ಕ್ರೈಂ

ಮರ ಬಿದ್ದು ಮನೆಗೆ ಹಾನಿ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು ಎಂಬಲ್ಲಿ ನಿರ್ಮಾಣ ಹಂತದ ಮನೆ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದು ಮನೆ ಸಂಪೂರ್ಣ ಜಖಂಗೊಂಡು ಮತ್ತು ಮನೆ ಮಾಲಕ ಓಡಿ ಪ್ರಾಣಾಪಯದಿಂದ ಪಾರಾದ ಘಟನೆ ಬುಧವಾರ ವರದಿಯಾಗಿದೆಬೊಳುಗಲ್ಲು ಬಾಲಚಂದ್ರ ಎಂಬವರು ನೂತನ ಮನೆ ನಿರ್ಮಿಸುತ್ತಿದ್ದು ಮನೆ ಪಕ್ಕದಲ್ಲಿದ್ದ ಮರವೊಂದು ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮರ ಬೀಳುತ್ತಿದ್ದಂತೆ ಮನೆ ಮಾಲಕ ಹಿಂದಿನ ಬಾಗಿಲ ಮೂಲಕ ಓಡಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಎರಡು ವರ್ಷದ ಹಿಂದೆ […]

ಮರ ಬಿದ್ದು ಮನೆಗೆ ಹಾನಿ Read More »

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

ಸುರತ್ಕಲ್ ಸಮೀಪ ಮಂಗಳವಾರ ತಡರಾತ್ರಿ ಸಮುದ್ರ ತೀರದಲ್ಲಿ ಭಾರಿ ಸುಂಟರಗಾಳಿಗೆ ಕುಲಾಯಿ ಪ್ರದೇಶದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ಎಂಬವರು ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ತಿಳಿಯದೆ ಅದನ್ನ ತುಳಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು Read More »

ಸುಳ್ಯದಲ್ಲಿ ಖಾಸಗಿ ಬಸ್ಸುಗಳು ಸೀಝ್

ಸುಳ್ಯ ತಾಲೂಕಿನ ಅತೀ ಹಳೆಯದಾದ ಪರ್ಮಿಟ್ ಹೊಂದಿದ್ದ ಸುಳ್ಯ – ಮಂಡೆಕೋಲು ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ಸುಗಳು ಧಿಡೀರ್ ಆಗಿ ಸೋಮವಾರ ಮುಂಜಾನೆ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಸೀಝ್ ಮಾಡಲಾಗಿದೆ ಎಂದು ಪುತ್ತೂರು ಆರ್ ಟಿ ಓ ಅಧಿಕಾರಿಗಳು ತಿಳಿಸಿದ್ದಾರೆ.ಈ ಹಿಂದಿನಿಂದಲೂ ಅಜ್ಜಾವರ ಮಂಡೆಕೋಲು – ಅಡೂರು ಗೆ ತೆರಳುತ್ತಿದ್ದ ಕೆಎ-20-ಸಿ-1809 ಖಾಸಗಿ ಬಸ್ಸ್ ಅನಿಲ್ ಛಾತ್ರ ಎಂಬುವವರ ಹೆಸರಿನಲ್ಲಿದ್ದು ಈ ಬಸ್ಸು ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ. ಅಲ್ಲದೇ ಕೆಎ-19-ಸಿ-0329

ಸುಳ್ಯದಲ್ಲಿ ಖಾಸಗಿ ಬಸ್ಸುಗಳು ಸೀಝ್ Read More »

ಪೆರಾಜೆ‌ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ದಾಳಿ: ಅಪಾರ ಪ್ರಮಾಣದ ಕೃಷಿ ನಾಶ

ಪೆರಾಜೆ ಗ್ರಾಮದ ನಿಡ್ಯಮಲೆ – ಹಾಲೆಕಾಡು ಪ್ರದೇಶದಲ್ಲಿ ಕೃಷಿ ತೋಟಕ್ಕೆ ಹಿಂಡು ಆನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ನಾಶಪಡಿಸಿದ ಘಟನೆ ವರದಿಯಾಗಿದೆ.ಕಳೆದ ಎರಡು ದಿನಗಳಿಂದ ಈ ಭಾಗದ ಕೃಷಿಕರಾದ ಬೆಳ್ಳಿಪ್ಪಾಡಿ ತಿಮ್ಮಪ್ಪ, ಕುಡಿಯರ ಸುಂದರ, ಚಾಮಕಜೆ ಲಿಂಗಯ್ಯ, ಚಾಮಕಜೆ ದುಗ್ಗಪ್ಪ, ಚಾಮಕಜೆ ನಾರಾಯಣ, ಹೊದ್ದೆಟ್ಟಿ ಗೋಪಾಲಕೃಷ್ಣ, ಕುತ್ಯಾಳ‌ ಜನಾರ್ದನ ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ಬಂದು ಕೃಷಿ ನಾಶ ಪಡಿಸಿವೆ.ಪಕ್ಕದಲ್ಲೇ ಇರುವ ಕೋಳಿಕ್ಕಮಲೆ ಬೆಟ್ಟದ ಕೆಳ ಭಾಗದ ಕಾಡಿನಿಂದ ಕಾಡಾನೆಗಳು ಆನೆಗಳು ರಾತ್ರಿ ವೇಳೆ

