನ್ನು ನೋಡಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಸಬ್ ಇನ್ಸ್‌ಪೆಕ್ಟ‌ರ್ ಮುರಳೀಧರ್ ನಾಯ್ಕ ಸೇರಿದಂತೆ ಪೋಲಿಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತಿಸಲು ಅಸಾಧ್ಯವಾಗಿದೆ. ಪೊರನಿಕ್ಸ್ ಲ್ಯಾಬ್‌ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ, ಡಿಎನ್‌ಎ ಪರೀಕ್ಷೆ ನಡೆಸಬೇಕಾಗಿದೆ. ಸ್ಥಳೀಯರೇ

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ Read More »

ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಮೂವರು ಕಾರ್ಮಿಕರ ಸಾವು

ಬೆಂಗಳೂರು : ಇಲ್ಲಿನ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಅದರ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೂವರು ದುರ್ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದೀಗ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ 16 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಒಂದು ಕುಸಿದು ಬಿದ್ದಿದ್ದು,ಕಟ್ಟಡದ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇವರಲ್ಲಿ ಮೂವರು ದುರ್ಮರಣ ಹೊಂದಿರುವುದಾಗಿ ತಿಳಿದು ಬಂದಿದೆ.

ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಮೂವರು ಕಾರ್ಮಿಕರ ಸಾವು Read More »

ಮಗನ ಸಾವಿನ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ ಸಾವು

ಹಾವೇರಿ: ಮಗ ಮೃತಪಟ್ಟ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾವೇರಿಯ ಬಸವೇಶ್ವರ ನಗರದಿಂದ ವರದಿಯಾಗಿದೆ.ತಂದೆ ಡಾ.ವೀರಭದ್ರಪ್ಪ ಗುಂಡಗಾವಿ, ಮಗ ಡಾ.ವಿನಯ ಗುಂಡಗಾವಿ ಮೃತ ದುರ್ದೈವಿಗಳು.ವೃತ್ತಿಯಲ್ಲಿ ತಂದೆ, ಮಗ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆಕಸ್ಮಿಕವಾಗಿ ವಿನಯ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ .ಈ ವಿಚಾರ ಕೇಳಿ ತಂದೆ ವೀರಭದ್ರಪ್ಪ ಅವರೂ ಕೂಡ ಹೃದಯಾಘಾತಕ್ಕೆ ಒಳಗಾಗಿ ಒಂದೇ ದಿನ ತಂದೆ ಮಗ ಮೃತಪಟ್ಟಿದ್ದಾರೆ.ಇಬ್ಬರ ಸಾವಿನಿಂದ ನೊಂದ ಕುಟುಂಬದಲ್ಲಿ ದು:ಖ ಮಡುಗಟದಟ್ಟಿದೆ.

ಮಗನ ಸಾವಿನ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ ಸಾವು Read More »

error: Content is protected !!
Scroll to Top