ಪೆರಾಜೆ‌ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ದಾಳಿ: ಅಪಾರ ಪ್ರಮಾಣದ ಕೃಷಿ ನಾಶ Read More »

ಜಮೀನಿನ ಬೇಲಿ ಕಿತ್ತು ಹಾಕಿ ಕೃಷಿ ನಾಶ: ಪ್ರಕರಣ ದಾಖಲು

ಇಚ್ಲಂಪಾಡಿ: ಮಾರಕಾಯುಧದೊಂದಿಗೆ ಜಮೀನಿಗೆ ಒಳಗೆ ಅಕ್ರಮ ಪ್ರವೇಶ ಮಾಡಿ ಬೇಲಿ ತೆಗೆದು ಎಸೆದು ಹಾಕಿ ನಾಶಗೊಳಿಸಿದ್ದಾರೆ ಎಂದು ಆರೋಪಿಸಿ ಇಚ್ಲಂಪಾಡಿ ಗ್ರಾಮದ ಅಲಂಗ ಮೇಪರತ್ ನಿವಾಸಿ ಎಂ.ಎಂ.ತೋಮಸ್ ಎಂಬವರು ನೀಡಿದ ದೂರಿನಂತೆ ಅಲೆಕ್ಸ್ ವರ್ಗೀಸ್, ಪಿ.ಜೆ.ಜೋಸೆಫ್ ಹಾಗೂ ರೋಸಮ್ಮ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಸರ್ವೆ ನಂಬ್ರ: 128-2ರಲ್ಲಿ 0.85ಎಕ್ರೆ ಜಮೀನು ಹೊಂದಿದ್ದು, ಈ ಜಮೀನಿಗೆ ಜು.3ರಂದು ಬೆಳಿಗ್ಗೆ ಅಲೆಕ್ಸ್ ವರ್ಗೀಸ್, ಪಿ.ಜೆ. ಜೋಸೆಪ್, ರೋಸಮ್ಮ ಎಂಬವರು ಕೈಯಲ್ಲಿ

ಜಮೀನಿನ ಬೇಲಿ ಕಿತ್ತು ಹಾಕಿ ಕೃಷಿ ನಾಶ: ಪ್ರಕರಣ ದಾಖಲು Read More »

ಜಲಪಾತಕ್ಕೆ ಧುಮುಕಿದ ಯುವಕ: ನೀರಲಿ ಮುಳುಗಿ ಸಾವು

ತಿರುಪತಿ ಸಮೀಪದ ಜಲಪಾತದಲ್ಲಿ ಮಂಗಳೂರಿನ ಯುವಕನೊಬ್ಬ ಜಲಪಾತಕ್ಕೆ ಧುಮುಕಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್‌ ಅಮೀನ್‌ (23) ಮೃತರು ಯುವಕ ಸುಮಂತ್‌ ಅವರು ಚೆನ್ನೈಯ ಪ್ರತಿಷ್ಠಿತ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ತಂದೆ ಸುರೇಶ್‌ ಅಮೀನ್‌ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ 2.30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಜಲಪಾತಕ್ಕೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭಬಂಡೆಕಲ್ಲಿನಿಂದ 10 ಅಡಿಕೆಳಭಾಗಕ್ಕೆ

ಜಲಪಾತಕ್ಕೆ ಧುಮುಕಿದ ಯುವಕ: ನೀರಲಿ ಮುಳುಗಿ ಸಾವು Read More »

ಕೊಡಗು ಸಂಪಾಜೆ ಹೆದ್ದಾರಿ ಕುಸಿಯುವ ಭೀತಿ: ತಾತ್ಕಾಲಿಕ ರಸ್ತೆ ಮೂಲಕ ಸಂಚಾರ ವ್ಯವಸ್ಥೆ

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಅರಣ್ಯ ಇಲಾಖಾ ಕಚೇರಿಯ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬ್ಯಾರಿಕೇಡ್ ಅಳವಡಿಸಿ ಮತ್ತೆ ರಸ್ತೆ ಬಂದ್ ಮಾಡಲಾಗಿದ್ದು, ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಬಾರಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಕಳೆದ ವರ್ಷದ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಬ್ಯಾರಿಕೇಡ್ ಅಳವಡಿಸಿ, ರಸ್ತೆ ಬಂದ್ ಮಾಡಿ, ಮುಖ್ಯ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು.ಈ

ಕೊಡಗು ಸಂಪಾಜೆ ಹೆದ್ದಾರಿ ಕುಸಿಯುವ ಭೀತಿ: ತಾತ್ಕಾಲಿಕ ರಸ್ತೆ ಮೂಲಕ ಸಂಚಾರ ವ್ಯವಸ್ಥೆ Read More »

ಟಿಎಂಸಿ ಕಾರ್ಯಕರ್ತ ಗುಂಡಿಕ್ಕಿ ಹತ್ಯೆ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿನಡೆದಿದೆ.ಜಿಯಾRXರುಲ್ ಮೊಲ್ಲಾ ಮೃತ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಬಸಂತಿ ಗ್ರಾಮದ ರಸ್ತೆಯೊಂದರಲ್ಲಿ ಗುಂಡಿನ ಗಾಯದಿಂದ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಗಂಭೀರ ಸ್ವರೂಪದ ಗಾಯದಿಂದ ಅವರು ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.ಜಿಯಾರುಲ್ ಮೊಲ್ಲಾ ಅವರು ಯುವ ತೃಣಮೂಲ ಕಾಂಗ್ರೆಸ್ ಸದಸ್ಯನಾಗಿದ್ದು, ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅವರಿಗೆ ಬೆದರಿಕೆಗಳು ಬರುತ್ತಿದ್ದವು. ರಾಜಕೀಯ ವಿಚಾರಕ್ಕೆ ಸಂಬಂಧಿಸಿ ಅವರನ್ನು

ಟಿಎಂಸಿ ಕಾರ್ಯಕರ್ತ ಗುಂಡಿಕ್ಕಿ ಹತ್ಯೆ Read More »

ನೇಣಿಗೆ ಕೊರಳೊಡ್ಡಿದ ದಂಪತಿ: ಪತಿ ಸಾವು,ಪತ್ನಿ ಗಂಭೀರ

ಗಂಡ-ಹೆಂಡತಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ ಪತಿ ಸಾವನ್ನಪ್ಪಿ, ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ ಸಮೀಪದ ಕೊಡಾಜೆಯಲ್ಲಿ ನಡೆದಿದೆ.ಮೃತರನ್ನು ಕೊಡಾಜೆ ನಿವಾಸಿ ಪ್ರತಾಪ್ (33) ಎಂದು ಗುರುತಿಸಲಾಗಿದೆ.ಪ್ರತಾಪ್ ರವರು ಖಾಸಗಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪತಿ, ಪತ್ನಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಪ್ರತಾಪ್ ರವರು ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.ಅರುಣ್ ಪುತ್ತಿಲ ರವರು ಪುತ್ತೂರು ಆಸ್ಪತ್ರೆಯಿಂದ ಪ್ರತಾಪ್ ರವರ ಪತ್ನಿಯನ್ನು

ನೇಣಿಗೆ ಕೊರಳೊಡ್ಡಿದ ದಂಪತಿ: ಪತಿ ಸಾವು,ಪತ್ನಿ ಗಂಭೀರ Read More »

ಖಾಸಗಿ ಬಸ್‌ನಲ್ಲಿ ಬೆಂಕಿ: 26 ಮಂದಿ ಸಾವು

ಖಾಸಗಿ ಬಸ್‌ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 26 ಮಂದಿ ಸಜೀವ ದಹನವಾಗಿರುವ ಘಟನೆ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ವರದಿಯಾಗಿದೆಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.33 ಜನರು ಪ್ರಯಾಣಿಸುತ್ತಿದ್ದ ಬಸ್‌ ಯವತ್ಮಾಲ್ ನಿಂದ ಪುಣೆಗೆ ತೆರಳುತ್ತಿದ್ದ ವೇಳೆ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ಸಿನ ಟೈರ್ ಒಡೆದಿದೆ. ಆ ಬಳಿಕ ಬಸ್‌ ಪಲ್ಟಿಯಾಗಿ ಅದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ಸಿನಲ್ಲಿದ್ದ 26 ಮಂದಿ ಸಜೀವ ದಹನವಾಗಿದ್ದಾರೆ

ಖಾಸಗಿ ಬಸ್‌ನಲ್ಲಿ ಬೆಂಕಿ: 26 ಮಂದಿ ಸಾವು Read More »

error: Content is protected !!
Scroll to Top